Tel: 7676775624 | Mail: info@yellowandred.in

Language: EN KAN

    Follow us :


ಪ್ರಾಕೃತಿಕ ಆಹಾರ ಸೇವಿಸಿ ಆರೋಗ್ಯವಂತರಾಗಿ ಕಲ್ಪನಾ ಶಿವಣ್ಣ

Posted date: 06 May, 2019

Powered by:     Yellow and Red

ಪ್ರಾಕೃತಿಕ ಆಹಾರ ಸೇವಿಸಿ ಆರೋಗ್ಯವಂತರಾಗಿ ಕಲ್ಪನಾ ಶಿವಣ್ಣ

ಇಂದಿನ ಮಕ್ಕಳು ಪಿಜ್ಜಾ, ಬರ್ಗರ್, ಇನ್ನಿತರೆ ಬೇಕರಿ ತಿನಿಸುಗಳನ್ನು ತಿಂದು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ವಿಷಾದನೀಯ ಎಂದು ಮಾಗಡಿ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಲ್ಪನಾ ಶಿವಣ್ಣ ಅಭಿಪ್ರಾಯ ಪಟ್ಟರು.


ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ವತಿಯಿಂದ ರಾಮನಗರ ಶಾಖಾ ಮಠದಲ್ಲಿ ಆಯೋಜಿಸಿದ್ದ ೨೨ ನೇ ರಾಜ್ಯ ಮಟ್ಟದ ಮಹಿಳಾ ಜನ ಜಾಗೃತಿ ತರಬೇತಿ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಆರೋಗ್ಯ ಕುರಿತು ಮಾಹಿತಿ ನೀಡಿದರು.


ಬೇಕರಿಗಳಲ್ಲಿ ಬಳಸುವ ಆಹಾರ ಪದಾರ್ಥಗಳು ನಿಧಾನ ವಿಷವಿದ್ದಂತೆ, ಅದು ಬಾಯಿ ರುಚಿಯನ್ನು ಕೊಡುತ್ತದೆ, ನಂತರ ಹಂತಹಂತವಾಗಿ ಸಮಸ್ಯೆಗಳನ್ನು ಹೊತ್ತು ತರುತ್ತವೆ, ನೀವು ವಯಸ್ಕರಾಗುವ ಮುನ್ನವೇ ಹಾಸಿಗೆ ಹಿಡಿಯುತ್ತೀರಿ ಎಂದು ತಿಳಿಸಿದರು.


ನಮ್ಮ ತಟ್ಟೆಯಲ್ಲೇ ನಮ್ಮ ಆರೋಗ್ಯ ಎನ್ನುವುದನ್ನು ನಾವು ಮನಗಾಣಬೇಕು, ಪ್ರಕೃತಿಯಲ್ಲಿ ಸಿಗುವ ಹಣ್ಣು, ಸೊಪ್ಪು ಮತ್ತು ತರಕಾರಿಗಳನ್ನು ತಿನ್ನುವುದರ ಮೂಲಕ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು, ಅದರಲ್ಲೂ ಈ ಹದಿಹರೆಯದ ವಯಸ್ಸಿನಲ್ಲಿ, ಋತುಚಕ್ರದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಂಡರೆ ಮುಂದಿನ ವೈವಾಹಿಕ ಜೀವನದಲ್ಲಿ ಆರೋಗ್ಯ ಏರುಪೇರಾಗುವುದನ್ನು ತಡೆಯಲು ಸಾಧ್ಯವಾಗುವುತ್ತದೆ ಎಂದು ಮಕ್ಕಳಿಗೆ ಉಪದೇಶಿಸಿದರು.


ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶಂಕ್ರಪ್ಪ ನವರು ಮಾತನಾಡಿ ಇಂದಿನ ಮಕ್ಕಳು ಕೇವಲ ಮೊಬೈಲ್ ಮತ್ತು ಟಿ ವಿ ಕಡೆ ಗಮನ ಕೊಡದೆ, ಪಠ್ಯ, ಕ್ರೀಡೆ ಮತ್ತು ಪ್ರಕೃತಿ ಯನ್ನು ಅಭ್ಯಸಿಸಬೇಕು, ಡಾಕ್ಟರ್, ಇಂಜಿನಿಯರ್, ಟೀಚರ್ ಆಗುವುದರ ಮೂಲಕ ಕೇವಲ ಉದ್ಯೋಗಕ್ಕಷ್ಟೇ ಸೀಮಿತವಾಗದೆ ದೇಶದ ಸತ್ಪ್ರಜೆಗಳಾಗುವತ್ತ ಮುನ್ನಡಿ ಇಡಬೇಕೆಂದು ಮಕ್ಕಳನ್ನು ಹುರಿದುಂಬಿಸಿದರು.


ಪತ್ರಕರ್ತ ಗೋ ರಾ ಶ್ರೀನಿವಾಸ ಮಾತನಾಡಿ ಹೆಣ್ಣು ಮಕ್ಕಳು ಪ್ರಶ್ನಿಸುವುದನ್ನು ಕಲಿತುಕೊಳ್ಳಬೆಕು, ಕಾನೂನನ್ನು ಅರಿಯಬೇಕು, ಆಗ ಮಾತ್ರ ಆಕೆ ಸಂಪೂರ್ಣ ಸಬಲಳಾಗಲು ಸಾಧ್ಯ ಎಂದರು.


ಎಂದಿನಂತೆ ಯೋಗ ಭಜನೆ, ಕಾರ್ಯಕ್ರಮಗಳು ಜರುಗಿದವು.

ಅನ್ನದಾನೇಶ್ವರನಾಥ ಸ್ವಾಮೀಜಿ ಗಳು ಸಾನಿಧ್ಯವಹಿಸಿದರು, ವೇದಿಕೆಯಲ್ಲಿ ಪಬ್ಲಿಕ್ ಟಿ ವಿ ಯ ಹನುಮಂತು, ಶಿಬಿರದ ನಿರ್ದೇಶಕ ನರಸಿಂಹಯ್ಯ, ಬಿಜಿಎಸ್ ವಲ್ಡ್೯ ಸ್ಕೂಲ್ ಪ್ರಾಂಶುಪಾಲೆ ಸತ್ಯಲಕ್ಷ್ಮಿ  ದಾನಿ ಲಕ್ಷ್ಮಿ ಸುಕನ್ಯ ಉಪಸ್ಥಿತರಿದ್ದರು.


ಸಂಜೆ ವೇಳೆಯಲ್ಲಿ ಆಗಮಿಸಿದ ಜಗದ್ಗುರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಯವರು ಮಕ್ಕಳಿಗೆ ಭಜನೆ ಹೇಳಿಕೊಟ್ಟರು, ವೇದಿಕೆಯಲ್ಲಿ ರಾಮನಗರ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ ರಾಜೇಂದ್ರ, ಅನ್ನದಾನೇಶ್ವರನಾಥ ಸ್ವಾಮೀಜಿ, ಶ್ರೀಶೈಲನಾಥ ಸ್ವಾಮೀಜಿ ಮತ್ತು ಕೀರ್ತಿನಾಥ ಸ್ವಾಮೀಜಿಗಳು ಉಪಸ್ಥಿತರಿದ್ದು ಧ್ವನಿ ಗೂಡಿಸಿ ಮಕ್ಕಳಿಗೆ ನೀತಿ ಪಾಠ ಬೋಧಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑