Tel: 7676775624 | Mail: info@yellowandred.in

Language: EN KAN

    Follow us :


ಭಾಗ-೧: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು

Posted date: 19 Jun, 2020

Powered by:     Yellow and Red

ಭಾಗ-೧: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು

(ರೈತರ ಹಿತದೃಷ್ಟಿ ಮತ್ತು ಮುಂದಿನ ಪೀಳಿಗೆಯನ್ನು ಕಡೆಗಣಿಸಿ, ರಾಜಕಾರಣಿಗಳು ಮತ್ತು ಕಾರ್ಪೋರೆಟ್ ಸಂಸ್ಥೆಗಳ ಅನುಕೂಲಕ್ಕೆ ತಕ್ಕಂತೆ, ಆಗಿಂದಾಗ್ಗೆ ಕೃಷಿ ಭೂಮಿಗೆ ತಿದ್ದುಪಡಿ ತರುತ್ತಿರುವ ಜನಪ್ರತಿನಿಧಿಗಳ ವಿರುದ್ಧ "ಬೆಂಗಳೂರಿನ ಸಹಜ ಸಾಗುವಳಿ" ಎಂಬ ದ್ವೈಮಾಸಿಕ ಪತ್ರಿಕೆಯ ಸಂಪಾದಕಿ ಹಾಗೂ ರೈತ ಹೋರಾಟಗಾರ್ತಿ "ವಿ. ಗಾಯತ್ರಿ" ರವರು ನಮ್ಮ ಪತ್ರಿಕೆಗೆ ಭೂಸುಧಾರಣಾ ಕಾಯ್ದೆಯ ತಿದ್ದುಪಡಿಗೆ ಮುನ್ನುಡಿ ಬರೆದಿರುವ ರಾಜ್ಯ ಸರ್ಕಾರದ ನಿಲುವು ಖಂಡಿಸಿ ಹಾಗೂ ಕೃಷಿ ಭೂಮಿಯ ವರದಾನದ ಬಗ್ಗೆ ತಮ್ಮ ತೀಕ್ಷ್ಣವಾದ ವಿಮರ್ಶೆಯನ್ನು ಕಟ್ಟಿಕೊಟ್ಟಿದ್ದಾರೆ.)


‘ಭೂಸುಧಾರಣಾ ಕಾಯ್ದೆಗೆ ಸರ್ಕಾರ ತಿದ್ದುಪಡಿ ಮಾಡಿ, ಯಾರು ಬೇಕಾದರೂ ಕೃಷಿ ಭೂಮಿ ಕೊಳ್ಳಬಹುದು ಎಂದಾಗಿಬಿಟ್ಟರೆ ಆ ಪರಿಸ್ಥಿತಿಯನ್ನು  ಊಹಿಸಲಿಕ್ಕೇ ಸಾಧ್ಯವಾಗುವುದಿಲ್ಲ.

ಯಾವೋನಾದರೂ ಬಂಡವಾಳಗಾರ ಬಂದು ನಮ್ಮ ಭೂಮಿಗೆ ಒಂದಕ್ಕೆರಡು ಬೆಲೆ ಕಟ್ಟಿಬಿಟ್ಟರೆ ನಮ್ಮ ಸುತ್ತಮುತ್ತ ಅನೇಕ ರೈತರು ಭೂಮಿ ಮಾರಿ ಬಿಡುತ್ತಾರೆ. ಆಗ ಮಧ್ಯದಲ್ಲಿ ಸೇರಿಕೊಂಡ ನಾನೂ ಮಾರಾಟ ಮಾಡದೆ ಬೇರೆ ದಾರಿಯೇ ಇರುವುದಿಲ್ಲ’. ಮೈಸೂರು ಭಾಗದ ರಾಷ್ಟ ಪ್ರಶಸ್ತಿ ವಿಜೇತ ಸಾವಯವ ಕೃಷಿಕರೊಬ್ಬರು ಬಹಳ ನೋವಿನಿಂದ ಹೇಳಿದ ಮಾತಿದು.* ಅವರ ಕುಟುಂಬ ಎಷ್ಟೋ ತಲೆಮಾರುಗಳಿಂದ ಅಲ್ಲಿ ಬೇಸಾಯ ಮಾಡುತ್ತಾ ಬಂದಿದೆ. ಭೂಮಿ ಮಾರಾಟ ಮಾಡುವ ಒತ್ತಡಕ್ಕೆ ಸಿಲುಕುವ ರೈತರ ಅಸಹಾಯಕತೆ, ಅವರು ಒಳಗಾಗುವ ಆಘಾತ ಊಹಿಸಲಸಾಧ್ಯ. ಈಗ ಯಾರು ಬೇಕಾದರೂ ಏಕ್‌ದಂ ೨೧೬ ಎಕರೆ ಭೂಮಿ ಸರಾಗವಾಗಿ ಕೊಂಡುಬಿಡಬಹುದು ಎನ್ನುವ ವಿಚಾರ ರೈತರಲ್ಲಿ ನಿಜಕ್ಕೂ ದಿಗಿಲು ಹುಟ್ಟಿಸುತ್ತಿದೆ.


ಕೃಷಿಯಲ್ಲಿ ಎಲ್ಲವೂ ಸರಿಯಾಗಿದ್ದಿದ್ದರೆ, ಕೃಷಿಯನ್ನು ನೆಚ್ಚಿ ಬದುಕಬಹುದೆನ್ನುವ ಭರವಸೆಯನ್ನು ಮೂಡಿಸಿದ್ದರೆ  ಯಾವ ರೈತರೂ ಜಮೀನು ಮಾರಾಟ ಮಾಡುವ ಒತ್ತಡಕ್ಕೆ ಒಳಗಾಗುತ್ತಿರಲಿಲ್ಲ. ಆದರೆ, ಕೃಷಿ ಲಾಭದಾಯಕವಲ್ಲ; ಅದರಲ್ಲೂ ಮಳೆಯಾಶ್ರಿತ ಜಮೀನುಗಳು, ಸಣ್ಣ ಹಿಡುವಳಿ ಜಮೀನುಗಳು ಆದಾಯ ತರಲಾರವು; ಇಂತಹ ರೈತರು ಕೃಷಿಯನ್ನು ಬಿಡಬೇಕು ಎಂದು ದಶಕಕ್ಕೂ ಹೆಚ್ಚು ಕಾಲದಿಂದ ರೈತರ ಮೇಲೆ ತೀವ್ರ ಒತ್ತಡ ತರಲಾಗುತ್ತಿದೆ. ಸರ್ಕಾರಗಳು, ರಾಜಕಾರಣಿಗಳು, ಅಧ್ಯಯನ ಸಂಸ್ಥೆಗಳು, ವಿದ್ವಾಂಸರು ಎಲ್ಲರೂ ಇದನ್ನೇ ಹೇಳುತ್ತಾ ಬರುತ್ತಿದ್ದಾರೆ. ಇಲ್ಲಿ ರೈತರನ್ನು ರಕ್ಷಿಸಬೇಕಾಗಿದ್ದ ಕೃಷಿ ವಿಶ್ವವಿದ್ಯಾಲಯಗಳು, ಸಂಬಂಧಪಟ್ಟ ಇಲಾಖೆಗಳು ರೈತರಿಂದ ಸಂಪೂರ್ಣ ಬೇರ್ಪಟ್ಟು ತಮ್ಮ ಪಾಡಿಗೆ ಹಾಯಾಗಿವೆ. ಇವರು ರೈತರೊಡನೆ ಸಹಪಾಠಿಗಳಾಗಿ ಬೆರೆತು, ಪರಿಸರದೊಂದಿಗೆ ಕೆಲಸ ಮಾಡಿದ್ದರೆ ಇಂದು ಕೃಷಿ ಲೋಕದ ಸ್ವರೂಪವೇ ಬೇರೆಯಾಗಿರುತ್ತಿತ್ತು.


ಆಳುವ ವರ್ಗದ ಎಲ್ಲಾ ಅಂಗಗಳೂ ಸೇರಿಕೊಂಡು ಕೃಷಿ ಕ್ಷೇತ್ರವನ್ನು ಅಧೋಗತಿಗೆ ತಳ್ಳಿ ಈಗ, ‘ನಿಮಗೆ ಕೃಷಿ ಲಾಭದಾಯಕವಲ್ಲ, ನೀವು ಜಮೀನು ಮಾರಿಕೊಳ್ಳಿ, ಅದಕ್ಕಾಗಿ ಹೆಚ್ಚು ದುಡ್ಡು ಕೊಡುವವರನ್ನು ಕರೆತರುತ್ತಿದ್ದೇವೆ' ಎನ್ನುತ್ತಿದ್ದಾರೆ. ಇದಕ್ಕೂ ಮೊದಲು ‘ಮಾದರಿ ಗುತ್ತಿಗೆ ಕಾಯಿದೆ- ೨೦೧೬ ನ್ನು ತಂದು, ‘ರೈತರು ಬೇಸಾಯ ಮಾಡದೆ ಪಾಳು ಬಿಟ್ಟಿರುವ ಭೂಮಿಯನ್ನು ಗುತ್ತಿಗೆ ಕೊಡಿ’ ಎಂದು ಬೆದರಿಸಿದ ಸರ್ಕಾರ, ಈಗ ಅದನ್ನು ಮಾರಾಟ ಮಾಡಿ ಎನ್ನುತ್ತಿದೆ.


ಭೂ ಸುಧಾರಣಾ ಕಾಯಿದೆ ಎನ್ನುವುದು ಕರ್ನಾಟಕಕ್ಕೆ, ಒಂದು ಹೆಮ್ಮೆಯ ಕಿರೀಟವಿದ್ದಂತೆ. *‘ಉಳುವವನೇ ಭೂಮಿ ಒಡೆಯ’, ‘ರೈತರಲ್ಲದವರು ಕೃಷಿ ಭೂಮಿ ಖರೀದಿಸುವ ಹಾಗಿಲ್ಲ’* ಎಂಬೆರಡು ಅಂಶಗಳು ಸಣ್ಣ-ಸಾಮಾನ್ಯ ರೈತರಿಗೆ ಶ್ರೀರಕ್ಷೆಯಿದ್ದಂತೆ.  ರೈತರ ಸುದೀರ್ಘ ಹೋರಾಟ, ತ್ಯಾಗಗಳ ಫಲ ಇದು. ಅದನ್ನು ಒಂದೇ ಬೀಸಿಗೆ ನೆಲಸಮ ಮಾಡಿಬಿಡುವುದೆಂದರೆ!. ಈ ಪ್ರಕ್ರಿಯೆ ಇವತ್ತಿನದಲ್ಲ. ಈ ಹಿಂದೆ ಅಧಿಕಾರದಲ್ಲಿದ್ದ ಎಲ್ಲಾ ರಾಜಕೀಯ ಪಕ್ಷಗಳು ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡಿವೆ. *ಮಾನ್ಯ ದೇವೇಗೌಡರು ಮುಖ್ಯಮಂತ್ರಿಗಳಿದ್ದಾಗ, ೧೯೯೫ ರಲ್ಲಿ ತಂದ ‘ಹೊಸ ಕೃಷಿ ನೀತಿ’ಯಲ್ಲಿಯೇ ಕೃಷಿಕರಲ್ಲದವರಿಗೆ ಕೃಷಿ ಭೂಮಿ ಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು.* *ಆದರೆ ಅದನ್ನು ಪುಷ್ಪ ಕೃಷಿ, ಅಕ್ವಾಕಲ್ಚರ್ (ಜಲಚರ ಸಾಕಣೆ)ಗಳಿಗೆ ಮಿತಿಗೊಳಿಸಲಾಗಿತ್ತು.* ಆಗ ಬೆಂಗಳೂರಿನ ಆಸುಪಾಸಿನಲ್ಲಿ ಹೂವು ಬೇಸಾಯದ ಹೆಸರಲ್ಲಿ ಕೃಷಿ ಭೂಮಿಗಳು ಬಿಕರಿಯಾದ ರೀತಿ ದಿಗಿಲು ಹುಟ್ಟಿಸುವಂತಿತ್ತು. ಆಗ ಬಂಡವಾಳಿಗರು ಕೊಂಡ ಜಮೀನುಗಳು ಈಗ ಲೇ-ಔಟ್‌ಗಳಾಗಿ ಬೆಂಗಳೂರಿನ ‘ಹಿರಿಮೆ’ಯ ಗರಿಗಳಾಗಿವೆ.* ಕೃಷಿ ಭೂಮಿ ಕೊಳ್ಳಲು ಇದ್ದ ಆದಾಯ ಮಿತಿಯನ್ನು ಎರಡು ಲಕ್ಷಕ್ಕೆ ಗೊತ್ತುಪಡಿಸಿದ್ದೂ ಆಗಲೇ.


ಮುಂದೆ ೨೦೧೪ ರಲ್ಲಿ ಮಾನ್ಯ *ಸಿದ್ಧರಾಮಯ್ಯನವರ ಸರ್ಕಾರ, ಕೃಷಿ ಭೂಮಿ ಕೊಳ್ಳಲು ಇದ್ದ ಆದಾಯ ಮಿತಿಯನ್ನು ಎರಡು ಲಕ್ಷದಿಂದ ಇಪ್ಪತ್ತೈದು ಲಕ್ಷಕ್ಕೆ ಏರಿಸಿತು. ಅದರ ಒಂದು ಫಲಶ್ರುತಿಯೆಂದರೆ, ಸೋಲಾರ್ ಫಲಕಗಳನ್ನು ಹಾಕುವ ನೆಪದಲ್ಲಿ ರೈತರ ಜಮೀನನ್ನು ವ್ಯಾಪಕವಾಗಿ ಕಬಳಿಸುವ ಪ್ರಕ್ರಿಯೆ ಪ್ರಾರಂಭವಾದದ್ದು.* ಇಪ್ಪತ್ತೈದು ವರ್ಷಗಳಷ್ಟು ದೀರ್ಘ ಕಾಲಿಕ ಗುತ್ತಿಗೆಗೆ ರೈತರ ಜಮೀನುಗಳನ್ನು ಪಡೆಯಲು ಬಂಡವಾಳಿಗರಿಗೆ ಅನುವು ಮಾಡಿಕೊಡಲಾಯಿತು. ರೈತರ ಮೇಲೆ ಇನ್ನಿಲ್ಲದ ಒತ್ತಡ ತಂದು ಇವರು ವಶಪಡಿಸಿಕೊಂಡಿರುವ ಈ ಜಮೀನುಗಳು ಇನ್ಯಾವತ್ತೂ ರೈತರ ಕೈಸೇರುವ ಪ್ರಶ್ನೆಯೇ ಇಲ್ಲ.



ವಿ. ಗಾಯತ್ರಿ, ಸಂಪಾದಕಿ,

‘ಸಹಜ ಸಾಗುವಳಿ’

ದ್ವೈಮಾಸಿಕ ಪತ್ರಿಕೆ


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ

ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ

ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ

ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ

ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ

ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ

ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್

ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ

ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು

ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು  ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್

ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ

ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ

ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ

ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ

ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ

ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.

ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ

ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ

ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ




ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ

Top Stories »  


Top ↑