Tel: 7676775624 | Mail: info@yellowandred.in

Language: EN KAN

    Follow us :


ವಿಶ್ವದಲ್ಲಿ ರೈತನೋರ್ವನೇ ಶ್ರೀಮಂತ, ನಾನು ಬಡ ರೈತ ಎಂಬ ಕೀಳರಿಮೆಯಿಂದ ಹೊರಬನ್ನಿ ಡಾ ವೀರೇಂದ್ರ ಹೆಗ್ಗಡೆ

Posted Date: 05 Mar, 2020

ವಿಶ್ವದಲ್ಲಿ ರೈತನೋರ್ವನೇ ಶ್ರೀಮಂತ, ನಾನು ಬಡ ರೈತ ಎಂಬ ಕೀಳರಿಮೆಯಿಂದ ಹೊರಬನ್ನಿ ಡಾ ವೀರೇಂದ್ರ ಹೆಗ್ಗಡೆ

ಕಾರ್ಯಕ್ರಮವನ್ನು ಉದ್ಘಾಟಿಸಿ ಹೈನೋದ್ಯಮ ಪಿತಾಮಹ ಕುರಿಯನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಗಣ್ಯರು.

ಚನ್ನಪಟ್ಟಣ: ನಗರದ ಹೊರವಲಯದಲ್ಲಿರುವ ದೊಡ್ಡಮಳೂರು ಗ್ರಾಮದ ಚೌಡೇಶ್ವರಿ ಕಲ್ಯಾಣ ಮಂಟಪದ ಬಳಿಯ ಬಯಲು ಪ್ರದೇಶದಲ್ಲಿ ಬೃಹತ್ ಪೆಂಡಾಲ್ ನಡಿಯಲ್ಲಿ ಒಂದು ದೊಡ್ಡ ಜಾತ್ರೆಯ ಸಂಭ್ರಮ ಮನೆಮಾಡಿತ್ತು. ಇಲ್ಲಿ ಜಯಮುತ್ತು ಎಂಬ ಯುವಕರೋರ್ವರೊಟ್ಟಿಗೆ ಬಮೂಲ್ ಮತ್ತು ಕೆಎಂಎಫ್ ನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಿಟ್ಟರೆ ತಾಲ್ಲೂಕಿನ ಬೆರಳೆಣಿಕೆಯ ದಳಪತಿಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಬೆಂಬಲಿಗರ ಪಡೆಯನ್ನು ಕಟ್ಟಿಕೊಂಡು ಬೃಹತ್ ಸಮ್ಮೇಳನ ಆಯೋಜಿಸಿ ಒಂದು ರೀತಿಯ ಜನ-ಶಕ್ತಿ ಪ್ರದರ್ಶನವನ್ನು ತೋರಿದರು.*


ನಗರದ ಹಲಸಿನಮರದದೊಡ್ಡಿ ಯ ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥ ಎಂಬುವವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿ, ಭೈರಾಪಟ್ಟಣದ ಶೀಥಲೀಕರಣದ ಆವರಣದಲ್ಲಿ ಬಮೂಲ್ ನಿರ್ದೇಶಕರ ಕಛೇರಿ ಮತ್ತು ಕೆಎಂಎಫ್ ನ ಉತ್ಪನ್ನಗಳ ಮಾರಾಟ ಮಳಿಗೆಗೆ ಶಂಕುಸ್ಥಾಪನೆ ಮತ್ತು ಗುದ್ದಲಿ ಪೂಜೆಯನ್ನು ನೆರವೇರಿಸಿ ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ರೈತ ಯಾವ ಶ್ರೀಮಂತ ಉದ್ಯಮಿಗೂ ಕಡಿಮೆಯಿಲ್ಲ, ಪ್ರತಿ ಶ್ರೀಮಂತ ಉದ್ಯಮಿಯೂ ರೈತ ನ ಋಣದಲ್ಲಿ ಇದ್ದಾನೆ. ನಾನು ಬಡ ರೈತ ಎಂಬುವ ಕೀಳರಿಮೆ ಮೊದಲು ಬಿಡಬೇಕು ಎಂದು ಕರೆ ನೀಡಿದರು.


ರೈತರಿಗೆ ಬೇಕಾದ ಸಲಕರಣೆಗಳ ಮಾಲೀಕರು ನಿಮ್ಮ ಮನೆಯ ಮುಂದೆ ಬಂದು ನಿಂತಿದ್ದಾರೆ ಎಂದರೆ ನೀವು ಹೇಗೆ ಬಡವರಾಗುತ್ತೀರಿ ಎಂದು ಪ್ರಶ್ನಿಸಿದ ಅವರು ನಮ್ಮ ಧರ್ಮಸ್ಥಳದ ಸಂಘದಿಂದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಲವು ರೀತಿಯ ಸದುಪಯೋಗಕ್ಕಾಗಿ ೧೮.೮೦ ಕೋಟಿ ರೂಪಾಯಿಗಳನ್ನು ನೀಡಿದ್ದೇವೆ. ಮುಂದೆಯೂ ಸಹಾಯ ಹಸ್ತ ನೀಡುತ್ತೇವೆ. ಎಲ್ಲಾ ರೈತರು ನಾಟಿ ಹಸುಗಳ ಸಾಕಾಣಿಕೆಗೆ ಒತ್ತು ನೀಡಿದರೆ ನಮ್ಮ ಸಂಘ ದಿಂದ ಸಹಾಯ ಹಸ್ತ ನೀಡುತ್ತೇವೆ. ರಾಮನಗರ ಜಿಲ್ಲೆಯ ಜನರು ಕಷ್ಟ ಜೀವಿಗಳಾಗಿದ್ದು ಅವರ ಜೊತೆ ನಾವಿರುತ್ತೇವೆ ಎಂದು ಅಭಯವಿತ್ತರು.


ಪ್ರಾಸ್ತಾವಿಕ ನುಡಿಗಳನ್ನಾಡಿದ ಜಯಮುತ್ತು ರವರು ಚನ್ನಪಟ್ಟಣ ದ ಜನರ ಆಶೀರ್ವಾದ ನನ್ನ ಮೇಲಿದೆ, ಮುಂದೆಯೂ ಇರಲಿದೆ ಎಂಬ ಆಶಾಭಾವನೆ ನನಗಿದೆ. ಆದ್ದರಿಂದಲೇ ಬೊಂಬೆನಾಡಿನ ರೈತರಿಗೆ ಹಾಗೂ ಹೈನೋದ್ಯಮದಾರರಿಗೆ ಅನುಕೂಲವಾಗುವಂತೆ, ಒಂದೇ ಸೂರಿನಡಿ ಎಲ್ಲವೂ ಕಡಿಮೆ ದರದಲ್ಲಿ ದೊರಕುವುದರ ಜೊತೆಗೆ ಅವರ ಆರೋಗ್ಯಕ್ಕೆ ಒತ್ತು ನೀಡುವಂತೆ ಇಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ನನಗೆ ಅತೀವ ಸಂತೋಷ ತಂದಿದೆ ಎಂದರು. ನಾಟಿ ಹಸುವಿನ ಹಾಲಿಗೆ ೫೨ ರೂಪಾಯಿ ಕೊಡುತ್ತಿದ್ದು ಮುಂದೆ ಹೆಚ್ಚು ಕೊಡುವ ಪ್ರಸ್ತಾವನೆ ಇದ್ದು ಆರೋಗ್ಯ ದೃಷ್ಟಿಯಿಂದ ನಾಟಿ ತಳಿಯನ್ನು ಸಾಕಬೇಕೆಂದು ಕೋರಿದರು. ಜಾನುವಾರುಗಳಿಗೆ  ಬೇಕಾದ ಅನೇಕ ರೀತಿಯ ತಪಾಸಣೆಯನ್ನು ನಗರದಲ್ಲೇ ಸಿಗುವಂತೆ ಮಾಡುವುದಕ್ಕೆ ಹೆಚ್ಚಿನ ಗಮನ ಹರಿಸಿದ್ದೇನೆ ಎಂದು ಹೇಳಿದರು.


ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡರು ಮಾತನಾಡಿ ಚುನಾವಣಾ ಘೋಷಣೆಗೂ ಮುನ್ನಾ ೪೪ ಸಾವಿರ ಕೋಟಿ ರೈತರ ಸಾಲ ಮನ್ನಾ ಎಂದು ಘೋಷಿಸಿದ್ದರು, ಸಂಪೂರ್ಣ ಜೆಡಿಎಸ್ ಸರ್ಕಾರ ಬಂದರೆ ಸಾಧ್ಯ ಎಂದು ನಾನು ಭಾವಿಸಿದ್ದೆ ಆದರೆ ಸಮ್ಮಿಶ್ರ ಸರ್ಕಾರ ಬಂದಿದ್ದರಿಂದ ಅರ್ಧ ಸಾಧನೆಯಷ್ಟೇ ಸಾಧ್ಯವಾಯಿತು. ಆದರೆ ಇಂದಿನ ಮುಖ್ಯಮಂತ್ರಿ ಅದನ್ನೂ ತಿರಸ್ಕರಿಸಿ ರೈತರಿಗೆ ಅನ್ಯಾಯ ಎಸಗಿದ್ದಾರೆ. ಕುಮಾರಸ್ವಾಮಿ ಯವರು ಬಡವರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ಜವಾಹರಲಾಲ್ ನೆಹರು ರವರಿಂದ ಇಂದಿನ ಪ್ರಧಾನ ಮಂತ್ರಿ ಹಾಗೂ ನಿಜಲಿಂಗಪ್ಪ ನಿಂದ ಇಂದಿನ ಮುಖ್ಯಮಂತ್ರಿ ವರೆಗೂ ಎಲ್ಲರ ಆಡಳಿತವನ್ನು ನೋಡಿದ್ದೇನೆ. ಅಂಬೇಡ್ಕರ್ ರವರನ್ನು ಅಣಕಿಸುವಂತೆ ಧರ್ಮ-ಧರ್ಮಗಳ ನಡುವೆಯೇ ಕಂದಕವನ್ನುಂಟು ಮಾಡುತ್ತಿದ್ದಾರೆ ಎಂದು ಮೋದಿಯವರ ಹೆಸರು ಹೇಳದೆ ಟೀಕಿಸಿದರು. ಇಂದಿನ ಕಾರ್ಯಕ್ರಮ ಅತ್ಯಂತ ಉನ್ನತ ಮಟ್ಟದ್ದಾಗಿದ್ದು ದೊಡ್ಡ ಪ್ರಮಾಣದಲ್ಲಿ ಜನ ಸೇರಿದ್ದಾರೆ. ದುಡಿಯುವ ರೈತರಿಗೆ ಉತ್ಸಾಹ ತುಂಬಬೇಕು. ಇಗ್ಗಲೂರು ಅಣೆಕಟ್ಟು ನನ್ನ ಕೊಡುಗೆ, ಇದರಲ್ಲಿ ಯಾರ ಸಹಕಾರವೂ ಅಂದು ಇರಲಿಲ್ಲ. ನಾನು ಈ ಇಳಿ ವಯಸ್ಸಿನಲ್ಲಿಯೂ ಸಹ ಪ್ರಾದೇಶಿಕ ಪಕ್ಷ ಕಟ್ಟಿ ಬೆಳೆಸಿ ಉಳಿಸಲು ಪ್ರಯತ್ನಿಸುತ್ತೇನೆ ಎಂದರು.

ನಾನು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕುರಿಯನ್ ರವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಅವರನ್ನು ಕರ್ನಾಟಕದಲ್ಲಿ ಘಟಕ ತೆರೆಯುವಂತೆ ಕೇಳಿಕೊಂಡೆ. ಆಗ ಅವರು ದೇಶದಲ್ಲಿ ತಾಜ್ ಮಹಲ್ ಹೇಗೋ ಹಾಗೆಯೇ ಗುಜರಾತ್ ಗೊಂದೇ ಅಮುಲ್ ಎಂದು ಬಿಟ್ಟರು. ನಂತರ ಅವರೇ ಬಂದು ಕೆಎಂಎಫ್ ಗೆ ಮುನ್ನುಡಿ ಬರೆದರು ಎಂದು ಸ್ಮರಿಸಿದರು.


ಶಾಸಕ ಕುಮಾರಸ್ವಾಮಿ ಮಾತನಾಡಿ ರೇವಣ್ಣ ರವರು ಕೆಎಂಎಫ್ ಅಧ್ಯಕ್ಷ ರಾಗಿದ್ದಾಗ ಹದಿಮೂರು ಮಹಾಮಂಡಲದಲ್ಲಿ ಹನ್ನೊಂದು ನಷ್ಟದಲ್ಲಿದ್ದವು. ರೇವಣ್ಣ ರವರು ಅಧ್ಯಕ್ಷರಾದ ನಂತರ ಹದಿಮೂರು ಮಹಾಮಂಡಲಗಳು ಲಾಭದಲ್ಲಿವೆ. ಮೆಗಾ ಡೈರಿಯೂ ಸಹ ಉನ್ನತ ಮಟ್ಟದಲ್ಲಿ ನಡೆಯುತ್ತಿದೆ. ಮೊದಲಿಗೆ ಎರಡು ರೂಪಾಯಿಂದ ಐದು ರೂಪಾಯಿಗೆ ಹಾಲಿನ ದರ  ಏರಿಕೆ ಯಾಗಿದ್ದು ಅವರ ಅವಧಿಯಲ್ಲಿ. ಮುಂದಿನ ದಿನಗಳಲ್ಲಿ ಇನ್ನೂ ಒಂದು ರೂಪಾಯಿ ಕೊಡುವಂತೆ ಹೋರಾಡುತ್ತೇನೆ ಎಂದರು.


ಈ ಭಾಗದ ಕೆರೆಗಳನ್ನು ತುಂಬಿಸಲು ನನ್ನ ಪಾಲು ಬಹಳಷ್ಟಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗಲೇ ನೀರು ಹಂಚಿಕೆಯಲ್ಲಾದ ವ್ಯತ್ಯಾಸ ಗುರುತಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದೆ. ಕೇವಲ ಕೆರೆ ತುಂಬಿಸುವದಲ್ಲದೇ  ಶಾಶ್ವತ ನೀರಾವರಿಗಾಗಿ ಸುಮಾರು ೫೪೦ ಕೋಟಿ ರೂಪಾಯಿಗಳ ಸತ್ತೇಗಾಲದ ಯೋಜನೆ ಕೆಲಸಕ್ಕೆ ಹಣ ಬಿಡುಗಡೆ ಮಾಡಿದ್ದೇನೆ. ಇದು ರಾಮನಗರ ಜಿಲ್ಲೆಗೆ ಶಾಶ್ವತ ನೀರಾವರಿ ಆಗುತ್ತೆ.


ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಸ್ಥಳೀಯ ನಾಯಕರೇ ಸಾಕು. ಆದರೆ ಅವರ ನಡುವೆ ಇರುವ ಗುಂಪುಗಾರಿಕೆಯಿಂದ ಸಮಸ್ಯೆ ತಲೆದೋರಿದೆ ಎಂದು ಮುಗುಮ್ಮಾದರು

ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗೆ ಕೆಲವು ಕಾನೂನು ತೊಡಕು ಇದ್ದು ಶೀಘ್ರವಾಗಿ ಬಗೆಹರಿಸುತ್ತೇನೆ.


ಕೆರೆ ತುಂಬಿಸುವ ಯೋಜನೆಯಲ್ಲಿ ನನಗೆ ಕೆಟ್ಟ ಹೆಸರು ಬರಲಿ ಎಂಬ ಉದ್ದೇಶದಿಂದ ಕೆಲವರು ಪೈಪುಗಳನ್ನು ಒಡೆದು ಹಾಕುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದನ್ನು ನೀವು ಗಮನಿಸಬೇಕು. ಮುಂದಿನ ನೀರಿನ ಯೋಜನೆಯಲ್ಲಿ ಯಾರಿಗೂ ಅನ್ಯಾಯವಾಗದಂತೆ ಎಚ್ಚರಿಕೆಯ ನಡಿಗೆ ಇಡುತ್ತೇನೆ. ರಾಜೀವಗಾಂಧಿ ವಿದ್ಯಾಲಯ ಇಷ್ಟೊತ್ತಿಗೆ ಮುಗಿದಿದ್ದರೆ ಎರಡು ನಗರಗಳು ಅವಳಿ ನಗರವಾಗಿರುತ್ತಿತ್ತು. ಮುಂದೊಂದು ಬಾರಿ ರಾಮನಗರ ಜಿಲ್ಲೆಯಿಂದಲೇ ಸ್ಪರ್ಧಿಸಿ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂಬ ಆಶಾದಾಯಕ ವ್ಯಕ್ತಪಡಿಸಿದರು.


ನಾನು ಸರ್ಕಾರ ವನ್ನು ಯಾವುದೇ ಕಾರಣಕ್ಕೂ ಬೀಳಿಸುವುದಕ್ಕೆ ಪ್ರಯತ್ನಿಸುವುದಿಲ್ಲ. ನನ್ನ ಸರ್ಕಾರ ಉರುಳಿಸಲು ಇಲ್ಲಿನ ಶಾಸಕರೇ ಕಾರಣ, ಇವರ ಅಡ್ಡ ಎಲ್ಲವೂ ಜೂಜುಕೋರತನ. ಇಂದಿನ ಸರ್ಕಾರ ಉರುಳಿದರೂ ಸಹ ಅದಕ್ಕೆ ಕಾರಣ ಇದೇ ಮಾಜಿ ಶಾಸಕ ಸಿಪಿವೈ ಎಂದರು. ಮುಂದಿನ ಬಾರಿ ಅಧಿಕಾರ ಸಿಕ್ಕರೆ ರೈತನಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ಸರ್ಕಾರದಿಂದ ಕೊಡಲಿದ್ದೇನೆ. ಯಡಿಯೂರಪ್ಪ ಅಥವಾ ಸಿದ್ದರಾಮಯ್ಯ ನ ಮನೆಗೆ ಯಾರೂ ಹೋಗುವುದಿಲ್ಲ. ನನ್ನ ಮನೆಗೆ ಎಲ್ಲಾ ಬಡವರು ಬರುತ್ತಾರೆ. ಯಾರಿಗೂ ಬರಿಗೈಯಲ್ಲಿ ಕಳುಹಿಸುವುದಿಲ್ಲ. ಎಲ್ಲವನ್ನೂ ತೀರಿಸಲಾಗದಿದ್ದರೂ ಕೈಲಾದ ಸಹಾಯ ಮಾಡುತ್ತೇನೆ. ನಾನ್ಯಾವ ಇನ್ಸ್ಟಿಟ್ಯೂಟ್ ಆಗಲಿ ವ್ಯವಹಾರಗಳನ್ನಾಗಲಿ ಇಟ್ಟುಕೊಂಡಿಲ್ಲ. ಎಂದು ಮಾರ್ಮಿಕವಾಗಿ ನುಡಿದರು. ನನ್ನ ಮಗನ ಮದುವೆಯನ್ನು ನಿಮ್ಮ ಮುಂದೆ ಮಾಡಬೇಕು ಎಂದು ತೀರ್ಮಾನಿಸಿದ್ದು ತಾಲ್ಲೂಕಿನ ಎಲ್ಲಾ ಮನೆಗೂ ಆಹ್ವಾನ ನೀಡುತ್ತೇನೆ*. ಈಗಾಗಲೇ ೩೫ ಹಳ್ಳಿಗಳಿಗೆ ಭೇಟಿ ನೀಡಿದ್ದು ಇನ್ನೂ ಮುಂದೆಯೂ ಭೇಟಿ ನೀಡಲು ಪ್ರಯತ್ನಿಸುತ್ತೇನೆ. ಆರೋಗ್ಯ ಸಮಸ್ಯೆಯಿಂದ ಸ್ವಲ್ಪ ತೊಂದರೆಯಾಗಿದೆ. ಜಯಮುತ್ತು ಇಂದು ಒಳ್ಳೆಯ ಕೆಲಸ ಮಾಡಿದ್ದಾರೆ.ಅನ್ನದಾನೇಶ್ವರನಾಥ ಸ್ವಾಮೀಜಿ ಮತ್ತು ನಂಜಾವಧೂತ ಸ್ವಾಮೀಜಿಗಳು ಆಶೀರ್ವಚನ ನೀಡಿ, ಕೆಎಂಎಫ್, ಇಗ್ಗಲೂರು ಅಣೆಕಟ್ಟು, ಮೇಕೆದಾಟು ಅಣೆಕಟ್ಟು ನಿರ್ಮಾಣ, ರೈತರ ಸಾಲಮನ್ನಾ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಸ್ಮರಿಸಿದರು. ಇದೇ ವೇಳೆ ನಂಜಾವಧೂತ ಸ್ವಾಮೀಜಿ ಗಳು ಕುಮಾರಸ್ವಾಮಿ ಯವರು ಮತ್ತೊಮ್ಮೆ ರಾಜ್ಯವನ್ನಾಳುವ ಯೋಗ ಕುಮಾರಸ್ವಾಮಿ ಗೆ ಇದೆ ಎಂದು ಭವಿಷ್ಯ ನುಡಿದರು. ಎದೆಗಾರಿಕೆ ಮತ್ತು ಹೃದಯವಂತ ನಾಯಕ ಕುಮಾರಸ್ವಾಮಿ ಎಂದು ಬಣ್ಣಿಸಿದರು. ಅನ್ನದಾನೇಶ್ವರನಾಥ ಸ್ವಾಮೀಜಿಗಳು ಹೆಚ್ ಡಿ ದೇವೇಗೌಡರ ಹೋರಾಟದ ಫಲವಾಗಿ ಕೆಎಂಎಫ್ ಹಾಗೂ ನೀರಿನ ಅನೇಕ ಸಮಸ್ಯೆಗಳು ಬಗೆಹರಿದಿವೆ ಎಂದರು.


ಬಮೂಲ್ ಅಧ್ಯಕ್ಷ ನರಸಿಂಹ ಮೂರ್ತಿ ಮಾತನಾಡಿ ಬಮೂಲ್ ನಿಂದ ಹೈನುಗಾರರಿಗೆ ಅನೇಕ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಬಹುತೇಕ ಎಲ್ಲಾ ಸಲಕರಣೆಗಳಿಗೆ ವಿನಾಯಿತಿ ನೀಡಿದ್ದು, ಅವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಹಸುವಿಗೆ ಮತ್ತು ರೈತರಿಗೆ ವಿಮಾಯೋಜನೆ ಸೇರಿದಂತೆ ಅನೇಕ ಸವಲತ್ತುಗಳನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.


ಇದೇ ವೇಳೆ ತಾಲ್ಲೂಕಿನ ಸರಿ ಸುಮಾರು ಹದಿನೆಂಟು ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೆನಪಿನ ಕಾಣಿಕೆ, ಶಾಶ್ವತ ಅಂಗವಿಕಲರಿಗೆ ಚೆಕ್, ಕೆಲ ಶಾಲಾಕಾಲೇಜುಗಳಿಗೆ ಅಗತ್ಯ ಉಪಕರಣ ಹಾಗೂ ವಾಟರ್ ಫಿಲ್ಟರ್, ಹಾಲು ಉತ್ಪಾದಕರ ಸಹಕಾರ ಸಂಘ ಗಳಿಗೆ ಗಣಕಯಂತ್ರ, ಸದಸ್ಯರ ಮರಣ ಪರಿಹಾರ ಚೆಕ್, ಸಕ್ರಿಯ ಸದಸ್ಯರು/ಸಿಬ್ಬಂದಿ ಹಾಗೂ ಅವರ ಅವಲಂಬಿತರಿಗೆ ವೈದ್ಯಕೀಯ ಮರುಪಾವತಿ ಚೆಕ್, ಪ್ರಕೃತಿ ವಿಕೋಪ, ತಿರಸ್ಕೃತಗೊಂಡ ರಾಸು ವಿಮಾ ಕ್ಲೈಂಗಳಿಗೆ ಚೆಕ್, ಉತ್ತಮ ಮಿಶ್ರ ತಳಿಯ ಕರುಗಳಿಗೆ ಬಹುಮಾನ, ಮಾದರಿ ಹೈನು ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನ ಮತ್ತು ಮ ಹಾ ಉ ಸ ಸಂಘಗಳ ಅಭಿವೃದ್ಧಿಗೆ ಅನುದಾನದ ಚೆಕ್ ನ್ನು ಸಾಂಕೇತಿಕವಾಗಿ ವಿತರಿಸಲಾಯಿತು.


ರೈತರಿಗೆ, ಹೈನುಗಾರಿಕೆ ಗೆ ಸಂಬಂಧಿಸಿದ ಬಹುತೇಕ ಎಲ್ಲಾ ಇಲಾಖೆಗಳು, ರೈತೋತ್ಪನ್ನ ತಯಾರಿಕೆಯ ಕಂಪನಿಗಳು ಉಪಯುಕ್ತ ಸಲಕರಣೆಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದು ಕೊಳ್ಳುವ ಗ್ರಾಹಕರಿಗೆ ರಿಯಾಯಿತಿ ಹಾಗೂ ಉಡುಗೊರೆಗಳನ್ನು ಕೊಡುಗೆಯಾಗಿ ನೀಡಿದವು.


ಇಪ್ಪತ್ತಕ್ಕೂ ಹೆಚ್ಚು ರೀತಿಯ ಕಾಯಿಲೆಗಳಿಗೆ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಿದ್ದು ಜನರು ಸದುಪಯೋಗಪಡಿಸಿಕೊಂಡರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೀಲರ್ ಗಳ ವಿರುದ್ಧ ಹೂಂಕರಿಸಿದ ಪೋಲೀಸ್ ಅಧಿಕಾರಿ ಓಂಪ್ರಕಾಶ್
ರೀಲರ್ ಗಳ ವಿರುದ್ಧ ಹೂಂಕರಿಸಿದ ಪೋಲೀಸ್ ಅಧಿಕಾರಿ ಓಂಪ್ರಕಾಶ್

ಚನ್ನಪಟ್ಟಣ:ಏ/೦೭/೨೦/ಮಂಗಳವಾರ. ನಿಮ್ಮ ಅಭಿಪ್ರಾಯ ಏನಿದ್ದರೂ ಹರಾಜು ಆದ ನಂತರ ಮಾಡಿ, ನೀವು ಬರೋವರೆಗೂ‌ ಹರಾಜು ಆಗಲ್ಲ ಅಂದರೆ ಏನರ್ಥ, ರೈತರ ಕಷ್

ಇಂದಿನಿಂದ ವಹಿವಾಟು ಪುನಾರಾರಂಭಿಸಿದ ಏಷ್ಯಾದ ಬಹುದೊಡ್ಡ ರೇಷ್ಮೆ ಮಾರುಕಟ್ಟೆ
ಇಂದಿನಿಂದ ವಹಿವಾಟು ಪುನಾರಾರಂಭಿಸಿದ ಏಷ್ಯಾದ ಬಹುದೊಡ್ಡ ರೇಷ್ಮೆ ಮಾರುಕಟ್ಟೆ

ರಾಮನಗರ:ಏ/೦೨/೨೦/ಗುರುವಾರ. ಕೊರೊನಾ ವೈರಸ್ ನಿಂದ ಇಡೀ ಕರ್ನಾಟಕವೇ ಲಾಕ್ ಡೌನ್ ಆದ ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸದುದ್ದೇಶದಿಂದ ಏಷ್ಯಾ

ರೈತರ ಜಮೀನಿಗೆ ತೆರಳಿ ಕೃಷಿ ಉತ್ಪನ್ನ ಖರೀದಿಸಿ ಕುಮಾರಸ್ವಾಮಿ
ರೈತರ ಜಮೀನಿಗೆ ತೆರಳಿ ಕೃಷಿ ಉತ್ಪನ್ನ ಖರೀದಿಸಿ ಕುಮಾರಸ್ವಾಮಿ

ರಾಮನಗರ:ಏ/೦೧/೨೦. ಅಧಿಕಾರಿಗಳು ನೇರವಾಗಿ ರೈತರ ಜಮೀನಿಗೆ ಹೋಗಿ‌ ಅವರು ಬೆಳೆದಿರುವ ಬೆಳೆಯನ್ನು ಖರೀದಿಸಿ ಎಂದು ಚನ್ನಪಟ್ಟಣ ಕ್ಷೇತ್ರದ ಶಾಸಕ, ಮಾ

ಕೃಷಿ ಭೂಮಿ ಕಿತ್ತುಕೊಂಡು ರೈತರನ್ನೂ ನಿರ್ಗತಿಕರಾಗಿ ಮಾಡಲೊರಟಿರುವ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ ಸಿ ಪುಟ್ಟಸ್ವಾಮಿ
ಕೃಷಿ ಭೂಮಿ ಕಿತ್ತುಕೊಂಡು ರೈತರನ್ನೂ ನಿರ್ಗತಿಕರಾಗಿ ಮಾಡಲೊರಟಿರುವ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ ಸಿ ಪುಟ್ಟಸ್ವಾಮಿ

ಚನ್ನಪಟ್ಟಣ: ರಾಜ್ಯ ಸರ್ಕಾರವು ಕೃಷಿ ಭೂಮಿಗೆ ಸಂಬಂಧಿಸಿದ ಸೆಕ್ಷನ್ ೭೯ ಎ ಮತ್ತು ಬಿ ಯನ್ನು ರದ್ದು ಪಡಿಸಿ ಅನ್ನದಾತನ ಬೆನ್ನಿಗೆ ಬರೆ ಎಳೆದು ಬಲಾ

ಗುಬ್ಬಿ ತಾಲ್ಲೂಕು ದಂಡಾಧಿಕಾರಿ ವಜಾಗೊಳಿದಸುವಂತೆ ಕಕಜವೇ ಪ್ರತಿಭಟನೆ
ಗುಬ್ಬಿ ತಾಲ್ಲೂಕು ದಂಡಾಧಿಕಾರಿ ವಜಾಗೊಳಿದಸುವಂತೆ ಕಕಜವೇ ಪ್ರತಿಭಟನೆ

ಚನ್ನಪಟ್ಟಣ: ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ತಿಪ್ಪೂರು ಗ್ರಾಮದಲ್ಲಿ ಗ್ರಾಮ ಲೆಕ್ಕಿಗ, ಕಂದಾಯ

ವಿಶ್ವದಲ್ಲಿ ರೈತನೋರ್ವನೇ ಶ್ರೀಮಂತ, ನಾನು ಬಡ ರೈತ ಎಂಬ ಕೀಳರಿಮೆಯಿಂದ ಹೊರಬನ್ನಿ ಡಾ ವೀರೇಂದ್ರ ಹೆಗ್ಗಡೆ
ವಿಶ್ವದಲ್ಲಿ ರೈತನೋರ್ವನೇ ಶ್ರೀಮಂತ, ನಾನು ಬಡ ರೈತ ಎಂಬ ಕೀಳರಿಮೆಯಿಂದ ಹೊರಬನ್ನಿ ಡಾ ವೀರೇಂದ್ರ ಹೆಗ್ಗಡೆ

ಚನ್ನಪಟ್ಟಣ: ನಗರದ ಹೊರವಲಯದಲ್ಲಿರುವ ದೊಡ್ಡಮಳೂರು ಗ್ರಾಮದ ಚೌಡೇಶ್ವರಿ ಕಲ್ಯಾಣ ಮಂಟಪದ ಬಳಿಯ ಬಯಲು ಪ್ರದೇಶದಲ್ಲಿ ಬೃಹತ್ ಪೆಂಡಾಲ್ ನಡಿಯಲ್ಲಿ ಒಂ

ತಂತ್ರಜ್ಞಾನವು ಕೇವಲ ವ್ಯಾಪಾರೀಕರಣವಾಗದೇ ಅನ್ನದಾತನ ಪರವಾಗಿರಬೇಕು. ಬಿ ಟಿ ಜಯಮುದ್ದಪ್ಪ
ತಂತ್ರಜ್ಞಾನವು ಕೇವಲ ವ್ಯಾಪಾರೀಕರಣವಾಗದೇ ಅನ್ನದಾತನ ಪರವಾಗಿರಬೇಕು. ಬಿ ಟಿ ಜಯಮುದ್ದಪ್ಪ

ಚನ್ನಪಟ್ಟಣ: ನೂತನ ತಂತ್ರಜ್ಞಾನ ಎನ್ನುವುದು ಉಳ್ಳವರ, ವಿದೇಶಿಗರ ಪಾಲಾಗದೇ ದೇಶಕ್ಕೆ ಅನ್ನ ನೀಡುವ ದೇಶದ ಬೆನ್ನೆಲುಬು ಎಂದೆನಿಸಿಕೊಂಡ ರೈತಾಪಿ ವರ

ರೈತರ ಬೆಲೆಬಾಳುವ ಭೂಮಿ ಕಸಿಯುವ ತಂತ್ರ
ರೈತರ ಬೆಲೆಬಾಳುವ ಭೂಮಿ ಕಸಿಯುವ ತಂತ್ರ

ಚನ್ನಪಟ್ಟಣ:ಫೆ/೧೩/೨೦/ಗುರುವಾರ.


ರೈತರ ರಕ್ಷಣೆಯನ್ನು ಕಾಯುವ ಬದಲು ಅವರ ಭಕ್ಷಣೆಗಾಗಿಯೇ ನಿಂತಿರುವ ಬೀಜಕಾಯಿದೆ, ಗುತ್ತಿಗೆ ಕೃಷಿ ಹೆಸರಿನಲ್ಲಿ ರೈತರ ಒಕ್ಕಲೆಬ್ಬಿಸುವ ಹುನ್ನಾರ, ರಾಮನಗರ ಜಿಲ್ಲೆ ನುಂಗಿ ನೀರು ಕುಡಿದು ತನ

ರೈತ ಸಂಘಟನೆಗಳು ಒಗ್ಗೂಡಬೇಕು, ಯುವಕರು ಮುಂದಾಳತ್ವ ವಹಿಸಬೇಕು ಸುನೀತಾ ಪುಟ್ಟಣ್ಣಯ್ಯ
ರೈತ ಸಂಘಟನೆಗಳು ಒಗ್ಗೂಡಬೇಕು, ಯುವಕರು ಮುಂದಾಳತ್ವ ವಹಿಸಬೇಕು ಸುನೀತಾ ಪುಟ್ಟಣ್ಣಯ್ಯ

ಚನ್ನಪಟ್ಟಣ.ಫೆ.೧೩:


ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯದಲ್ಲಿ ಒಂದೇ ಇರಬೇಕು, ಈಗಿರುವ ಹಲವು ಬಣಗಳು ಒಗ್ಗೂಡಬೇಕು. ವಿಚಾರ ವಿನಿಮಯವಾಗಬೇಕು, ಮೂಲ ಉದ್ದೇಶ ಗಳನ್ನು ಅರಿತು ಯುವಕ ರನ್ನು ಸಂಘಟಿಸಿ ರೈತ ಸಂಘಟನೆಯನ್ನು ಬಲಪಡಿ ಸ

ಕರ್ನಾಟಕ ರಾಜ್ಯ ರೈತ ಸಂಘ ಸಂಘ(ಗ)ಗಳಾಗಿದ್ದೆ ಸಾಧನೆಯೇ!?
ಕರ್ನಾಟಕ ರಾಜ್ಯ ರೈತ ಸಂಘ ಸಂಘ(ಗ)ಗಳಾಗಿದ್ದೆ ಸಾಧನೆಯೇ!?

ಎಂಭತ್ತರ ದಶಕದ ಕರ್ನಾಟಕ ರಾಜ್ಯ ರೈತ ಸಂಘ ೨೦೧೦ ನೆಯ ಇಸವಿ ಹೊತ್ತಿಗೆ ಸಿಟಿಲೊಡೆದು, ೨೦೨೦ ನೆಯ ಇಸವಿಯ ಹೊತ್ತಿಗೆ ರೆಂಬೆಕೊಂಬೆಗಳಾಗಿ ಕೆಲ ಮುಂದಾಳುಗಳು ನಗರ ಸೇರಿ ವಿಧಾನಸೌಧದ ಒಳಹೊಕ್ಕು ತಮ್ಮ ಬೇಳೆ ಬೇಯ

Top Stories »  


Top ↑