Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ ಜಿಲ್ಲೆಗೆ ೭೬೪ ಕೋಟಿ ರೂಪಾಯಿಗಳ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಮುಖ್ಯಮಂತ್ರಿ

Posted date: 23 Feb, 2019

Powered by:     Yellow and Red

ರಾಮನಗರ ಜಿಲ್ಲೆಗೆ ೭೬೪ ಕೋಟಿ ರೂಪಾಯಿಗಳ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಮುಖ್ಯಮಂತ್ರಿ

ಚನ್ನಪಟ್ಟಣ: ರಾಜ್ಯದ ಮುಖ್ಯಮಂತ್ರಿ ಹೆಚ್ ಡಿ. ಕುಮಾರಸ್ವಾಮಿ ಯವರು ಇಂದು  ಚನ್ನಪಟ್ಟಣ ತಾಲ್ಲೂಕಿಗೆ ಸಂಬಂಧಿಸಿದಂತೆ ೭೬೦ ಕೋಟಿ ಯೋಜನೆಯ ಕಾಮಗಾರಿ ಕಾರ್ಯಕ್ಕೆ ಚಾಲನೆ ನೀಡಿದರು.

ಮುಖ್ಯಮಂತ್ರಿಗಳು ಮಾತನಾಡಿ, ನಾನು ನಿಮ್ಮೆ ಲ್ಲರ ನಿರೀಕ್ಷೆ ಹುಸಿ ಮಾಡುವುದಿಲ್ಲ, ಸರ್ಕಾರ ರಚನೆಯಾದ ೯ ತಿಂಗಳಲ್ಲಿ ನಾನು ಕ್ಷೇತ್ರಕ್ಕೆ ಆಗಮಿಸದಿರಲು ಕೆಲಸದ ಒತ್ತಡವೇ ಕಾರಣ, ಅಧಿಕಾರಿಗಳ ಜಡತ್ವವನ್ನು ನಿವಾರಿಸಿ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವ ರೀತಿಯಲ್ಲಿ ಮಾಡುವ ಹೊಣೆ ನನ್ನದು. ನಾನು ರಾಜ್ಯದ ಉದ್ದಗಲಕ್ಕೂ ಕೊಟ್ಟ ಮಾತಿನಂತೆ ಸಾಲ ಮನ್ನಾ ಮಾಡಿದ್ದೇನೆ. ನಿಮ್ಮ ಆಶೀರ್ವಾದದಿಂದ ಮುಖ್ಯ ಮಂತ್ರಿಯಾಗಿದ್ದೇನೆ. ನೀರಾವರಿ, ಪಶು ಸಂಗೋಪನೆ, ಹೈನುಗಾರಿಕೆ, ಕೃಷಿಗೆ ಮೊದಲ ಆಧ್ಯತೆಯನ್ನು ನೀಡಿದ್ದೇನೆ, ೪೬ ಸಾವಿರ ಕೋಟಿ ರೂ. ರೈತರಿಗಾಗಿಯೇ ಮೀಸಲಾದ ಬಜೆಟ್ ಮಂಡಿಸಿದ್ದೇನೆ, ೨೩ ಸಾವಿರ ಕೋಟಿ ಬೆಂಗಳೂರಿನ ಸಬರ್‌ಬನ್ ರೈಲು ಯೋಜನೆಯನ್ನು ಜಾರಿಗೆ ತಂದಿದ್ದೇನೆ ಮತ್ತಷ್ಟು ಕೆಲಸ ಮಾಡುವ ಉತ್ಸಾಹ ನಮ್ಮ ಲ್ಲಿದೆ ಎಂದು ಅವರು ಹೇಳಿದರು.

ನಾನು, ರೇವಣ್ಣ, ಡಿ.ಕೆ.ಶಿ. ರಾಮನಗರ, ಮಂಡ್ಯ, ಹಾಸನಕ್ಕೆ ಸೀಮಿತವಲ್ಲ. ನಾವು ಎಲ್ಲಾ ಕಡೆಯೂ ಕೆಲಸ ಮಾಡಬೇಕಾಗಿದೆ. ನಮ್ಮ ಸರ್ಕಾರ ೭ ವಿಧಾ ನಸಭಾ ಕ್ಷೇತ್ರಕ್ಕೆ ೭ ಸಾವಿರ ಕೋಟಿ ನೀಡಿದ್ದು, ಅವು ಗಳ ಶಂಕುಸ್ಥಾಪನೆಯನ್ನು ಮಂಡ್ಯದಲ್ಲಿ ಮಾಡಲಿದ್ದೇನೆ. ಹೊಸ ಸಕ್ಕರೆ ಕಾರ್ಖಾನೆಗೆ ಚಾಲನೆ ನೀಡಿದ್ದೇವೆ. ರೇಷ್ಮೆ ಬೆಳೆಯುವವರ ಮತ್ತು ರೀಲರ್‌ಗಳ ಸಮಸ್ಯೆ ಗಳಿಗೆ ಶೀಘ್ರದಲ್ಲಿಯೇ ಸಭೆ ಕರೆದು ಚರ್ಚಿಸಲಿದ್ದೇವೆ ಎಂದರು.

ಚನ್ನಪಟ್ಟಣ ಸ್ಪನ್‌ಸಿಲ್ಕ್ ಮಿಲ್‌ಗೆ ಚಾಲನೆ ನೀಡಿದ್ದೇನೆ. ಕ್ಷೀರ ಭಾಗ್ಯದಿಂದಲೂ ಹಾಲಿಗೆ ಏಪ್ರಿಲ್‌ನಿಂದ ಲೀಟರ್‌ಗೆ ೧ ರೂ. ಪ್ರೋತ್ಸಾಹ ಧನ ಕೊಡುತ್ತೇವೆ. ರೈತರ ಉಚಿತ ವಿದ್ಯುತ್‌ಗಾಗಿ ೧೧ ಸಾವಿರ ಕೋಟಿ ಹಾಗೂ ನರೇಗಾ ಯೋಜನೆಗೆ ೯೩೦ ಕೋಟಿ, ವಸತಿಗಾಗಿ ೧೮ ಸಾವಿರ ಕೋಟಿ ಹೀಗೆ ಅನೇಕ ಶಾಶ್ವತ ಕಾರ್ಯಕ್ರಮಗ ಳನ್ನು ಹಮ್ಮಿಕೊಂಡಿದ್ದೇವೆ ಎಂದರು.
 
ನಿಮ್ಮ ಋಣ ತೀರಿಸ ಬೇಕಾದ ಜವಾಬ್ದಾರಿ ನನ್ನ ಮೇಲಿದೆ. ನಾನು ಕ್ಷೇತ್ರಕ್ಕೆ ಬರಲಿಲ್ಲವೆಂಬ ಬೇಸರ ಬೇಡ. ಎಂದೆಂದಿಗೂ ನಿಮ್ಮ ಜೊತೆ ನಾನು ಇದ್ದೇನೆ. ಆಧುನಿಕ ಭಗೀರಥ ಎಂದು ಹೇಳಿಕೊಳ್ಳುವವರೊಬ್ಬರು ದೇವೇಗೌಡ ಬ್ಯಾರೇಜ್ ನೆನಪಿಸಿಕೊಳ್ಳಬೇಕು ಎಂದು ಯೋಗೇಶ್ವರ್ ಹೆಸರೇಳದೆ ಛೇಡಿಸಿದರು.
ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಭಾಗದ ಕೆರೆಗಳಿಗೆ ತಾಂತ್ರಿಕ ದೋಷಗಳಿಂದ ನೀರು ತುಂಬಿಸ ಲಾಗಿಲ್ಲ. ಅದನ್ನು ಬೇಗ ಸರಿಪಡಿಸಲಾಗುವುದು ಎಂದರು.

ಇದೇ ವೇಳೆ ತಾಲ್ಲೂಕಿನ ಹಲವಾರು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಪ್ರಾಸ್ತಾವಿಕ ನುಡಿಯನ್ನಾಡಿದ ಸಂಸದ ಡಿ.ಕೆ. ಸುರೇಶ್, ಚನ್ನಪಟ್ಟಣದ ಜನತೆ ಪ್ರಜ್ಞಾವಂತರು. ಇದು ಬೊಂಬೆಗೆ ವಿಶ್ವ ವಿಖ್ಯಾತವಾಗಿದೆ. ಈ ಕ್ಷೇತ್ರದ ಶಾಸಕರಾಗಿರುವ ಮುಖ್ಯ ಮಂತ್ರಿಗಳು ಅನೇಕ ವಿಷ ಯಗಳಲ್ಲಿ ಈಗ ಚಿಂತಿಸಿದ್ದಾರೆ. ಚನ್ನಪಟ್ಟಣ ಮತ್ತು ಕನಕಪುರ ತಾಲ್ಲೂಕು ಹಾಲು ಮತ್ತು ರೇಷ್ಮೆ ಉತ್ಪಾದನೆ ಯಲ್ಲಿ ಮುಂಚೂ ಣಿಯಲ್ಲಿವೆ. ಗುಜರಾತ್‌ನ ಅಮೂಲ್ ಅನ್ನು ಮೀರಿಸುವ ಹಂತಕ್ಕೆ ಕರ್ನಾಟಕ ಹೋಗುತ್ತಿದೆ. ರಾಜ್ಯದ ಮುಖ್ಯ ಮಂತ್ರಿ ಗಳಾದ ಕುಮಾರ ಸ್ವಾಮಿ ಯವರು ಹಾಲು ಉತ್ಪಾದ ಕರಿಗೆ ಸಹಾಯ ಧನ ಹೆಚ್ಚು ಮಾಡಿದ್ದಾರೆ, ದುಡಿಯುವ ಕೈಗಳಿಗೆ ಉತ್ತೇಜನ ನೀಡಿದ್ದಾರೆ.

ಸತ್ತೇಗಾಲದಿಂದ ಇಗ್ಗ ಲೂರಿಗೆ ನೀರು ತುಂಬಿಸಿ, ಕುಡಿಯುವ ನೀರಿಗೆ ಚಾಲನೆ ನೀಡಿದ್ದಾರೆ, ಇಸ್ರೇಲ್ ಮಾದರಿಯಲ್ಲಿ ಬೆಳೆ ಬೆಳೆಯಲು ಯೋಜನೆ ಸಿದ್ದಪಡಿಸಿದ್ದಾರೆ. ಇನ್ನೈದು ವರ್ಷಗಳ ನಂತರ ರಾಜ್ಯ ಕೃಷಿ ಪ್ರಧಾನವಾದ ರಾಜ್ಯವಾಗಲಿದೆ. ೮ ಪಥದ ರಸ್ತೆ ಅಷ್ಟೇ ಅಲ್ಲದೆ, ಅನೇಕ ಅಭಿವೃದ್ಧಿ ಕೆಲಸ ಮಾಡಿ ರಾಜ್ಯದಲ್ಲಿ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ತಂದು ನಿಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

 ಬಡವರಿಗೆ ಮನೆ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಕ್ರೀಡಾಂಗಣ ಆಗಬೇಕು, ಅವೆಲ್ಲವುಗಳನ್ನು ಮುಖ್ಯಮಂತ್ರಿಗಳು ಆಧ್ಯತೆ ಮೇರೆಗೆ ಮಾಡಬೇಕು ಎಂದರು.

ರಾಮನಗರ ವಸತಿ ಸಚಿವರಾದ ಎಂಟಿಬಿ ನಾಗರಾಜು ಮಾತನಾಡಿ, ೨೦ ತಿಂಗಳಲ್ಲಿ ನಮ್ಮ ಸರ್ಕಾರ ಚನ್ನಪಟ್ಟಣ ನಗರಕ್ಕೆ ೧೪೫೦ ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಹೇಳಿದರು,
ಚನ್ನಪಟ್ಟಣ ಗ್ರಾಮೀಣ ಪ್ರದೇಶ ದಲ್ಲಿ ೯೫೦೦ ಮನೆ ಕೋರಿಕೆಯುಳ್ಳ ಫಲಾನುಭವಿಗಳಿದ್ದಾರೆ. ಒಂದು ಪಂಚಾಯಿ ತಿಗೆ ೨೦ ಮನೆ ಕೊಡುವ ಯೋಚನೆ ಮಾಡಿದ್ದೇವೆ. ಬಸವ ವಸತಿ, ಅಂಬೇಡ್ಕರ್ ವಸತಿಯಲ್ಲಿ ಜಿಲ್ಲೆ ಹಿಂದುಳಿದಿದೆ. ವಸತಿ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಹಾಕಲಾಗುವುದು. ಯಾವುದೇ ದಲ್ಲಾಳಿ ಕೈಗೆ ಸಿಗದ ಹಾಗೆ ನೋಡಿಕೊಳ್ಳಬೇಕಾಗಾಗಿದೆ ಎಂದರು.
 
ರಾಮನಗರ ಜಿಲ್ಲಾ ಉಸ್ತು ವಾರಿ ಸಚಿವರು ಹಾಗೂ ಜಲ ಸಂಪನ್ಮೂಲ ಸಚಿವರಾದ  ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ಜಿಲ್ಲೆಗೆ ಐತಿಹಾಸಿಕವಾದ ನೀರಾವರಿ ಯೋಜನೆಗಳನ್ನು ಕೊಡಲಾಗುತ್ತಿದೆ, ನಾವು ಬೇರೆ ಬೇರೆ ಪಕ್ಷದವರಾದರೂ ಒಂದೇ ತತ್ವ ಸಿದ್ಧಾಂತದಡಿಯಲ್ಲಿ ದುಡಿಯುತ್ತಿದ್ದೇವೆ. ಮುಖ್ಯ ಮಂತ್ರಿ ಕುಮಾರಸ್ವಾಮಿ ಯವರು ೧೧ ವರ್ಷಳ ಹಿಂದೆ ಈ ರಾಮನಗರ ಜಿಲ್ಲೆಯನ್ನು  ಮಾಡಿ ಈಗ ಹಲವು ಹತ್ತು ರೀತಿಯಲ್ಲಿ ಅಭಿವೃದ್ಧಿ ಕಾಣುತ್ತಿದೆ ಎಂದರು.

ಯೋಗೇಶ್ವರ್ ಬಗ್ಗೆ ಪರೋಕ್ಷ ಟೀಕೆ ಮಾಡಿದ ಡಿಕೆಶಿ
ಇಡೀ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಒಬ್ಬರು ಮತ್ತು ಇಬ್ಬರಿಗೆ ಒಂದು ಟ್ರಾನ್ಸ್‌ಫಾರ್‍ಮರ್ ಕೊಟ್ಟಿದ್ದೇವೆ. ರೈತನಿಗೆ ಸಂಬಳ ಇಲ್ಲ. ಲಂಚ ಬರಲ್ಲ, ಪೆನ್ಷನ್ ಇಲ್ಲ, ನಿವೃತ್ತಿಯೂ ಇಲ್ಲ ಹಾಗಾಗಿ ಅವರಿಗೆ ಅನೇಕ ಸವಲತ್ತು ಗಳನ್ನು ನೀಡುತ್ತಿದ್ದೇವೆ.
ಯೋಗೇಶ್ವರ್ ಹೆಸರೇಳದೆ ಇಲ್ಲಿನ ಒಬ್ಬ ಮಾಜಿ ಎಂಎಲ್‌ಎ ಯಡಿಯೂರಪ್ಪ ಜೊತೆ ಸೇರಿ ಸರ್ಕಾರ ಉರುಳಿಸುವ ಕೆಲಸ ಮಾಡಿದರು. ಸಿಂ.ಎಂ. ಲಿಂಗಪ್ಪ ನವರ ಮಗನನ್ನು ನಿಲ್ಲಿಸಿ ಹಾಳು ಮಾಡಿದ ಪುಣ್ಯ ಇವರಿಗೆ ದಕ್ಕುತ್ತದೆ. ಓಟು ಹಾಕಿದ ಜನರ ಕಷ್ಟ ಸುಖ ವಿಚಾರಿಸದೆ ಬೆಂಗಳೂರಿನಲ್ಲಿ ಕುಂತವ್ನೆ ಎಂದು ಕಟಕಿಯಾಡಿದರು.
 
ಇಲ್ಲಿನ ಬಿಜೆಪಿ ಕಾರ್ಯಕರ್ತರು ದಳ ಮತ್ತು ಕಾಂಗ್ರೆಸ್‌ಗೆ ಬಂದು ಸೇರಲು ನೇರ ಆಹ್ವಾನ ನೀಡಿದ ಅವರು ಹಲವಾರು ಮಂದಿ ಬಿಜೆಪಿಗರು ತುದಿಗಾಲಲ್ಲಿ ನಿಂತಿದ್ದು ಎರಡು ಪಕ್ಷದವರು ಅವರನ್ನು ಬರಮಾಡಿಕೊಳ್ಳಬೇಕು ಎಂದರು.
 
ಕೊಡಗಿನ ಸಂತ್ರಸ್ಥರಿಗೆ ಸಂಗ್ರಹವಾಗಿದ್ದ ೯.೩೭ ಲಕ್ಷದ ಚೆಕ್‌ಅನ್ನು ತಾಲ್ಲೂಕು ಆಡಳಿತದಿಂದ ಮುಖ್ಯಮಂತ್ರಿ ಗಳಿಗೆ ನೀಡಿದರು. ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಹಲವಾರು ಇಲಾಖೆಗಳ ಫಲಾನುಭವಿಗಳಿಗೆ ಪರಿಹಾರ ನಿಧಿ ಚೆಕ್, ಸಾಗುವಳಿ ಚೀಟಿ ನೀಡಲಾಯಿತು. ಕುಮಾರಸ್ವಾಮಿಯವರು ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಚನ್ನಪಟ್ಟಣ ತಾಲ್ಲೂಕು ಹಾಲು ಉತ್ಪಾದಕರ ಸಂಘ ಗಳಿಂದ ಬೆಳ್ಳಿ ಕಿರೀಟ ಧಾರಣೆ ಮಾಡಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮಳವಳ್ಳಿ ಶಾಸಕರಾದ ಅಂದಾನಿ, ವಿಧಾನ ಪರಿಷತ್ ಸದಸ್ಯರಾದ ಅ. ದೇವೇಗೌಡ, ಎಸ್. ರವಿ, ಜಿ.ಪಂ. ಅಧ್ಯಕ್ಷರಾದ ಎಂ.ಎನ್. ನಾಗರಾಜು, ಉಪಾಧ್ಯಕ್ಷ ರಾದ ವೀಣಾಕುಮಾರಿ, ತಾ.ಪಂ. ಅಧ್ಯಕ್ಷರಾದ ಹರೂರು ರಾಜಣ್ಣ, ನಗರಸಭಾ ಧ್ಯಕ್ಷರಾದ ನಜ್ಮುನ್ನೀಸಾ, ಉಪಾಧ್ಯಕ್ಷರಾದ ಸರಳ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾದ ಎಸ್. ಗಂಗಾಧರ್ ಪ್ರಮುಖರಾದ  ಎಂ.ಸಿ. ಅಶ್ವಥ್, ಜಿಲ್ಲಾಧಿಕಾರಿಗಳಾದ ಕ್ಯಾ. ರಾಜೇಂದ್ರ, ಜಿ.ಪಂ. ಮುಖ್ಯ ಕಾರ್ಯನಿರ್ವಾ ಹಣಾಧಿಕಾರಿ ಮುಲೈಮುಹಿಲನ್, ಜಿಲ್ಲಾ ಪೊಲೀಸ್ ಅಧಿಕಾರಿ ರಮೇಶ್ ಬಾನೋತ್, ಡಿವೈಎಸ್‌ಪಿ ಟಿ. ಮಲ್ಲೇಶ್, ತಹಶೀಲ್ದಾರ್ ಯೋಗಾ ನಂದ್, ಆಯುಕ್ತ ಸಿ. ಪುಟ್ಟ ಸ್ವಾಮಿ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಅನೇಕ ಪ್ರಮುಖರು ಪಾಲ್ಗೊಂಡಿದ್ದರು.

ವೇದಿಕೆಯಲ್ಲಿ ಶಿಷ್ಟಚಾರ ಉಲ್ಲಂಘಿಸಿ ಅನೇಕ ಮಂದಿ ರಾಜಕೀಯ ಮುಖಂಡರ ಹಿಂಬಾಲಕರು ಕುಳಿತಿದ್ದರು, ಇದನ್ನು ಗಮನಿಸಿದ ಡಿ ಕೆ ಶಿವಕುಮಾರ್ ಭಾಷಣಕ್ಕೆ ನಿಂತ ಸಮಯದಲ್ಲಿ ಇಲ್ಲಿ ಯಾರ್ಯಾರೋ ಬಂದು ಕೂತವರೇ, ವೇದಿಕೆಯ ಮೇಲೆ ನಿಂತಿರುವವರು ಕೆಳಗೆ ಇಳಿಯಿರಿ ಎಂದು ತಾಕೀತು ಮಾಡುವುದರ ಜೊತೆಗೆ ವೇದಿಕೆಯ ಪಕ್ಕದಲ್ಲಿ ಕುಳಿತಿದ್ದ ಜೆಡಿಎಸ್ ನ ಜಯಮುತ್ತು, ಕಾಂಗ್ರೆಸ್ ನ ಶಿವಮಾದು‌ ಮತ್ತು ಎ ಸಿ ವೀರೇಗೌಡರನ್ನು ವೇದಿಕೆಗೆ ಕರೆದು ಕೂರಿಸಿದ ಪ್ರಸಂಗವೂ ನಡೆಯಿತು.

ಗೋ ರಾ ಶ್ರೀನಿವಾಸ...
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑