Tel: 7676775624 | Mail: info@yellowandred.in

Language: EN KAN

    Follow us :


ಎರಡು ವರ್ಷಗಳ ವರೆಗೆ ಎದೆಹಾಲು ಕುಡಿಸುವುದು ಒಳ್ಳೆಯದು

Posted date: 14 Apr, 2018

Powered by:     Yellow and Red

ಎರಡು ವರ್ಷಗಳ ವರೆಗೆ ಎದೆಹಾಲು ಕುಡಿಸುವುದು ಒಳ್ಳೆಯದು

ದೆಹಲಿ:ಮಗು ಹುಟ್ಟಿದ ದಿನದಿಂದ ಮೊದಲ ಎರಡು ವರ್ಷಗಳವರೆಗೆ ತಾಯಿ ಎದೆಹಾಲು ಕುಡಿಸುವುದರಿಂದ ಪ್ರತಿ ವರ್ಷ ಐದು ವರ್ಷದ ಒಳಗಿನ ಸುಮಾರು 8.2 ಲಕ್ಷ ಜೀವ ಉಳಿಸಲು ಸಾಧ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ತಿಳಿಸಿದೆ. ಡಬ್ಲ್ಯುಎಚ್‌ಒ ಯುನಿಸೆಫ್ ಬಿಡುಗಡೆ ಮಾಡಿರುವ ಹತ್ತು ಅಂಶಗಳನ್ನು ಒಳಗೊಂಡ ನೂತನ ಮಾರ್ಗಸೂಚಿಯಲ್ಲಿ ಈ ವಿಚಾರವನ್ನು ಉಲ್ಲೇಖಿಸಿದೆ. ಜಗತ್ತಿನಾದ್ಯಂತ ತಾಯಂದಿರು ಮಕ್ಕಳಿಗೆ ಎದೆ ಹಾಲು ಕುಡಿಸುವಂತೆ ಪ್ರೋತ್ಸಾಹ ನೀಡಲು ಮತ್ತು ಮಾತೃತ್ವ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಮಾರ್ಗಸೂಚಿಯನ್ನು ರಚಿಸಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಮಗು ಜನಿಸಿದ ಎರಡು ಗಂಟೆಗಳ ಒಳಗೆ ತಾಯಿ ಎದೆ ಹಾಲು ಉಣಿಸುವುದರಿಂದ ಅತಿಸಾರ ಅಥವಾ ಯಾವುದೇ ರೀತಿಯ ಸೋಂಕಿಗೆ ಗುರಿಯಾಗುವುದು ತಪ್ಪುತ್ತದೆ ಎಂದು ಯುನಿಸೆಫ್ ನಿರ್ದೇಶಕಿ ಹೆನ್ರಿಯೆಟ್ ಎಚ್ ಫೋರ್ ಹೇಳಿದ್ದು, ಈ ಮಾರ್ಗಸೂಚಿಗಳನ್ನು ಆಸ್ಪತ್ರೆಗಳಿಗೆ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಇದರಲ್ಲಿ ತಾಯಂದಿರು ಯಾವ ರೀತಿಯಲ್ಲಿ ಮಗುವಿಗೆ ಹಾಲುಣಿಸಬೇಕು, ಗರ್ಭಧಾರಣೆಯ ಮೊದಲು ಮತ್ತು ಶಿಶು ಜನನದ ನಂತರ ಅನುಸರಿಸಬೇಕಾದ ಕ್ರಮಗಳು, ತಾಯಿ ಮತ್ತು ಮಗುವಿನ ಲಾಲನೆ ಪಾಲನೆ ಇತ್ಯಾದಿಗಳ ಬಗ್ಗೆಯೂ ಈ ಮಾರ್ಗಸೂಚಿಯಲ್ಲಿ ಮಾಹಿತಿಗಳನ್ನು ನೀಡಲಾಗಿದೆ. ಅಲ್ಲದೆ ಈ ಕುರಿತಂತೆ ಆಸ್ಪತ್ರೆಗಳಲ್ಲಿ ನಿಯವಗಳನ್ನು ಪ್ರಕಟಿಸಬೇಕು ಎಂದು ತಿಳಿಸಿದೆ. ಹಾಗೆಯೇ ಎದೆ ಹಾಲಿನ ಬದಲು ಮಕ್ಕಳನ್ನು ಪೋಷಿಸಲು ಬಳಸುವ ಇತರ ವಿಚಾರಗಳನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು ಎಂದು ತಿಳಿಸಿದೆ.

ಮಕ್ಕಳ ಸಂಪೂರ್ಣ ಬೆಳವಣಿಗೆಗೆ ಮೂಲಾಧಾರ ತಾಯಿಯ ಎದೆ ಹಾಲು. ಅದರ ಮೇಲೆ ಮಗುವಿನ ಬೆಳವಣಿಗೆಯನ್ನು ಅಳೆಯುವುದು ಸಾಧ್ಯ. ಪ್ರಪಂಚದಾದ್ಯಂತ ಆಸ್ಪತ್ರೆಗಳಲ್ಲಿ ಈ ಬಗ್ಗೆ ಗಮನ ಹರಿಸುವುದು ಅತ್ಯಗತ್ಯವಾಗಿದೆ ಎಂದು ಡಬ್ಲ್ಯುಎಚ್‌ಒ ಪ್ರಧಾನ ನಿರ್ದೇಶಕ ಡಾ. ಟೆಡ್ರಸ್ ಅದನಾಮ್ ಗೆಬ್ರಯಸಸ್ ತಿಳಿಸಿದ್ದಾರೆ.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑