Tel: 7676775624 | Mail: info@yellowandred.in

Language: EN KAN

    Follow us :


ಜಿದ್ದಾ ಜಿದ್ದಿಯಲ್ಲಿ ಗೆದ್ದ ಜಯಮುತ್ತು

Posted date: 13 May, 2019

Powered by:     Yellow and Red

ಜಿದ್ದಾ ಜಿದ್ದಿಯಲ್ಲಿ ಗೆದ್ದ ಜಯಮುತ್ತು

ಐದು ವರ್ಷಗಳ ಅವಧಿಗೆ ನಡೆದ ಬಮೂಲ್  ಚುನಾವಣೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗೆ ಚುನಾವಣೆ ನಡೆದಿದ್ದು ಚನ್ನಪಟ್ಟಣ ತಾಲ್ಲೂಕಿನಲ್ಲಿ ಜೆಡಿಎಸ್ ಧುರೀಣರು ಸ್ಪರ್ಧಿಸಿದ್ದು ಹಾಲಿ ನಿರ್ದೇಶಕ ಕೇಂಬ್ರಿಡ್ಜ್ ಶಾಲೆಯ ಸಂಸ್ಥಾಪಕ ಎಸ್ ಲಿಂಗೇಶ್ ಕುಮಾರ್ ರವರನ್ನು ಜೆಡಿಎಸ್ ಹಾಲಿ ತಾಲ್ಲೂಕು ಅಧ್ಯಕ್ಷ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಜಯಮುತ್ತು ಇಪ್ಪತ್ಮೂರು ಮತಗಳಿಂದ ಸೋಲಿಸಿ ಜಯಭೇರಿ ಬಾರಿಸಿದ್ದಾರೆ.


ಕಳೆದ ಬಾರಿಯೂ ಸಹ ಈ ಈರ್ವರೂ ಸ್ಪರ್ಧಿಸಿದ್ದು ಜಯಮುತ್ತು ಗೆದ್ದಿದ್ದರೂ ಸಹ ಕೆಲವು ದಾಖಲೆಗಳು ಸರಿ ಇಲ್ಲದ ಕಾರಣ ನ್ಯಾಯಾಲಯದ ತೀರ್ಪಿನಂತೆ ನಿರ್ದೇಶಕ ಸ್ಥಾನದಿಂದ ಹೊರಬಂದು ಎಸ್ ಲಿಂಗೇಶ್ ಕುಮಾರ್ ನಿರ್ದೇಶಕರಾಗಿ ಮುಂದುವರಿದಿದ್ದರು.


ಒಟ್ಟು ೧೪೭ ಮತದಾರರಿದ್ದ ಚನ್ನಪಟ್ಟಣ ತಾಲ್ಲೂಕಿನಲ್ಲಿ ೧೪೩ ಮತಗಳು ಚಲಾವಣೆಯಾಗಿ ಎಸ್ ಲಿಂಗೇಶ್ ಕುಮಾರ್ ಗೆ ೬೦ ಮತಗಳು ಬಂದರೆ ಜಯಮುತ್ತು ೮೩ ಮತಗಳನ್ನು ಪಡೆದು ವಿಜಯಶಾಲಿಯಾದರು.


ತಾಲ್ಲೂಕಿನ ಮಾದಾಪುರ, ಕಾಲಿಕೆರೆ, ಹನುಮಾಪುರದೊಡ್ಡಿ ಮತ್ತು ದೊಡ್ಡಮಳೂರು ಗ್ರಾಮದ ಮತದಾರರು, ಮುಖಂಡರು ಮತ್ತು ಗ್ರಾಮಸ್ಥರ ನಡುವಿನ ಗೊಂದಲದಿಂದ ಮತದಾನ ಸ್ಥಳಕ್ಕೆ ಆಗಮಿಸಿದರೂ ಸಹ ಮತ ಚಲಾಯಿಸಲಾಗಿಲ್ಲ.


ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಎಂದಿಗೂ ಜೆಡಿಎಸ್ ನ ನಾಯಕರು ಒಂದಾಗುವುದಿಲ್ಲ *(ವರಿಷ್ಠರೇ ಒಂದಾಗಲು ಬಿಡುವುದಿಲ್ಲ ಎಂಬ ಮಾತಿದೆ)* ಎಂದರಿತ ವರಿಷ್ಠರು ತಾಕತ್ತಿದ್ದವರು ಗೆದ್ದು ಬನ್ನಿ ಹಾರ ಹಾಕುತ್ತೇವೆ ಎಂಬ ಸಂದೇಶ ಕೊಟ್ಟಿದ್ದರು ಎನ್ನಲಾಗಿದೆ.


ಅದು ಯಾವುದೇ ಚುನಾವಣೆ ಆಗಲಿ ಮತದಾರರಿಗೆ ಹಲವಾರು ಆಮಿಷಗಳನ್ನು ಕೊಟ್ಟು ಮತಗಳನ್ನು ಖರೀದಿಸಿ ಜಿದ್ದಾಜಿದ್ದಿಯಿಂದ ಗೆದ್ದವರಿಂದ ಪ್ರಾಮಾಣಿಕತೆಯ ಆಡಳಿತ ನಿರೀಕ್ಷಿಸುವುದು ಮೂರ್ಖತನ ಎಂದೇ ಭಾವಿಸಬೇಕು.


ಜಯಮುತ್ತು ಗೆ ಕಿವಿಮಾತು;

ತಾಲ್ಲೂಕಿನಾದ್ಯಂತ ಬಹುತೇಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾರ್ಯದರ್ಶಿಗಳು ಶ್ರೀಮಂತರಾಗಿದ್ದು, ಸಂಘಗಳು ಬೇರು ಮಟ್ಟದಲ್ಲೇ ನರಳುತ್ತಿವೆ, ಶೀಥಲಿಕರಣ ಘಟಕಗಳಲ್ಲಿ ಅಕ್ರಮ ನಡೆಯುತ್ತಿರುವುದಾಗಿ ಕೇಳಿ ಬರುತ್ತಿದೆ, ಕೆಎಂಎಫ್ ನಲ್ಲಿನ ಹುದ್ದೆಗಳು ಮಾರಾಟಕ್ಕಿವೆ ಎಂಬುದು ಪ್ರಜ್ಞಾವಂತರ ರೋಧನವಾಗಿದೆ, ಈ ನಿಮ್ಮ ಆಡಳಿತದಲ್ಲಿ ಪ್ರಾಮಾಣಿಕ ಸೇವೆಯನ್ನು ರೈತರು ಮತ್ತು ಹೈನುಗಾರಿಕೆಯನ್ನೇ ನಂಬಿಕೊಂಡವರ ಅಭಿಲಾಷೆಯಾಗಿದೆ, ನ್ಯಾಯ ಒದಗಿಸುತ್ತೀರೆಂಬ ಭರವಸೆಯಲ್ಲಿ ಇದ್ದಾರೆ, ಆಡಳಿತದ ವೈಖರಿ ನಿಮಗೆ ಬಿಟ್ಟಿದ್ದು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑