Tel: 7676775624 | Mail: info@yellowandred.in

Language: EN KAN

    Follow us :


ಕರ್ನಾಟಕ ರಾಜ್ಯ ರೈತ ಸಂಘ ಸಂಘ(ಗ)ಗಳಾಗಿದ್ದೆ ಸಾಧನೆಯೇ!?

Posted date: 24 Dec, 2019

Powered by:     Yellow and Red

ಕರ್ನಾಟಕ ರಾಜ್ಯ ರೈತ ಸಂಘ ಸಂಘ(ಗ)ಗಳಾಗಿದ್ದೆ ಸಾಧನೆಯೇ!?

ಎಂಭತ್ತರ ದಶಕದ ಕರ್ನಾಟಕ ರಾಜ್ಯ ರೈತ ಸಂಘ ೨೦೧೦ ನೆಯ ಇಸವಿ ಹೊತ್ತಿಗೆ ಸಿಟಿಲೊಡೆದು, ೨೦೨೦ ನೆಯ ಇಸವಿಯ ಹೊತ್ತಿಗೆ ರೆಂಬೆಕೊಂಬೆಗಳಾಗಿ ಕೆಲ ಮುಂದಾಳುಗಳು ನಗರ ಸೇರಿ ವಿಧಾನಸೌಧದ ಒಳಹೊಕ್ಕು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದರೆ, ಅವರ ಹಿಂಬಾಲಕರಾಗಿ ರೈತರ ಪರ, ಆಡಳಿತಶಾಹಿ ವಿರುದ್ದ ರಸ್ತೆಯಲ್ಲಿ ನಿಂತು ಗಂಟಲೊಣಗುವ ತನಕ ಕಿರುಚಾಡಿ ಮುಂದಾಳುಗಳು ಮತ್ತು ಆಡಳಿತಶಾಹಿ ಒಳ ಒಪ್ಪಂದದ ಮಾತಿನ ನಂತರ ಮುಂದಾಳುಗಳಿಗೆ ಜೈಕಾರ ಹಾಕಿ ಮನೆ ಸೇರುವ ಸ್ಥಳೀಯ ನೊಂದ ರೈತನ ಬದುಕು ಇಂದು ಮೂರಾಬಟ್ಟೆಯಾಗಿದೆ. ಇಂದಿನ ರೈತನ ಈ ಸ್ಥಿತಿಗೆ ಆಡಳಿತಶಾಹಿ ಜೊತೆಗೆ ಬಹುತೇಕ ರೈತ ಮುಖಂಡರೇ ನೇರ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ.


ಮೊದಲನೆ ಕೂಲಿ, ಎರಡನೇ ಕೂಲಿ ಎಂದು ಪ್ರೊಫೆಸರ್ ನಂಜುಂಡಸ್ವಾಮಿ ಯವರು ಕರೆಯುತ್ತಿದ್ದ ಡಿಸಿ, ಎಸಿ, ಶಿರಸ್ತೇದಾರರು ಅಂದು‌ ಗಡಗಡ ನಡುಗುವುಂತೆ ಮಾಡಿದ ಧೀರೋದಾತ್ತರು. ಆದರಿಂದು ಇದೇ ರೈತರನ್ನು ಇದೇ ಅಧಿಕಾರಿಗಳು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದ್ದಾರೆ ! ಇದಕ್ಕೆಲ್ಲಾ ಸಂಘಟನೆಯನ್ನು ಒಡೆದ ರಾಜಕಾರಣಿಗಳು ಕಾರಣವೋ ? ಅವರ ಮಾತು ಕೇಳಿ ನನಗೊಂದು ಅವನಿಗೊಂದು ಎಂದಲ್ಲದೆ ರಾಜ್ಯ ಹೋಗಿ ದೇವಿ ಯ ಹೆಸರಿನಲ್ಲೂ ಸಹ ಸಂಘ ಕಟ್ಟಿಕೊಂಡ ರೈತ ಮುಂದಾಳುಗಳು ಕಾರಣವೋ ? ಅಥವಾ ಸಂಪೂರ್ಣ ವ್ಯಾಪಾರಿಕರಣವಾಗಿರುವ ಇಲಾಖೆಗಳೋ ? ಎಂಬುದಕ್ಕೆ ಉತ್ತರ ಯಾವ ರೈತ ಮುಖಂಡನಲ್ಲೂ ಇಲ್ಲದಿರುವುದನ್ನು ಇಂದು ಕಾಣಬಹುದಾಗಿದೆ.


ಕ್ರಮವಾಗಿ ಒಂದು, ಎರಡು ಮತ್ತು ಮೂರನೇ ಹಂತದ ನಾಯಕರೂ ಸಹ ಅಧಿಕಾರ, ಪದವಿ ಮತ್ತು ಹಣದಾಸೆಗೆ ಬಲಿಯಾದವರೇ ಇದ್ದಾರೆ, ಎಲ್ಲೋ‌ ಬೆರಳೆಣಿಕೆಯಷ್ಟು ಮಂದಿ ರೈತ ಮುಖಂಡರು ಸಂಘಟನೆಯಿಂದ ದೂರ ಉಳಿದು ಸಮಾಜೋದ್ದರಕ್ಕಾಗಿ ಕೆಲಸ ನಿರ್ವಹಿಸುತ್ತಿದ್ದರೆ, ಸಂಘದೊಳಗೆ ಇದ್ದುಕೊಂಡು ಕೆಲ ಮಂದಿ ರೈತ ಪರ ಮಿಡಿಯುತ್ತಿರುವುದು ಸುಳ್ಳಲ್ಲ, ಆದರೆ ಅವರ ಸಂಖ್ಯೆ ಮಾತ್ರ ಎರಡಂಕಿ‌ ದಾಟದಿರುವುದು ಸಾಮಾನ್ಯ ರೈತನ ದುರಾದೃಷ್ಟವೇ ಸರಿ.


ನಾಲ್ಕು ದಶಕಗಳಿಂದ ರೈತ ಸಂಘಟನೆ ಗಳು ಇವೆಯಾದರೂ ಎರಡು ದಶಕದಲ್ಲಿ ಆದಂತಹ ರೈತರ ಕೆಲಸ ಮತ್ತೆರಡು ದಶಕದಲ್ಲಿ ಆಗಲೇ ಇಲ್ಲಾ, ರಾಜ್ಯದಾದ್ಯಂತ ತಾಲ್ಲೂಕಿನಲ್ಲಿ ಬೇಡ ಜಿಲ್ಲೆಗೊಂದರಂತೆ ರೈತ ಭವನ ಇಲ್ಲಾ, ಎಪಿಎಂಸಿ ಯಲ್ಲಿ ಬಿಳಿ ಚೀಟಿ ದಂಧೆ ನಿಲ್ಲಲಿಲ್ಲಾ, ಲಾಲ್ ಬಾಗ್ ನಲ್ಲಿ ನ್ಯಾಯ ದೊರೆಯಲಿಲ್ಲ, ವೈಜ್ಞಾನಿಕ ಬೆಳೆ ಪರಿಕಲ್ಪನೆ ಸಾಧ್ಯವಾಗಲೇ ಇಲ್ಲ ಮತ್ತು ಅದಕ್ಕೆ ಬೆಲೆಯ ಮಾತೇ ಇಲ್ಲಾ, ಕೃಷಿ ವಿಶ್ವ ವಿದ್ಯಾಲಯಗಳು ಹೆಸರಿಗಷ್ಟೇ ಸೀಮೀತವಾಗಿ, ಹೊಸ ತಳಿಗಷ್ಟೇ ಸೀಮೀತವಾದರೆ, ಆ ತಳಿಗಳ ಬೆಳೆಗೆ ಮಾರುಕಟ್ಟೆಯನ್ನು ಒದಗಿಸಿ ರೈತನ ಹಿತ ಕಾಪಾಡಲೇ ಇಲ್ಲಾ ಬಹಳ ಮುಖ್ಯವಾಗಿ ದೇಶದ ಬೆನ್ನೆಲುಬಿಗೆ ಕೃಷಿ ಸಂವಿಧಾನವೇ ಇಲ್ಲದಿರುವುದು ಅನ್ನದಾತನ ದುರ್ದೈವವೇ ಸರಿ ಎಂದು ಹಲುಬಿಕೊಳ್ಳುವ ಸಂದರ್ಭ ಇದಾಗಿದೆ. ಇಂದಿಗೂ ಕೃಷಿಯನ್ನೇ ನಂಬಿಕೊಂಡು ಆತ್ಮಹತ್ಯೆ ಯೊಂದೇ ದಾರಿ ಎಂಬುದನ್ನು ಯೋಚಿಸುವ ಮಟ್ಟಿಗೆ ಕರೆದುಕೊಂಡು ಹೋಗಿರುವ ಸಂಘಟನೆ ಮತ್ತು ರಾಜಕಾರಣಿಗಳು ಒಂದೇ ನಾಣ್ಯದ ಎರಡು ಮುಖಗಳು.


ರಸ್ತೆಯಲ್ಲಿ ಧಿಕ್ಕಾರ ಕೂಗುವ ರೈತ ದಿನದ ಒಪ್ಪೊತ್ತೂಟಕ್ಕೆ ಬಡಿದಾಡಿದರೆ, ಮುಂದಾಳತ್ವ ವಹಿಸಿದ ನಾಯಕರು ರಾಜಧಾನಿಯಲ್ಲಿ ಬೃಹತ್ ಬಂಗಲೆಗಳಲ್ಲಿ ಸ್ವಂತ ಬೆಂಗಾವಲು ಪಡೆಯೊಂದಿಗೆ ರಾರಾಜಿಸುತ್ತಿದ್ದಾರೆ. ವೇದಿಕೆಯಲ್ಲಿ ರೈತಪರ, ಆಡಳಿತದ ವಿರುದ್ಧ ಮಾರುದ್ದ ಭಾಷಣಕಷ್ಟೇ ಸೀಮೀತವಾಗಿದ್ದು ಅವರಿಗೆ ಆರ್ಥಿಕತೆ ಕಡಿಮೆಯಾದಾಗ ಮಾತ್ರ ಸ್ಥಳೀಯ ರೈತ ಮುಖಂಡರು ಮತ್ತು ಕಾರ್ಯಕರ್ತರು ನೆನಪಿಗೆ ಬರುತ್ತಾರೆ, ಮತ್ತದೇ ರಸ್ತೆ ತಡೆ, ಧಿಕ್ಕಾರ, ಮನವಿ ನಂತರ ಮಧ್ಯಸ್ಥಿಕೆ ? ಮುಂದೆ ಯಥಾಸ್ಥಿತಿ. ತಳಮಟ್ಟದ ನಿಜವಾದ ಭೂ ಉಳುಮೆಯ ರೈತ ಮತ್ತು ಕಾರ್ಯಕರ್ತ ಇವರಿಬ್ಬರೂ ಆಡಳಿತ ಮತ್ತು ನಾಯಕರ ವಿರುದ್ದ ಸೆಟೆದು ನಿಲ್ಲುವ ತನಕ ರೈತರ ಪಾಡು ನಾಯಿ ಪಾಡು ಎಂದರೆ ತಪ್ಪಾಗಲಾರದು.


ಜನಪ್ರತಿನಿಧಿ ಎನಿಸಿಕೊಂಡ ಮಹಾನುಭಾವರು ಪ್ರತಿ ಚುನಾವಣೆಯಲ್ಲೂ ರೈತನ ಏಳ್ಗೆಯೇ ನಮ್ಮ ಗುರಿ ಎನ್ನುತ್ತಾರೆ, ರೈತರ ಹಸಿರು ಶಾಲು ಹೊದ್ದು ಅವರ ಹೆಸರಿನ ಮೇಲೆ ಪ್ರಮಾಣಿಸಿ ಪ್ರತಿಜ್ಞೆ ಸ್ವೀಕರಿಸುತ್ತಾರೆ, ರೈತರಿಗಾಗಿಯೇ ಬಜೆಟ್ ಬಂದು‌ ಹೋಗಾಯಿತು, ರೈತ ನ ಕಷ್ಟಕ್ಕಾಗಿ ಅದೆಷ್ಟೋ ವೇದಿಕೆಗಳಲ್ಲಿ ಕಣ್ಣೀರ ಕೋಡಿ ಹರಿಯಿತೋ ! ಇವರಿಗೆಲ್ಲಾ ಕಲಶವಿಟ್ಟಂತೆ ಒಂದೊಂದು ಬಣದ ರೈತ ಸಂಘಟನೆ ಗಳು ಸಹ‌ ಒಂದೊಂದು ಪಕ್ಷಕ್ಕೆ ಬೆಂಬಲ ಸೂಚಿಸಿ ಬಂದಷ್ಟು ಬಾಚಿಕೊಂಡು ಇನ್ನೈವತ್ತೆಂಟು ತಿಂಗಳು ಸುಮ್ಮನಿದ್ದು ಅವಕಾಶ ಮಾಡಿಕೊಂಡು ಚಳವಳಿ ಹೆಸರೇಳಿಕೊಂಡು ಜೀವನ ಸಾಗಿಸುತ್ತಿರುವುದು ಖೇದಕರ.


ಒಂದು ವಾರ ಸಂಬಳ ಕೊಡುವುದು ತಡವಾದರೆ ಯುಜಿಸಿ ವೇತನದಾರರು ಬೊಬ್ಬೆ ಹೊಡೆಯುತ್ತಾರೆ, ತಮಗಿಷ್ಟ ಬಂದಷ್ಟು ಸಂಬಳ ಮತ್ತು ಭತ್ಯೆಯನ್ನು ರಾಜಕಾರಣಿಗಳು ಕ್ಷಣಾರ್ಧದಲ್ಲಿ ಏರಿಸಿಕೊಳ್ಳುತ್ತಾರೆ, ಒಬ್ಬ ಅನ್ನದಾತ ಸರಿಯಾದ ಸಮಯಕ್ಕೆ ವಿದ್ಯುಚ್ಛಕ್ತಿ ಇಲ್ಲಾ ಎಂದೋ, ವರ್ಷಗಳುರುಳಿದರೂ ಖಾತೆ ಆಗಿಲ್ಲವೆಂದೋ, ಕಾಲುವೆ ಅಥವಾ ಕೆರೆ ತುಂಬಿಸಿಲ್ಲಾ ಎಂದೋ ಅಧಿಕಾರಿಯ ಜೊತೆ ವಾಗ್ವಾದಕ್ಕಿಳಿದರೆ ಸುಧಾರಣೆಯುಳ್ಳ ಜೀವನ ನಡೆಸುವ ಇವರೆಲ್ಲರೂ ಪ್ರತಿಭಟನೆಗೆ ಇಳಿಯುತ್ತಾರೆ. ವರ್ಷದಲ್ಲಿ ಒಮ್ಮೆ ಅಥವಾ ಎರಡು ಬಾರಿ ಅಸಲು ಪಡೆಯಲು ಸಾಲ ಮಾಡಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ರೈತನ ನೆರವಿಗೆ ಧಾವಿಸಿದ ಅವರ ಪರ ಪ್ರತಿಭಟಿಸಿ ನ್ಯಾಯ ದೊರಕಿಸಿಕೊಟ್ಟ ಯಾವುದೇ ಇಲಾಖೆಯಾಗಲಿ, ಜಾತಿಗೆ ಹತ್ತರಂತೆ ಇರುವ ವೇದಿಕೆಗಳಾಗಲಿ, ಸರ್ಕಾರಿ‌ ನೌಕರರಾಗಲಿ, ರಾಜಕೀಯ ಪಕ್ಷಗಳಾಗಲಿ ಇತಿಹಾಸದಲ್ಲಿ ಕಾಣಿಸುತ್ತಿಲ್ಲ. ಇವರೆಷ್ಟು ಸಂಬಳ ಎಣಿಸಿದರೂ ಎಣಿಸುವ ಶಕ್ತಿ ಬಂದದ್ದು ಇದೇ ಅನ್ನದಾತ ನೀಡುವ ಅನ್ನ ದಿಂದ ಎಂಬುದನ್ನು ಮರೆತ ಭ್ರಷ್ಟರಲ್ಲವೇ ಇವರು ?


ಏಳಿ ಎದ್ದೇಳಿ ರೈತ ಬಾಂಧವರೇ;

ಭಾರತ ಹಳ್ಳಿಗಳ ದೇಶ, ಭಾರತ ರೈತನ ಬೆನ್ನೆಲುಬು, ಮಹಾತ್ಮ ಗಾಂಧಿ ಯಿಂದ ನಮ್ಮ ಕುವೆಂಪು ರವರ ತನಕ ಮಾತ್ರ ರೈತರಿಗೊಂದು ಬೆಲೆ ಇತ್ತು, ಇಂದು ಜಗತ್ತಿನ ಇರುವೆ ಎಂಭತ್ತು ಕೋಟಿ ಜೀವರಾಶಿಗಳಿಗೆ ಅನ್ನ ನೀಡುವ ರೈತ ಬೇಡುವ ಸ್ಥಿತಿ ತಲುಪಿದ್ದಾನೆಂದರೆ ಮಹನೀಯರ ಆಶಯಗಳೆಲ್ಲವೂ ಮಣ್ಣು ಪಾಲಾದಂತೆಯೇ ಸರಿ. ಇನ್ನಾದರೂ ಎಚ್ಚೆತ್ತುಕೊಳ್ಳೋಣಾ, ಸರಿದಾರಿಯನ್ನು ಆಯ್ಕೆ ಮಾಡಿಕೊಳ್ಳೋಣಾ, ವೈಯುಕ್ತಿಕ ದುರಾಸೆಗಳನ್ನು ಬದಿಗೊತ್ತಿ ಎಲ್ಲರೂ ಒಂದಾಗಲು ಪ್ರಯತ್ನಿಸೋಣಾ, ದೇಶದಲ್ಲಿ ಹಸಿರು ಕ್ರಾಂತಿಗೆ ಚಾಲನೆ ನೀಡಿ ಜಡ್ಡುಗಟ್ಟಿದ ಆಡಳಿತಕ್ಕೆ ಚುರುಕು ಮುಟ್ಟಿಸಲು ತಯಾರಾಗೋಣಾ.


ರೈತ ದಿನಾಚರಣೆಯ ಈ ಸಂದರ್ಭದಲ್ಲಿ ಹಂಚಿಹೋಗಿರುವ ಸಂಘಟನೆಗಳು ಒಗ್ಗೂಡಲಿ ಎಂದು ಆಶೀಸೋಣವೇ !?


*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ

ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ

ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ

ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ

ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ

ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ

ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್

ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ

ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು

ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು  ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್

ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ

ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ

ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ

ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ

ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ

ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.

ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ

ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ

ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ




ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ

Top Stories »  


Top ↑