Tel: 7676775624 | Mail: info@yellowandred.in

Language: EN KAN

    Follow us :


ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಜನಪದ ಕಲೆಗಳ ಪ್ರದರ್ಶನ-ಕಲಾವಿದರಿಗೆ ಸನ್ಮಾನ

Posted date: 18 May, 2019

Powered by:     Yellow and Red

ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಜನಪದ ಕಲೆಗಳ ಪ್ರದರ್ಶನ-ಕಲಾವಿದರಿಗೆ ಸನ್ಮಾನ

ಇಂದಿನ ದಿನಗಳಲ್ಲಿ ಮದುವೆ, ಹುಟ್ಟುಹಬ್ಬ, ವಾರ್ಷಿಕೋತ್ಸವಗಳನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುವವರೇ ಹೆಚ್ಚಾಗಿರುವವರ ಮಧ್ಯೆ ಇಲ್ಲೋಬ್ಬರು ತಮ್ಮ ಮದುವೆ ವಾರ್ಷಿಕೋತ್ಸವವನ್ನು ಜನಪದ ಕಲೆಗಳ ಪ್ರದರ್ಶನ  ಹಾಗೂ ಕಲಾವಿದರನ್ನು ಸನ್ಮಾನಿಸುವ ಮೂಲಕ ಆಚರಿಸಿ ಸಮಾಜಕ್ಕೆ ಮಾದರಿಯಾದರು.


       ರಾಮನಗರದ ಸಂಶೋಧನಾ ವಿದ್ಯಾರ್ಥಿ ಎಸ್. ರುದ್ರೇಶ್ವರ ಹಾಗೂ ಡಿ.ಆರ್. ನೀಲಾಂಬಿಕಾ ದಂಪತಿ ತಮ್ಮ ಮದುವೆ 5ನೇ ವಾರ್ಷಿಕೋತ್ಸವವನ್ನು ಪಟ ಕುಣಿತದ ಹಿರಿಯ ಕಲಾವಿದರನ್ನು ಸನ್ಮಾನಿಸುವ ಮೂಲಕ ಆಚರಿಸಿಕೊಂಡು ಇತರರು ಈ ಮಾರ್ಗ ಅನುಸರಿಸಲು ಉತ್ತೇಜನ ನೀಡಿದರು.


ರಾಮನಗರ ತಾಲ್ಲೂಕಿನ ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಂಗಳದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಟ ಕುಣಿತದ ಹಿರಿಯ ಕಲಾವಿದರಾದ ಚಿಕ್ಕಕೆಂಪಯ್ಯ, ವೆಂಕಟಶೆಟ್ಟಿ, ರಾಮಸಂಜೀವಯ್ಯ, ಕೆಂಪಯ್ಯ, ಶಿವಶಂಕರಯ್ಯ, ನಂಜಯ್ಯ ಅವರನ್ನು ಸನ್ಮಾನಿಸಲಾಯಿತು.


       ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸಿಂ.ಲಿಂ. ನಾಗರಾಜ್ ಮಾತನಾಡಿ ಇದೊಂದು ಸಮಾಜಮುಖಿ ಕಾರ್ಯಕ್ರಮವಾಗಿದೆ. ಅಬ್ಬರದ ಆಚರಣೆಗಳನ್ನು ಕಡಿವಾಣ ಹಾಕಲು ಯುವಜನತೆ ಇಂತಹ ಮಾದರಿ ನಡತೆಗೆ ಮುಂದಾಗಬೇಕು ಎಂದು ತಿಳಿಸಿದರು.


       ಎಸ್. ರುದ್ರೇಶ್ವರ ಅವರು ಈಗಾಗಲೇ ಇಂತಹ ಹಲವು ಮಾದರಿ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ತಮ್ಮ ಅಜ್ಜ ಅಜ್ಜಿಯ ಸ್ಮರಣಾರ್ಥವಾಗಿ, ಮಗಳ ಜನುಮ ದಿನದ ಅಂಗವಾಗಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.


ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಸ್. ಶಂಕರಪ್ಪ ಮಾತನಾಡಿ ಹಲವು ಮನುಷ್ಯರು ತಮ್ಮ ವ್ಯಕ್ತಿಗತ ಆಚರಣೆಗಳನ್ನು ಅರ್ಥವಿಲ್ಲದೆ ಆಚರಿಸಿಕೊಳ್ಳುತ್ತಾರೆ. ವಿವಾಹ ವಾರ್ಷಿಕೋತ್ಸವ ಅಂಗವಾಗಿ ಜನಪದ ಕಲೆಗಳ ಪ್ರದರ್ಶನ ಹಾಗೂ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.


       ಮಹಿಳಾ ಹೋರಾಟಗಾರ್ತಿ ಅನಸೂಯಮ್ಮ ಮಾತನಾಡಿ ಜಾಗತಿಕರಣದ ಭರಾಟೆಯಲ್ಲಿ ನಶಿಸುತ್ತಿರುವ ಜನಪದ ಕಲೆಗಳನ್ನು ಪ್ರೋತ್ಸಾಹಿಸಲು ಹಾಗೂ ಜನಪದ ಕಲೆಗಳ ಪ್ರದರ್ಶನಕ್ಕೆ ವಿವಾಹ ವಾರ್ಷಿಕೋತ್ಸವ ಅಂಗವಾಗಿ ಅವಕಾಶ ಮಾಡಿಕೊಟ್ಟಿರುವುದು ಜನಪದ ಕಲೆಗಳ ಉತ್ತೇಜನಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.


       ಸಾಂಸ್ಕøತಿಕ ಸಂಘಟಕಿ ಕವಿತಾರಾವ್ ಮಾತನಾಡಿ ದೇಶದ ಸಾಂಸ್ಕøತಿಕ ಸಂಸ್ಕøತಿಯನ್ನು ಉಳಿಸುವುದು ಸರ್ಕಾರ ಹಾಗೂ ಸಂಘಸಂಸ್ಥೆಗಳ ಕೆಲಸವಷ್ಟೆ ಆಗಿರದೆ ಅದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿರುತ್ತದೆ ಎಂಬುದನ್ನು ಅರಿತಿರುವ ಸಂಶೋಧನಾ ವಿದ್ಯಾರ್ಥಿ ರುದ್ರೇಶ್ವರ ಅವರು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಹಿರಿಯ ಕಲಾವಿದರಿಗೆ ಗೌರವ ಸಲ್ಲಿಸುವುದರ ಮೂಲಕ ವಿಶೇಷವಾಗಿ ಆಚರಿಸಿಕೊಳ್ಳುವುದರೊಂದಿಗೆ ಸಮಾಜಕ್ಕೆ ಮಾದರಿ ಕಾರ್ಯವೊಂದನ್ನು ಮಾಡಿದ್ದಾರೆ ಎಂದು ತಿಳಿಸಿದರು.


       ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ರಾಜು, ಶಿಕ್ಷಕರಾದ ಎಚ್.ಎಸ್. ಕೃಷ್ಣಮೂರ್ತಿ, ಶಿವಸ್ವಾಮಿ, ಯೋಗೇಶ್ ಚೆಕ್ಕೆರೆ, ನೆ.ರ. ಪ್ರಭಾಕರ್, ಎಂ.ಎಸ್. ಚನ್ನವೀರಪ್ಪ, ನೃತ್ಯ ಕಲಾವಿದೆ ಚಿತ್ರಾರಾವ್, ಯಲ್ಲೊ ಅಂಡ್ ರೆಡ್ ಫೌಂಡೇಷನ್ ನಿರ್ದೇಶಕ ಆನಂದ ಶಿವ, ಮುಖಂಡರಾದ ವಾಸುಪುಟ್ಟಮಾಸ್ತಿಗೌಡ, ನಾಗೇಂದ್ರರಾವ್, ಎಂ. ಕುಮಾರ್, ಪ್ರಕಾಶ್ ಜಯಪುರ, ಬುಡಕಟ್ಟು ಸಮುದಾಯದ ಹೋರಾಟಗಾರ ಕೃಷ್ಣಮೂರ್ತಿ, ತಮಟೆ ಕಲಾವಿದರಾದ ಪಾರ್ಥಸಾರಥಿ, ಗಂಗಾಧರಯ್ಯ ಮುಂತಾದವರು ಉಪಸ್ಥಿತರಿದ್ದರು. 


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑