Tel: 7676775624 | Mail: info@yellowandred.in

Language: EN KAN

    Follow us :


ಜೋಡೆತ್ತುಗಳ ಹುಸಿ ಭರವಸೆಗಳಿಂದ ನೊಂದ ಮತದಾರ ? ಬಿಜೆಪಿ ಪರ ಒಲವು ಹೊಂದಿದ್ದಾನೆ, ಯೋಗೇಶ್ವರ್.

Posted date: 16 Apr, 2019

Powered by:     Yellow and Red

ಜೋಡೆತ್ತುಗಳ ಹುಸಿ ಭರವಸೆಗಳಿಂದ ನೊಂದ ಮತದಾರ ? ಬಿಜೆಪಿ ಪರ ಒಲವು ಹೊಂದಿದ್ದಾನೆ, ಯೋಗೇಶ್ವರ್.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿ ಗಾದಿಗೇರಿದ ಕುಮಾರಸ್ವಾಮಿ ಮತ್ತು ಕನಕಪುರ ಕ್ಷೇತ್ರದಿಂದ ಗೆದ್ದು ಜಲಸಂಪನ್ಮೂಲ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಮಂತ್ರಿಗಳಾದ ಡಿ ಕೆ ಶಿವಕುಮಾರ್ ರವರ ಜೋಡೆತ್ತುಗಳ ಭರವಸೆ ಮತ್ತು ದುರಾಡಳಿತದ ವಿರುದ್ಧ ಬಂಡೆದ್ದಿರುವ ತಾಲ್ಲೂಕಿನ ಮತದಾರ ಬಂಧುಗಳು ಈ ಬಾರಿ ಬಿಜೆಪಿ ಬೆಂಬಲಿಸುತ್ತಾರೆ ಎಂಬ ಆತ್ಮವಿಶ್ವಾಸ ಇದೆ ಎಂಬ ಭರವಸೆಯನ್ನು ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಹೊಂದಿರುವುದಾಗಿ ತಿಳಿಸಿದರು.

ಅವರು ನಗರದ ಹೊರವಲಯದಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ಈ ವಿಷಯ ತಿಳಿಸಿದರು.


ನೇರ ಮತ್ತು ತ್ರಿಕೋನ ಸ್ಪರ್ಧೆ


ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆಯಿದ್ದರೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನೇರ ಸ್ಪರ್ಧೆ ಇದ್ದು ಇಲ್ಲಿ ಜೆಡಿಎಸ್ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ, ತಮ್ಮ ಪಕ್ಷದ ಚಿಹ್ನೆಯನ್ನೇ ಬಳಸದೇ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಿರುವುದರಿಂದ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಯವರ ಎರಡೂ ಕ್ಷೇತ್ರಗಳು ಇನ್ನು ಮುಂದೆ ಕಣ್ಮರೆಯಾಗಲಿವೆ ಎಂದು ಭವಿಷ್ಯ ನುಡಿದರು.


ಜೆಡಿಎಸ್ ಅಡಿಯಾಳದ ಮೂರು ಲೋಕಸಭಾ ಕ್ಷೇತ್ರ


ಮಂಡ್ಯ, ತುಮಕೂರು ಮತ್ತು ಹಾಸನ ಕ್ಷೇತ್ರಗಳಲ್ಲಿ ಸಹ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಜೆಡಿಎಸ್ ಗೆ ಮಾರಿಕೊಂಡಿದೆ, ಉತ್ತಮ ವಾಕ್ ಚಾತುರ್ಯವುಳ್ಳ ಮುದ್ದಹನುಮೇಗೌಡರನ್ಮು ಹಾಗೂ ಮಂಡ್ಯ, ಹಾಸನದ ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತರುಗಳನ್ನು ಕಾಂಗ್ರೆಸ್ ಸಂಪೂರ್ಣವಾಗಿ ಕಳೆದುಕೊಂಡಿದ್ದು ಇನ್ನು ಮುಂದೆ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗುತ್ತದೆ ಎಂದು ವ್ಯಾಖ್ಯಾನಿಸಿದರು.


ರಾಷ್ಟ್ರೀಯ ಪಕ್ಷಗಳ ವಿರುದ್ಧ ಪ್ರಾದೇಶಿಕ ಪಕ್ಷ, ಆದರಿಲ್ಲಿ !?


ರಾಷ್ಟ್ರೀಯ ಪಕ್ಷಗಳ ದುರಾಡಳಿತದ ವಿರುದ್ದ ಸೆಟೆದು ನಿಂತ ಪ್ರಾದೇಶಿಕ ಪಕ್ಷಗಳು ಇಂದು ಅಧಿಕಾರದ ಆಸೆಗಾಗಿ ಅವರ ಜೊತೆ ಒಂದುಗೂಡಿ ಅದೇ ಹಾದಿ ತುಳಿಯುತ್ತಿರಿವುದು ನಾಚಿಕೆಗೇಡಿನ ಸಂಗತಿ, ಇಲ್ಲಿ ಜೆಡಿಎಸ್ ತಮ್ಮ ಕುಟುಂಬದ ಏಳ್ಗೆಗಾಗಿ ಹಾಗೂ ಅಧಿಕಾರಕ್ಕಾಗಿ ಯಾವ ಮಟ್ಟಕ್ಕೂ ಇಳಿಯುತ್ತದೆ ಎಂಬುದು ಸಾಬೀತಾಗಿದೆ, ತಮ್ಮ ಸ್ವಾರ್ಥ ಸಾಧನೆಗಾಗಿ ಪಕ್ಷದ ಸಿದ್ದಾಂತಗಳನ್ನು ಹಾಗೂ ತಳಮಟ್ಟದ ಕಾರ್ಯಕರ್ತರನ್ನು ಬಲಿ ಕೊಡುತ್ತಿದೆ ಎಂದರು.


ಕ್ಷೇತ್ರದ ಜನರ ಒಡನಾಟವಿಲ್ಲದ ಮುಖ್ಯಮಂತ್ರಿ


ಗೆದ್ದು ಹೋದ ನಂತರ ಒಂದು ಬಾರಿಯೂ ಕ್ಷೇತ್ರಕ್ಕೆ ಕಾಲಿಡದ ಕುಮಾರಸ್ವಾಮಿ ಏನು ಅಭಿವೃದ್ಧಿ ಮಾಡುತ್ತಾರೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಉದ್ಘಾಟನೆ ಮಾಡಿದ ಕೆಲಸಗಳನ್ನು ಅದೇ ಹಳೆಯ ಕಲ್ಲುಗಳನಿಟ್ಟು ಇವರು ಉದ್ಘಾಟನೆ ಮಾಡುತ್ತಾರೆ, ರೈತರ ಸಾಲಮನ್ನಾ, ಸ್ತ್ರೀಶಕ್ತಿ ಗುಂಪುಗಳ ಸಾಲಮನ್ನಾ ಇನ್ನಿತರ ಹಲವಾರು ಬೋಗಸ್ ಯೋಜನೆಗಳ ಮಹಾ ಪೂರವನ್ನೇ ಹರಿಸಿದ ಮುಖ್ಯಮಂತ್ರಿಗಳು ಒಂದು ಬಾರಿಯೂ ಸಹ ಕ್ಷೇತ್ರದ ಕಡೆ ಮುಖಮಾಡದಿರುವುದು ಹಾಗೂ ಒಂದೂ ಸಮಸ್ಯೆಯನ್ನು ಬಗೆಹರಿಸದಿರುವುದು ಅವರ ಅಭಿವೃದ್ಧಿ ಯನ್ನು ತೋರಿಸುತ್ತದೆ ಎಂದು ವ್ಯಂಗವಾಡಿದರು.


ತುಂಬಿದ್ದ ಕೆರೆಗಳನ್ನು ಬರಿದು ಮಾಡಿದ್ದೇ ಇವರ ಸಾಧನೆ


ನಾನು ಶಾಸಕನಾಗಿದ್ದ ಸಮಯದಲ್ಲಿ ಬೆಟ್ಟ ಗುಡ್ಡಗಳನ್ನು ಹತ್ತಿ ಇಳಿದು ಸರ್ವೇ ಮಾಡಿಸಿ ಪೈಪ್ ಲೈನ್ ಎಳೆಸಿ ತಾಲ್ಲೂಕಿನ ಬಹುತೇಕ ಎಲ್ಲಾ ಕೆರೆಗಳನ್ನು ತುಂಬಿಸಿ ಅಂತರ್ಜಲ ವೃದ್ಧಿ ಮತ್ತು ಕುಡಿಯುವ ನೀರಿಗೆ ಪರಿಹಾರ ಒದಗಿಸಿದ್ದೆ, ಆದರೆ ‌ಈಗ ಹೊಂಗನೂರು ಕೆರೆ ಹೊರತು ಪಡಿಸಿ ಇನ್ಯಾವುದೇ ಕೆರೆಗಳಿಗೆ ನೀರು ತುಂಬಿಸದೇ ಖಾಲಿ ಕೆರೆಗಳನ್ನಾಗಿ ಮಾಡಿರುವುದೇ ಅವರ ಬಹುದೊಡ್ಡ ಸಾಧನೆ, ನೀರಿಲ್ಲದೆ ಒಣಗಿ ಹೋಗುತ್ತಿರುವ ಬೆಳೆಗಳನ್ನು ಉಳಿಸಿಕೊಳ್ಳಲಾಗದೇ ರೈತ ಪರಿತಪಿಸಿ ಶಾಪ ಹಾಕುತ್ತಿದ್ದಾನೆ, ಆ ಶಾಪದ ಓಟುಗಳೆಲ್ಲವೂ ಬಿಜೆಪಿಯ ಮತಗಳಾಗಿ ಪರಿವರ್ತಿತವಾಗುತ್ತಿವೆ ಎಂದು ದೃಢ ವಿಶ್ವಾಸದಿಂದ ನುಡಿದರು.


ಡಿಕೆ ಸಹೋದರರ ತೋಳ್ಬಲ ಮತ್ತು ಹಣ ಬಲವೇ ನಮಗೆ ವರ


ಡಿ ಕೆ ಶಿವಕುಮಾರ್ ಮತ್ತು ಡಿ ಕೆ ಸುರೇಶ್ ರವರ ಹಣಬಲ ಮತ್ತು ತೋಳ್ಬಲ ಇನ್ನು ಮುಂದೆ ನಡೆಯುವುದಿಲ್ಲ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಗೆಲ್ಲಿಸಬೇಕೆಂದು ಬಂದು‌ ನನ್ನ ಕಾಲು ಹಿಡಿದರು, ಇಂದು ಯಾವ ಯೋಗೇಶ್ವರ್ ಎಂದು ಕೇಳುತ್ತಾರೆ, ಈ ಬಾರಿಯ ಚುನಾವಣೆಯಲ್ಲಿ ಪ್ರಬುದ್ಧ ಮತದಾರ ಅವರಿಗೆ ತಿರುಗೇಟು ನೀಡಲಿದ್ದಾನೆ. ಈ ಜೋಡೆತ್ತುಗಳ ಜೊತೆಗೆ ಅನೇಕ ಕಳ್ಳೆತ್ತುಗಳು ತಂತಮ್ಮ ಕ್ಷೇತ್ರ ಬಿಟ್ಟು ಮಂಡ್ಯಕ್ಕೆ ವಲಸೆ ಹೋಗಿದ್ದಾರೆ ಎಂದು ಕುಟುಕಿದರು.


ಚನ್ನಪಟ್ಟಣದ ಕೆರೆಯ ನೀರೆಲ್ಲಾ ಖಾಸಗಿ ವಿದ್ಯುತ್ ಮತ್ತು ಕನಕಪುರ ಕೆರೆಗಳಿಗೆ


ಇಗ್ಗಲೂರು ಡ್ಯಾಂ ಕೆಳಗಿನ ಭಾಗದಲ್ಲಿ ಒಂದು ಖಾಸಗಿ ಜಲವಿದ್ಯುತ್ ಉತ್ಪಾದನಾ ಘಟಕವಿದೆ, ಅದು ಅವರ ಸ್ನೇಹಿತರದ್ದು, ಈ ಮೊದಲು ನಾನು ಅವರಿಗೆ ಕೆರೆ ತುಂಬಿಸುವ ಸಲುವಾಗಿ ನೀರು ಕೊಟ್ಟಿರಲಿಲ್ಲ, ಆದರೆ ಇದೇ ಡಿ ಕೆ ಸೋದರರು ಇಂದು ಆ ವ್ಯಕ್ತಿಗೆ ನೀರು ಕೊಟ್ಟು ಕನಕಪುರಕ್ಕೂ ತೆಗೆದುಕೊಂಡು ಹೋಗುವುದರ ಮೂಲಕ ಚನ್ನಪಟ್ಟಣದ ಜನತೆಗೆ ದ್ರೋಹ ಎಸಗಿದ್ದಾರೆ, ಕನಕಪುರ ಕ್ಕೆ ತೆಗೆದುಕೊಂಡು ಹೋದುದರ ಬಗ್ಗೆ ನನಗೆ ಅಸಮಾಧನವಿಲ್ಲ, ನಮ್ಮ ತಾಲ್ಲೂಕಿನ ಕೆರೆಗಳನ್ನು ತುಂಬಿಸಿ ನಂತರ ಬೇಕಾದರೆ ಅಲ್ಲಿಗೆ ತೆಗೆದುಕೊಂಡು ಹೋಗಬಹುದಿತ್ತು.


ಅವರೇ ಜಲಸಂಪನ್ಮೂಲ ಸಚಿವರಾಗಿರುವುದರಿಂದ ಮುಖ್ಯಮಂತ್ರಿಗಳಿಗೆ ಹೇಳಿಸಿ ಕೆ ಆರ್ ಎಸ್‌ ಡ್ಯಾಂನಿಂದ ನೀರು ಹರಿಸಿ ಕೆರೆಗಳನ್ನು ತುಂಬಿಸಿಬಹುದಾಗಿತ್ತು, ಆದರೆ ಇವರು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದೇ ಸೋಲುವ ಭೀತಿಯಿಂದ ಪ್ರತಿ ಮೂರು ದಿನಕ್ಕೊಮ್ಮೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಮನೆಮನೆಗೆ ರಾತ್ರಿ ವೇಳೆ ತೆರಳಿ ಮನವಿ ಮಾಡುತ್ತಿದ್ದಾರೆ ಎಂದು ದೂರಿದರು.


ಈ ಜೋಡೆತ್ತುಗಳು, ದೇವೇಗೌಡ ರ ಕುಟುಂಬ ರಾಜಕಾರಣ ಮತ್ತು ಅವರು ಅಭಿವೃದ್ಧಿ ಮಾಡದಿರುವ ಕಾರ್ಯಗಳೇ ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮತದಾರ ಪ್ರಭುಗಳ ವಿಚಾರಧಾರೆಗಳು ಮತಗಳಾಗಿ ಪರಿವರ್ತಿತವಾಗಬಲ್ಲವೂ ಮತ್ತು ಅವರ ರಾಜಕೀಯ ಜೀವನ ಅಂತ್ಯಗೊಂಡು ಬಿಜೆಪಿ ಯ ಅಶ್ವಥ್ ನಾರಾಯಣ ರವರು ಗೆದ್ದು ಬರುತ್ತಾರೆ

ಎಂಬ ಭರವಸೆ ಹೊಂದಿರುವುದಾಗಿ ತಿಳಿಸಿದರು.



ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑