Tel: 7676775624 | Mail: info@yellowandred.in

Language: EN KAN

    Follow us :


ಅನುರಾಗ

Posted date: 12 Mar, 2019

Powered by:     Yellow and Red

ಅನುರಾಗ

ಎದೆಬಾನ ಹೊಂಗೊಳಕೆ 

ತಿಂಗಳೊಲಿದಿಳಿದಂತೆ

ನೈದಿಲೆಯ ನಗುವಾಗಿ ಬಾ

ಹುಣ್ಣಿಮೆಯ ಹಸೆಗೆ.... 


ನೋವೆಲ್ಲ ನಗುವಾಗಿ

ನಮ್ಮೊಲವೇ ಜೊತೆಗಿರಲು

ಕತ್ತಲಾಗಸದಲ್ಲಿ ಚುಕ್ಕಿನಕ್ಕಂತೆ 

ಹಾದಿಬೆಳಕಾಗಿರಲು.....


ಬಂದ ಚೈತ್ರನ ಒಲುಮೆ

ಹೊನಲಾಗಿ ಹರಿದಿರಲು

ದ್ಯುತಿಯ ಮಿಲನದಿ ಸಲಿಲ

ಮಳೆಬಿಲ್ಲಿಗೊಲಿದಂತೆ......


ಸೇರದಿಹ ತೀರಗಳ

ದೂರಯೋಜನವಿರಲಿ

ದೊರೆ ನಿನ್ನ ಅನರಾಗದೆಳೆ

ಸೆಳೆದೊಯ್ಯದಿಹುದೇ....


ಜತಿಯಾಗಿ ಶೃತಿಯಾಗಿ

ಪದಕೆ ನಾದದ ಸ್ಪರ್ಶ

ಬೆಂಗಾಡಿನೆದೆಯೊಳಗೆ

ಒಲವ ಮುಂಗಾರಿಳಿದಂತೆ 

          

ನ ನ್ನ ನೋವುಗಳೊಳಗೆ   

ನಿನ್ನ ಹೂ ನಗೆಯಿಳಿದು

ಹೂದುಂಬಿ ಮೈತ್ರಿಯಲಿ

ಜಗಕೆ ಜೇನಾಗೋಣ ಬಾ..      


ಶೈಲ ಶ್ರೀನಿವಾಸ್.

ರಾಮನಗರ.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑