Tel: 7676775624 | Mail: info@yellowandred.in

Language: EN KAN

    Follow us :


ಪ್ರೀತಿಯಿಂದ ಎಲ್ಲವೂ ಸಾಧ್ಯ ಪೃಥ್ವಿ

Posted date: 21 Feb, 2019

Powered by:     Yellow and Red

ಪ್ರೀತಿಯಿಂದ ಎಲ್ಲವೂ ಸಾಧ್ಯ ಪೃಥ್ವಿ

ಪ್ರೀತಿಯಿಂದ ಅಡುಗೆ ತಯಾರಿಸುವುದು, ನಿಲಯದ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸುವುದು ಮತ್ತು ಪ್ರೀತಿಯಿಂದ ಊಟ ಬಡಿಸುವುದು ಈ ಮೂರು ಅಂಶಗಳನ್ನು ನೀವು ಮನದಲ್ಲಿ ಇಟ್ಟುಕೊಂಡು ಪ್ರೀತಿಯಿಂದ ಕೆಲಸ ನಿರ್ವಹಿಸಿದರೇ ನಿಮಗೆ ಮತ್ತು ನಿಮ್ಮ ಹುದ್ದೆಗೆ ಗೌರವ ದೊರೆಯುತ್ತದೆ ಎಂದು ರಾಮನಗರ ಪ್ರೊಬೆಷನರಿ ಡಿವೈಎಸ್ಪಿ ಕುಮಾರಿ ಪೃಥ್ವಿ ತಿಳಿಸಿದರು.

ಅವರು ಶ್ರೀ ಮಾರುತಿ ಅನುದಾನಿತ ಖಾಸಗಿ ವಿದ್ಯಾರ್ಥಿನಿಲಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಹೊಸದಾಗಿ ಆಯ್ಕೆಯಾಗಿದ್ದ ವಿದ್ಯಾರ್ಥಿ ನಿಲಯಗಳ ಅಡುಗೆ/ಅಡುಗೆ ಸಹಾಯಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ನೀವು ಯಾರಿಂದ ಏನಾದರೂ ನಿರೀಕ್ಷಿಸಬೇಕೆಂದರೆ ನೀವು ಮೊದಲು ಪ್ರೀತಿಯಿಂದ ಮುಗುಳ್ನಗೆ ಬೀರಿದರೇ ಸಾಕು ತಂತಾನೆ ನೀವು ನಿರೀಕ್ಷಿಸಿದಕ್ಕಿಂತಲೂ ಹೆಚ್ಚು ಪ್ರೀತಿ ಸಿಗುತ್ತದೆ, ನಿಲಯದ ಮಕ್ಕಳನ್ನು ನಿಮ್ಮ ಮಕ್ಕಳಂತೆಯೇ ನೋಡಿಕೊಂಡು ಸರಿಯಾದ ಸಮಯಕ್ಕೆ ಶುಚಿರುಚಿಯಾದ ಊಟವನ್ನು ಪ್ರೀತಿಯಿಂದ ಕೊಟ್ಟರೇ ಆ ಮಕ್ಕಳಿಂದ ನಿಮಗೇ ಹತ್ತರಷ್ಟು ಪ್ರೀತಿ ವಿಶ್ವಾಸ ಸಿಗುತ್ತದೆ ಎಂದರು.


ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪಿ ಬಿ ಬಸವರಾಜು ಮಾತನಾಡಿ ಮಕ್ಕಳು ಹೇಗೆ ಶುಚಿಯಾಗಿ ಬರುತ್ತಾರೋ ಹಾಗೆಯೇ ಅಡುಗೆ  ಸಿಬ್ಬಂದಿಗಳು ಸಹ ಸಮವಸ್ತ್ರ ಧರಿಸಿ, ಶ್ರದ್ಧೆ, ಭಕ್ತಿ ಬದ್ದತೆಯಿಂದ ಶಿಸ್ತನ್ನು ಅಳವಡಿಸಿಕೊಂಡು ನಿಲಯದ ಮಕ್ಕಳಿಗೆ ಸರಿಯಾದ ಸಮಯಕ್ಕೆ ಊಟ ತಿಂಡಿ ನೀಡಬೇಕು, ಮಕ್ಕಳ ವಿದ್ಯಾಭ್ಯಾಸದ ಕಡೆಯೂ ಗಮನ ನೀಡಿ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳುವುದು ಸಹ ನಿಮ್ಮ ಕರ್ತವ್ಯದ ಭಾಗವಾಗಬೇಕು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಆರೋಗ್ಯ, ಶಿಕ್ಷಣ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು, ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು, ಹಾಜರಿದ್ದು ಪೂರಕ ಮಾಹಿತಿಯನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರಸ್ತುತ ಪಡಿಸಿದರು.


ವಿಸ್ತರಣಾಧಿಕಾರಿ ಎಸ್ ಕುಮಾರ್, ನಿಲಯ‌ ಮೇಲ್ವಿಚಾರಕ ಸುನಿಲ್ ಕುಮಾರ್, ಸಮನ್ವಯಾಧಿಕಾರಿ ಎನ್ ಮೋಹನ್‌, ಇಲಾಖೆಯ ಸಿಬ್ಬಂದಿಗಳು,  ನಿಲಯಗಳ ಮೇಲ್ವಿಚಾರಕರು ಮತ್ತು ತರಬೇತಿದಾರರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑