Tel: 7676775624 | Mail: info@yellowandred.in

Language: EN KAN

    Follow us :


ಪಶು ಇಲಾಖೆ ರೈತನ ಮಿತ್ರ, ಜಾನುವಾರುಗಳ ಪರಿಪಾಲಕ ಇಲಾಖೆ.

Posted date: 26 Nov, 2018

Powered by:     Yellow and Red

ಪಶು ಇಲಾಖೆ ರೈತನ ಮಿತ್ರ, ಜಾನುವಾರುಗಳ ಪರಿಪಾಲಕ ಇಲಾಖೆ.

ಪಶುವೈದ್ಯಕೀಯ ಇಲಾಖೆ ರೈತ ಸಾಕುವ ಎಲ್ಲಾ ಜಸನುವಾರುಗಳಿಗೆ ಅದರಲ್ಲೂ ಪ್ರತಿನಿತ್ಯ ವಹಿವಾಟು ನಡೆಸುವಂತಹ ಹಸುಗಳಿಗೆ ಸಹಕಾರಿಯಾಗುವ ಇಲಾಖೆ.

ಪಶುವೈದ್ಯ ಇಲಾಖೆಗೂ ಮತ್ತು ರೈತನಿಗೂ ನೇರ ನಂಟಿದೆ, ಬಹುತೇಕ ಮನೆ ಬಾಗಿಲಿಗೆ ಹೋಗಿ ಪಶುಗಳಿಗೆ ಮತ್ತು ಇನ್ನಿತರೇ ಪ್ರಾಣಿಗಳಿಗೆ ಚಿಕಿತ್ಸೆ ನೀಡುವುದು, ಕ್ಯಾಂಪ್ ಗಳನ್ನು ಆಯೋಜಿಸಿ ಸೂಕ್ತ ತಿಳುವಳಿಕೆ ನೀಡುವುದು ಈ ನಮ್ಮ ಇಲಾಖೆಯ ಪ್ರತಿನಿತ್ಯದ ಕೆಲಸ ಎಂದು ಚನ್ನಪಟ್ಟಣದ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ ಹೆಚ್ ಸಿ‌ ಜಯರಾಮು ಪ್ರತಿಪಾದಿಸಿದರು.

ತಾಲ್ಲೂಕಿನಲ್ಲಿರುವ ಜಾನುವಾರುಗಳು

ಗ್ರಾಮಾಂತರ ಪ್ರದೇಶಗಳಲ್ಲಿ ಒಟ್ಟು ೪೪,೯೭೫ ಮನೆಗಳಿದ್ದು ೩೬,೫೮೬ ಹಸುಗಳು, ೧೧,೮೩೪ ಎಮ್ಮೆಗಳು, ೩೩,೯೫೪ ಕುರಿಗಳು, ೧೯,೨೨೫ ಮೇಕೆಗಳು, ೫೮೬ ಹಂದಿಗಳು. ಮತ್ತು ಚನ್ನಪಟ್ಟಣ ನಗರದಲ್ಲಿ ೧೫,೮೫೪ ಮನೆಗಳಿದ್ದು, ೧,೧೨೦ ಹಸುಗಳು. ೮೪೧ ಎಮ್ಮೆಗಳು, ೯೧೨ ಕುರಿಗಳು, ೧,೧೬೫ ಮೇಕೆಗಳಿವೆ. ಇವುಗಳ ಜೊತೆಗೆ ಮನೆ ಸಾಕಾಣಿಕೆಯ ಕೋಳಿಗಳು ನಗರದಲ್ಲಿ ೨,೯೯೦ ಗ್ರಾಮೀಣ ಭಾಗದಲ್ಲಿ ೨೫,೩೫೩ ಕೋಳಿಗಳಿವೆ. ಇವುಗಳ ಪೈಕಿ ಫಾರಂ (ಫೌಲ್ಟ್ರಿ) ಕೋಳಿಗಳು ನಗರದಲ್ಲಿ ೧೦,೯೦೦ ಮತ್ತು ಗ್ರಾಮೀಣ ಪ್ರದೇಶದಲ್ಲಿ ೧,೪೪,೭೦೦ ಕೋಳಿಗಳನ್ನು ಸಾಕಲಾಗಿದೆ.

ಚುಚ್ಚುಮದ್ದು ಹಾಕಿಸಿ ಆರೋಗ್ಯ ರಕ್ಷಿಸಿ

ವರ್ಷದಲ್ಲಿ ಎರಡು ಬಾರಿ ಪ್ರತಿ ಸಾಕು ಪ್ರಾಣಿಗಳಿಗೂ ಚುಚ್ಚುಮದ್ದು (ವ್ಯಾಕ್ಸಿನ್) ಹಾಕಲಾಗುತ್ತದೆ, ನಮ್ಮ ಆರೋಗ್ಯ ಇಲಾಖೆ ಆಯಾಯ ಗ್ರಾಮಗಳಲ್ಲಿಯೇ ಕ್ಯಾಂಪ್ ಮಾಡಿ ಚುಚ್ಚುಮದ್ದು ನೀಡಲಾಗುತ್ತದೆ, ಯಾವುದೇ ರೀತಿಯ ಕಾರಣಗಳನ್ನು ನೀಡದೆ, ಮೂಢನಂಬಿಕೆಯನ್ನು ಬದಿಗಿಟ್ಟು ಚುಚ್ಚುಮದ್ದು ಹಾಕಿಸಿ.

ಕಾಲುಬಾಯಿ ಜ್ವರಕ್ಕೆ ಚುಚ್ಚುಮದ್ದು

ಸೀಳುಗೊರಸು ಇರುವ ಎಲ್ಲಾ ಪ್ರಾಣಿಗಳಿಗೂ ಕಾಲುಬಾಯಿ ಜ್ವರ ಬರುತ್ತದೆ, ಈ ಕಾಯಿಲೆ ವೈರಲ್ ನಿಂದ ಬರುತ್ತದೆ, ಗಾಳಿಯಲ್ಲಿ ಹರಡಿ ಪ್ರಾಣಿಯಿಂದ ಪ್ರಾಣಿಗೆ ಹರಡುತ್ತದೆ, ರಾಜ್ಯದಲ್ಲಿ ೨೦೧೩ ವರ್ಷವನ್ನು ಹೊರತುಪಡಿಸಿದರೆ ಕಾಲುಬಾಯಿ ಜ್ವರದಿಂದ ಅಂತಹ‌ ಸಾವು ಸಂಭವಿಸಿಲ್ಲ. ಕಾಯಿಲೆ ಬೇಗ ವಾಸಿಯಾಗಲು ಚುಚ್ಚುಮದ್ದು ನೆರವಾಗಿವೆ.

ವರ್ಷಕ್ಕೆರಡು ಬಾರಿ ಚುಚ್ಚುಮದ್ದು ಹಾಕಿಸಿ

ಹಸು, ಎಮ್ಮೆಗಳ ಕಾಲುಬಾಯಿ ಜ್ವರಕ್ಕೆ ಕುರಿ ಮತ್ತು ಮೇಕೆಗಳ ನೀಲಿ ನಾಲಿಗೆ ರೋಗ ಮತ್ತು ಕರಳುಬೇನೆ ರೋಗಕ್ಕೆ ವರ್ಷಕ್ಕೆರಡು ಬಾರಿ ಚುಚ್ಚುಮದ್ದು ಹಾಕಿಸಲೇಬೇಕು, ಎರಡು ಬಾರಿ ಪಿಡಿಆರ್ ಮತ್ತು ಇಟಿ ಎಂಬ ಚುಚ್ಚುಮದ್ದು ಹಾಕಿಸುವುದರಿಂದ ಬಹುತೇಕ ಎಲ್ಲಾ ಕಾಯಿಲೆಗಳನ್ನು ಸಕಾಲದಲ್ಲಿ ತಡೆಯಬಹುದಾಗಿದೆ.

ತಾಲ್ಲೂಕಿನಾದ್ಯಂತ ಪ್ರತಿದಿನ ಹಾಲಿಗೆ ಹತ್ತು ಲಕ್ಷ ಸಹಾಯಧನ

ಚನ್ನಪಟ್ಟಣ ತಾಲ್ಲೂಕಿನಾದ್ಯಂತ ೧,೮೩,೦೦೦ ಲೀಟರ್‌ ನಿಂದ ೨,೦೦,೦೦೦ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಪ್ರತಿ ದಿನ‌‌ ಐದು ರೂಪಾಯಿಯಂತೆ ಬರುವ ಸಹಾಯಧನ ಒಟ್ಟು ಹತ್ತು ಲಕ್ಷ ರೂಪಾಯಿ ಬರುತ್ತಿದೆ, ನಮ್ಮ ಇಲಾಖೆಯಲ್ಲಿಯೂ ಸಹ ರಾಸುಗಳ ವಿಮಾ ಯೋಜನೆಯು‌ ಇದೆ, ಅದನ್ನು ರೈತರು‌ ಉಪಯೋಗಿಸಕೊಳ್ಳಬೇಕು.

ಹಿತ್ತಲಕೋಳಿ ಯೋಜನೆ

ಹಿತ್ತಲ ಕೋಳಿ ಯೋಜನೆಯಲ್ಲಿ ಗಿರಿರಾಜ, ಗಿರಿರಾಣಿ ಮತ್ತು ಸುವರ್ಣಧಾರಾ ಎಂಬ ಕೋಳಿಗಳನ್ನು ಫಲಾನುಭವಿಗಳಿಗೆ ತಲಾ ಹತ್ತರಂತೆ ಸಾಕಾಣಿಕೆದಾರರಿಗೆ ನೀಡಲಾಗುತ್ತದೆ, ಫಲಾನುಭವಿಗಳನ್ನು ಜಿಲ್ಲಾ ಪಂಚಾಯತ್ ಸದಸ್ಯರು ಶಿಫಾರಸ್ಸು ಮಾಡುತ್ತಾರೆ, ಸಾಮಾನ್ಯ ವರ್ಗಕ್ಕೆ ಶೇ ೭೫ ಪರಿಶಿಷ್ಟ ವರ್ಗಕ್ಕೆ ಸಂಪೂರ್ಣ ಉಚಿತವಾಗಿ ಕೋಳಿಗಳನ್ನು ನೀಡಲಾಗುತ್ತದೆ.

ಸಾಕು ಪ್ರಾಣಿಗಳು ಮತ್ತು ಫಾರಂ ಕೋಳಿಗಳು

ನಾಯಿ ಮತ್ತು ಬೆಕ್ಕು ಗಳಿಗೂ ಸಹ ಸೂಕ್ತ ಸಮಯದಲ್ಲಿ ಚುಚ್ಚುಮದ್ದು ಹಾಕಿಸಿಬೇಕು, ಬೀದಿ ನಾಯಿಗಳನ್ನು ಸಂಬಂಧಿಸಿದ ಇಲಾಖೆಯವರು ಸಂತಾನಹರಣ ಚಿಕಿತ್ಸೆ ಮಾಡಿ ಚುಚ್ಚುಮದ್ದು ಹಾಕಿಸಿ ಎಲ್ಲಿಂದ ಕರೆತಂದಿದ್ದರೋ ಅಲ್ಲಿಗೆ ಮತ್ತೆ ಬಿಡಬೇಕು, ಆಗ ಅವುಗಳಿಂದಾಗುವ ತೊಂದರೆಗಳು ತಪ್ಪುತ್ತವೆ.

ಕೋಳಿ ಫಾರಂ ಗಳಿಗೆ ಪ್ರತ್ಯೇಕ ನೀತಿ ನಿಯಮಗಳಿಲ್ಲ, ಗ್ರಾಮದಿಂದ ಅಥವಾ ವಾಸವಿರುವ ಮನೆಗಳಿಂದ ಐದುನೂರು ಮೀಟರ್ ದೂರವಿರಬೇಕೆಂಬ ನಿಯಮವನ್ನು ಅಳವಡಿಸಿದ್ದಾರೆ.

ತಾಲ್ಲೂಕಿನ ಆಸ್ಪತ್ರೆ ಮತ್ತು ಸಿಬ್ಬಂದಿ

ತಾಲ್ಲೂಕಿನಲ್ಲಿ ನಾಲ್ಕು ಪಶುವೈದ್ಯಕೀಯ ಆಸ್ಪತ್ರೆ, ಏಳು ಪಶುಚಿಕಿತ್ಸಾಲಯ, ಒಂದು ಸಂಚಾರಿ ಪಶುಚಿಕಿತ್ಸಾಲಯ ಮತ್ತು ಹದಿಮೂರು ಪ್ರಾಥಮಿಕ ಪಶುಚಿಕಿತ್ಸಾಲಯಗಳು ಸೇರಿದಂತೆ ಒಟ್ಟು ಇಪ್ಪತ್ತೈದು ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿವೆ.

ಅವುಗಳಲ್ಲಿ ಎರಡು ಪಶುಚಿಕಿತ್ಸಾಲಯಗಳಲ್ಲಿ ಪಶುವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇವೆ. ಹದಿನಾರು ಹಿರಿಯ ಪರೀಕ್ಷಕರ ಹುದ್ದೆಗಳಲ್ಲಿ ಎರಡು‌ ಹುದ್ದೆ, ಹದಿನೆಂಟು ಸಹಾಯಕರ ಹುದ್ದೆಗಳಲ್ಲಿ ಹದಿನಾಲ್ಕು ಹುದ್ದೆ ಖಾಲಿ, ಸಂಚಾರಿ ಪಶುಚಿಕಿತ್ಸಾಲಯದ ವಾಹನ ಚಾಲಕರ ಹುದ್ದೆಯೂ ಖಾಲಿ ಇದ್ದು ಗ್ರಾಮೀಣ ಪ್ರದೇಶಕ್ಕೆ ಹೋಗಲಾಗುತ್ತಿಲ್ಲ. ಮೂವತ್ಮೂರು ಡಿ ದರ್ಜೆ ನೌಕರರ ಹುದ್ದೆಗಳಲ್ಲಿ ಇಪ್ಪತ್ಮೂರು ಹುದ್ದೆಗಳು ಖಾಲಿ ಇದ್ದು ಒಟ್ಟು ತೊಂಭತ್ತೊಂದು ಹುದ್ದೆಗಳಲ್ಲಿ ನಲವತ್ಮೂರು ಹುದ್ದೆಗಳು ಖಾಲಿ ಇರುವುದರಿಂದ ಜಾನುವಾರುಗಳ ಸಾವು ನೋವಿಗೂ ಸರ್ಕಾರ ಹೊಣೆಯಾಗಲಿದೆ.

ಕಟ್ಟಡಗಳು ಮತ್ತು ಅನುದಾನ

ಬಹುತೇಕ ಸ್ವಂತ ಕಟ್ಟಡಗಳಿದ್ದು  ಕೆಲವು ಆರ್ ಐ ಡಿ ಎಫ್, ಇನ್ನೂ ಕೆಲವು ಪಂಚಾಯತ್ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ, ಕೆಲವು ಶಿಥಿಲಾವಸ್ತೆ ತಲುಪಿವೆ, ಹದಿಮೂರು ಪ್ರಾಥಮಿಕ ಪಶುಚಿಕಿತ್ಸಾಲಯ ಗಳನ್ನು ಕೇಂದ್ರ ಸರ್ಕಾರದ ಶಿಫಾರಸ್ಸಿನ ಅನ್ವಯ ಪಶುಚಿಕಿತ್ಸಾಲಯ ಗಳನ್ನಾಗಿ ಮೇಲ್ದರ್ಜೆಗೆ ಏರಿಸಿ ಕನಿಷ್ಠ ನಲವತ್ತು ಲಕ್ಷ ಅನುದಾನ ಮತ್ತು ಸಿಬ್ಬಂದಿಗಳನ್ನು ನೀಡಿದರೆ ತಾಲ್ಲೂಕಿನ ಎಲ್ಲಾ ಚಿಕಿತ್ಸಾಲಯಗಳನ್ನು ರಾಜ್ಯದಲ್ಲಿಯೇ ಮುಂಚೂಣಿಗೆ ತಂದು ಸಂಪೂರ್ಣ ಎಲ್ಲಾ ರೋಗಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಶ್ರಮಿಸುತ್ತೇನೆ ಎಂದರು.

ನಮ್ಮ ಎಲ್ಲಾ ವರ್ಗದ ಸಿಬ್ಬಂದಿಗಳು ರೈತರ ಕೂಗಿಗೆ ಸ್ಪಂದಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಮತ್ತು ಮಾರ್ಗದರ್ಶನ ಮಾಡಲು ಹಾಗೂ ಅವರಿಗೆ ಇಲಾಖೆಯ ವತಿಯಿಂದ ಬೇಕಾದ ಸವಲತ್ತುಗಳನ್ನು ಪಡೆದು ಸೇವೆ ಮಾಡಬೇಕು.

ಇನ್ನು ಜಾನುವಾರುಗಳ ಮಾಲೀಕರಿಗೆ ಹೇಳುವುದೇನೆಂದರೆ ವೈರಸ್ ಬಂದ ನಂತರ ಕಾಯಿಲೆ ವಾಸಿಮಾಡಲು ಆಗುವುದಿಲ್ಲ, ಹಾಗಾಗಿ ನಿಮ್ಮೆಲ್ಲ ರಾಸುಗಳಿಗೆ ಸೂಕ್ತ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಚುಚ್ಚುಮದ್ದು ಹಾಕಿಸಿಕೊಂಡರೆ ಕಾಯಿಲೆ ಬರುವುದನ್ನು ತಡೆಗಟ್ಟಬಹುದಾದುದರಿಂದ ಉದಾಸೀನ ಮತ್ತು ಮೂಢನಂಬಿಕೆಗೆ ಕಿವಿಗೊಡದೆ ಇಲಾಖೆಯ ಮಾರ್ಗದರ್ಶನ ಪಡೆದುಕೊಳ್ಳಲು ಕರೆ ನೀಡಿದರು.


ಗೋ ರಾ ಶ್ರೀನಿವಾಸ...
ಮೊ:9845856139.



 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ

ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ

ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ

ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ

ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ

ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ

ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್

ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ

ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು

ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು  ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್

ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ

ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ

ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ

ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ

ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ

ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.

ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ

ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ

ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ




ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ

Top Stories »  


Top ↑