Tel: 7676775624 | Mail: info@yellowandred.in

Language: EN KAN

    Follow us :


ರೈತ ಶಕ್ತಿ ಬಲಗೊಳ್ಳಲು ಮುಂಚೂಣಿಯಲ್ಲಿರುವವರು ಪ್ರಾಮಾಣಿಕರಾಗಿರಬೇಕು. ಅನಸೂಯಮ್ಮ

Posted date: 22 Jul, 2020

Powered by:     Yellow and Red

ರೈತ ಶಕ್ತಿ ಬಲಗೊಳ್ಳಲು ಮುಂಚೂಣಿಯಲ್ಲಿರುವವರು ಪ್ರಾಮಾಣಿಕರಾಗಿರಬೇಕು. ಅನಸೂಯಮ್ಮ

ಚನ್ನಪಟ್ಟಣ:ಜು/೨೨/೨೦/ಬುಧವಾರ. ಜುಲೈ ೨೧ ರಂದು ನರ ಗುಂದ-ನವಲುಗುಂದ ಪ್ರದೇಶದಲ್ಲಿ ರೈತರು ತಮ್ಮ ಹಕ್ಕುಗಳಿಗಾಗಿ, ಲೆವಿ ಪದ್ಧತಿ ಯನ್ನು ವಿರೋಧಿಸಿ ಗೋಲಿಬಾರಿಗೆ ಒಳಗಾದರು ಅವರ ಸ್ಮರಣಾರ್ಥ ಕಳೆದ ೪೦ ವರ್ಷಗಳಿಂದಲೂ ರೈತ ಹುತಾತ್ಮರ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ರಾಜ್ಯ ರೈತ ಸಂಘದ, ರಾಮನಗರ ಜಿಲ್ಲೆಯ ರೈತ ನಾಯಕರಾದ ಚೆಲುವಯ್ಯ ಅವರ ಪುಣ್ಯ ತಿಥಿಯ ಅಂಗ ವಾಗಿ ಇಲ್ಲಿ, ರೈತ ಹುತಾತ್ಮ ದಿನಾಚರಣೆಯನ್ನು ಆಚರಿಸಿ, ಸಂಘಟನೆಗೆ ಜೀವ ತುಂಬುತ್ತಾ ಬರುತ್ತಿರುವ ಕೆಲವರನ್ನು ಗೌರವಿಸುವ ಮೂಲಕ ಹುತಾತ್ಮರ ದಿನಾಚರಣೆ ಯನ್ನು ರಾಮನಗರ ಜಿಲ್ಲಾ ರೈತ ಸಂಘ ಆಚರಿಸಿತು.


ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಉಪಾಧ್ಯಕ್ಷೆಯಾದ ಅನಸೂಯಮ್ಮ ಅವರು ಚೆಲುವಯ್ಯ ರೈತ ಸಂಘ ಹಾಗೂ ರೈತರನ್ನು ತನ್ನ ಜೀವ ಎಂದುಕೊಂಡಿದ್ದವರು. ಶಿಸ್ತು ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದ ವ್ಯಕ್ತಿ ಎಂದು, ಅವರು ಮೌಢ್ಯಾಚಾರವನ್ನು ವಿರೋಧಿಸುತ್ತಿದ್ದರು, ಹಾಗಾಗಿ ಅವರ ಶ್ರೀಮತಿ ಯವರು, ಭವಿಷ್ಯದಲ್ಲಿ ಮಹಿಳೆಯರು ಪುರುಷರು ಸಮಾನರು ಹಾಗಾಗಿ ಯಾವುದೇ ಮೌಢ್ಯಾಚಾರ ವನ್ನು ಅನುಕರಣೆ ಮಾಡ ಬಾರದು ಎಂದು ಅವರಿಗೆ ಕುಂಕುಮ ಹಚ್ಚಿ, ಹೂ ಮೂಡಿಸಿದರು, ಎಲ್ಲರಂತೆ ಇರಲು ಸೂಚಿಸಿದರು.


ಈ ಸಮಾಜದಲ್ಲಿ ಮೌಢ್ಯತೆ ಕಂದಾಚಾರ, ಜಾತೀಯತೆ ಅಸಮಾನತೆ ತೊಲಗಬೇಕು ಎಂಬ ಕಾರಣದಿಂದಲೇ ರೈತ ಸಂಘ ಹುಟ್ಟಿಕೊಂಡಿದ್ದು, ಸಂವಿಧಾನದ ಆಶಯದಂತೆ ಸಮಾಜದಲ್ಲಿ ಸಮಾನತೆ ತರುವುದು ರೈತ ಸಂಘದ ಧ್ಯೇಯ. ರೈತರ ಹಿತ ಕಾಪಾಡುವುದು, ಅವರಿಗೆ ನ್ಯಾಯ ಒದಗಿಸಿ ಕೊಡುತ್ತೇನೆ ಎಂದು ಬರುವವರು ಶಿಸ್ತು, ಪ್ರಾಮಾಣಿಕತೆ ಮೈಗೂಡಿಸಿ ಕೊಂಡು ಆರೋಗ್ಯಕರ ಸಮಾಜ ನಿರ್ಮಾಣದ ಕಡೆಗೆ ಸಾಗಬೇಕು. ಪೌರೋಹಿತ್ಯಶಾಹಿಯಿಂದ ಪ್ರತಿ ಹಂತದಲ್ಲಿಯೂ ಜನ ಸಾಮಾನ್ಯರನ್ನು ಶೋಷಣೆ ಮಾಡುವ, ಜನರಿಗೆ ಇಲ್ಲದ್ದು ಹೇಳಿ ಮಾನಸಿಕವಾಗಿ ದುರ್ಬಲರನ್ನಾಗಿ ಮಾಡುವ ಪ್ರವೃತ್ತಿಯು ಬೆಳೆಯುತ್ತಿದೆ, ಅದಕ್ಕೆ ರೈತ ಸಂಘ ಅವಕಾಶವಿಲ್ಲದ ರೀತಿ ನೋಡಿಕೊಂಡಿದೆ. ಅದು ಮುಂದುವರಿಯಬೇಕು ಎಂದರು.


ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಸು.ತ.ರಾಮೇಗೌಡರು ಮಾತನಾಡಿ, ರೈತ ಸಂಘದ ಆರಂಭ ಕಾಲದಿಂದಲೂ ಚೆಲುವಯ್ಯ ಬದ್ಧತೆಯಿಂದ ಶಿಸ್ತಿನ ಸೇನಾನಿಯಾಗಿ ದುಡಿದವರು. ನಾಯಕರಲ್ಲಿ ಲೋಪದೋಷ ಕಂಡರೂ ನೇರಕ್ಕೆ ಹೇಳುತ್ತಿದ್ದ ದ್ರಾಷ್ಟಿಕೆ ಇತ್ತು ಎಂದರು.


೧೯೮೦ರಲ್ಲಿ ರೈತ ಸಂಘ ಹುಟ್ಟುವ ಮೊದಲೇ ಈ ತಾಲ್ಲೂಕಿನಲ್ಲಿ ರೈತ ಸಂಘ ಇತ್ತು ಲೆವಿ ಮತ್ತು ಗೇಣಿ ಕಾನೂನಿನ ವಿರುದ್ಧ ಹೋರಾಟ ನಡೆದಿತ್ತು. ಆ ಸಂದರ್ಭದಲ್ಲಿ ಗೇಣಿದಾರನೋರ್ವ ಕೊಲೆಯಾದ ಇತಿಹಾಸವೂ ಇದೆ ಎಂದು ಹೇಳಿದರು.

ಅದರ ಹೋರಾಟದಲ್ಲಿ ಸೋಮಲಿಂಗಯ್ಯ ಅವರು ಗೇಣಿದಾರರ ಪರವಾಗಿ ನಿಂತಿದ್ದರು ಎಂದರು. ರೈತ ಸಮಸ್ಯೆಗಳಿಗೆ ಮುಕ್ತಿ ಸಿಗಬೇಕಾದರೆ ಸಂಘಟಿತ ಹೋರಾಟ ಅಗತ್ಯ, ಒಡಕು ಕಂಡು ಬಂದರೆ ರಾಜಕಾರ ಣಿಗಳು, ಅಧಿಕಾರಶಾಹಿಗಳು ಸಂಘಟನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬ ಎಚ್ಚರಿಕೆ ಅಗತ್ಯ ಎಂದರು.


ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷರಾದ ರಮೇಶ್‌ಗೌಡ ಅವರು ಮಾತನಾಡಿ, ರಾಜ್ಯ ಸರ್ಕಾರ ತರಲು ಹೊರಟಿರುವ ಭೂ ಸುಧಾರಣಾ ಕಾಯಿದೆ ತಿದ್ದುಪಡಿಯು ರೈತರಿಗೆ ಮರಣ ಶಾಸನ ವಾಗಲಿದೆ. ಅದನ್ನು ಸರ್ಕಾರ ಕೈ ಬಿಡುವ ರೀತಿ ಮಾಡಲು ಭಾರೀ ಹೋರಾಟ ಸಂಘಟಿಸಬೇಕಾಗುತ್ತದೆ ಎಂದರು.

ಇದು ಜಾರಿಯಾದರೆ ಬಂಡವಾಳ ಶಾಹಿಗಳು ಭೂಮಿಕೊಳ್ಳಲು ಮುಕ್ತ ಅವಕಾಶ ಕೊಟ್ಟಂತೆ ಆಗುತ್ತದೆ. ರೈತರು ಅವರ ಬಳಿ ಕೂಲಿ ಆಳುಗಳಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಆತಂಕ ವ್ಯಕ್ತ ಪಡಿಸಿದರು.

ಚಲುವಯ್ಯ ರೈತ ಸಂಘದ ಗೌರವವನ್ನು ಹೆಚ್ಚಿಸಿದ ವ್ಯಕ್ತಿ, ಇಲ್ಲಿ ನೀರಾ ಚಳವಳಿಯ ಸಂದರ್ಭದಲ್ಲಿ ಅವರನ್ನು ನಾನು ಹತ್ತಿರದಿಂದ ಗಮನಿಸಿದ್ದೆ, ಅಂತ ಹವರು ಹೆಚ್ಚು ಸಂಖ್ಯೆಯಲ್ಲಿಬೇಕು ಎಂದರು.


ಸಂದರ್ಭದಲ್ಲಿ ಆಶಯ ನುಡಿಗಳನ್ನು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯ ದರ್ಶಿಯಾದ ಕೆ.ಎಸ್ ಲಕ್ಷ್ಮಣ ಸ್ವಾಮಿಯವರು ಆಡಿ, ತಾಲ್ಲೂಕು ಹಾಗೂ ಜಿಲ್ಲೆಗಳಲ್ಲಿ ನಡೆದ ಹೋರಾಟಗಳನ್ನು ನೆನೆಸಿಕೊಂಡರು.

ರೈತ ಸಂಘಟನೆಯ ಬಗ್ಗೆ ಜನಪ್ರತಿನಿಧಿಗಳು ಸರ್ಕಾರ ಭಯಬೀಳುವ ಸಂದರ್ಭ ಗಳು ಇದ್ದು, ಚೆಲುವಯ್ಯ ನವರಂತಹ ಕಾರ್ಯಕರ್ತರು ಸಹ ಹೋರಾಟ ದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿ, ದುಡಿದು ಹುತಾತ್ಮರಾದವರ ಸ್ಮರಣೆ ನಿಜಕ್ಕೂ ಅತ್ಯವಶ್ಯಕ ಎಂದರು.


ಸಂದರ್ಭದಲ್ಲಿ ರೈತ ಸಂಘಟನೆಗೆ ಹಾಗೂ ಹೋರಾಟದ ನಿಜವಾದ ನೆಲೆಯನ್ನು ಅರಿತು ಸಹಕರಿಸುತ್ತಾ ಬಂದಿರುವ ಪತ್ರಕರ್ತ ಸೇನಾನಿಗಳಾದ ವಿಜಯವಾಣಿ ವರದಿಗಾರ ಗಂಗಾಧರ್, ಪ್ರಜಾವಾಣಿಯ ಜೀತೇಂದ್ರ, ವಿಜಯ ಕರ್ನಾಟಕದ ಶ್ರೀಧರ್, ಪತ್ರಕರ್ತ ಸು.ತ. ರಾಮೇಗೌಡ, ಹೋರಾಟಗಾರರಾದ ರಮೇಶ್‌ಗೌಡ, ಕಾರ್ಮಿಕ ನಾಯಕ ಪ್ರಸನ್ನ ಸೇರಿದಂತೆ ಹಲವರನ್ನು ಹುತಾತ್ಮರ ಸ್ಮರಣೆಗಾಗಿ ಗೌರವಿಸಲಾಯ್ತು.

ಸಂಘದ ಜಿಲ್ಲಾ ಘಟಕದ ಪದಾಧಿಕಾಗಳಾದ ಬೈರೇಗೌಡ, ಚಂದ್ರಶೇಖರ್, ಶ್ರೀನಿವಾಸ್, ಲೋಕೇಶ್, ಚನ್ನಪಟ್ಟಣ ತಾಲ್ಲೂಕು ರೈತ ಸಂಘದ ಅಧ್ಯಕ್ಷ ರಮೇಶ್, ಕನಕಪುರ ತಾಲ್ಲೂಕು ಅಧ್ಯಕ್ಷ ಅನಂತರಾಮ ಪ್ರಸಾದ್, ರಾಮನಗರ ತಾಲ್ಲೂಕು ಅಧ್ಯಕ್ಷ ಕೃಷ್ಣಪ್ಪ. ಮಾಗಡಿ ತಾಲ್ಲೂಕು ಅಧ್ಯಕ್ಷ ಗೋವಿಂದು, ಸೇರಿದಂತೆ ಇನ್ನು ಹಲವು ರೈತ ಪ್ರಮುಖರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ

ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ

ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ

ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ

ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ

ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ

ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್

ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ

ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು

ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು  ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್

ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ

ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ

ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ

ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ

ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ

ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.

ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ

ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ

ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ




ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ

Top Stories »  


Top ↑