ಕೃಷಿ ಯಂತ್ರಧಾರಾ ಕೇಂದ್ರಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ

ಚನ್ನಪಟ್ಟಣ:ಜೂ/೦೩/೨೦/ಬುಧವಾರ. ಯಾರನ್ನೂ ನಂಬಿ ರಾಜಕೀಯ ಮಾಡುವುದಿಲ್ಲ. ನಂಬಿದ ಕಾರ್ಯಕರ್ತರನ್ನು ಕೈಬಿಡುವುದೂ ಇಲ್ಲ. ಇನ್ನು ಮುಂದೆ ಯಾರ ಹಂಗಿನಲ್ಲೂ ಸರ್ಕಾರ ರಚಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕ್ಷೇತ್ರದ ಶಾಸಕ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ತಿರುಗೇಟು ನೀಡಿದರು. ಅವರು ತಾಲ್ಲೂಕಿನ ಕೃಷಿ ಇಲಾಖೆಯ ವತಿಯಿಂದ, ತಾಲ್ಲೂಕಿನ ಸುಣ್ಣಘಟ್ಟದಲ್ಲಿ ಕೃಷಿ ಯಂತ್ರೋಪಕರಣ ಗಳನ್ನು ಬಾಡಿಗೆಗೆ ನೀಡುವ ‘ಕೃಷಿಯಂತ್ರಧಾರಾ ಕೇಂದ್ರ’ ವನ್ನು ಉದ್ಘಾಟಿಸಿದ ನಂತರ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಮಾತನಾಡಿದರು.
ರೈತರ ಬೆಳೆಯನ್ನು ಉಳಿಸುವ ಜೊತೆಗೆ ಪ್ರಾಣ ರಕ್ಷಣೆ ಮಾಡುವ ಹೊಣೆಯು ಸರ್ಕಾರದ ಹೊಣೆಯಾಗಿದೆ.
ಇತ್ತೀಚಿಗೆ ಜಿಲ್ಲೆಯಲ್ಲಿ ವನ್ಯ ಜೀವಿಗಳ ದಾಳಿಯಿಂದ ಜನರ ಪ್ರಾಣ ಹಾನಿಯಾಗುತ್ತಿದೆ. ಪಟ್ಟಣದಲ್ಲಿ ನಡೆದ ಕರಡಿ ದಾಳಿ ಯಿಂದ ನಗರಸಭೆ ಮಾಜಿ ಸದಸ್ಯೆ ಸಾಕಮ್ಮ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಇದು ನನಗೆ ನೋವು ತಂದಿದೆ. ಅವರನ್ನು ಉಳಿ ಸಲು ನನ್ನ ಕೈಯಲ್ಲಿ ಆದು ದ್ದನ್ನುಮಾಡಿದ್ದೇನೆ ಎಂದರು.
ಮಾಗಡಿ ತಾಲ್ಲೂಕಿನಲ್ಲಿ ಚಿರತೆ ದಾಳಿಯಿಂದ ಇಬ್ಬರ ಪ್ರಾಣ ಹರಣವಾಗಿದೆ. ಈ ಸರ್ಕಾರದ ಅರಣ್ಯ ಅಧಿಕಾರಿಗಳು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ಕುಟುಕಿದರು.
ಸರಕಾರ ಕಾಟಾಚಾರಕ್ಕೆ ರೈತರ ಪರ ಕಾಳಜಿ ಪ್ರದರ್ಶಿಸಬಾರದು, ಬಿರುಗಾಳಿ ಮಳೆಯಿಂದ ಬಾಧಿತರಾದ ರೈತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ಒದಗಿಸಿಕೊಡಬೇಕು. ವನ್ಯಜೀವಿಗಳ ದಾಳಿ ತಪ್ಪಿಸಲು ತಮ್ಮ ಸರ್ಕಾರವಿದ್ದಾಗ ರೂಪಿಸಿದ್ದ ೧೦೦ ಕೋಟಿ ಯೋಜನೆಯನ್ನು ಜಾರಿಗೆ ತಂದು ಅರಣ್ಯ ಪ್ರದೇಶದ ಗಡಿಯಲ್ಲಿ ತಂತಿ ಬೀಲಿ ನಿರ್ಮಿಸಬೇಕು ಎಂದರು.
ಟ್ರಾಕ್ಟರ್ ಚಲಾಯಿಸುವ ಮೂಲಕ ಶಾಸಕ ಕುಮಾರ ಸ್ವಾಮಿಯವರು ಸೇವಾ ಕೇಂದ್ರಕ್ಕೆ ಚಾಲನೆಯನ್ನು ನೀಡಿದರು. ಸಂದರ್ಭದಲ್ಲಿ ನಾನು ರಾಜಕೀಯಕ್ಕೆ ಬರುವ ಮೊದಲು ರೈತ ನಾಗಿ ಟ್ರಾಕ್ಟರ್‌ನಲ್ಲಿ ಉಳುಮೆ ಮಾಡಿದ್ದೇನೆ, ಇತ್ತೀಚಿಗೆ ಮರೆತಿದ್ದೇನೆ ಎಂದು ನಿಧಾನಕ್ಕೆ ಟ್ರಾಕ್ಟರ್ ಚಾಲನೆ ಮಾಡಿದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in agriculture »

ಕಿಸಾನ್ ಯೋಜನೆಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ತಹಶಿಲ್ದಾರ್ ನಾಗೇಶ್ ಕರೆ.
ಚನ್ನಪಟ್ಟಣ:ಡಿ/28/20/ಸೋಮವಾರ. ಕಿಸಾನ್ ವತಿಯಿಂದ ಬಹಳಷ್ಟು ಯೋಜನೆಗಳಿದ್ದು ರೈತರು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಾಲ್ಲೂಕಿನ ದಂಡಾ

ಇರುವ ಜಮೀನು ಬಿಟ್ಟು ಪರರ ಬಳಿ ಕೂಲಿ ಮಾಡುವ ಬದಲು ಸಾವಯವ ಕೃಷಿ ಮಾಡಿ ತಿಂಗಳಿಗೆ ಲಕ್ಷ ರೂಪಾಯಿ ಗಳಿಸಿ ಮಂಡ್ಯ ಆರ್ಗಾನಿಕ್ ಸಂಸ್ಥಾಪಕ ಮಧುಚಂದನ್
ಚನ್ನಪಟ್ಟಣ:ನ/07/20/ಶನಿವಾರ. ವ್ವವಸಾಯ ಮಾಡಲು ದೊಡ್ಡ ಮಟ್ಟದ ಭೂ ಒಡೆಯನೇ ಆಗಬೇಕೆಂದಿಲ್ಲ. ಕನಿಷ್ಠ ಅರ್ಧ ಎಕರೆ ಭೂಮಿ ಇದ್ದು ಪ್ರಾಮಾಣಿಕವಾಗಿ ಸ

ಮಹಾ ಮಳೆಗೆ ಮಕಾಡೆ ಮಲಗಿದ ರಾಗಿ ಬೆಳೆ
ಚನ್ನಪಟ್ಟಣ:ಅ/23/20/ಶುಕ್ರವಾರ. ಕಳೆದ ಮೂರು ತಿಂಗಳಿನಿಂದ ಕಷ್ಟಪಟ್ಟು ಬೆಳೆದ ರಾಗಿ ಬೆಳೆಯು ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯ ರಭ

ಚನ್ನಪಟ್ಟಣ ತಾಲ್ಲೂಕಿನಲ್ಲಿ ಒಂಭತ್ತಕ್ಕೂ ಹೆಚ್ಚು ಕಾಡಾನೆಗಳಿಂದ ದಾಳಿ: ಬೆಳೆ ನಾಶ
ಚನ್ನಪಟ್ಟಣ:ಅ/10/20/ಶನಿವಾರ. ತಾಲ್ಲೂಕಿನ ಬಿವಿ ಹಳ್ಳಿ, ಅರಳಾಳುಸಂದ್ರ, ವಿಠಲೇನಹಳ್ಳಿ ಮೆಣಸಿಗನಹಳ್ಳಿ, ಭೂಹಳ್ಳಿ ಮತ್ತು ಸಿಂಗರಾಜಪುರ ಸೇರಿದಂತ

ರೈತ ಯುವಕರಿಗೆ ಮಾದರಿಯಾದ ಮಾಗಡಿಯ ಜೈನ ಸಮುದಾಯದ ಯುವಕ ಭರತ್ ಜೈನ್
ಮಾಗಡಿ:ಅ/05/20/ಸೋಮವಾರ. ಶೇಟು ಅಥವಾ ಮಾರ್ವಾಡಿ ಅಂದ್ರೆ ಅವರೊಬ್ಬ ಲಾಭ ಮಾಡುವ ವ್ಯಾಪಾರಸ್ಥ ಎಂದೇ ಎಲ್ಲರೂ ಬಣ್ಣಿಸುತ್ತಾರೆ. ಇದನ್ನೂ ಅಲ್ಲಗಳೆಯ

ಎಪಿಎಂಸಿ ಮತ್ತು ಭೂಸುಧಾರಣಾ ಕಾಯ್ದೆ ವಿರೋಧಿಸಿ ಪ್ರತಿಭಟನೆ. ರಾಮನಗರದಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
ರಾಮನಗರ:ಸೆ/28/20/ಸೋಮವಾರ. ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆಗಳಿಗೆ ಸರ್ಕಾರ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ

ಯಶಸ್ವಿಯಾದ ಬಂದ್: ಸಂಪೂರ್ಣ ಸ್ತಬ್ದವಾದ ನಗರ
ಚನ್ನಪಟ್ಟಣ:ಸೆ/28/20/ಸೋಮವಾರ. ರೈತಸಂಘ ಸೇರಿದಂತೆ ಅನೇಕ ಸಂಘಟನೆಗಳು ಇಂದು ಬಂದ್ ಗೆ ಕರೆನೀಡಿದ್ದು ನಗರದಲ್ಲಿ ಯಶಸ್ವಿಗೊಂಡಿತು.

ಯೂರಿಯಾ, ಅಗತ್ಯಕ್ಕಿಂತಲೂ ಹೆಚ್ಚಿನ ಪೂರೈಕೆಯಾಗಿದ್ದರೂ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ರೈತ. ಕಾರಣವೇನು ?
ಚನ್ನಪಟ್ಟಣ: ಸೆ/26/20/ಶನಿವಾರ. ತಾಲ್ಲೂಕಿನಲ್ಲಿ ಮಳೆಗಾಲದ ತಿಂಗಳು ಅಂದರೆ ಸೆಪ್ಟೆಂಬರ್ ತಿಂಗಳಿಗೆ, ಈಗಾಗಲೇ ಬಿತ್ತನೆ ಮಾಡಿರುವ ತೋಟಗಾರಿಕೆ ಮತ

ರೈತರ ಕೂಗಿಗೆ ಸರ್ಕಾರ ಸ್ಪಂದಿಸದಿದ್ದರೆ, ಪರ್ಯಾಯ ಅಧಿವೇಶನ ಮಾಡಿ. ವಿಧಾನಸೌಧ ಮುಚ್ಚುತ್ತೇವೆ. ಬಡಗಲಪುರ ನಾಗೇಂದ್ರ

ರಸಗೊಬ್ಬರಕ್ಕೆ ಹಾತೊರೆಯುತ್ತಿರುವ ರೈತರು. ಸಕಾಲದಲ್ಲಿ ಸ್ಪಂದಿಸದ ಇಲಾಖೆ
ಚನ್ನಪಟ್ಟಣ:ಸೆ/14/20/ಸೋಮವಾರ. ಇತ್ತೀಚೆಗೆ ಒಳ್ಳೆಯ ಮಳೆಯಾಗುತ್ತಿದ್ದು, ತಾಲೂಕಿನಾದ್ಯಂತ ರಾಗಿ ಸೇರಿದಂತೆ ಇನ್ನಿತರ ಬೆಳೆಗಳನ್ನು ರೈತರು ಬಿತ್ತ
ಪ್ರತಿಕ್ರಿಯೆಗಳು