Tel: 7676775624 | Mail: info@yellowandred.in

Language: EN KAN

    Follow us :


ಒತ್ತುವರಿ, ಜಾನುವಾರು, ಕೊಳಚೆ ಮತ್ತು ಮದ್ಯವ್ಯಸನಿಗಳ ತಾಣವಾಗಿರುವ ಮಂಗಳವಾರಪೇಟೆ ಪ್ರಾಥಮಿಕ ಶಾಲೆ

Posted date: 20 May, 2019

Powered by:     Yellow and Red

ಒತ್ತುವರಿ, ಜಾನುವಾರು, ಕೊಳಚೆ ಮತ್ತು ಮದ್ಯವ್ಯಸನಿಗಳ ತಾಣವಾಗಿರುವ ಮಂಗಳವಾರಪೇಟೆ ಪ್ರಾಥಮಿಕ ಶಾಲೆ

ಚನ್ನಪಟ್ಟಣ:  ತಾಲ್ಲೂಕಿನಾದ್ಯಂತ ಇರುವ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಪೂರ್ವಾಪರ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂದರ್ಶಿಸಿ ನಮ್ಮ ಪತ್ರಿಕೆಯಲ್ಲಿ ಇತ್ತೀಚೆಗೆ ಸಂಪೂರ್ಣ ವರದಿಯೊಂದನ್ನು ಪ್ರಕಟಿಸಲಾಗಿತ್ತು, ಆ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಸೀತಾರಾಮು ರವರು ತಾಲ್ಲೂಕಿನಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳ ಶಿಕ್ಷಣ ಗುಣಮಟ್ಟವನ್ನು ಉನ್ನತ ಮಟ್ಟಕ್ಕೆ ಏರಿಸುವುದು, ಶಾಲೆಗಳ ಕಟ್ಟಡಗಳ ಗುಣಮಟ್ಟ ಕಾಪಾಡುವುದು ಮತ್ತು ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಉತ್ತರಿಸಿದ್ದರು.


ಪಟ್ಟಣದ ವಾಡ್೯ ನಂಬರ್ ೦೩ ರ ಮಂಗಳವಾರಪೇಟೆಯ ಮರಳುಹೊಲ ದಲ್ಲಿ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಜಾಗವನ್ನು ಮಕ್ಕಳು ಶಾಲೆಗೆ ಹೋಗಿ ಬರಲಾಗದಂತೆ ಅತಿಕ್ರಮವಾಗಿ ಗುಡಿಸಲು ಹಾಕಿಕೊಂಡು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಹಲವಾರು ಲಿಖಿತ ದೂರುಗಳನ್ನು ನೀಡಿದ್ದರೂ ಸಹ ಕ್ರಮ ಕೈಗೊಳ್ಳದೆ ಇರುವುದು ಕ್ಷೇತ್ರ ಶಿಕ್ಷಣಾಧಿಕಾರಿಗಳ ನಡೆಯನ್ನು ಪ್ರಶ್ನಿಸುವಂತಾಗಿದೆ.


೨೧/೧೦/೧೯೯೭, ೧೮/೦೮/೨೦೦೭, ೦೩/೦೮/೨೦೧೨, ೦೩/೦೮/೨೦೧೨, ೧೮/೦೮/೨೦೧೪, ೨೩/೦೩/೨೦೧೬, ೧೭/೧೨/೧೬ ರ ದಿನಾಂಕಗಳಲ್ಲದೇ ೨೦೧೮/೧೯ ನೇ ಸಾಲಿನ ತನಕವೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ನಗರಸಭೆ ಪೌರಾಯುಕ್ತರು, ನಗರಸಭೆ ಅಧ್ಯಕ್ಷರು, ತಹಶಿಲ್ದಾರ್ ಮತ್ತು ೦೭/೦೭/೨೦೧೭ ರಂದು ರಾಮನಗರ ಸಾರ್ವಜನಿಕ ಶಿಕ್ಷಣ ಇಲಾಖೆ (ಆಡಳಿತ) ಉಪನಿರ್ದೇಶಕರಿಗೂ ಸಹ ಶಾಲೆಯ ಮುಖ್ಯೋಪಾಧ್ಯಾಯರು, ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಮತ್ತು ಆಸಕ್ತ ಸಾರ್ವಜನಿಕರಿಂದ ದೂರು ಸಲ್ಲಿಸಲಾಗಿದ್ದು ಗುಡಿಸಲುಗಳನ್ನು ತೆರವುಗೊಳಿಸದೇ, ಒತ್ತುವರಿದಾರರ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಎಲ್ಲಾ ಅಧಿಕಾರಿಗಳ ಮೇಲೂ ಸಾರ್ವಜನಿಕರಿಗೆ ಅನುಮಾನಕ್ಕೆಡೆ ಮಾಡಿದೆ.


ಎಳೆಯ ಮಕ್ಕಳು ಕಲಿಯುವ ಅಂಗನವಾಡಿಯೂ ಸಹ ಶಾಲೆಯ ಹಿಂಭಾಗದಲ್ಲೇ ಇದ್ದು ಸುತ್ತಲೂ ಗಿಡಗಂಟಿಗಳೂ ಬೆಳೆದು ನಿಂತಿದ್ದು ಸುಣ್ಣಬಣ್ಣ ಕಾಣದೇ ಅದೆಷ್ಟೋ ವರ್ಷಗಳು ಸಂದಿವೆ, ಕುಡಿಯುವ ನೀರಿನ ತೊಟ್ಟಿಯ ಬೀಗ ತೆಗೆಯಲಾಗದಷ್ಟೂ ತುಕ್ಕು ಹಿಡಿದಿದೆ, ಇನ್ನೂ ಆ ನೀರನ್ನು ಬಳಸುವ ಮಕ್ಕಳ ಗತಿ ?


ರಾತ್ರಿ ವೇಳೆ ಮದ್ಯವ್ಯಸನಿಗಳು ಕುಡಿದು ತಿಂದು ಬಾಟಲಿ ಮತ್ತು ಉಳಿದ ತಿಂಡಿಯನ್ನು ಅಲ್ಲೇ ಬಿಸಾಡಿ ಹೋಗಿದ್ದಾರೆ, ೨೦೦೧ ರಲ್ಲಿ ಕಟ್ಟಿದ ಕಟ್ಟಡ ಪ್ಲಾಸ್ಟಿಂಗ್ ಬಿಟ್ಟು, ಮಳೆ ಬಿದ್ದಾಗ ಸೋರುತ್ತಿದೆ, ಮಕ್ಕಳು ಮತ್ತು ಶಿಕ್ಷಕರು ಮಳೆಗಾಲದಲ್ಲಿ ಜೀವ ಕೈಲಿಡಿದು ಭಯದಿಂದ ಇರಬೇಕಾಗಿದೆ.


೨೦೧೬ ರಲ್ಲಿ ತಹಶಿಲ್ದಾರ್ ರವರಿಗೆ ದೂರು ಸಲ್ಲಿಕೆಯಾದ ನಂತರ ಎನ್ ಸಿ ಆರ್/ಸಿ ಆರ್ /೯೯/೨೦೧೬/೧೭ ರಂದು ಪೌರಾಯುಕ್ತರಿಗೆ ಕ್ರಮ ಜರುಗಿಸಲು ಆದೇಶ ನೀಡಿದ್ದರೂ ಆಯುಕ್ತರಾಗಲಿ, ಶಿಕ್ಷಣಾಧಿಕಾರಿಗಳಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ,

ಉಪನಿರ್ದೇಶಕರಿಗೆ ದೂರು ಸಲ್ಲಿಕೆಯಾದ ನಂತರ ಔಪಚಾರಿಕವಾಗಿ ೨೮/೦೯/೨೦೧೭ ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು ರವರು ಭೇಟಿ ಕೊಟ್ಟಿದ್ದೇ ಸಾಧನೆಯೇ ಎಂಬುದು ದೂರುದಾರರ ಪ್ರಶ್ನೆಯಾಗಿದೆ.



ಅತಿಕ್ರಮವಾಗಿ ಗುಡಿಸಲು ನಿರ್ಮಿಸಿಕೊಂಡ ಮಹಾನುಭಾವರೇ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದು ಈ ತಿಂಗಳಲ್ಲೇ ತೀರ್ಪು ಹೊರ ಬೀಳಬಹುದು, ತೀರ್ಪು ಶಾಲೆಯ ಪರ ಬರಬಹುದು ಎಂದು ಸ್ಥಳೀಯ ಆಸಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ.


*ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಅನೇಕ ಇಲಾಖೆಯ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು ಅದನ್ನು ತೆರವುಗೊಳಿಸಿ, ಅತಿಕ್ರಮಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಮುಖ್ಯಮಂತ್ರಿಗಳ ಕ್ಷೇತ್ರಕ್ಕೆ ಒಳ್ಳೆಯ ಹೆಸರು ತರಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಶಾಲೆಯ ಮುಂಭಾಗ ಮತ್ತು ಎಡಭಾಗದಲ್ಲಿ ಕೊಳಚೆ ನೀರು ತುಂಬಿದ್ದು ಕಾಂಪೌಂಡ್ ಸಹ ಇಲ್ಲದಿರುವುದರಿಂದ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ತಗಲುವ ಸಾಧ್ಯತೆ ಹೆಚ್ಚಿದೆ, ಹಲವಾರು ಬಾರಿ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ, ಶೀಘ್ರವಾಗಿ ಅಕ್ರಮ ಗುಡಿಸಲು ತೆರವುಗೊಳಿಸಿ ಕಾಂಪೌಂಡ್ ಕಟ್ಟಿಸಬೇಕಾಗಿದೆ.

*ಮುಖ್ಯೋಪಾಧ್ಯಾಯಿನಿ.*


ನಾವು ಶಾಲೆಗೆ ಬರಲು ಮನೆಗಳ ಸಂದಿಗೊಂದಿಯಲ್ಲಿ‌ ಬರಬೇಕು, ಶಾಲೆಗೆ ಬರುವ ದಾರಿಯಲ್ಲಿ ಗುಡಿಸಲುಗಳಿವೆ, ಶಾಲೆಯ ಸುತ್ತಲೂ ಸ್ಥಳಿಯರು ಹೇಸಿಗೆ ಮಾಡಿರುವುದಲ್ಲದೆ ಎಮ್ಮೆ ದನಗಳನ್ನು ಇಲ್ಲಿಯೇ ಕಟ್ಟುತ್ತಾರೆ, ಪ್ರತಿನಿತ್ಯವೂ ವಾಸನೆ ಮತ್ತು ಕೊಳಚೆಯಲ್ಲಿಯೇ ಕಳೆಯುವಂತಾಗಿದೆ, ನಾವುಗಳು ಸಹ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು ಯಾವುದೇ ರೀತಿಯ ಪ್ರಯೋಜನವಾಗಿಲ್ಲ.

*ಶಾಲಾ ಮಕ್ಕಳು.*


ಗುಡಿಸಲುಗಳನ್ನು ತೆರವುಗೊಳಿಸಲು ನಾನು ಮೂರು ಬಾರಿ ಸತತವಾಗಿ ಪ್ರಯತ್ನ ಮಾಡಿದ್ದೇನೆ, ಆದರೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದರಿಂದ ಕೈಕಟ್ಟಿ ಕೂರಬೇಕಾಗಿದೆ, ನ್ಯಾಯಾಲಯದ ತೀರ್ಪಿನ ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.

*ಸಿ ಪುಟ್ಟಸ್ವಾಮಿ ಪೌರಾಯುಕ್ತರು.*


ನ್ಯಾಯಾಲಯದ ತೀರ್ಪು ನಮ್ಮ ಪರವಾಗಿ ಬಂದಿದೆ ಎಂದು ಗೊತ್ತಾಗಿದೆ, ತೀರ್ಪಿನ ಪ್ರತಿ ಇನ್ನೂ ತಲುಪಿಲ್ಲ, ತಲುಪಿದ ನಂತರ ಸೂಕ್ತ ಕ್ರಮಕೈಗೊಳ್ಳುತ್ತೇವೆ, ಕಾಂಪೌಂಡ್ ನಿರ್ಮಿಸಲು ವಿಶೇಷ ಅನುದಾನಕ್ಕೆ ಮನವಿ ಮಾಡಿದ್ದು ಹಣ ಬಿಡುಗಡೆಯಾದ ನಂತರ ಕಾಂಪೌಂಡ್ ನಿರ್ಮಿಸುತ್ತೇವೆ.

*ಆರ್ ಎಸ್ ಸೀತಾರಾಮು, ಕ್ಷೇತ್ರ ಶಿಕ್ಷಣಾಧಿಕಾರಿಗಳು.*



ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑