Tel: 7676775624 | Mail: info@yellowandred.in

Language: EN KAN

    Follow us :


ಮಳೆಗಾಳಿಗೆ ತುಂಡಾದ ರೈಲ್ವೆ ವಿದ್ಯುತ್ ತಂತಿ, ಒಂದು ಗಂಟೆ ತಡವಾದ ಪ್ರಯಾಣ

Posted date: 14 May, 2019

Powered by:     Yellow and Red

ಮಳೆಗಾಳಿಗೆ ತುಂಡಾದ ರೈಲ್ವೆ ವಿದ್ಯುತ್ ತಂತಿ, ಒಂದು ಗಂಟೆ ತಡವಾದ ಪ್ರಯಾಣ

ಚನ್ನಪಟ್ಟಣ: ಇಂದು ಸಂಜೆ ಸುರಿದ ಗಾಳಿ ಸಮೇತ ಮಳೆಗೆ ಬಿಡದಿಯ ಬಳಿ ಇರುವ ಎಲೆಕ್ಟ್ರಾನಿಕ್ ಕಛೇರಿಯಲ್ಲಿ ವಿದ್ಯುತ್ (sub station power supply) ಮುಗ್ಗರಿಸಿದ್ದರಿಂದ ಬೆಂಗಳೂರು ಮೈಸೂರು ನಡುವೆ ಚಲಿಸುವ ಎಲ್ಲಾ ರೈಲುಗಳು ಒಂದು ಗಂಟೆ ತಡವಾಗಿ, ಪ್ರಯಾಣಿಕರು ಆತಂಕಕ್ಕೀಡಾದ ಸಂಗತಿ ಜರುಗಿತು.


ಬಿಡದಿಯ ಎಸ್ ಎಸ್ ಪಿ ಯಲ್ಲಿ ಮುಗ್ಗರಿಸಿದ ವಿದ್ಯುತ್ ತಂತಿಯ ಪರಿಣಾಮ ಚನ್ನಪಟ್ಟಣ ಮದ್ದೂರು ನಡುವಿನ ಶೆಟ್ಟಿಹಳ್ಳಿ ಮತ್ತು ನಿಡಘಟ್ಟ ಗ್ರಾಮದ ಮಧ್ಯೆ ವಿದ್ಯುತ್ ವ್ಯತ್ಯವಾಗಿದ್ದು ಚಾಮುಂಡಿ ಎಕ್ಸ್ ಪ್ರೆಸ್ ರೈಲು ಸುಮಾರು ಒಂದು ಗಂಟೆ ಸಮಯ ಚನ್ನಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ನಿಂತಿತ್ತು.


ಮಂಡ್ಯ ನಗರದ ಎಸ್ ಎಸ್ ಪಿ ಯವರು ಟವರ್ ಕಾರ್ ನಲ್ಲಿ ಬಂದು ಸರಿ ಪಡಿಸಿದ ನಂತರ ಅಂದರೆ ರಾತ್ರಿ ೦೮:೩೦ ರ ಸುಮಾರಿಗೆ ರೈಲ್ವೆ ಪ್ರಯಾಣ ಮುಂದುವರಿದುದಾಗಿ ನಂಬಲರ್ಹ ಮೂಲಗಳು ತಿಖಿಸಿವೆ.


ಈ ನಡುವೆ ಒಂದು ಗಂಟೆಯ ಕಾಲ ನಿಂತ ರೈಲಿನ ಪ್ರಯಾಣಿಕರು ತಳಮಳಗೊಂಡಿದ್ದು, ತುರ್ತು ಹೋಗಬೇಕಾದ ಕೆಲವು ಮಂದಿ ಬಸ್ ನಿಲ್ದಾಣಕ್ಕೆ ಬಂದು ಹೋಗಿದ್ದಾಗಿ ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑