Tel: 7676775624 | Mail: info@yellowandred.in

Language: EN KAN

    Follow us :


ಹೀಗಿರಲಿ ನಿಮ್ಮ ಹಾಲುಗಂದಮ್ಮನ ಹಾರೈಕೆ.......

Posted date: 04 Aug, 2018

Powered by:     Yellow and Red

ಹೀಗಿರಲಿ ನಿಮ್ಮ ಹಾಲುಗಂದಮ್ಮನ ಹಾರೈಕೆ.......


ಲತಳಿಗೆ ಮದುವೆಯಾಗಿ ವರ್ಷ ತುಂಬುವಷ್ಟರಲ್ಲಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದಳು.
ಲತಾಳ ಕುಟುಂಬದವರಿಗೆಲ್ಲಾ ತಡೆಯಾಲಾಗದಷ್ಟು ಸಂತೋಷ. ಲತಾಳ ಕುಟುಂಬಕ್ಕೆ ಸಂತೋಷ ಪಡಲು ಕಾರಣವಾದ ಆ ಕಂದಮ್ಮನ ಹಾರೈಕೆಯು ಒಂದು ಜವಬ್ದಾರಿಯುತ ಕೆಲಸವಾಗಿರುತ್ತದೆ.
ಪಾಪುವಾದ ನಂತರ ತಾಯಿ ಮತ್ತು ಮಗುವಿನ ಆರೋಗ್ಯ ವಿಚಾರಿಸಲು (ತಪಾಸಣೆಗೆಂದು) ಬಂದ ಡಾಕ್ಟರ್ ಮಾತುಗಳನ್ನು ಕೇಳುತ್ತಾ ಅಲ್ಲೆ ಕುಳಿತಿದ್ದ ಲತಾಳ ಅಜ್ಜಿ ಗೊಣಗಲು ಆರಂಭಿಸಿದರು. ನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪ....ಎಂದು

ಹಾಗಾದರೆ ಡಾಕ್ಟರ್ ಏನೆಲ್ಲಾ ಹೇಳಿರಬಹಹುದು ಎಂದು ನಾವೇ ಊಹಿಸಬಹುದು... Latha, r u allright. Now you can take all liquid foods like fruit juice, hot soup and alll ಎಂದು ಹೇಳಿದರು. 
U can feed baby now Latha ಎಂದು ಹೇಳಿ  ಹೊರಟರು.

ಲತಾಳ ಅಜ್ಜಿ ಹಣ್ಣಿನ ಜ್ಯೂಸು ಕುಡಿದರೆ ಮಗುವಿಗೆ ಶೀತ ಆಗೋದಿಲ್ವೆ, ಇದು ಈಗ ಹಸುಗೂಸು ಎಂದು ಅಜ್ಜಿ ಗೊಣಗಿದರು. 
ಹಾಗಾದರೆ ಡಾಕ್ಟರ್ ಹೇಳಿದ್ದು ತಪ್ಪಾ?

ಬನ್ನಿ ತಿಳಿಯೋಣ. ನಮ್ಮ ಕಂದಮ್ಮನ ಹಾರೈಕೆ ಹೇಗಿರಬೇಕೆಂದು.

* ನವಜಾತ ಶಿಶುವಿಗೆ ಹುಟ್ಟಿದ 24 ಗಂಟೆಗೊಳಗೆ ತಾಯಿಯ ಗಿಣ್ಣು ಹಾಲನ್ನು ಹೊರತು ಪಡಿಸಿ ಬೇರೆ ಏನನ್ನು ನೀಡಬಾರದು.
* ತಾಯಿಯ ಗಿಣ್ಣಲಿನಲ್ಲಿ ಮಗುವಿಗೆ ಬೇಕಾದ ಪ್ರೋಟೀನ್ಸ್, ವಿಟಮಿನ್ಸ್ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದೆ. 
* ಮಗುವನ್ನು ನೋಡಲು ನೆಂಟರಿಷ್ಟರು  ಬರುವುದು ಸರ್ವೆ ಸಾಮಾನ್ಯ ಮಗುವನ್ನು ಮುಟ್ಟುವ ಮುನ್ನ ಕೈ ಕಾಲು ತೊಳೆದು ಮುಟ್ಟುವುದು ಒಳಿತು. 
   ಏಕೆಂದರೆ, ಮಗು ತುಂಬಾ ಸೂಕ್ಷ್ಮ ಇಂತಹ ಸಮಯದಲ್ಲಿ ರೋಗಗಳು ಬಹುಬೇಗನೆ ಮಗುವಿಗೆ ಹರಡುತ್ತವೆ. 
* ಮಗುವಿಗೆ ಪ್ರತಿ ಎರಡು ಗಂಟೆಗೊಮ್ಮೆ ಹಾಲುಣಿಸಿ (ದಿನಕ್ಕೆ 10 ರಿಂದ 12 ಬಾರಿ )
* ಮಗುವನ್ನು ಹತ್ತಿ ಬಟ್ಟೆಯಿಂದ ಸುತ್ತಿ ಬೆಚ್ಚಗಿಡಿ.
* ಮಗುವನ್ನು ಪ್ರತಿ  ದಿನ ಎಳೆ ಬಿಸಿಲಿಗೆ 15 ರಿಂದ 20 ನಿಮಿಷ ಹಿಡಿದುಕೊಳ್ಳಿ 
* ಕಂದಮ್ಮನ ಎಳೆ ಮೈಗೆ ಎಣ್ಣೆ ಸ್ನಾನ ಉತ್ತಮವಾಗುತ್ತದೆ ಮಗುವಿನ ಸ್ನಾಯು ಹಾಗೂ ಚರ್ಮದ  ಉತ್ತಮ ಬೆಳವಣಿಗೆಗೆ ಇದು ಸಹಾಯಕಾರಿಯಾಗುತ್ತದೆ.
* ಕಂದಮ್ಮನ ಸ್ನಾನಕ್ಕೆ ತುಂಬಾ ಬಿಸಿಯಾದ ನೀರು ಬೇಡ. 
* ಡಾಕ್ಟರ್  ಸಲಹೆಯಂತೆ  Vaccination ಮಾಡಿಸಿ.
* ಒಂದು ವರ್ಷದವರೆಗೆ ಜೇನುತುಪ್ಪ ತಿನ್ನಿಸುವುದು ಬೇಡ. 
* ಮಗುವು ಆರಾಮವಾಗಿ ನಿದ್ರಿಸಲು 19 ಗಂಟೆ ಯಾವುದೇ ಗಲಾಟೆ ಇಲ್ಲದೆ ಪ್ರಸಾಂತ ವಾತಾವರಣ ಇರುವಂತೆ ನೋಡಿಕೊಳ್ಳಿ.
* ತಾಯಿಗೆ ಕೊಡುವ ಆಹಾರದಿಂದ ಮಗುವಿಗೆ ಬೇಕಾದ ಕೊಬ್ಬು, ಕಬ್ಬಿಣದ ಅಂಶ - ಕ್ಯಾಲ್ಸಿಯಂ ಸೇರಿರುತ್ತದೆ ಎಂಬುದನ್ನು ಗಮನದಲ್ಲಿಡಿ. 
* ಮಗುವಿಗೆ 6 ತಿಂಗಳ ತನಕ ತಾಯಿ ಹಾಲನ್ನು ಹೊರತು ಪಡಿಸಿ ಬೇರೆ ಏನನ್ನು ನೀಡದಿರಿ. 
* ಮಗುವಿನ ಹಾರೈಕೆಗಾಗಿ ಸಮಯ ಮೀಸಲಿಡಿ.
* ಮಗುವು ದಿನಕ್ಕೆ 7 ರಿಂದ ೯ ಬಾರಿ ಮೂತ್ರ ವಿಸರ್ಜಿಸುತ್ತಿದ್ದರೆ, ತಾಯಿಯ ಹಾಲು ಸಾಕಾಗುತ್ತಿದೆ ಎಂದರ್ಥ. 
ನಿಮ್ಮ ಮಗುವಿನ ಲಾಲನೆ ಪಾಲನೆ ಸರಿಯಾಗಿದ್ದರೆ  ನಿಮ್ಮ ಮಗುವಿನ ಆರೋಗ್ಯ ನಿಮ್ಮ ಕೈಯಲ್ಲಿ. ನಗುವು ನಿಮ್ಮ ಮಗುವಿನ ಮುಖದಲ್ಲಿ. 

-ಅನುಷಾ ಆನಂದ ಶಿವ

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑