Tel: 7676775624 | Mail: info@yellowandred.in

Language: EN KAN

    Follow us :


ಮಜ್ಜಿಗೆ ಮಹತ್ವ

Posted date: 07 Apr, 2018

Powered by:     Yellow and Red

ಮಜ್ಜಿಗೆ ಮಹತ್ವ

(ಮಲಗುವ ಮುನ್ನ) ಹಾಲು ಕುಡಿದರೆ, ಬೆಳಿಗ್ಗೆ (ಎದ್ದ ಮೇಲೆ ಮುಖ ತೊಳೆದುಕೊಂಡು) ನೀರು ಕುಡಿದರೆ, ಊಟದ ಕೊನೆಯಲ್ಲಿ ಮಜ್ಜಿಗೆ ಕುಡಿದರೆ ವೈದ್ಯನಿಗೇನು ಕೆಲಸ?

ಹಾಲು, ನೀರಿನ ಹಾಗೆಯೇ ಮಜ್ಜಿಗೆ ಕೂಡ ನಮ್ಮ ಆರೋಗ್ಯವನ್ನು ಕಾಪಿಡಲು ನೆರವಾಗುತ್ತದೆ. ಹಾಲಿಗೆ ಹೋಲಿಸಿದರೆ, ಮಜ್ಜಿಗೆಯಲ್ಲಿ ಅರ್ಧದಷ್ಟು ಕಡಿಮೆ ಕ್ಯಾಲರಿ ಹಾಗೂ ಮುಕ್ಕಾಲು ಅಂಶ ಕಡಿಮೆ ಕೊಬ್ಬಿನಂಶವಿದೆ.  ಮೊಸರಿನಲ್ಲಿ ಅಧಿಕ ಪ್ರಮಾಣದಲ್ಲಿ ಕೊಬ್ಬಿನ ಅಂಶ ಇರುತ್ತದೆ. ಆದರೆ ಮೊಸರಿನಿಂದ ಬೆಣ್ಣೆ ತೆಗೆದು ಮಜ್ಜಿಗೆ ಮಾಡುವುದರಿಂದ ಕ್ಯಾಲರಿ, ಕೊಬ್ಬಿನ ಅಂಶ ತೀರಾ ಕಡಿಮೆ.

ಮಜ್ಜಿಗೆಯು ಕಷಾಯ ಹಾಗೂ ಅಮ್ಲರಸ ಹೊಂದಿದ್ದು, ಲಘು ಗುಣದಿಂದಾಗಿ ಸುಲಭವಾಗಿ ಜೀರ್ಣ ಹೊಂದುತ್ತದೆ. ಬೇಸಿಗೆಯಲ್ಲಂತೂ ಮಜ್ಜಿಗೆಯನ್ನು ನೆನೆಸಿಕೊಂಡರೆನೇ ‘ಆಹಾ!’ ಎನ್ನುತ್ತೇವೆ. ಮಜ್ಜಿಗೆ ಕೇವಲ ದಾಹವನ್ನು ತಣಿಸುವುದಷ್ಟೇ ಅಲ್ಲ, ಇದರಿಂದ ಹಲವು ಪ್ರಯೋಜನಗಳೂ ಇವೆ.

*ಮಜ್ಜಿಗೆ ಸೇವನೆಯಿಂದ ತೆರೆದ ಗಾಯ, ಬಾಯಿಹುಣ್ಣು, ರಕ್ತಸ್ರಾವದಂಥ ರೋಗಗಳು ಬಹುಬೇಗ ಗುಣವಾಗುತ್ತವೆ. ಆದ್ದರಿಂದಲೇ ಆಯುರ್ವೇದ ಚಿಕಿತ್ಸೆಗಳಲ್ಲಿ, ಚರ್ಮರೋಗದಿಂದ ಬಳಲುತ್ತಿರುವವರಿಗೆ ತಕ್ರಧಾರ ಎಂಬ ಪಂಚಕರ್ಮ ಚಿಕಿತ್ಸೆಗೆ ಮಜ್ಜಿಗೆ ಬಳಸಲಾಗುವುದು.

*ಮಜ್ಜಿಗೆಯಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ಖನಿಜಾಂಶಗಳು ಅಧಿಕವಾಗಿವೆ. ಅನಿಮಿಯಾ, ಮಾನಸಿಕ ಒತ್ತಡ ಹಾಗೂ ಧಾತುಗಳ ಬೆ
ಳವಣಿಗೆಗೆ ಅಗತ್ಯವಿರುವ ವಿಟಮಿನ್ ಬಿ 12 ಇದರಲ್ಲಿ ಹೇರಳವಾಗಿದೆ.

*ಅಜೀರ್ಣ, ಹೊಟ್ಟೆನೋವು ಕಂಡುಬಂದರೆ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆನೋವು ಉಪಶಮನವಾಗುತ್ತದೆ.

*ಮಜ್ಜಿಗೆಯಲ್ಲಿರುವ ಪೊಟಾಶಿಯಂ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

* ಇದರಲ್ಲಿ ಕ್ಯಾಲ್ಶಿಯಂ ಹಾಗೂ ಫಾಸ್ಪರಸ್ ಅಂಶ ಹೆಚ್ಚಾಗಿದ್ದು, ಮೂಳೆಗಳಿಗೆ ಅಗತ್ಯ ಶಕ್ತಿ ನೀಡುತ್ತದೆ.

*ಮಜ್ಜಿಗೆಯು ರಕ್ತನಾಳಗಳಲ್ಲಿ ಲೇಪಿತವಾಗಿರುವ ಕೊಬ್ಬಿನಂಶ ತೆಗೆದುಹಾಕುತ್ತದೆ.

*ಮಜ್ಜಿಗೆಯು ಜಠರದ ಒಳಪದರವನ್ನು ಲೇಪಿಸಿ, ಜಠರದ ತೀಕ್ಷ್ಣ ಸ್ರಾವವನ್ನು ನಿಯಂತ್ರಿಸುತ್ತದೆ. ಹುಳಿತೇಗು, ಹೊಟ್ಟೆಹುರಿ, ಎದೆಯುರಿ ನಿವಾರಿಸುತ್ತದೆ.

*ಜಠರ ವಿಕಾರಗಳಿಗೆ  ಮಜ್ಜಿಗೆ ದಿವ್ಯೌಷಧಿ. ಬೇಧಿ, ರಕ್ತಬೇಧಿ ಹಾಗೂ ಕರುಳಿನ ವಿಕಾರಗಳಲ್ಲಿ, ಕರುಳಿನಲ್ಲಾಗುವ ವಿಪರೀತ ಒತ್ತಡವನ್ನು ಕಡಿಮೆಯಾಗಿಸಿ ಅಗತ್ಯ ನೀರಿನಾಂಶ ಹಾಗೂ ಖನಿಜಾಂಶವನ್ನು ನೀಡುತ್ತದೆ.

*ಕ್ಷಾರ ಹಾಗೂ ಕಷಾಯ  ಗುಣಗಳಿಂದಾಗಿ ಮೂಲವ್ಯಾಧಿಯಲ್ಲಿನ ಗುದಾಂಕುರವನ್ನು ನಿವಾರಿಸುತ್ತದೆ.

*ಲಿವರ್‌ನಲ್ಲಿನ ವಿಷಗುಣಗಳನ್ನು ತೆಗೆದುಹಾಕುವ ಶಕ್ತಿ ಮಜ್ಜಿಗೆಗೆ ಇದೆ.

*ಬಾರ್ಲಿ ಗಂಜಿಯನ್ನು ಮಜ್ಜಿಗೆ ಮತ್ತು ನಿಂಬೆರಸದೊಂದಿಗೆ ಸೇವಿಸಿದರೆ ರಕ್ತದೊತ್ತಡ ಮತ್ತು ತಲೆನೋವು ಗುಣವಾಗುತ್ತದೆ.

*ಮಜ್ಜಿಗೆಗೆ ಸೈಂಧವ ಉಪ್ಪು ಮತ್ತು ಹಸಿಶುಂಠಿ ರಸವನ್ನು ಬೆರೆಸಿ ಸೇವಿಸುವುದರಿಂದ ವಾಂತಿ ಕಡಿಮೆಯಾಗುತ್ತದೆ.

*ಮಜ್ಜಿಗೆ ಉತ್ತಮ ಜೀರ್ಣಕಾರಿ ದ್ರವ ಪದಾರ್ಥ. ಸಭೆ ಸಮಾರಂಭಗಳಲ್ಲಿ ಅಧಿಕ ಊಟ ಮಾಡಿ ಹೊಟ್ಟೆ ಭಾರವೆನಿಸುತ್ತಿದ್ದರೆ ಮಜ್ಜಿಗೆಗೆ ಉಪ್ಪು, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸೇರಿಸಿ ಕುಡಿದರೆ ತಿಂದ ಆಹಾರ ಜೀರ್ಣವಾಗುತ್ತದೆ.

*ಅರ್ಧ ಚಮಚ ಶುಂಠಿರಸ ಹಾಗೂ ಜೀರಿಗೆಪುಡಿಯನ್ನು ಮಜ್ಜಿಗೆಯೊಂದಿಗೆ ಸೇವಿಸಿದರೆ ಆ್ಯಸಿಡಿಟಿ, ಮಲಬದ್ಧತೆ ಹಾಗೂ ಮೂಲವ್ಯಾಧಿ ನಿವಾರಣೆಯಾಗುತ್ತದೆ.  ಚಿಟಿಕೆ ಉಪ್ಪು, ಒಂದು ಚಮಚ ಸಕ್ಕರೆಯೊಂದಿಗೆ ಒಂದು ಗ್ಲಾಸ್ ಮಜ್ಜಿಗೆ ಸೇವನೆ ಬಹಳ ಉತ್ತಮ. ಇದು ಅಗತ್ಯ ನೀರಿನಾಂಶವನ್ನು ನೀಡುತ್ತದೆ ಹಾಗೂ ಅತಿಸಾರವನ್ನು ನಿಯಂತ್ರಿಸುತ್ತದೆ. ತ್ವಚೆಯ ಕಾಂತಿಯನ್ನು ಹೆಚ್ಚಿಸಿ ಮುಪ್ಪನ್ನು ತಡೆಯುತ್ತದೆ.

*ಜೀರಿಗೆ ಪುಡಿಯನ್ನು ಮಜ್ಜಿಗೆ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಜೀರ್ಣಶಕ್ತಿ ಹೆಚ್ಚಿಸುತ್ತದೆ.

*ಊಟದ ಜೊತೆ ಉಪ್ಪಿನಕಾಯಿ ಇದ್ದಂತೆ ಕೊನೆಯಲ್ಲಿ ಮಜ್ಜಿಗೆ ಸೇರಿಸಿ ಊಟ ಮಾಡಿದರೆ ಹೊಟ್ಟೆಗೂ ಸುಖಕರ, ಊಟವೂ ಪೂರ್ಣವಾಗುತ್ತದೆ.

*ಸಕ್ಕರೆ ಕಾಯಿಲೆ ಇರುವವರಿಗೂ ಮಜ್ಜಿಗೆ ನೀರು ಉತ್ತಮ. ದಿನದಲ್ಲಿ ನಾಲ್ಕೈದು ಲೋಟ ಮಜ್ಜಿಗೆ ನೀರು ಕುಡಿಯುತ್ತಿದ್ದರೆ ದೇಹದ ಸ್ಥಿತಿ ಉತ್ತಮವಾಗಿರುತ್ತದೆ.

*ಡಯಟ್ ಮಾಡುವವರು ಹಣ್ಣು, ತರಕಾರಿಗಳ ಜೊತೆ ಮಜ್ಜಿಗೆಯನ್ನು ಸೇವಿಸಬೇಕು.

*ತಲೆಹೊಟ್ಟಿನ ಸಮಸ್ಯೆ ಇರುವವರು ಹುಳಿ ಮಜ್ಜಿಗೆಯನ್ನು ಕೂದಲಿನ ಬುಡಕ್ಕೆ ಸವರಿ ಎರಡು ಗಂಟೆ ಕಳೆದು ಸ್ನಾನ ಮಾಡಬೇಕು. ಹೀಗೆ ನಾಲ್ಕೈದು ಸಲ ಸ್ನಾನ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.

(ಸಂಗ್ರಹ ಮಾಹಿತಿ)

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in health »

ವ್ಯವಹಾರಕ್ಕಾಗಿ ಆಸ್ಪತ್ರೆಯಲ್ಲಾ, ಸೇವೆಗಾಗಿ ನಮ್ಮ ಆಸ್ಪತ್ರೆ. ಕಾಂಗರೂ ಆಸ್ಪತ್ರೆಯ ಸಂಸ್ಥಾಪಕ ಡಾ ಶೇಖರ್ ಸುಬ್ಬಯ್ಯ
ವ್ಯವಹಾರಕ್ಕಾಗಿ ಆಸ್ಪತ್ರೆಯಲ್ಲಾ, ಸೇವೆಗಾಗಿ ನಮ್ಮ ಆಸ್ಪತ್ರೆ. ಕಾಂಗರೂ ಆಸ್ಪತ್ರೆಯ ಸಂಸ್ಥಾಪಕ ಡಾ ಶೇಖರ್ ಸುಬ್ಬಯ್ಯ

ರಾಮನಗರ: ನಾವು ಹಣಕ್ಕಾಗಿ ಆಸ್ಪತ್ರೆ ನಡೆಸುವುದಿಲ್ಲ, ಇದೊಂದು ಸೇವೆ ಎಂದು ಪರಿಗಣಿಸಿ ಆಸ್ಪತ್ರೆ ನಡೆಸುತ್ತಿದ್ದೇವೆ. ಬೆಂಗಳೂರು ಮೈಸೂರು ಸೇರಿದಂತೆ ನಾಲ್ಕು

೪೬ ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ ೧೦ ಕಿಲೋ ಕ್ಯಾನ್ಸರ್ ಗಡ್ಡೆ ಹೊರತೆಗೆದ ಬಾಲು ಆಸ್ಪತ್ರೆಯ ವೈದ್ಯರು
೪೬ ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ ೧೦ ಕಿಲೋ ಕ್ಯಾನ್ಸರ್ ಗಡ್ಡೆ ಹೊರತೆಗೆದ ಬಾಲು ಆಸ್ಪತ್ರೆಯ ವೈದ್ಯರು

ಚನ್ನಪಟ್ಟಣ: ತಾಲ್ಲೂಕಿನ ಗ್ರಾಮವೊಂದರ ೪೬ ವರ್ಷದ ಮಹಿಳೆಯೊಬ್ಬರ ಗರ್ಭ (ಅಂಡಾಶಯ) ದಲ್ಲಿದ್ದ ಬರೋಬ್ಬರಿ ೧೦ ಕಿಲೋ ೩೦೦ ಗ್ರಾಂ ತೂಕದ ಕ್ಯಾನ್ಸರ್ ಗಡ್ಡೆ ಯನ್ನ

ಹೊಂಗನೂರು, ಕೋಡಂಬಳ್ಳಿ ಗ್ರಾಮದಲ್ಲಿ ಪರವಾನಗಿ ಇಲ್ಲದ ಖಾಸಗಿ ಆಸ್ಪತ್ರೆಗಳಿಗೆ ಬೀಗ ಜಡಿದ ಟಿಹೆಚ್‌ಓ
ಹೊಂಗನೂರು, ಕೋಡಂಬಳ್ಳಿ ಗ್ರಾಮದಲ್ಲಿ ಪರವಾನಗಿ ಇಲ್ಲದ ಖಾಸಗಿ ಆಸ್ಪತ್ರೆಗಳಿಗೆ ಬೀಗ ಜಡಿದ ಟಿಹೆಚ್‌ಓ

ಚನ್ನಪಟ್ಟಣ: ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ಗೋಪಿ ಕ್ಲಿನಿಕ್ ಎಂಬ ಖಾಸಗಿ ಆಸ್ಪತ್ರೆ ಇದ್ದು, ಗೋಪಿ ಎಂಬುವವರು ವೈದ್ಯರಾಗಿ ಸೇವೆ ನಿರ್ವಹಿಸುತ್ತಿದ್ದಾರ

ಉತ್ತಮ ಆರೋಗ್ಯಕ್ಕೆ ಆಯುರ್ವೇದವೇ ದಿವ್ಯ ಔಷಧ ಡಾ ಸಹನಾ ಕೃಷ್ಣ
ಉತ್ತಮ ಆರೋಗ್ಯಕ್ಕೆ ಆಯುರ್ವೇದವೇ ದಿವ್ಯ ಔಷಧ ಡಾ ಸಹನಾ ಕೃಷ್ಣ

ಚನ್ನಪಟ್ಟಣ: ಪುರಾಣೇತೀಹಾಸದಿಂದಲೂ ಪ್ರಖ್ಯಾತವಾಗಿರುವ ಔಷಧ ಎಂದರೆ ಅದು ಆಯುರ್ವೇದ ಔಷಧ, ಜಗತ್ತಿನ ಅತ್ಯಂತ ಪ್ರಾಚೀನ ಔಷಧವೂ ಹೌದು, ನಮ್ಮ ಪ್ರಕೃತಿ ಹೇಗೆ ಸಮ

ದೊಡ್ಡಮಳೂರು ಗ್ರಾಮದಲ್ಲಿ ದೀರ್ಘಾಯು ವೆಲ್ ನೆಸ್ ಆಯುರ್ವೇದ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಶಿಬಿರ
ದೊಡ್ಡಮಳೂರು ಗ್ರಾಮದಲ್ಲಿ ದೀರ್ಘಾಯು ವೆಲ್ ನೆಸ್ ಆಯುರ್ವೇದ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಶಿಬಿರ

ಚನ್ನಪಟ್ಟಣ: ತಾಲ್ಲೂಕಿನ ದೊಡ್ಡಮಳೂರು ಗ್ರಾಮದ ದೇವಸ್ಥಾನದ ಬೀದಿಯಲ್ಲಿರುವ ದೀರ್ಘಾಯು ವೆಲ್ ನೆಸ್ ಸೆಂಟರ್ ಇವರ ವತಿಯಿಂದ ನಾಳೆ (ಭಾನುವಾರ) ಬೆಳಿ

ಕ್ರಿಯೇಟಿವ್ ಅಸೋಸಿಯೇಷನ್ ಹಾಗೂ ಸೊಸೈಟಿ ವತಿಯಿಂದ ಶನಿವಾರ ನಗರದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ
ಕ್ರಿಯೇಟಿವ್ ಅಸೋಸಿಯೇಷನ್ ಹಾಗೂ ಸೊಸೈಟಿ ವತಿಯಿಂದ ಶನಿವಾರ ನಗರದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ

ಚನ್ನಪಟ್ಟಣ : ತಾಲ್ಲೂಕಿನಿಂದ ಬೆಂಗಳೂರಿಗೆ ಹೋಗಿ, ಜೀವನ ಕಟ್ಟಿಕೊಂಡು ತಾಲ್ಲೂಕಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಿಂದ ಕ್ರಿಯೇಟಿವ್ ಅಸೋಸಿಯೇಷನ್ ಮತ್ತ

ದುಶ್ಚಟದಿಂದ ದೂರವಿರಿ, ಆರೋಗ್ಯ ಕಾಪಾಡಿಕೊಳ್ಳಿ : ಪ್ರತಿಮಾ ಕೆ.ವಿ
ದುಶ್ಚಟದಿಂದ ದೂರವಿರಿ, ಆರೋಗ್ಯ ಕಾಪಾಡಿಕೊಳ್ಳಿ : ಪ್ರತಿಮಾ ಕೆ.ವಿ

ರಾಮನಗರ, ಜೂ. 17:   ಇತ್ತೀಚೆಗೆ ಅತಿ ಹೆಚ್ಚು ಹಲವಾರು ದುಶ್ಚಟಗಳು ಮನುಷ್ಯನನ್ನು ಆವರಸಿಕೊಂಡಿವೆ. ಇದರಿಂದಾಗಿ ನೂರಾರು ಖಾಯಿಲೆಗಳು ದೇಹ ಹೊಕ್ಕು ನಿತ್ಯ ಸಾ

ಫ್ಲೋರೋಸಿಸ್ ನಿಯಂತ್ರಿಸಿ ಉತ್ತಮ ಜೀವನ ನಡೆಸುವಂತೆ ಸಲಹೆ - ಡಾ.ಅನಿಲ್
ಫ್ಲೋರೋಸಿಸ್ ನಿಯಂತ್ರಿಸಿ ಉತ್ತಮ ಜೀವನ ನಡೆಸುವಂತೆ ಸಲಹೆ - ಡಾ.ಅನಿಲ್

ರಾಮನಗರ, ಜೂ. 15:   ಫ್ಲೋರೈಡ್ ನಮ್ಮ ದೇಹಕ್ಕೆ ಬೇಕಾದ ಒಂದು ಖನಿಜಾಂಶ ನಾವು ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಫ್ಲೋರೈಡ

ಆರೋಗ್ಯ ಕೇಂದ್ರದಲ್ಲಿ ದೊರೆಯುವ ಸೇವೆಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದ ಬಿ.ಎಸ್.ಗಂಗಾಧರ್.
ಆರೋಗ್ಯ ಕೇಂದ್ರದಲ್ಲಿ ದೊರೆಯುವ ಸೇವೆಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದ ಬಿ.ಎಸ್.ಗಂಗಾಧರ್.

ರಾಮನಗರ: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕೆ.ಕರೇನಹಳ್ಳಿ ಇವರ ಸಂಯುಕ್ತ ಆಶ್ರ

ಶ್ರೀಗಿರಿಪುರ ಗ್ರಾಪಂ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆದ ಆರೋಗ್ಯ ತಪಾಸಣಾ ಶಿಬಿರ
ಶ್ರೀಗಿರಿಪುರ ಗ್ರಾಪಂ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆದ ಆರೋಗ್ಯ ತಪಾಸಣಾ ಶಿಬಿರ

ರಾಮನಗರ, ಜೂ. 07:   ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾತ್ಮಗಾಂಧಿ ನರೇಗಾ ಉದ್ಯೋಗ ಖಾತ್ರಿ ಯೋಜನೆ ಹಾಗೂ ಕುದೂರು ಪ್ರ

Top Stories »  


Top ↑