Tel: 7676775624 | Mail: info@yellowandred.in

Language: EN KAN

    Follow us :


ಆಧುನಿಕ ಕರ್ನಾಟಕವನ್ನು ರೂಪಿಸಿದ ಹಿರಿಯರಲ್ಲೊಬ್ಬರಾದ ಡಾ.ಎಚ್.ಎಸ್. ದೊರೆಸ್ವಾಮಿ ಅವರಿಗೆ 100 ವರ್ಷ

Posted date: 09 Apr, 2018

Powered by:     Yellow and Red

ಆಧುನಿಕ ಕರ್ನಾಟಕವನ್ನು ರೂಪಿಸಿದ ಹಿರಿಯರಲ್ಲೊಬ್ಬರಾದ ಡಾ.ಎಚ್.ಎಸ್. ದೊರೆಸ್ವಾಮಿ ಅವರಿಗೆ 100 ವರ್ಷ

ಮಹಾತ್ಮ ಗಾಂಧೀಜಿ ಅವರ ಕೊನೆಯ ಕೊಂಡಿಯಂತೆ ಜೀವನ ನಡೆಸುತ್ತಿರುವ ಹರೆಯದ ಡಾ.ಎಚ್.ಎಸ್. ದೊರೆಸ್ವಾಮಿ. ಹಿರಿಯ ಸ್ವಾತಂತ್ರ್ಯ ಹೋರಾಟಗಾರಾದ ಇವರು ರಾಮನಗರ ಜಿಲ್ಲೆಯವರು ಎಂದು ಹಲವರಿಗೆ ತಿಳಿದಿಲ್ಲ.

    ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ 1918 ಏಪ್ರಿಲ್ 10ರಂದು ಇವರು ಜನಿಸಿದರು. ಐದನೆ ವಯಸ್ಸಿನಲ್ಲಿಯೆ ತಂದೆ ಶ್ರೀನಿವಾಸಯ್ಯ ಅಯ್ಯರ್ ಅವರನ್ನು ಕಳೆದುಕೊಂಡ ಇವರು, ಪ್ರಾಥಮಿಕ ವಿದ್ಯಾಭ್ಯಾಸವನ್ನು ಹಾರೋಹಳ್ಳಿಯಲ್ಲಿ ಮುಗಿಸಿ, ತದನಂತರ ಹೆಚ್ಚಿನ ಶಿಕ್ಷಣ ಪಡೆಯಲು ಅಜ್ಜನೊಂದಿಗೆ ಬೆಂಗಳೂರಿನ ಕಡೆಗೆ ಪಯಣ ಬೆಳೆಸಿದರು. ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿಯನ್ನು ಪಡೆದರು.

    ಮಹಾತ್ಮ ಗಾಂಧೀಜಿ ಅವರ ‘ಅರ್ಲಿ ಲೈಪ್’ ಪುಸ್ತಕದಿಂದ ಪ್ರಭಾವಿತರಾಗಿ ದೊರೆಸ್ವಾಮಿ ಅವರು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಅವರು ಸೆರೆಮನೆ ವಾಸವನ್ನು ಅನುಭವಿಸಿದರು. ಇವರ ಹೋರಾಟದಲ್ಲಿ ಇವರ ಹಿರಿಯ ಸಹೋದರ ಎಚ್.ಎಸ್. ಸೀತಾರಾಮ್, ಸರ್ದಾರ್, ವೆಂಕಟರಾಮಯ್ಯ, ಏ.ಜಿ. ರಾಮಚಂದ್ರರಾವ್ ಮುಂತಾದವರು ಮಾರ್ಗದರ್ಶಕರಾಗಿದ್ದರು.

    ಇಂದಿರಾಗಾಂಧಿ ಯುಗದಲ್ಲಿ ತುರ್ತುಪರಿಸ್ಥಿತಿ ವಿರೋಧಿಸಿ ಜೈಲುವಾಸ ಅನುಭವಿಸಿದ ದೊರೆಸ್ವಾಮಿ ಅವರು,  ಕಳೆದ ದಶಕದಲ್ಲಿ ಲಕ್ಷಾಂತರ ಎಕರೆ ಭೂಮಿ, ಭೂಗಳ್ಳರ ಹಗರಣಕ್ಕೆ ಸಿಲುಕಿಹೊಗುವುದನ್ನು ಹೋರಾಡಿ ತಪ್ಪಿಸಿದ್ದಾರೆ.  ಹಳ್ಳಿಗಳನ್ನು ಕಸದ ಕೊಂಪೆಗಳನ್ನು ಮಾಡಿ ಕಸದ ಪರ್ವತ ರಾಶಿಗಳಿಂದ ತುಂಬಿ, ಸುತ್ತಮುತ್ತಲಿನ ಜನ ಊಹಿಸಿಕೊಳ್ಳಲಾಗದ ನರಕದ ಬಾಳನ್ನು ಅನುಭವಿಸಬೇಕಾಗಿದ್ದ ಅನಿವಾರ್ಯ ಸಂದರ್ಭದಲ್ಲಿ,  ತಾವೆ ಅಲ್ಲಿನ ಜನರ ನೇತೃತ್ವ ವಹಿಸಿ  ಬೆಳೆಯುತ್ತಿದ್ದ  ಕಸದರಾಶಿಗೆ ಇಂದು ತಡೆ ಉಂಟಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ‘ಕರ್ನಾಟಕ ಏಕೀಕರಣದ ಹೋರಾಟದ ನಿಟ್ಟಿನಲ್ಲಿ ಸ್ವಾತಂತ್ರ್ಯ ಬಂದ ದಿನಗಳಲ್ಲಿ ತಾವು ನೆಹರೂ, ಸರ್ದಾರ್ ಪಟೇಲ್ ಮುಂತಾದವರುಗಳೊಡನೆ ಆಡಿದ ಮಾತುಕತೆ, ನಂತರ ಮೈಸೂರು ರಾಜರು ಭಾರತದ ಒಕ್ಕೂಟಕ್ಕೆ  ಸೇರಲು ಮಾಡುವತ್ತ ಹೋರಾಟ, ಕೆಂಗಲ್ ಹನುಮಂತಯ್ಯನವರ  ವಿಶಾಲ ಮೈಸೂರಿಗೆ ಸೇರಲು ಪ್ರಾಂತ್ಯಗಳ ಪ್ರತಿನಿಧಿಗಳಿಗೆ ಆಹ್ವಾನ,  ಆಂಧ್ರದಲ್ಲಿ ಏಕೀಕರಣಕ್ಕೆ ಆದ ಉಪವಾಸ ಸತ್ಯಾಗ್ರಹದ ದುರ್ಘಟನೆ, ನಂತರ  ಭಯಭೀತರಾದ ನೆಹರೂ ಅವರಿಂದ  ಕರ್ನಾಟಕ ನಿರ್ಮಾಣದ ನಿರ್ಧಾರ ಇತ್ಯಾದಿ ಪ್ರತಿ ವಿವರಗಳನ್ನು ಮನಮುಟ್ಟುವಂತೆ ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಗಾಂಧಿ ಅಧ್ಯಯನ ಶಿಬಿರದಲ್ಲಿ ವಿವರಿಸಿದರು.

    ನನಗೆ ನಾನು ಬದುಕಿದ ರೀತಿಯಲ್ಲಿ ಸಂತೃಪ್ತಿಯಿದೆ. ಏನೋ ಒಂದಷ್ಟು ಮಾಡಿದ್ದೇನೆ, ಬದುಕನ್ನು ಯೋಗ್ಯವಾಗಿ ಬಾಳಿದ  ಭಾವವಿದೆ ಎಂದು ಈ ಮಹಾನುಭಾವರು ಹೇಳಿದಾಗ ಅವರ ಹಿರಿ ಕಣ್ಣುಗಳಲ್ಲಿ ಒಂದು ಮಿಂಚಿದ್ದ ಭಾವ, ಅಲ್ಲಿ ನೆರೆದಿದ್ದ ಕೆಲವು ಆಪ್ತ ಹೃದಯಗಳಿಗೆ  ಕಂಡುಬಂದಿತ್ತು.

    ಪತ್ರಕರ್ತರಾಗಿಯೂ ದೊರೆಸ್ವಾಮಿ ಅವರು ಕಾರ್ಯನಿರ್ವಹಿಸಿ, ಬ್ರಿಟಿಷರ ವಿರುದ್ಧ ತಮ್ಮ ಪತ್ರಿಕೆಯನ್ನು ಒಂದು ಪ್ರಬಲ ಅಸ್ತ್ರವಾಗಿ ಉಪಯೊಗಿಸಿಕೊಂಡರು. ತಮ್ಮ ಬದುಕನ್ನು ಮಹಾತ್ಮ ಗಾಂಧೀಜಿಯವರ ಚಿಂತನೆಗೆ ಪೂರ್ಣವಾಗಿ ಅರ್ಪಿಸಿಕೊಂಡು, ಇಂದಿಗೂ ನಮ್ಮ ಮಧ್ಯೆ ಮಹಾತ್ಮರ ಕೊನೆಯಕೊಂಡಿಯಂತೆ ಜೀವನ ಸಾಗಿಸುತ್ತಿದ್ದಾರೆ.

    ಕರ್ನಾಟಕ ಏಕೀಕರಣಕ್ಕಾಗಿಯೂ ದುಡಿದು, ಶತಾಯುಷಿಯಾಗುವತ್ತ ದೃಢವಾಗಿ ನಡೆದಿರುವ ಹಿರಿಯರಾದ ದೊರೆಸ್ವಾಮಿ ಅವರ ಸರಳತೆ ಮತ್ತು ಸಜ್ಜನಿಕೆ ಎಲ್ಲರಿಗೂ ಮಾದರಿಯಾಗಿರುವುದು ಈ ನಾಡಿನ ಸೌಭಾಗ್ಯವಾಗಿದೆ.

    ಜನಸಾಮಾನ್ಯರ ಪರವಾಗಿ, ಪ್ರಭುತ್ವದ ವಿರುದ್ಧವಾಗಿ ಸದಾ ಹೋರಾಟ ಮಾಡುವ, ಪ್ರತಿಭಟನೆ ರ್ಯಾಲಿ, ಜಾಥಾ, ಧರಣಿ, ಕಾಲ್ನಡಿಗೆಗಳಲ್ಲಿ ಕಾಣಿಸಿಕೊಳ್ಳುವ ಡಾ.ಎಚ್.ಎಸ್. ದೊರೆಸ್ವಾಮಿ ಅವರಿಗೆ ಈಗ 100 ವರ್ಷ.

    100ರ ವಯಸ್ಸಿನಲ್ಲಿಯೂ ಇವರು ಪಾಲ್ಗೊಂಡ ಹೋರಾಟಗಳಿಗೆ ಲೆಕ್ಕವಿಲ್ಲ. ಇವರು ಅನುಭವಿಸಿರುವ ನೋವುಗಳಿಗೆ ಲೆಕ್ಕವಿಲ್ಲ. ಆದರೂ ಇಂದಿಗೂ ಅದೇ ಉತ್ಸಾಹ, ಅದೇ ಹೋರಾಟದ ಕಿಚ್ಚು ಇವರಲ್ಲಿದೆ. ಬಡವರು, ಅಸಹಾಯಕರು, ಮಹಿಳೆಯರ ಪರವಾಗಿದನಿ ಎತ್ತುವ ಅನ್ಯಾಯ ಕಂಡು ಬಂದಲ್ಲಿ ಪ್ರತಿಭಟಿಸುವ ದೊರೆಸ್ವಾಮಿ ಅವರು ಮುಂದಿನ ಜನಾಂಗಕ್ಕೆ ಮಾದರಿಯಾಗಿದ್ದಾರೆ.

    ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ : ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರಿಗೆ 'ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಕಳೆದ ವರ್ಷ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ಎಚ್.ಎಸ್.ದೊರೆಸ್ವಾಮಿ ಅವರಿಗೆ ಪ್ರದಾನ ಮಾಡಿದರು.

    ಬೇಷ್‌ : ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅಂತರ ವಿಶ್ವವಿದ್ಯಾಲಯ ಮಟ್ಟದ ಯವ ಜನತೆಗೆ ಮಹಾತ್ಮ ಗಾಂಧೀಜಿ ವಿಚಾರಗಳ ಪ್ರಸ್ತುತತೆ ಕುರಿತು ಕಳೆದ ವರ್ಷ ನಡೆದ ಅಧ್ಯಯನ ಶಿಬಿರದಲ್ಲಿ ಪಾಲ್ಗೊಂಡಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್. ದೊರೆಸ್ವಾಮಿ ಅವರೊಂದಿಗೆ ಮಾತನಾಡುವ ಸಂದರ್ಭ ಒದಗಿ ಬಂತು. 

    ‘ಸರ್, ಅಕ್ಟೊಬರ್ 2ರಂದು ಗಾಂಧಿಕೃಷ್ಣಯ್ಯ ಅವರನ್ನು ಕುರಿತು ಲೇಖನ ಬರೆದಿದ್ದೆ’ ಎಂದು ನಾನು ದೊರೆಸ್ವಾಮಿ ಅವರಿಗೆ ಹೇಳಿದಾಗ ಸಂತೋಷಪಟ್ಟ ಅವರು ‘ಗಾಂಧಿ ಕೃಷ್ಣಯ್ಯ ಅವರ ಹೆಸರನ್ನು ರಾಮನಗರದಲ್ಲಿ ಇಡುವಂತಹ ಯಾವುದಾದರೂ ಜನಪರ ಕೆಲಸ ಮಾಡುವಂತೆ ಜಿಲ್ಲಾಡಳಿತಕ್ಕೆ ತಿಳಿಸಿ’ ಎಂದು ನನ್ನ ಬೆನ್ನು ತಟ್ಟಿದರು. ಇದಕ್ಕಿಂತ ದೊಡ್ಡ ಗೌರವ ನನ್ನ ಜೀವನದಲ್ಲಿ ಮತ್ತೊಂದಿಲ್ಲ. 

    ಈಗಲೂ ಸಾಮಾಜಿಕ ಕಾರ್ಯಕರ್ತರಾಗಿ ತೊಡಗಿಸಿಕೊಂಡಿರುವ ದೊರೆಸ್ವಾಮಿ ಅವರು ಜೀವನ ಎಲ್ಲರಿಗೂ ಮಾದರಿಯಾಗುವಂತದ್ದು. 

ಲೇಖನ : ಎಸ್. ರುದ್ರೇಶ್ವರ
ಸಂಶೋಧನಾ ವಿದ್ಯಾರ್ಥಿ
ಬೆಂಗಳೂರು ವಿಶ್ವವಿದ್ಯಾಲಯ

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ

ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.


<

ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ

\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ

ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ

ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು

ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.

ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ

ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ

ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ

ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ

ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ

ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ

ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ

ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ

ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್

ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ  ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ

ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ

ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ

Top Stories »  


Top ↑