Tel: 7676775624 | Mail: info@yellowandred.in

Language: EN KAN

    Follow us :


ಕೆಂಪು (ರಕ್ತ) ಹುಣಸೆ ಗಾಬರಿಯಾಗಬೇಕಿಲ್ಲ. ಆಯುರ್ವೇದದಲ್ಲಿ ಇದರ ಮಹತ್ವ ಅಪಾರ*

Posted Date: 17 Oct, 2019

ಕೆಂಪು (ರಕ್ತ) ಹುಣಸೆ ಗಾಬರಿಯಾಗಬೇಕಿಲ್ಲ. ಆಯುರ್ವೇದದಲ್ಲಿ ಇದರ ಮಹತ್ವ ಅಪಾರ*

ಎನ್ ಆರ್ ಕಾಲೋನಿಯ ತೋಟವೊಂದರಲ್ಲಿರುವ ಕೆಂಪು ಹುಣಸೆ ಹಣ್ಣಿನ ಮರ.

ಚನ್ನಪಟ್ಟಣ: ತಾಲ್ಲೂಕಿನ ಬ್ರಹ್ಮಣೀಪುರ ದಾಖಲೆಯ ಎನ್ ಆರ್ ಕಾಲೋನಿಯ ತೋಟವೊಂದರ ಹುಣಸೆ ಮರದಲ್ಲಿ ಬಿಟ್ಟಿರುವ ಹುಣಸೆ ಕಾಯಿಯನ್ನು ಬಿಡಿಸಿದರೆ ರಕ್ರದಂತೆ ರಸ ಒಸರುತ್ತದೆ ! ಯಾರೂ ನೋಡಿರದ ವಿಷ್ಮಯ ! ಇದು ಯಾವುದೋ ದೆವರು ಇಲ್ಲವೇ ದೆವ್ವದ ಶಾಪವೇ ಎಂಬ ಊಹಾಪೋಹಗಳು ಬಂದ ಹಿನ್ನೆಲೆಯಲ್ಲಿ ಅದರ ಬೆನ್ನತ್ತಿ ಹೋಗಿ ಅದರ ಹಿನ್ನೆಲೆ ಮತ್ತು ಉಪಯೋಗಗಳ ಬಗ್ಗೆ ಕೆದಕಿದಾಗ ಸಿಕ್ಕ ಮಾಹಿತಿ ಎಂದರೆ ಅದೊಂದು ಅತ್ಯದ್ಭುತ ಔಷಧೀಯ ಗುಣಗಳುಳ್ಳ ಮರ ಎಂದು ತಿಳಿದುಬಂತು. ಇದರ ಬಗ್ಗೆ ತಿಳಿದುಕೊಳ್ಳಲು ಸಂಪೂರ್ಣವಾಗಿ ಓದಿ;*


ಸದ್ಯ ನಮ್ಮ ಮತ್ತು ನಮ್ಮ ಹಿರಿಯ ಪೀಳಿಗೆಯವರಿಗೆ ಅದರಲ್ಲೂ ನಮ್ಮ ಜಿಲ್ಲೆಗೆ ಸಂಬಂಧಿಸಿದಂತೆ ಇದರ ಮಾಹಿತಿ ಮತ್ತು ಮರಗಳ ಸಂಖ್ಯೆ ಬಹಳ ಕಡಿಮೆ. ಭಾಷಾ ಎಂಬುವ ರ ತೋಟದಲ್ಲಿ ತಾನೆ ಹುಟ್ಟಿರುವ (ವಲಸೆ ಹಕ್ಕಿಯ ಪಿಕ್ಕೆಯಿಂದ ಇರಬಹುದು) ಈ ಹುಣಸೆ ಮರದಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಕಡಿಮೆ ಕಾಯಿ ಬಿಡುತ್ತಿದೆ, ಫಸಲು ಹೆಚ್ಚಾಗಿ ಬಾರದ್ದರಿಂದ ಯಾರೂ ಸಹ ಇದರ ಗೋಜಿಗೆ ಹೋಗಿರಲಿಲ್ಲ, ಕೆಲಸಗಾರರು ಬಿಡುವಿನ ವೇಳೆಯಲ್ಲಿ ಇದನ್ನು ಹಿಚುಕಿ ನೋಡಿದಾಗಲೇ ಗಾಬರಿಗೊಂಡು ವಿಷಯ ಹರಿದಾಡಿ ಈ ಆವಾಂತರಕ್ಕೆ ಕಾರಣವಾಗಿದೆ.


*ಹುಣಸೆಯಲ್ಲಿ ಹಲವು ವಿಧ*


ಹುಣಸೆಯಲ್ಲಿ ಹುಣಸೆ, ಮಲೆನಾಡ ಹುಣಸೆ, ಕೆಂಪು ಹುಣಸೆಗಳೆಂದು ಬೇರೆಬೇರೆ ತಳಿಗಳ ಪ್ರಬೇಧಗಳಿದ್ದು, ಎಲ್ಲವೂ ಉಪಯುಕ್ತವಾಗಿವೆ. ನಿತ್ಯೋಪಯೋಗಿ ಹುಣಸೆ ಹಣ್ಣಿನ ಮರಗಳು ಅಲ್ಲಲ್ಲಿ ಕಂಡು ಬರುತ್ತಿದ್ದರೂ ಬಹುಪಯೋಗಿ ಕೆಂಪು ಹುಣಸೆ ಮರಗಳು ವಿರಳವಾಗುತ್ತಿವೆ. ಶಿರಸಿ, ಸಿದ್ದಾಪುರ ಅರಣ್ಯ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಕೆಂಪು ಹುಣಸೆ ಮರಗಳು ಗದಗ ಜಿಲ್ಲೆಯಲ್ಲಿ ಅಲ್ಲೋ ಇಲ್ಲೋ ತಾವಾಗಿಯೇ ಬೆಳೆದಿವೆ.


ಅನೇಕ ಜೀವವೈವಿಧ್ಯ ಹೊಂದಿರುವ ಕಪ್ಪತ್ತಗುಡ್ಡದಲ್ಲಿ ಕೆಂಪು ಹುಣಸೆ ಮರಗಳು ಕೆಲವು ಇವೆ. ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ನರ್ಸರಿಯಲ್ಲಿ ಅರಣ್ಯ ಇಲಾಖೆ ಎರಡು ಮರಗಳನ್ನು ಬೆಳೆಸಿದೆ. ಹಣ್ಣಿನ ಒಳ ತಿರುಳು ನೋಡಲು ಕೆಂಪಗೆ ರಕ್ತದ ಬಣ್ಣದಂತೆ ಕಾಣುವುದರಿಂದ ಇದನ್ನು ಕೆಲವು ಕಡೆಗಳಲ್ಲಿ ರಕ್ತ ಹುಣಸೆ ಎಂದು ಕರೆಯುತ್ತಾರೆ. ಈ ಹಣ್ಣು ಆಯುರ್ವೇದದಲ್ಲಿ ಅನೇಕ ವಿಧದಲ್ಲಿ ಬಳಕೆಗೆ ಉಪಯುಕ್ತವಾಗಿದ್ದರೂ ಆ ಬಗ್ಗೆ ರೈತರಿಗೆ ತಿಳುವಳಿಕೆ ಮೂಡಿಸದಿರುವುದರಿಂದ ಕೆಂಪು ಹುಣಸೆ ಹಣ್ಣಿನ ಮರಗಳನ್ನು ರೈತರು ವಾಣಿಜ್ಯ ದೃಷ್ಟಿಯಿಂದ ಬೆಳೆಯುತ್ತಿಲ್ಲ.


*ರುಚಿವೃದ್ಧಿಗೆ ಬಳಕೆ*


ಹುಣಸೆ ಹಣ್ಣು ಎಲ್ಲರಿಗೂ ಬೇಕಾದ ವಸ್ತುವಾಗಿದ್ದರೂ ಕೆಂಪು ಹುಣಸೆ ಅದಕ್ಕಿಂತ ಮಹತ್ವದ್ದು. *ಕರುಳಿಗೆ ಸಂಬಂಧಿಸಿದ ರೋಗಗಳು, ಕಾಮಾಲೆ, ಅತಿಸಾರ, ಪಿತ್ತ ವಿಕಾರ, ಕಾಡಿಗೆಮ್ಮು* ಮುಂತಾದ ರೋಗಗಳನ್ನು ಗುಣಪಡಿಸಲು ಕೆಂಪು ಹುಣಸೆ ಹಣ್ಣನ್ನು ಔಷಧಿಯಾಗಿ ಬಳಸಲಾಗುತ್ತಿದೆ.ಕೆಂಪು ಹುಣಸೆ ಹಣ್ಣಿನಲ್ಲಿ ಟರ್ಟಾರಿಕ್ ಆಸಿಡ್ ಇರುವುದರಿಂದ ಅದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಆಹಾರ ಹೆಚ್ಚು ರುಚಿಸುವಂತೆ ಮಾಡುವುದು ಇದರ ಮುಖ್ಯ ಗುಣವಾಗಿದೆ.


*ಸಹ ಕುಟುಂಬ*


ಸಮರಿಂದಸ್ ಇಂಡಿಕಸ್ ಹೆಸರಿನ ಕೆಂಪು ಹುಣಸೆ ಫಬೇಸಿಯಾ ಕುಟುಂಬಕ್ಕೆ ಸೇರಿದ್ದಾಗಿದೆ ಎಂದು ಹೇಳಲಾಗುತ್ತಿದೆ. ಅಡೆನ್ಸೊನಿಯಾ ಡೆಸಿಡಾಸಾ ಬಾಂಬೂಸಾಸಿಯಾ ಕುಟುಂಬಕ್ಕೆ ಸೇರಿದ್ದೆಂದು ಹೇಳಲಾಗುತ್ತದೆ. ಪಾರಿಭಾಷಿಕ ಶಬ್ದಗಳಲ್ಲಿ ಕೋರಕ್ಷಿ ಚಿಂಚಾ ಶೀತಫಲ ರಾವಣಾಮ್ಲಿಕಾ ಎಂದು ಕರೆಯಲಾಗುತ್ತದೆ. ಇದು ಶೇಧಜನಕವಾಗಿದ್ದು, ಶರೀರದಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಬೆವರಿನ ಮೂಲಕ ಹೊರ ಹಾಕುತ್ತದೆ. ಕೀವು, ಮಲ ರೋಗಿಗಳಿಗೆ ಈ ಹಣ್ಣಿನ ರಸ ಕೊಡಲಾಗುತ್ತದೆ.


ಬಸ್‌ನಲ್ಲಿ ಸಂಚರಿಸುವಾಗ ವಾಂತಿ ಬರುವವರಿಗೆ, ಎತ್ತರಕ್ಕೆ ಏರಿದಾಗ ವಾಂತಿ ಮಾಡಿಕೊಳ್ಳುವವರಿಗೆ ವಾಂತಿ ಬರುವುದನ್ನು ತಡೆಗಟ್ಟಲು ಕೆಂಪು ಹುಣಸೆ ಹಣ್ಣು ತಿನ್ನಿಸಲಾಗುತ್ತದೆ. ಇನ್ನೂ ಅನೇಕ ರೀತಿಯಲ್ಲಿ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಕೆಂಪು ಹುಣಸೆ ಹಣ್ಣು ಬಳಸಲಾಗುತ್ತದೆ.


*ಅರಣ್ಯ ಇಲಾಖೆ ಉತ್ತೇಜನ ನೀಡಲಿ;*


ಭೂಮಿಯ ಫಲವತ್ತತೆ ಮತ್ತು ಅಂತರ್ಜಲ ಕ್ಕೆ ಮಾರಕವಾಗುವಂತಹ ಗಿಡಗಳನ್ನು ಕಾಡಿನಲ್ಲಿ ಮತ್ತು ರೈತರ ಜಮೀನಿನಲ್ಲಿ ಬೆಳೆಸುವ ಅರಣ್ಯ ಇಲಾಖೆಯು ತೊಗಟೆ, ಎಲೆ ಮತ್ತು ಹಣ್ಣುಗಳಾದಿಯಾಗಿ ಔಷಧೋಪಚಾರಕ್ಕೆ ಬರುವುದರಿಂದ ಹಾಗೂ ಪಕ್ಷಿಗಳಿಗೂ ಉಪಯೋಗವಾಗುವುದರಿಂದ ಅಳಿವಿನಂಚಿನಲ್ಲಿರುವ ಕೆಂಪು ಹುಣಸೆ ಗಿಡಗಳನ್ನು ಬೆಳೆಸಲು ಮುಂದಡಿ ಇಡಬೇಕಾಗಿದೆ.


ಕೆಂಪು ಹುಣಸೆ ಬಗ್ಗೆ ಮಾಹಿತಿ;

*(-ಡಾ.ಎಸ್.ಬಿ.ನಿಡಗುಂದಿ,ಡಿಜಿಎಂ ಆಯುರ್ವೇದ ಮಹಾ ವಿದ್ಯಾಲಯ ಆಸ್ಪತ್ರೆ ಗದಗ.)*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೈತ ಶಕ್ತಿ ಬಲಗೊಳ್ಳಲು ಮುಂಚೂಣಿಯಲ್ಲಿರುವವರು ಪ್ರಾಮಾಣಿಕರಾಗಿರಬೇಕು. ಅನಸೂಯಮ್ಮ
ರೈತ ಶಕ್ತಿ ಬಲಗೊಳ್ಳಲು ಮುಂಚೂಣಿಯಲ್ಲಿರುವವರು ಪ್ರಾಮಾಣಿಕರಾಗಿರಬೇಕು. ಅನಸೂಯಮ್ಮ

ಚನ್ನಪಟ್ಟಣ:ಜು/೨೨/೨೦/ಬುಧವಾರ. ಜುಲೈ ೨೧ ರಂದು ನರ ಗುಂದ-ನವಲುಗುಂದ ಪ್ರದೇಶದಲ್ಲಿ ರೈತರು ತಮ್ಮ ಹಕ್ಕುಗಳಿಗಾಗಿ, ಲೆವಿ ಪದ್ಧತಿ ಯನ್ನು ವಿರೋಧಿಸಿ ಗೋಲಿಬಾರಿಗೆ ಒಳಗಾದರು ಅವರ ಸ್ಮರಣಾರ್ಥ ಕಳೆದ

ಕರ್ನಾಟಕ ರಾಜ್ಯ ರೈತ ಸಂಘದಿಂದ ರೈತ ಹುತಾತ್ಮ ದಿನಾಚರಣೆ
ಕರ್ನಾಟಕ ರಾಜ್ಯ ರೈತ ಸಂಘದಿಂದ ರೈತ ಹುತಾತ್ಮ ದಿನಾಚರಣೆ

ರಾಮನಗರ:ಜು/೨೧/೨೦/ಮಂಗಳವಾರ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ೪೦ ನೇ ವರ್ಷದ ರೈತ ಹುತಾತ್ಮ ದಿನಾಚರಣೆಯನ್ನು ಸಂಘದ ಕಛೇರ

ಹಿಂಡು ಆನೆಗಳ ದಾಳಿಗೆ ಎರಡು ಎಕರೆ ಟೊಮ್ಯಾಟೊ ಬೆಳೆ ನಾಶ
ಹಿಂಡು ಆನೆಗಳ ದಾಳಿಗೆ ಎರಡು ಎಕರೆ ಟೊಮ್ಯಾಟೊ ಬೆಳೆ ನಾಶ

ಚನ್ನಪಟ್ಟಣ:ಜು/೨೧/೨೦/ಮಂಗಳವಾರ. ತಾಲ್ಲೂಕಿನ ಗಡಿ ಗ್ರಾಮವಾದ ಮಲ್ಲುಂಗೆರೆ ಯ ಲೇ ತಮ್ಮೇಗೌಡ ಉ ದೇವೇಗೌಡರ ಪುತ್ರ ರಾಮೇಗೌಡ ಎಂಬುವವರಿಗೆ ಸೇರಿದ ಎ

ಭೂಹಳ್ಳಿ ಡೈರಿಯಲ್ಲಿ ಹಾಲು ಕದ್ದ ಅಧ್ಯಕ್ಷ
ಭೂಹಳ್ಳಿ ಡೈರಿಯಲ್ಲಿ ಹಾಲು ಕದ್ದ ಅಧ್ಯಕ್ಷ

ಚನ್ನಪಟ್ಟಣ:ಜೂ/೨೪/೨೦/ಬುಧವಾರ. ತಾಲ್ಲೂಕಿನ ಭೂಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನ \"ಅಧ್ಯಕ್ಷತೆಯಲ್ಲಿ\" ಕಾರ್ಯದರ್ಶಿ, ಹಾಲು ಪರ

ಭೂಸುಧಾರಣಾ ಕಾಯ್ದೆ ವಿರೋಧಿಸಿ ರೈತ ಸಂಘದಿಂದ ಮನವಿ
ಭೂಸುಧಾರಣಾ ಕಾಯ್ದೆ ವಿರೋಧಿಸಿ ರೈತ ಸಂಘದಿಂದ ಮನವಿ

ಚನ್ನಪಟ್ಟಣ:ಜೂ/೨೩/೨೦/ಮಂಗಳವಾರ. ರಾಜ್ಯ ಸರ್ಕಾರವು ರೂಪಿಸಲು ಹೊರಟಿರುವ  ಭೂ-ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸ

ರೈತರ ಪರವಾಗಿ ಪ್ರಾಮಾಣಿಕ ಕೆಲಸ ಮಾಡುವೆ. ಎಪಿಎಂಸಿ ನೂತನ ಅಧ್ಯಕ್ಷ ವೆಂಕಟಸ್ವಾಮಿ
ರೈತರ ಪರವಾಗಿ ಪ್ರಾಮಾಣಿಕ ಕೆಲಸ ಮಾಡುವೆ. ಎಪಿಎಂಸಿ ನೂತನ ಅಧ್ಯಕ್ಷ ವೆಂಕಟಸ್ವಾಮಿ

ಚನ್ನಪಟ್ಟಣ:ಜೂ/೨೦/೨೦/ಶನಿವಾರ. ರೈತರ ಪರವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಿ ತಾಲ್ಲೂಕಿನ ಎಪಿಎಂಸಿ ಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ಕ

ಭಾಗ-೨: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು
ಭಾಗ-೨: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು

(ರೈತರ ಹಿತದೃಷ್ಟಿ ಮತ್ತು ಮುಂದಿನ ಪೀಳಿಗೆಯನ್ನು ಕಡೆಗಣಿಸಿ, ರಾಜಕಾರಣಿಗಳು ಮತ್ತು ಕಾರ್ಪೋರೆಟ್ ಸಂಸ್ಥೆಗಳ ಅನುಕೂಲಕ್ಕೆ ತಕ್ಕಂತೆ, ಆಗಿಂದಾಗ್ಗೆ ಕೃಷಿ ಭೂಮಿಗೆ ತಿದ್ದುಪಡಿ ತರುತ್ತಿರುವ ಜನಪ್ರತಿನಿಧಿ

ಭಾಗ-೧: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು
ಭಾಗ-೧: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು

(ರೈತರ ಹಿತದೃಷ್ಟಿ ಮತ್ತು ಮುಂದಿನ ಪೀಳಿಗೆಯನ್ನು ಕಡೆಗಣಿಸಿ, ರಾಜಕಾರಣಿಗಳು ಮತ್ತು ಕಾರ್ಪೋರೆಟ್ ಸಂಸ್ಥೆಗಳ ಅನುಕೂಲಕ್ಕೆ ತಕ್ಕಂತೆ, ಆಗಿಂದಾಗ್ಗೆ ಕೃಷಿ ಭೂಮಿಗೆ

ಶಾನುಭೋಗನಹಳ್ಳಿ ಹಸುಗಳ ಹಾಲು ಪಕ್ಕದೂರಿನ ಡೈರಿಯಲ್ಲಿ ಮಾರಾಟ ! ಸೋಂಕಿನ ಭೀತಿಯಲ್ಲಿ ಗ್ರಾಮಸ್ಥರು
ಶಾನುಭೋಗನಹಳ್ಳಿ ಹಸುಗಳ ಹಾಲು ಪಕ್ಕದೂರಿನ ಡೈರಿಯಲ್ಲಿ ಮಾರಾಟ ! ಸೋಂಕಿನ ಭೀತಿಯಲ್ಲಿ ಗ್ರಾಮಸ್ಥರು

ಚನ್ನಪಟ್ಟಣ:ಜೂ/೧೩/೨೦/ಶನಿವಾರ. OKತಾಲ್ಲೂಕಿನ ಶಾನುಭೋಗನಹಳ್ಳಿ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದ್ದು, ಹೈನುಗಾರಿಕೆಯನ್ನೆ ಅವಲಂಬಿಸಿ ಜೀವನ ಸಾಗಿಸುತ್

ಹಾಲು ಕರೆಯದೆ ಹೋದರೆ ಹಸುವಿಗೆ ರೋಗ, ಕರೆದು ಚಲ್ಲಿದರೆ ರೈತರಿಗೆ ನಷ್ಟ, ಕಂಟೈನ್ಮೆಂಟ್ ಝೋನ್ ಬೇಡ, ಬಫರ್ ಝೋನ್ ನಲ್ಲಿ ಖರೀದಿಸಿ
ಹಾಲು ಕರೆಯದೆ ಹೋದರೆ ಹಸುವಿಗೆ ರೋಗ, ಕರೆದು ಚಲ್ಲಿದರೆ ರೈತರಿಗೆ ನಷ್ಟ, ಕಂಟೈನ್ಮೆಂಟ್ ಝೋನ್ ಬೇಡ, ಬಫರ್ ಝೋನ್ ನಲ್ಲಿ ಖರೀದಿಸಿ

ಚನ್ನಪಟ್ಟಣ:ಜೂ/೦೭/೨೦/ಭಾನುವಾರ ತಾಲ್ಲೂಕಿನ ಶಾನುಭೋಗನಹಳ್ಳಿ ಗ್ರಾಮದಲ್ಲಿ ಯುವಕನೋರ್ವನಿಗೆ ಕೊರೊನಾ (ಕೋವಿಡ್-೧೯) ಸೋಂಕು ತಗುಲಿದ ನಂತರ ಆತನ ಮನೆಯಿಂ

Top Stories »  


Top ↑