Tel: 7676775624 | Mail: info@yellowandred.in

Language: EN KAN

    Follow us :


ಗೌಡರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ ಸಿಪಿವೈಗೆ ಎಚ್ಚರಿಕೆ ನೀಡಿದ ಜೆಡಿಎಸ್ ನಾಯಕರು

Posted date: 13 Apr, 2019

Powered by:     Yellow and Red

ಗೌಡರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ ಸಿಪಿವೈಗೆ ಎಚ್ಚರಿಕೆ ನೀಡಿದ ಜೆಡಿಎಸ್ ನಾಯಕರು

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಯವರ ಬಗ್ಗೆ ಏಕವಚನದಲ್ಲಿ ಮಾತನಾಡಲು ಹಾಗೂ ದೊಡ್ಡಗೌಡರ ಕುಟುಂಬದ ಬಗ್ಗೆ ಹಗುರವಾಗಿ ಹಾಗೂ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಮಾಜಿ ಶಾಸಕ ಸಿ ಪಿ ಯೋಗೇಶ್ವರ್ ಗೆ ನೈತಿಕ ಹಕ್ಕಿಲ್ಲ ಎಂದು ಚನ್ನಪಟ್ಟಣ ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ ಸಿಪಿವೈಗೆ ತಿರುಗೇಟು ನೀಡಿದರು.

ಅವರು‌ ನಗರದಲ್ಲಿರುವ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ಬಿಜೆಪಿ ಪರ ಮತಯಾಚನೆ ಮಾಡುವ ಸಂದರ್ಭದಲ್ಲಿ ಸಿ ಪಿ ಯೋಗೇಶ್ವರ್ ಮುಖ್ಯಮಂತ್ರಿಗಳನ್ನು ಏಕವಚನದಲ್ಲಿ ಸಂಬೋಧಿಸಿದ್ದಾರೆ, ತಾಲ್ಲೂಕು ಎಲ್ಲಿದೆ ಎಂದಾಗಲಿ,ತಾಲ್ಲೂಕಿನ ಗ್ರಾಮದ ಹೆಸರಾಗಲಿ ಗೊತ್ತಿದೆಯೇ ಎಂದು ಹಗುರವಾಗಿ ಮಾತನಾಡಿದ್ದಾರೆ, ಇಪ್ಪತೈದು ವರ್ಷಗಳ ಹಿಂದೆಯೇ ಅವರು ಈ ಭಾಗದ ಹೆಸರುಗಳನ್ನು ಮುಖಂಡರ ಹೆಸರನ್ನು ಕರಗತ ಮಾಡಿಕೊಂಡಿದ್ದಾರೆ ಎಂದರು.


ನೀರಾವರಿ ಹರಿಕಾರ ದೇವೇಗೌಡ ರ ಕೊಡುಗೆ ಬಗ್ಗೆ ಮಾತನಾಡುತ್ತಾರೆ, ಇಪ್ಪತ್ತು ವರ್ಷಗಳ ಕಾಲ ಇವರ ಕೊಡುಗೆ ಏನು ಎಂದು ಪ್ರಶ್ನಿಸಿದರು, ದೇವೇಗೌಡ ಮತ್ತು ವರದೇಗೌಡ ಪಟ್ಟು ಹಿಡಿದು ಮಾಡಿದ ನೀರಾವರಿ ಕೆಲಸಕ್ಕೆ ಕೇವಲ ಪೈಪುಗಳನ್ನು ಹಾಕಿಸಿದ್ದಷ್ಟೇ ಇವರ ಸಾಧನೆಯೇ ? ಎಂದು ಸಾರ್ವಜನಿಕರಿಗೆ ತಿಳಿಸಬೇಕೆಂದು ಹೇಳಿದರು.


ನಗರಸಭೆಯ ಹಿರಿಯ ಸದಸ್ಯ ಉಮಾಶಂಕರ್ ಮಾತನಾಡಿ ಯೋಗೇಶ್ವರ್ ಹದ್ದುಮೀರಿ ಮಾತನಾಡುತ್ತಿದ್ದಾರೆ, ಅವರ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಖಾಸಗಿ ಬಸ್ ನಿಲ್ದಾಣ, ಅಂಬೇಡ್ಕರ್ ಭವನ, ಯುಜಿಡಿ ಕಾಮಗಾರಿಗಳನ್ನು ಮಾಡಲಾಗಿಲ್ಲ, ಇನ್ನಾರು ತಿಂಗಳಲ್ಲಿ ಈ ಎಲ್ಲಾ ಕೆಲಸಗಳನ್ನು ಮಾಡಿ ತೋರಿಸುತ್ತೇವೆ, ಕುಡಿಯಲು ಕಾವೇರಿ ನೀರು ಒದಗಿಸುತ್ತೇವೆ, ಇನ್ನು ಮುಂದೆ ಎಚ್ಚರಿಕೆಯಿಂದ ಮಾತನಾಡದೇ ಹೋದರೆ ಸಿ ಪಿ ಯೋಗೇಶ್ವರ್ ವಿರುದ್ಧ ಬಹಿರಂಗ ಹೋರಾಟ ಮಾಡುವುದಾಗಿ ಎಚ್ಚರಿಸಿದರು.


ಗುತ್ತಿಗೆದಾರ ಗೋವಿಂದಳ್ಳಿ ನಾಗರಾಜು, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮುದ್ದುಕೃಷ್ಣ ಮಾತನಾಡಿ ಡಿ ಕೆ ಸಹೋದರ ಹಣ ದ್ವಿಗುಣಗೊಂಡಿದೆ ಎಂದು ಹೇಳುತ್ತಾರೆ ಇವರ ಹಣ ಮತ್ತು ಆಸ್ತಿ ಕಡಿಮೆಯಾಗಿದೆಯೇ ಎಂದು ತಿರುಗೇಟು ನೀಡಿದರು.


ಪತ್ರಿಕಾಗೋಷ್ಠಿಯಲ್ಲಿ ಎಲೆಕೇರಿ ರವೀಶ್, ವೆಂಕಟಾಚಲಯ್ಯ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑