Tel: 7676775624 | Mail: info@yellowandred.in

Language: EN KAN

    Follow us :


ರೈತರಿಗೆ ವಿದ್ಯುತ್ ಲೋಪ, ಸಭೆ ನಡೆಸಿ ಸ್ಪಂದಿಸಿದ ಅಧಿಕಾರಿಗಳು

Posted date: 21 Feb, 2019

Powered by:     Yellow and Red

ರೈತರಿಗೆ ವಿದ್ಯುತ್ ಲೋಪ, ಸಭೆ ನಡೆಸಿ ಸ್ಪಂದಿಸಿದ ಅಧಿಕಾರಿಗಳು

ಇಪ್ಪತ್ನಾಲ್ಕು ಗಂಟೆಗಳಲ್ಲಿ ರೈತರಿಗೆ ಕೇವಲ ಏಳು ಗಂಟೆ ನೀಡುವ ವಿದ್ಯುತ್ ನ್ನು ಸಹ ಅಧಿಕಾರಿಗಳು ಸರಿಯಾಗಿ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಭೆಯಲ್ಲಿ ಪ್ರತಿಭಟನೆ ಮಾಡಲು ಯೋಜನೆ ರೂಪಿಸಿದ್ದ ರೈತರನ್ನು ಇಂದು ನಗರದ ಕೆಪಿಟಿಸಿಎಲ್ ಕಛೇರಿಯಲ್ಲಿ ಅಧಿಕಾರಿಗಳು ಸಭೆ ಕರೆದು ಸಮಸ್ಯೆಗಳನ್ನು ಪರಿಹರಿಸಿಕೊಡಲು ತೀರ್ಮಾನಿಸಿದರು.


ದಿನದ ಏಳು ಗಂಟೆಯಲ್ಲಿ ಹಗಲು ನಾಲ್ಕು ಗಂಟೆ, ರಾತ್ರಿ ಮೂರು ಗಂಟೆ ವಿದ್ಯುತ್ ನೀಡುತ್ತಿದ್ದರೂ ಸಹ ಹಲವಾರು ಬಾರಿ ಮುಗ್ಗರಿಸಿ ನೀಡುತ್ತಿದ್ದು ಈ ಬೇಸಿಗೆಯ ಸಮಯದಲ್ಲಿ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ, ಲೈನ್ ಮನ್ ಗಳಾದಿಯಾಗಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ವಿದ್ಯುತ್ ತಂತಿಗಳ ಮೇಲೆ ಬಾಗಿರುವ ಮರಗಳನ್ಜು ಕಡಿಯದಿರುವುದರಿಂದ ಅಲ್ಲಲ್ಲೇ ವಿದ್ಯುತ್ ಪ್ರಸರಣ ಸಾಧ್ಯವಾಗುತ್ತಿಲ್ಲ, ಲೈನ್ ಮನ್ ಗಳು ಸ್ಥಳದಲ್ಲಿ ಇರದೇ ನಗರದಲ್ಲಿ ತಿರುಗಾಡುತ್ತಿರುತ್ತಾರೆ, ಜಂಪ್ ಹಾಕಲು ಸಹ ಇಂಜಿನಿಯರ್ ಕೇಳ್ರಿ ಎಂದು ದರ್ಪದಿಂದ ಉತ್ತರಿಸುತ್ತಾರೆ, ಎಂದು ಅಧಿಕಾರಿಗಳ ಮುಂದೆ ದೂರುಗಳ ಸುರಿಮಳೆಗೈದರು.


ಸುಳ್ಳೇರಿ ಗ್ರಾಮದ ರೈತ ಶಿವಣ್ಣ ನೀವು ಹೆಚ್ಚುವರಿಭಾರ (overload) ಏಕೆ ಎಂದು ಪ್ರಶ್ನಿಸಿ ಇದಕ್ಕೆ ಉತ್ತರ ನೀಡಲೇಬೇಕೆಂದು ನೀಡಲೇಬೇಕೆಂದು ಪಟ್ಟು ಹಿಡಿದರು, ಯಾರೋ ಖಾಸಗಿಯವರು ಮರ ಕಡಿಯಲು ಸಹ ನೀವು ವಿದ್ಯುತ್ ತೆಗೆದು ರೈತರಿಗೆ ಅನಾನುಕೂಲ ಮಾಡುವುದು ಸರಿಯೇ, ಕಾಲಕ್ಕೆ ತಕ್ಕಂತೆ ಹೆಚ್ಚುವರಿ ವೇತನ ಪಡೆಯುವ ನೀವು ರೈತರಿಗೇಕೆ ಕಡಿಮೆ ವಿದ್ಯುತ್ ಜೊತೆಗೆ ಕಡಿಮೆ ಗುಣಮಟ್ಟದ ವಿದ್ಯುತ್ ನೀಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.


ಸಂತೆಮೊಗಳ್ಳಿ ದೊಡ್ಡಿಯ ರೈತ ರೋಹಿತ್ ಕನಕಪುರ ದಲ್ಲಿ ದಿನದ ಏಳು ಗಂಟೆಯೂ ಸಹ ರೈತರಿಗೆ ಹಗಲಿನಲ್ಲೇ ವಿದ್ಯುತ್ ಕೊಡುತ್ತಾರೆ, ಆದರೆ ಇದು‌ ಚನ್ನಪಟ್ಟಣದಲ್ಲಿ ಏಕೆ ಸಾಧ್ಯವಿಲ್ಲ, ದಶಕದ ಹಿಂದೆ ಚನ್ನಪಟ್ಟಣ ಫೀಡರ್ ನಿಂದ ಗರಕಹಳ್ಳಿ ಗ್ರಾಮದ ತನಕ ೩೫೦ ರಿಂದ ೪೦೦ ವೋಲ್ಟೇಜ್ ಇತ್ತು, ಈಗ ೨೫೦ ವೋಲ್ಟೇಜ್ ಗೆ ಬಂದು ನಿಂತಿದೆ, ಪ್ರೈಮರಿ ಲೈನ್ ಗೆ ಹೇಗೆ ೧೧ ಕೆವಿ ಲೈನ್ ಎಳೆದಿದ್ದೀರಿ ಎಂದು ಪ್ರಶ್ನಿಸಿದರು.

ಸುಳ್ಳೇರಿ, ಮೆಂಗಳ್ಳಿ, ಕೃಷ್ಣಾಪುರ ಸಂತೆಮೊಗಳ್ಳಿದೊಡ್ಡಿ ಸೇರಿದಂತೆ ಅನೇಕ ಗ್ರಾಮದ ರೈತರು ಭಾಗವಹಿಸಿ ತಮ್ಮ ವಿದ್ಯುತ್ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಎಳೆಎಳೆಯಾಗಿ ಬಿಡಿಸಿಟ್ಟರು.


ಸಮಸ್ಯೆಗಳನ್ನು ಆಲಿಸಿದ ಅಧಿಕಾರಿಗಳು ಇನ್ನು ಮುಂದೆ ಹತ್ತರಿಂದ ಎರಡು ಗಂಟೆಯ ತನಕ ಹಾಗೂ ಎರಡರಿಂದ ಆರು ಗಂಟೆಯ ತನಕ ನಿರಂತರ ವಿದ್ಯುತ್ ನೀಡುವುದರ ಜೊತೆಗೆ, ಇನ್ನಿತರ ಲೋಪದೋಷಗಳನ್ನು ಎರಡು ತಿಂಗಳೊಳಗೆ ಪರಿಹರಿಸುವುದಾಗಿ ಭರವಸೆ ನೀಡಿದರು, ಲೈನ್ ಮನ್ ಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ರೈತರಿಗೆ ತಕ್ಷಣ ಸ್ಪಂದಿಸುವುಂತೆ ಆದೇಶ ನೀಡಲಾಗುವುದು ಎಂದರು.


ಡಿವೈಎಸ್ಪಿ ಮಲ್ಲೇಶ್ ರವರು ಮಾತನಾಡಿ ನಿಮ್ಮ ನಿಮ್ಮ ಗ್ರಾಮದ ವಿದ್ಯುತ್ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ನೀಡಿ ರಶೀದಿ ಪಡೆಯಿರಿ, ಸೂಕ್ತ ಸಮಯದಲ್ಲಿ ಸ್ಪಂದಿಸಲಿಲ್ಲವೆಂದರೆ ನಂತರದ ಹಾದಿಯನ್ನು ತುಳಿಯಿರಿ, ರಾತ್ರಿ ವೇಳೆ ನೀರು ಹಾಯಿಸುವಲ್ಲೇನಾದರೂ ಸಮಸ್ಯೆ ಎದುರಾದರೆ ಪೋಲಿಸರನ್ನು ಸಂಪರ್ಕಿಸಿ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಭರವಸೆ ಇತ್ತರು.


ನಗರ ಉಪವಿಭಾಗದ ಎಇಇ ಸಿ ಎನ್ ಶಿವಕುಮಾರ್, ಕೋಡಂಬಳ್ಳಿ ಉಪವಿಭಾಗದ ಎಇಇ ಚಿದಾನಂದ್, ಹೊಂಗನೂರು ಶಾಖೆಯ ಎಇ ಶಿವಕುಮಾರ್ ವೃತ್ತ ನಿರೀಕ್ಷಕ ಸತೀಶ್ ಸಭೆಯಲ್ಲಿ ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑