
ಕಾಡಾನೆ ದಾಳಿ, ವ್ಯಕ್ತಿ ಸಾವು. ರೊಚ್ಚಿಗೆದ್ದ ಗ್ರಾಮಸ್ಥರು. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು
ಚನ್ನಪಟ್ಟಣ: ಬೆಳೆಹಾನಿಗಷ್ಟೇ ಸೀಮಿತವಾಗಿದ್ದ ಆನೆಗಳು ಈಗ ಮನುಷ್ಯನ ಪ್ರಾಣ ತೆಗೆಯುವ ಹಂತಕ್ಕೆ ಹೋಗಿದ್ದು, ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಅನೆಯೊಂದು ದಾಳಿ ನಡೆಸಿ, ಸಾಯಿಸಿರುವ ಘಟನೆ ತಾಲೂಕಿನ ಗಡಿಭಾಗವಾದ ದೊಡ್ಡನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.ಸತೀಶ್(35) ಮೃತ ದುರ್ಧೈವಿ. ಈತ ಗ್ರಾಮದ ಹೊರವಲಯದಲ್ಲಿರುವ ತನ್ನ ಮಾವಿನತೋಟದಲ್ಲಿ ಬೇಲಿ ಕತ್ತ

ಟಿಎಪಿಸಿಎಂಎಸ್ ಗೆ ಭೇಟಿ ನೀಡಿದ ಉನ್ನತಾಧಿಕಾರಿಗಳು, ಹಳೆಯ ಗೋದಾಮಿನಲ್ಲೇ ಬಾಳೆಕಾಯಿ ಮಂಡಿ ಸ್ಥಾಪನೆ
ಚನ್ನಪಟ್ಟಣ: ನಗರದಲ್ಲಿನ ಟಿಎಪಿಸಿಎಂಸ್ ಗೆ ರಾಜ್ಯ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಕಾರ್ಯಪಾಲಕ ಇಂಜಿನಿಯರ್ ಹಾಗೂ ಸ್ಥಳೀಯ ಹಾಪ್ ಕಾಮ್ಸ್ ನ ನಿರ್ದೇಶಕರಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಬಾಳೆ ಕಾಯಿ ಮಂಡಿಯ ಜಾಗದಲ್ಲೇ ಮುಂದುವರೆಸಲಾಗುವುದು ಎಂದು ತಿಳಿಸಿದರು.ರೈತರು ತಾವು ಬೆಳೆದು ತಂದ ಬಾಳೆಕಾಯಿಯನ್ನು ನಗರದ

ರಾಮನಗರ ಮಾವು ಸಂಸ್ಕರಣಾ ಘಟಕ, ಹೈಟೆಕ್ ರೇಷ್ಮೆ ಮಾರುಕಟ್ಟೆ ಯೋಜನೆಗೆ ಡಿಸೆಂಬರ್‌ನಲ್ಲಿ ಕಾರ್ಯಾದೇಶ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ
ಬೆಂಗಳೂರು: ರಾಮನಗರ ಜಿಲ್ಲೆಯಲ್ಲಿ ಜಾಗತಿಕ ಮಟ್ಟದ ಮಾವು ಸಂಸ್ಕರಣಾ ಘಟಕ ಹಾಗೂ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ಯೋಜನೆಗಳಿಗೆ ಅಕ್ಟೋಬರ್‌ನಲ್ಲಿ ಸಮಗ್ರ ಯೋಜನಾ ವರದಿ (DPR) ಅಂತಿಮಗೊಳಿಸಿ ಡಿಸೆಂಬರ್‌ನಲ್ಲಿ ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಈ ಎರಡೂ ಯೋಜನೆಗಳಿಗೆ ಸಂಬಂಧಿಸಿದಂತೆ ರೇಷ್ಮೆ ಖಾತೆ

ಮೇಕೆದಾಟು ಯೋಜನೆ; ಸರ್ಕಾರದ ಗಮನ ಸೆಳೆಯಲು ಪಾದಯಾತ್ರೆ
ರಾಮನಗರ: ಮೇಕೆದಾಟು ಯೋಜನೆ ಹಲವಾರು ಬಾರಿ ನಿಂತ ನೀರಾದಂತೆ, ನಿಂತಲ್ಲಿಯೇ ನಿಂತಿದೆ. ಈ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಲು ಕರ್ನಾಟಕ ರಾಜ್ಯ ಮೇಕೆದಾಟು ಹೋರಾಟ ಸಮಿತಿ ವತಿಯಿಂದ ಮೇಕೆದಾಟುವಿನಿಂದ ವಿಧಾನಸೌಧದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ತಿಳಿಸಿದ್ದಾರೆ.ರಾಮನಗರದ ಎಪಿಎಂಸಿ ಮಾರುಕಟ್ಟೆಯ ರೈತ ಭವನದಲ್ಲಿ ಸುದ್ದಿಗೋಷ್ಠಿ ನ

ಮೀನು ಕೃಷಿ ಸಹಾಯವಾಣಿಗೆ ಸಚಿವ ಎಸ್ ಅಂಗಾರವರಿಂದ ಚಾಲನೆ
ಮೀನು ಕೃಷಿಕರ ದಿನಾಚರಣೆಯ ಅಂಗವಾಗಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಮೀನುಗಾರಿಕೆ ಸಚಿವರಾದ ಅಂಗಾರ ಅವರು ಮೀನುಗಾರಿಕೆಯ ಮಾಹಿತಿ ನೀಡುವ ಸಹಾಯವಾಣಿಗೆ ಚಾಲನೆ ನೀಡಿದರು. ಸಹಾಯವಾಣಿ ಸಂಖ್ಯೆ 8277200300 ಆಗಿದ್ದು, ಸಚಿವರು ಸಹಾಯವಾಣಿಗೆ ಕರೆ ಮಾಡಿ ಮೀನುಗಾರಿಕೆ ದಿನಾಚರಣೆಗೆ ಶುಭಾಶಯ ಕೋರಿ, ಸಹಾಯವಾಣಿಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.ಅವರು ಇಂದು ಬಿಡದಿಯ ನ

ಬೆಳೆ ವಿಮೆಯ ನೋಂದಣಿ ಹೆಚ್ಚಾಗಬೇಕು: ಡಾ ನಾರಾಯಣ ಗೌಡ
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ನೊಂದಣಿ ಪ್ರಾರಂಭವಾಗಿದ್ದು, ಈ ಬಗ್ಗೆ ರೈತರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ ಹೆಚ್ಚಿನ ರೈತರನ್ನು ನೋಂದಣಿ ಮಾಡಿ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾದ ಡಾ. ನಾರಾಯಣಗೌಡ ಅವರು ತಿಳಿಸಿದರು.ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು. ಬೆಳೆ ವ

ಕೋಡಂಬಳ್ಳಿ ಗ್ರಾಮದ ಬಡರೈತನ ಆರು ಕುರಿಗಳನ್ನು ಬಲಿಪಡೆದ ಬೀದಿನಾಯಿಗಳು
ಚನ್ನಪಟ್ಟಣ: ಕೋಡಂಬಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಿನೆದಿನೇ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇತ್ತೀಚಿಗೆ ಹತ್ತು ಕುರಿಗಳನ್ನು ಬಲಿ ಪಡೆದ ಗಾಯ ಮಾಸುವ ಮುನ್ನವೇ ಮೂರು ಫಲ ದ (ಗರ್ಭಿಣಿ) ಕುರಿಗಳನ್ನು ಕೊಂದು ಹಾಕಿದ್ದು ಮೂರು ಕುರಿಗಳ ಸ್ಥಿತಿ ಚಿಂತಾಜನಕವಾಗಿವೆ. ಗ್ರಾಮಸ್ಥರು ಕೋಡಂಬಳ್ಳಿ ಗ್ರಾಮ ಪಂಚಾಯತಿ ಮತ್ತು ಕೋಳಿ ಅಂಗಡಿಗಳ ಮಾಲೀಕರಿಗೆ ಹಿಡಿಶಾಪ ಹಾಕುತ್ತಿದ್ದು, ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಕೋಡಂಬಳ್ಳಿ ಗ್ರಾಮದಲ್ಲಿ ನಾಯಿಗಳಿಗೆ ಬಲಿಯಾದ ಕುರಿಗಳ ಹಿಂಡು. ಕುರಿಗಾಯಿಯ ಅಳಲು, ಗ್ರಾಮ ಪಂಚಾಯತಿ ಅಧಿಕಾರಗಳ ಮೇಲೆ ಗ್ರಾಮಸ್ಥರು ಗರಂ
ತಾಲ್ಲೂಕಿನ ಕೋಡಂಬಳ್ಳಿ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಬಸವರಾಜು ಎಂಬುವವರು, ತೋಟದಲ್ಲಿ ಮೇಯಲು ಬಿಟ್ಟಿದ್ದ ಕುರಿಗಳ ಮೇಲೆ, ಏಕಾಏಕಿ ಹದಿನೆಂಟು ನಾಯಿಗಳ ಹಿಂಡು ಎರಗಿ ದಾಳಿ ನಡೆಸಿವೆ. ಹತ್ತು ಕುರಿಗಳ ಮೇಲೆ ದಾಳಿ ಮಾಡಿರುವ ನಾಯಿಗಳಿಂದ ಮೂರು ಕುರಿಗಳು ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತ ಪಟ್ಟಿದ್ದು, ಏಳು ಕುರಿಗಳು ತೀವ್ರವಾಗಿ ಗಾಯಗೊಂಡಿವೆ.ಈ ಭಾಗದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಗ್ರಾಮ ಪಂಚಾಯತಿ ನ

ಅರಣ್ಯ ಇಲಾಖೆಯ ಪಕ್ಕದ ಜಮೀನಿಗೆ ನುಗ್ಗಿದ ಒಂಟಿ ಸಲಗ. ಲಕ್ಷಾಂತರ ರೂ ಬೆಳೆ ನಾಶ. ಪ್ರಾಣಕ್ಕೆ ಎರವಾದರೆ ಇಲಾಖೆಯೇ ಹೊಣೆ ರುದ್ರಪ್ಪ
ತಾಲ್ಲೂಕಿನಾದ್ಯಂತ ಆನೆಗಳ ಉಪಟಳ ಹೆಚ್ಚಾಗುತ್ತಲೆ ಇದೆ. ಶಾಶ್ವತವಾಗಿ ಆನೆಗಳನ್ನು ಅಟ್ಟದ ಕಾರಣ ಹಾಗೂ ಅರಣ್ಯದಂಚಿನಲ್ಲಿ ಸೂಕ್ತ ಭದ್ರತೆ ಇಲ್ಲದ ಕಾರಣ ಹೋದ ಪುಟ್ಟಾ, ಬಂದಾ ಪುಟ್ಟ ಎಂಬಂತಾಗಿದೆ. ಭಾನುವಾರ ತಡರಾತ್ರಿ ಸಹ ಒಂಟಿ ಸಲಗವೊಂದು ತಾಲ್ಲೂಕಿನ ಕೆಂಗಲ್ ಗ್ರಾಮದ ಬಳಿ ಇರುವ ನಿವೃತ್ತ ಅಧಿಕಾರಿಗಳಾದ ರುದ್ರಪ್ಪ ನವರ ತೋಟಕ್ಕೆ ನುಗ್ಗಿದ ಒಂಟಿ ಸಲಗವೊಂದು ಲಕ್ಷಾಂತರ ರೂಪಾಯಿಳ ಬೆಳೆಯನ್ನು ನಾಶ ಪಡಿಸಿದೆ.ಈ ತಿಂಗಳಲ್ಲೇ

ಕೇಂದ್ರ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ
ರಾಮನಗರ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ