Tel: 7676775624 | Mail: info@yellowandred.in

Language: EN KAN

    Follow us :


ಕೋಡಂಬಳ್ಳಿ ಗ್ರಾಮದ ಬಡರೈತನ ಆರು ಕುರಿಗಳನ್ನು ಬಲಿಪಡೆದ ಬೀದಿನಾಯಿಗಳು

Posted date: 30 Jun, 2021

Powered by:     Yellow and Red

ಕೋಡಂಬಳ್ಳಿ ಗ್ರಾಮದ ಬಡರೈತನ ಆರು ಕುರಿಗಳನ್ನು ಬಲಿಪಡೆದ ಬೀದಿನಾಯಿಗಳು

ಚನ್ನಪಟ್ಟಣ: ಕೋಡಂಬಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಿನೆದಿನೇ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇತ್ತೀಚಿಗೆ ಹತ್ತು ಕುರಿಗಳನ್ನು ಬಲಿ ಪಡೆದ ಗಾಯ ಮಾಸುವ ಮುನ್ನವೇ ಮೂರು ಫಲ ದ (ಗರ್ಭಿಣಿ) ಕುರಿಗಳನ್ನು ಕೊಂದು ಹಾಕಿದ್ದು ಮೂರು ಕುರಿಗಳ ಸ್ಥಿತಿ ಚಿಂತಾಜನಕವಾಗಿವೆ. ಗ್ರಾಮಸ್ಥರು ಕೋಡಂಬಳ್ಳಿ ಗ್ರಾಮ ಪಂಚಾಯತಿ ಮತ್ತು ಕೋಳಿ ಅಂಗಡಿಗಳ ಮಾಲೀಕರಿಗೆ ಹಿಡಿಶಾಪ ಹಾಕುತ್ತಿದ್ದು, ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.


ಮಂಗಳವಾರ ಸಂಜೆಯ ವೇಳೆ ಕೋಡಂಬಳ್ಳಿ ಗ್ರಾಮದ ಕೆರೆಯಲ್ಲಿ ಕುರಿ ಮೇಯಿಸುತ್ತಿದ್ದ ಸೊತ್ತೆಗೌಡ ಎಂಬುವರಿಗೆ ಸೇರಿದ ಆರು ಕುರಿಗಳನ್ನು ಹತ್ತಾರು ಬೀದಿನಾಯಿಗಳು ಓಡಾಡಿಸಿಕೊಂಡು ಕಚ್ಚಿವೆ. ಎಲ್ಲಾ ಆರು ಕುರಿಗಳಿಗೂ ಕತ್ತಿನ ಭಾಗದಲ್ಲಿ ಕಚ್ಚಿದ್ದು, ಮೂರು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂರು ಕುರಿಗಳ ಸ್ಥಿತಿ ಚಿಂತಾಜನಕವಾಗಿದೆ. ಆ ಮೂರು ಕುರಿಗಳು ಸಹ  ಬದುಕುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದಾರೆ.


ಆರು ಕುರಿಗಳು ಫಲವಾಗಿದ್ದು ಇನ್ನೊಂದು ತಿಂಗಳಲ್ಲಿ ಮರಿ ಹಾಕುತ್ತಿದ್ದವು. ಕನಿಷ್ಟ ಒಂದು ಲಕ್ಷ ರೂಪಾಯಿ ಬೆಲೆ ಬಾಳುತ್ತಿದ್ದವು. ನಮ್ಮ ಜೀವನ ನಡೆಯುತ್ತಿರುವುದೇ ಕುರಿ ಸಾಕಾಣಿಕೆಯಿಂದ. ಇದಕ್ಕೆಲ್ಲಾ ಕಾರಣ ಕೋಳಿ ತ್ಯಾಜ್ಯ. ನನ್ನ ಕುರಿಗಳ ಸಾವಿಗೆ ಗ್ರಾಮ ಪಂಚಾಯತಿ ಮತ್ತು ಕೋಳಿ ಅಂಗಡಿಗಳ ಮಾಲೀಕರೇ ನೇರ ಹೊಣೆ. ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಿದರೆ ನಾಯಿಗಳು ಮಾಂಸದ ರುಚಿಗೆ ಬೀಳುವುದು ಕಡಿಮೆಯಾಗುತ್ತಿತ್ತು ಎಂದು ಕುರಿಗಾಹಿ ಸೊತ್ತೆಗೌಡ ದೂರಿದ್ದಾರೆ.


ಹೀಗೆ ನಿರಂತರವಾಗಿ ನಾಯಿಗಳ ದಾಳಿಯಿಂದ ಕುರಿಗಳು ಸಾಯುತ್ತಿದ್ದರೆ ಮುಂದೆ ರೈತರ ಜೀವನ ಹೇಗೆ ಸಾಗಿಸಬೇಕೆಂಬ ಪ್ರಶ್ನೆ ಕಾಡುತ್ತಿದೆ. ಈ ಕೂಡಲೇ ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಳ್ಳದೆ ಹೋದರೆ ಮುಂದೆ ಭಾರಿ ತಲೆದಂಡ ತೆರಬೇಕಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ವಿದ್ಯುತ್ ಸ್ಪರ್ಶದಿಂದ ಆನೆ ಸಾವು, ನ್ಯಾಯಾಂಗ ಬಂಧನಕ್ಕೆ ರೈತ
ವಿದ್ಯುತ್ ಸ್ಪರ್ಶದಿಂದ ಆನೆ ಸಾವು, ನ್ಯಾಯಾಂಗ ಬಂಧನಕ್ಕೆ ರೈತ

ಚನ್ನಪಟ್ಟಣ.ಸೆ.೧೧: ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಗಿನಕಲ್ಲು ಅರಣ್ಯ ಪ್ರದೇಶದ ಚಿಕ್ಕವಿಠಲೇನಹಳ್ಳಿ ಗ್ರಾಮದ ತೋಟವೊಂದರಲ್ಲಿ ಕಾಡಾನೆಯೊಂದು ನೆನ್ನೆ ಮುಂಜಾನೆ ಸತ್ತು ಬಿದ್ದಿದ್ದ

ವಿದ್ಯುತ್‌ಚಾಲಿತ ಹಾಲು ಕರೆಯುವ ಯಂತ್ರಕ್ಕೆ ಅರ್ಜಿ ಆಹ್ವಾನ
ವಿದ್ಯುತ್‌ಚಾಲಿತ ಹಾಲು ಕರೆಯುವ ಯಂತ್ರಕ್ಕೆ ಅರ್ಜಿ ಆಹ್ವಾನ

ರಾಮನಗರ, ಸೆಪ್ಟಂಬರ್,೦೭: ರಾಮನಗರ ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2021-22ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು

ತಾಲ್ಲೂಕಿನ ಭೈರಾಪಟ್ಟಣ ತೋಟಗಾರಿಕಾ ಕ್ಷೇತ್ರದ 15 ಎಕರೆ ಪ್ರದೇಶದಲ್ಲಿ ಮಾವು ಸಂಸ್ಕರಣಾ ಘಟಕ ಶೀಘ್ರವಾಗಿ ಸ್ಥಾಪನೆ. ಅಧ್ಯಕ್ಷ ನಾಗರಾಜು ಭರವಸೆ
ತಾಲ್ಲೂಕಿನ ಭೈರಾಪಟ್ಟಣ ತೋಟಗಾರಿಕಾ ಕ್ಷೇತ್ರದ 15 ಎಕರೆ ಪ್ರದೇಶದಲ್ಲಿ ಮಾವು ಸಂಸ್ಕರಣಾ ಘಟಕ ಶೀಘ್ರವಾಗಿ ಸ್ಥಾಪನೆ. ಅಧ್ಯಕ್ಷ ನಾಗರಾಜು ಭರವಸೆ

ಮಾವು ಸಂಸ್ಕರಣಾ ಘಟಕಕ್ಕೆ 15 ಎಕರೆ ಭೂಮಿಯನ್ನು ಸರ್ಕಾರ ನೀಡಿದೆ. ಸದ್ಯ ಐದು ಎಕರೆಯಲ್ಲಿ ಶೀಘ್ರವಾಗಿ ಕಾರ್ಯಾರಂಭ ಮಾಡುತ್ತೇವೆ. ಘಟಕದಲ್ಲಿ ಉನ್ನತ ದರ್ಜೆಯ ಉಪಕರಣಗಳನ್ನು ಜೋಡಿಸಿ, ರಫ್ತು ಮಾಡಲು ಅಣಿಗ

ರಸ್ತೆ ಜಮೀನಿನ ನಡುವೆ ವಾಲಿದ ವಿದ್ಯುತ್ ಕಂಬಗಳು ಆತಂಕದಲ್ಲಿ ಅನ್ನದಾತರು, ಪ್ರಯಾಣಿಕರು
ರಸ್ತೆ ಜಮೀನಿನ ನಡುವೆ ವಾಲಿದ ವಿದ್ಯುತ್ ಕಂಬಗಳು ಆತಂಕದಲ್ಲಿ ಅನ್ನದಾತರು, ಪ್ರಯಾಣಿಕರು

ಚನ್ನಪಟ್ಟಣ : ತಾಲ್ಲೂಕಿನ ನೀಲಕಂಠನಹಳ್ಳಿ  ಗ್ರಾಮದಿಂದ  ಗೊವಿಂದೇಗೌಡನದೊಡ್ಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಚಾನೆಲ್ ರಸ್ತೆಯನ್ನು 

ಇತ್ತೀಚೆಗೆ ಹೊಸದಾಗಿ ನಿರ್ಮಿಸಿ

ವಿದ್ಯುತ್ ಪ್ರವಹಿಸಿ, ರೈತ, ಕರು ಸಾವು
ವಿದ್ಯುತ್ ಪ್ರವಹಿಸಿ, ರೈತ, ಕರು ಸಾವು

 ರಾಮನಗರ: ಕನಕಪುರ; ಜಮೀನು ರಕ್ಷಣೆಗೆ ಅಳವಡಿಸಿದ್ದ ಸೋಲಾರ್ ತಂತಿಗೆ ವಿದ್ಯುತ್ ಪ್ರವಹಿಸಿ, ಹಸುವಿನ ಕರುವನ್ನು ರಕ್ಷಣೆ ಮಾಡಲು ಹೋದ ರೈತ ಕರುವಿನ

ತಾಲ್ಲೂಕಿನಲ್ಲಿ ಉತ್ತಮ ಮಳೆ, ರಸಗೊಬ್ಬರಕ್ಕಾಗಿ ರೈತರ ದಂಡು, ಕೃಷಿ ಇಲಾಖೆಯಲ್ಲಿ ಲೋಪ
ತಾಲ್ಲೂಕಿನಲ್ಲಿ ಉತ್ತಮ ಮಳೆ, ರಸಗೊಬ್ಬರಕ್ಕಾಗಿ ರೈತರ ದಂಡು, ಕೃಷಿ ಇಲಾಖೆಯಲ್ಲಿ ಲೋಪ

ತಾಲೂಕಿನಲ್ಲಿ ಕಳೆದ ಎರಡ್ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ರೈತರಿಗೆ ರಸಗೊಬ್ಬರದ ಅವಶ್ಯಕತೆ ಇದೆ. ಆದರೆ ರಸಗೊಬ್ಬರದ ಅಭಾವ ಉಂಟಾಗಿದ್ದು, ಪಟ್ಟಣದ ಸಾತನೂರು ರಸ್ತೆಯಲ್ಲಿರುವ ಹಾಪ್‍ಕಾಮ್ಸ್‍ ಗ

ಆಸ್ತಿ ವೈಷಮ್ಯ ಮತ್ತು ವಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ
ಆಸ್ತಿ ವೈಷಮ್ಯ ಮತ್ತು ವಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ

ಕೆ.ಆರ್.ಪೇಟೆ: ತಾಲ್ಲೂಕಿನ ಶೀಳನೆರೆ ಹೋಬಳಿಯ ರಾಯಸಮುದ್ರ ಗ್ರಾಮದಲ್ಲಿ ಅಣ್ಣನ ಮಕ್ಕಳು ಹಾಗೂ ಅತ್ತಿಗೆ ಸೇರಿಕೊಂಡು ತಮ್ಮನಿಗೆ ಸೇರಿದ 3 ವರ್ಷ ಪ್

ತೆಂಗು ಸಂಸ್ಕರಣೆ ವ್ಯವಸ್ಥೆಯನ್ನು ಖುದ್ದು ವೀಕ್ಷಿಸಿದ ಸಚಿವರು
ತೆಂಗು ಸಂಸ್ಕರಣೆ ವ್ಯವಸ್ಥೆಯನ್ನು ಖುದ್ದು ವೀಕ್ಷಿಸಿದ ಸಚಿವರು

ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮೈಲನಾಯಕನ ಹೊಸಹಳ್ಳಿ ಗ್ರಾಮದಲ್ಲಿರುವ ರೈತರ ಉತ್ಪಾದಕರ ಸಂಸ್ಥೆ (FPO) ಯ ಸಂಸ್ಕರಣಾ ಘಟಕಕ್ಕೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.

ಬಿಳಿ ರಾಗಿ ಬೆಳೆದು ಆದಾಯ ದ್ವಿಗುಣಗೊಳಿಸಿಕೊಂಡ ಮಂಡ್ಯದ ಮಾಯಣ್ಣನಕೊಪ್ಪಲಿನ ರೈತ ಆನಂದ್
ಬಿಳಿ ರಾಗಿ ಬೆಳೆದು ಆದಾಯ ದ್ವಿಗುಣಗೊಳಿಸಿಕೊಂಡ ಮಂಡ್ಯದ ಮಾಯಣ್ಣನಕೊಪ್ಪಲಿನ ರೈತ ಆನಂದ್

ರಾಗಿ ಎಲ್ಲರಿಗೂ ಗೊತ್ತು. ಕನಕದಾಸರು ಹಾಡಿಹೊಗಳಿದ, ಮಾಜಿ ಪ್ರಧಾನಿ ದೇವೇಗೌಡರು ವಿಶ್ವಕ್ಕೆ ಪರಿಚಯಿಸಿದ ರಾಗಿ ಯಾರಿಗೆ ಗೊತ್ತಿಲ್ಲ. ರಾಗಿ ಉಂಡು ರೋಗದಿಂದ ಪಾರಾದವರೇನಕರಿದ್ದಾರೆ. ಹಳ್ಳಿಹೈದರೆಲ್ಲರಿಗೂ

ರಾಂಪುರ ಗ್ರಾಮಕ್ಕೆ ಬಂದ ಚಿರತೆ. ಹತ್ತು ಕುರಿಗಳ ಸಾವು. ಹದಿನೈದು ಕುರಿಗಳು ಪ್ರಾಣಾಪಾಯದಲ್ಲಿ
ರಾಂಪುರ ಗ್ರಾಮಕ್ಕೆ ಬಂದ ಚಿರತೆ. ಹತ್ತು ಕುರಿಗಳ ಸಾವು. ಹದಿನೈದು ಕುರಿಗಳು ಪ್ರಾಣಾಪಾಯದಲ್ಲಿ

ಚನ್ನಪಟ್ಟಣ ತಾಲ್ಲೂಕಿನಲ್ಲಿ ಚಿರತೆ ಹಾವಳಿ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ‍ಚನ್ನಪಟ್ಟಣ ತಾಲ್ಲೂಕಿನ ರಾಂಪುರ ಗ್ರಾಮಕ್ಕೆ ತಡರಾತ್ರಿ ನುಗ್ಗಿದ ಚಿರತೆ ಏಕಾಏಕಿ ದಾಳಿ ನಡೆಸಿ 25 ಕ್ಕೂ ಹೆಚ್ಚ

Top Stories »  


Top ↑