Tel: 7676775624 | Mail: info@yellowandred.in

Language: EN KAN

    Follow us :


ನಿರ್ಭೀತಿಯಿಂದ ಮತದಾನ ಮಾಡಲು ಸೂಕ್ತ ವ್ಯವಸ್ಥೆ ಮಾಡಿದ ಚುನಾವಣಾ ಆಯೋಗ

Posted date: 17 Apr, 2019

Powered by:     Yellow and Red

ನಿರ್ಭೀತಿಯಿಂದ ಮತದಾನ ಮಾಡಲು ಸೂಕ್ತ ವ್ಯವಸ್ಥೆ ಮಾಡಿದ ಚುನಾವಣಾ ಆಯೋಗ

ಮತದಾರ ನಿರ್ಭೀತಿಯಿಂದ ಮತ ಚಲಾಯಿಸಲು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಚುನಾವಣಾ ಆಯೋಗವು ಸೂಕ್ತ ವ್ಯವಸ್ಥೆ ಮತ್ತು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.


ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗದಲ್ಲಿ ೨೦೭, ನಗರ ೫೯ ಸೇರಿದಂತೆ ಒಟ್ಟು ೨೬೬ ಮತಗಟ್ಟೆಗಳಿದ್ದು, ಒಟ್ಟು ಮತದಾರರ ಪೈಕಿ ಗಂಡಸರು ೧,೦೬,೭೧೨, ಹೆಂಗಸರು ೧,೧೧೫೦೬. ಇತರೆ ೦೭, ಸೇವಾ ಮತದಾರರು ೪೯ ಮತದಾರರು ಸೇರಿದಂತೆ ಒಟ್ಟು ೨,೧೮, ೨೭೪ ಮತದಾರರಿದ್ದಾರೆ.


ಪ್ರೆಸಿಡಿಂಗ್ ಅಧಿಕಾರಿಗಳು ೩೦೪, ಸಹಾಯಕ ಪ್ರೆಸಿಡಿಂಗ್ ೨೯೦, ಮತದಾನದ ಅಧಿಕಾರಿಗಳು ೫೬೬ ಸೇರಿದಂತೆ ೧೧೬೦ ಅಧಿಕಾರಿಗಳನ್ನು ತಾಲ್ಲೂಕಿನ ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ.


ಇನ್ನು ವಿವಿ ಪ್ಯಾಟ್ ಸೇರಿದಂತೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕರೆದೊಯ್ಯಲು ಕೆ ಎಸ್ ಆರ್ ಟಿ ಸಿ ೪೧ ಬಸ್ಸುಗಳು, ಮ್ಯಾಕ್ಸಿಕ್ಯಾಬ್, ಮಿನಿಬಸ್, ೧೪, ಮತ್ತು ೧೩ ಜೀಪುಗಳು ಸೇರಿದಂತೆ ಒಟ್ಟು ೬೮ ವಾಹನಗಳ ವ್ಯವಸ್ಥೆ ಮಾಡಲಾಗಿದೆ.


೦೨ ಸಖಿ (ಪಿಂಕ್) ಮತಗಟ್ಟೆಗಳು, ೦೧ ವಿಶೇಷ ಚೇತನ ಮತಗಟ್ಟೆ, ೦೧ ಮಾದರಿ ಮತಗಟ್ಟೆ ಗಳನ್ನು ವಿಶೇಷವಾಗಿ ರೂಪಿಸಲಾಗಿದೆ. ತಾಲ್ಲೂಕಿನಾದ್ಯಂತ ೩೩೧೦ ಒಟ್ಟು ವಿಶೇಷ ಚೇತನ ಮತದಾರರಿದ್ದು ಇವರಿಗೆ ೬೫ ವಿಶೇಷ ವಾಹನ ಸೌಲಭ್ಯವನ್ನು ಮಾಡಲಾಗಿದೆ.


೫೩ ಸೂಕ್ಷ್ಮ, ೩೨ ಅತಿಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಿದ್ದು ಒಟ್ಟು ೮೯೮ ವಿದ್ಯುನ್ಮಾನ ಮತಯಂತ್ರಗಳನ್ನು ಪರೀಕ್ಷಿಸಿ ಅಧಿಕಾರಿಗಳಿಗೆ ಸೂಕ್ತ ತರಬೇತಿಯೊಂದಿಗೆ ನೀಡಲಾಗಿದೆ.


ಮತದಾನ ಕೇಂದ್ರಕ್ಕೆ ಮತದಾರರು, ಏಜೆಂಟ್ ಗಳು ಸೇರಿದಂತೆ ಯಾರೂ ಸಹ ಮೊಬೈಲ್ ಕೊಂಡೊಯ್ಯಬಾರದು ಎಂದು ಚುನಾವಣಾ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡಿರುವುದಾಗಿ ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑