Tel: 7676775624 | Mail: info@yellowandred.in

Language: EN KAN

    Follow us :

ಇರುವ ಜಮೀನು ಬಿಟ್ಟು ಪರರ ಬಳಿ ಕೂಲಿ ಮಾಡುವ ಬದಲು ಸಾವಯವ ಕೃಷಿ ಮಾಡಿ ತಿಂಗಳಿಗೆ ಲಕ್ಷ ರೂಪಾಯಿ ಗಳಿಸಿ ಮಂಡ್ಯ ಆರ್ಗಾನಿಕ್ ಸಂಸ್ಥಾಪಕ ಮಧುಚಂದನ್

Posted date: 08 Nov, 2020

Powered by:     Yellow and Red

ಇರುವ ಜಮೀನು ಬಿಟ್ಟು ಪರರ ಬಳಿ ಕೂಲಿ ಮಾಡುವ ಬದಲು ಸಾವಯವ ಕೃಷಿ ಮಾಡಿ ತಿಂಗಳಿಗೆ ಲಕ್ಷ ರೂಪಾಯಿ ಗಳಿಸಿ ಮಂಡ್ಯ ಆರ್ಗಾನಿಕ್ ಸಂಸ್ಥಾಪಕ ಮಧುಚಂದನ್

ಚನ್ನಪಟ್ಟಣ:ನ/07/20/ಶನಿವಾರ. ವ್ವವಸಾಯ ಮಾಡಲು ದೊಡ್ಡ ಮಟ್ಟದ ಭೂ ಒಡೆಯನೇ ಆಗಬೇಕೆಂದಿಲ್ಲ. ಕನಿಷ್ಠ ಅರ್ಧ ಎಕರೆ ಭೂಮಿ ಇದ್ದು ಪ್ರಾಮಾಣಿಕವಾಗಿ ಸಾವಯವ ಕೃಷಿ ಮಾಡಿದರೆ ಒಂದು ಎಕರೆಗೆ, ಒಂದು ತಿಂಗಳಿಗೆ ಒಂದು ಲಕ್ಷ ರೂಪಾಯಿಯನ್ನು ಗಳಿಸಬಹುದು. ಹಾಗೂ ತಮ್ಮ ಆರೋಗ್ಯದ ಜೊತೆಗೆ ಗ್ರಾಹಕರ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳುವಲ್ಲಿ ನೆರವಾಗಬಹುದು. ಸಾವಯವ ಕೃಷಿ ಮಾಡುವುದರಿಂದ ಭೂತಾಯಿಗೆ ಮತ್ತು ವಾತಾವರಣಕ್ಕೂ ಸಹ ತಮ್ಮದೇ ಕೊಡುಗೆಯನ್ನು ನೀಡಬಹುದು ಎಂದು ಮಂಡ್ಯ ಆರ್ಗಾನಿಕ್ ಸಂಸ್ಥಾಪಕ ಎಸ್ ಸಿ ಮಧುಚಂದನ್ ತಿಳಿಸಿದರು.

ಅವರು ಇಂದು ಬೆಂಗಳೂರು ಮೈಸೂರು ಹೆದ್ದಾರಿಯ ತಾಲೂಕಿನ ಮತ್ತೀಕೆರೆ ಗ್ರಾಮದ ಬಳಿ ಇರುವ ಶಿವಳ್ಳಿ ಎಂಟಿಆರ್ ಆವರಣದಲ್ಲಿ ಮಂಡ್ಯ ಆರ್ಗಾನಿಕ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸಾವಯವ ಕೃಷಿಯ ಉಚಿತ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ಸಾವಯವ ಎಂಬುದು ನಮ್ಮ ಪೂರ್ವಜರ ಕೊಡುಗೆ, ಇಂದಿನ ಕೆಲವು ಆಧುನಿಕತೆ ಮತ್ತು ರಾಸಾಯನಿಕಗಳ ಬಳಕೆಯಿಂದ ನಮ್ಮ ಆರೋಗ್ಯ ಮತ್ತು ಆಯಸ್ಸು ಎರಡನ್ನೂ ಕಳೆದುಕೊಳ್ಳುತ್ತಿದ್ದೇವೆ. ಇದನ್ನು ಹೋಗಲಾಡಿಸಲೋಸುಗವೇ ನಾನು ಲಕ್ಷ ಲಕ್ಷ ಹಣ ಎಣಿಸುವ ಸಾಪ್ಟ್ ವೇರ್ ಉದ್ಯೋಗ ಬಿಟ್ಟು ಸಾವಯವ ಕೃಷಿಗೆ ಮರಳಿದ್ದೇನೆ. ಅದು ನನ್ನೊಬ್ಬನ ಆರೋಗ್ಯ ಆರ್ಥಿಕ ಉದ್ದಾರಕ್ಕೆ ಸೀಮಿತವಾಗಬಾರದು. ತನ್ನ ಪಿರ್ತಾರ್ಜಿತ ಆಸ್ತಿ ಬಿಟ್ಟು ನಗರಗಳಲ್ಲಿ ಬದುಕು ಕಟ್ಟಿಕೊಳ್ಳಲು ಹಂಬಲಿಸುತ್ತಿರುವವರು ಸಹ ಹಳ್ಳಿಗೆ ಹಿಂದಿರುಗಿ ಸಾವಯವ ಕೃಷಿ ಮೂಲಕವೇ ಆರೋಗ್ಯ ಮತ್ತು ಆರ್ಥಿಕತೆಯನ್ನು ಭದ್ರವಾಗಿಸಿಕೊಳ್ಳಲೆಂದು ಉಚಿತವಾಗಿ, ತಜ್ಞರಿಂದ ತರಬೇತಿಯನ್ನು ಪ್ರತಿ ತಿಂಗಳು ನೀಡುತ್ತಿದ್ದೇವೆ. ಇದನ್ನು ಯುವಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಮಂಡ್ಯ ಆರ್ಗಾನಿಕ್ ಸಂಸ್ಥೆಯ ಸಹಸಂಸ್ಥಾಪಕ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಮೈಸೂರು ಪ್ರಸನ್ನ ಮಾತನಾಡಿ, ಬದಲಾವಣೆ ಎಂಬುದನ್ನು ಬೇರೆ ಯಾರಲ್ಲೋ ನಿರೀಕ್ಷಿಸುವ ಬದಲು ನಮ್ಮಲ್ಲೇ ಬದಲಾವಣೆ ಮಾಡಿಕೊಳ್ಳಬೇಕು. ಅನೇಕರು ವಾತಾವರಣ ಮತ್ತು ಆರೋಗ್ಯದ ವಿಷಯಗಳಲ್ಲಿ ಬದಲಾವಣೆ ಬಯಸಿದ್ದಾರೆ. ಆದ್ದರಿಂದಲೇ ರಾಜ್ಯದಾದ್ಯಂತ ಇಂದಿನ ತರಬೇತಿಗೆ ಐದುನೂರಕ್ಕೂ ಹೆಚ್ಚು ಮಂದಿ ಸರಿಯಾದ ಸಮಯಕ್ಕೆ ಬಂದು ಸಾವಯವ ಕೃಷಿ ಬಗ್ಗೆ ಆಲಿಸಿತ್ತಿರುವುದೇ ಸಾಕ್ಷಿ ಎಂದರು.

ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿ ಎಂಬಂತೆ, ಕನಿಷ್ಠ ಭೂಮಿ ಇರುವವರು ಸಹ ಸಾವಯವ ತರಕಾರಿ ಬೆಳೆದು ಉತ್ತಮ ಜೀವನ ರೂಪಿಸಿಕೊಳ್ಳಬಹುದು. ನಗರದಲ್ಲಿರುವವರು ಸಹ ತಮ್ಮ ಮೇಲ್ಚಾವಣಿಯಲ್ಲಿ ಹಾಗೂ ಕುಂಡಗಳಲ್ಲಿಯೂ ಸಹ ಸಾವಯವ ಕೃಷಿ ಮಾಡಿ ತಮ್ಮ ಬದುಕು ಕಟ್ಟಿಕೊಳ್ಳಲು ಇಂತಹ ತರಬೇತಿಗಳು ಅನುಕೂಲವಾಗಲಿವೆ ಎಂದರು.

ಮತ್ತೊಬ್ಬ ಕೃಷಿ ತಜ್ಞ ಕೃಷ್ಣ ಮಾತನಾಡಿ, ಯಾವ್ಯಾವ ಬೆಳೆಗಳಿಗೆ ಯಾವ ರೀತಿಯಲ್ಲಿ ಮಣ್ಣನ್ನು ಹದಗೊಳಿಸಬೇಕು, ರಸಗೊಬ್ಬರಗಳಿಲ್ಲದೆ, ಕೊಟ್ಟಿಗೆ ಗೊಬ್ಬರವನ್ನು ಎಷ್ಟರ ಪ್ರಮಾಣದಲ್ಲಿ ಹಾಕಬೇಕು, ಜೀವಾಮೃತವನ್ನು ತಯಾರಿಸುವುದು ಹೇಗೆ, ಕೀಟಬಾಧೆಗೆ ರಾಸಾಯನಿಕ ಮುಕ್ತ ಔಷಧದ ತಯಾರಿಕೆ ಹೇಗೆ. ತರಕಾರಿಗಳನ್ನು ಯಾವ ಸಮಯದಲ್ಲಿ, ಎಷ್ಟು ಪ್ರಮಾಣದಲ್ಲಿ ಯಾವ ರೀತಿ ಬೆಳೆದರೆ ಮಾರುಕಟ್ಟೆ ಸೂಕ್ತ ಎಂಬುದರ ಬಗ್ಗೆ ವಿವರಿಸಿದರು.

ಅನೇಕ ಜಿಲ್ಲೆಗಳಿಂದ ಐದುನೂರಕ್ಕೂ ಹೆಚ್ಚು ಮಂದಿ ಭಾಗವಹಿಸುವ ಮೂಲಕ ಸಾವಯವ ಕೃಷಿ ಬಗ್ಗೆ ತಿಳಿದುಕೊಂಡರು. ಆರ್ಗಾನಿಕ್ ಸಂಸ್ಥೆಯಲ್ಲಿನ ಸಾವಯವ ಪದಾರ್ಥಗಳ ಬಗ್ಗೆಯೂ ಸಹ ಸಿಬ್ಬಂದಿಗಳು ತರಬೇತಿದಾರರಿಗೆ ಮಾಹಿತಿ ನೀಡಿದರು.

ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರಾಮನಗರ ನೂತನ ರೇಷ್ಮೆ ಮಾರುಕಟ್ಟೆ ಬಗ್ಗೆ ವಿರೋಧ ಸರಿಯಲ್ಲ: ಹೆಚ್ಡಿಕೆ ಬೆನ್ನಿಗೆ ನಿಂತ ಉಪ ಮುಖ್ಯಮಂತ್ರಿ
ರಾಮನಗರ ನೂತನ ರೇಷ್ಮೆ ಮಾರುಕಟ್ಟೆ ಬಗ್ಗೆ ವಿರೋಧ ಸರಿಯಲ್ಲ: ಹೆಚ್ಡಿಕೆ ಬೆನ್ನಿಗೆ ನಿಂತ ಉಪ ಮುಖ್ಯಮಂತ್ರಿ

ರಾಮನಗರ: ಜಿಲ್ಲಾ ಕೇಂದ್ರದಲ್ಲಿದ್ದ ರೇಷ್ಮೆ ಮಾರುಕಟ್ಟೆಯನ್ನು ಚನ್ನಪಟ್ಟಣಕ್ಕೆ ಸ್ಥಳಾಂತರ ಮಾಡುವುದಕ್ಕೆ ಯಾವುದೇ ರಾಜಕೀಯ ಕಾರಣವಿಲ್ಲ. ಅಲ್ಲಿ ನೂತನ ಮಾರುಕಟ್ಟೆ ನಿರ್ಮಾಣ ಮಾಡುತ್ತಿರುವುದು ರೈತರಿಗಾಗ

ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ರಾಜಕೀಯ ಪ್ರೇರಿತ;
ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ರಾಜಕೀಯ ಪ್ರೇರಿತ;

ರಾಮನಗರ:ಜ/25/21/ಸೋಮವಾರ. ರೈತರನ್ನು ಇನ್ನೂ ದುಃಸ್ಥಿತಿಗೆ ತಳ್ಳಲು ಷಡ್ಯಂತ್ರ ಎಂದು ದೂರಿದ ಡಿಸಿಎಂ*

*12 ಕೋಟಿ ರ

ಕಿಸಾನ್ ಯೋಜನೆಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ತಹಶಿಲ್ದಾರ್ ನಾಗೇಶ್ ಕರೆ.
ಕಿಸಾನ್ ಯೋಜನೆಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ತಹಶಿಲ್ದಾರ್ ನಾಗೇಶ್ ಕರೆ.

ಚನ್ನಪಟ್ಟಣ:ಡಿ/28/20/ಸೋಮವಾರ. ಕಿಸಾನ್ ವತಿಯಿಂದ ಬಹಳಷ್ಟು ಯೋಜನೆಗಳಿದ್ದು ರೈತರು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಾಲ್ಲೂಕಿನ ದಂಡಾ

ಇರುವ ಜಮೀನು ಬಿಟ್ಟು ಪರರ ಬಳಿ ಕೂಲಿ ಮಾಡುವ ಬದಲು ಸಾವಯವ ಕೃಷಿ ಮಾಡಿ ತಿಂಗಳಿಗೆ ಲಕ್ಷ ರೂಪಾಯಿ ಗಳಿಸಿ ಮಂಡ್ಯ ಆರ್ಗಾನಿಕ್ ಸಂಸ್ಥಾಪಕ ಮಧುಚಂದನ್
ಇರುವ ಜಮೀನು ಬಿಟ್ಟು ಪರರ ಬಳಿ ಕೂಲಿ ಮಾಡುವ ಬದಲು ಸಾವಯವ ಕೃಷಿ ಮಾಡಿ ತಿಂಗಳಿಗೆ ಲಕ್ಷ ರೂಪಾಯಿ ಗಳಿಸಿ ಮಂಡ್ಯ ಆರ್ಗಾನಿಕ್ ಸಂಸ್ಥಾಪಕ ಮಧುಚಂದನ್

ಚನ್ನಪಟ್ಟಣ:ನ/07/20/ಶನಿವಾರ. ವ್ವವಸಾಯ ಮಾಡಲು ದೊಡ್ಡ ಮಟ್ಟದ ಭೂ ಒಡೆಯನೇ ಆಗಬೇಕೆಂದಿಲ್ಲ. ಕನಿಷ್ಠ ಅರ್ಧ ಎಕರೆ ಭೂಮಿ ಇದ್ದು ಪ್ರಾಮಾಣಿಕವಾಗಿ ಸ

ಮಹಾ ಮಳೆಗೆ ಮಕಾಡೆ ಮಲಗಿದ ರಾಗಿ ಬೆಳೆ
ಮಹಾ ಮಳೆಗೆ ಮಕಾಡೆ ಮಲಗಿದ ರಾಗಿ ಬೆಳೆ

ಚನ್ನಪಟ್ಟಣ:ಅ/23/20/ಶುಕ್ರವಾರ. ಕಳೆದ ಮೂರು ತಿಂಗಳಿನಿಂದ ಕಷ್ಟಪಟ್ಟು ಬೆಳೆದ ರಾಗಿ ಬೆಳೆಯು ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯ ರಭ

ಚನ್ನಪಟ್ಟಣ ತಾಲ್ಲೂಕಿನಲ್ಲಿ ಒಂಭತ್ತಕ್ಕೂ ಹೆಚ್ಚು ಕಾಡಾನೆಗಳಿಂದ ದಾಳಿ: ಬೆಳೆ ನಾಶ
ಚನ್ನಪಟ್ಟಣ ತಾಲ್ಲೂಕಿನಲ್ಲಿ ಒಂಭತ್ತಕ್ಕೂ ಹೆಚ್ಚು ಕಾಡಾನೆಗಳಿಂದ ದಾಳಿ: ಬೆಳೆ ನಾಶ

ಚನ್ನಪಟ್ಟಣ:ಅ/10/20/ಶನಿವಾರ. ತಾಲ್ಲೂಕಿನ ಬಿವಿ ಹಳ್ಳಿ, ಅರಳಾಳುಸಂದ್ರ, ವಿಠಲೇನಹಳ್ಳಿ ಮೆಣಸಿಗನಹಳ್ಳಿ, ಭೂಹಳ್ಳಿ ಮತ್ತು ಸಿಂಗರಾಜಪುರ ಸೇರಿದಂತ

ರೈತ ಯುವಕರಿಗೆ ಮಾದರಿಯಾದ ಮಾಗಡಿಯ ಜೈನ ಸಮುದಾಯದ ಯುವಕ ಭರತ್ ಜೈನ್
ರೈತ ಯುವಕರಿಗೆ ಮಾದರಿಯಾದ ಮಾಗಡಿಯ ಜೈನ ಸಮುದಾಯದ ಯುವಕ ಭರತ್ ಜೈನ್

ಮಾಗಡಿ:ಅ/05/20/ಸೋಮವಾರ. ಶೇಟು ಅಥವಾ ಮಾರ್ವಾಡಿ ಅಂದ್ರೆ ಅವರೊಬ್ಬ ಲಾಭ ಮಾಡುವ ವ್ಯಾಪಾರಸ್ಥ ಎಂದೇ ಎಲ್ಲರೂ ಬಣ್ಣಿಸುತ್ತಾರೆ. ಇದನ್ನೂ ಅಲ್ಲಗಳೆಯ

ಎಪಿಎಂಸಿ ಮತ್ತು ಭೂಸುಧಾರಣಾ ಕಾಯ್ದೆ ವಿರೋಧಿಸಿ ಪ್ರತಿಭಟನೆ. ರಾಮನಗರದಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
ಎಪಿಎಂಸಿ ಮತ್ತು ಭೂಸುಧಾರಣಾ ಕಾಯ್ದೆ ವಿರೋಧಿಸಿ ಪ್ರತಿಭಟನೆ. ರಾಮನಗರದಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

ರಾಮನಗರ:ಸೆ/28/20/ಸೋಮವಾರ. ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆಗಳಿಗೆ ಸರ್ಕಾರ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ

ಯಶಸ್ವಿಯಾದ ಬಂದ್: ಸಂಪೂರ್ಣ ಸ್ತಬ್ದವಾದ ನಗರ
ಯಶಸ್ವಿಯಾದ ಬಂದ್: ಸಂಪೂರ್ಣ ಸ್ತಬ್ದವಾದ ನಗರ

ಚನ್ನಪಟ್ಟಣ:ಸೆ/28/20/ಸೋಮವಾರ. ರೈತಸಂಘ ಸೇರಿದಂತೆ ಅನೇಕ ಸಂಘಟನೆಗಳು ಇಂದು ಬಂದ್ ಗೆ ಕರೆನೀಡಿದ್ದು ನಗರದಲ್ಲಿ ಯಶಸ್ವಿಗೊಂಡಿತು.

ಯೂರಿಯಾ, ಅಗತ್ಯಕ್ಕಿಂತಲೂ ಹೆಚ್ಚಿನ ಪೂರೈಕೆಯಾಗಿದ್ದರೂ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ರೈತ. ಕಾರಣವೇನು ?
ಯೂರಿಯಾ, ಅಗತ್ಯಕ್ಕಿಂತಲೂ ಹೆಚ್ಚಿನ ಪೂರೈಕೆಯಾಗಿದ್ದರೂ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ರೈತ. ಕಾರಣವೇನು ?

ಚನ್ನಪಟ್ಟಣ: ಸೆ/26/20/ಶನಿವಾರ. ತಾಲ್ಲೂಕಿನಲ್ಲಿ ಮಳೆಗಾಲದ ತಿಂಗಳು ಅಂದರೆ ಸೆಪ್ಟೆಂಬರ್ ತಿಂಗಳಿಗೆ, ಈಗಾಗಲೇ ಬಿತ್ತನೆ ಮಾಡಿರುವ ತೋಟಗಾರಿಕೆ ಮತ

Top Stories »  

Top ↑