Tel: 7676775624 | Mail: info@yellowandred.in

Language: EN KAN

    Follow us :


ಬೆಳೆ ವಿಮೆಯ ನೋಂದಣಿ ಹೆಚ್ಚಾಗಬೇಕು: ಡಾ ನಾರಾಯಣ ಗೌಡ

Posted date: 30 Jun, 2021

Powered by:     Yellow and Red

ಬೆಳೆ ವಿಮೆಯ ನೋಂದಣಿ ಹೆಚ್ಚಾಗಬೇಕು: ಡಾ ನಾರಾಯಣ ಗೌಡ

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ನೊಂದಣಿ ಪ್ರಾರಂಭವಾಗಿದ್ದು, ಈ ಬಗ್ಗೆ ರೈತರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ ಹೆಚ್ಚಿನ ರೈತರನ್ನು ನೋಂದಣಿ ಮಾಡಿ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾದ ಡಾ. ನಾರಾಯಣಗೌಡ ಅವರು ತಿಳಿಸಿದರು.


ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು. ಬೆಳೆ ವಿಮೆ ನೊಂದಣಿಯಿಂದ ರೈತರಿಗೆ ಆಗುವ ಅನುಕೂಲಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಿ ಎಂದ ಅವರು ವಿಮಾ ಕಂಪನಿಗಳು ರೈತರಿಗೆ ಪಾವತಿ ಮಾಡಿರುವ ಹಣ ಹಾಗೂ ಬಾಕಿ ಉಳಿಸಿರುವ ಹಣದ ಬಗ್ಗೆ ಮಾಹಿತಿ ಪಡೆದುಕೊಂಡರು.


ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಂಪೌಂಡ್ ನಿರ್ಮಾಣವಾಗಬೇಕು, ಸೋಲಾರ್ ದೀಪಗಳ ಅಳವಡಿಕೆ. ಕ್ರೀಡಾಪಟುಗಳಿಗೆ ಬಟ್ಟೆ ಬದಲಾಯಿಸಲು ಕೊಠಡಿ ಸೇರಿದಂತೆ ವಿವಿಧ ಕೆಲಸಗಳು ನಡೆಯಬೇಕಿದ್ದು, ಕೋವಿಡ್ ಹಿನ್ನಲೆಯಲ್ಲಿ ವಿವಿಧ ಯುವಜನ ಕಾರ್ಯಕ್ರಮಗಳು ಈ ಬಾರಿ ನಡೆದಿರುವುದಿಲ್ಲ. ಅವುಗಳ ಅನುದಾನವನ್ನು ಬದಲಾವಣೆ ಮಾಡಿಕೊಂಡು ಕ್ರೀಡಾಂಗಣದ ಕೆಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

 

*ವೆಚ್ಚವಾಗದ 20 ಕೋಟಿ ರೂ*

ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಕ್ರೀಡಾವಸತಿ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನದಲ್ಲಿ 20 ಕೋಟಿ ಹಣ ವೆಚ್ಚವಾಗಿರುವುದಿಲ್ಲ. ಈ ಬಗ್ಗೆ ಕಳವಳ ವ್ಯಕ್ತ ಪಡಿಸಿದ ಸಚಿವರು, ಇವುಗಳನ್ನು ಕೇಂದ್ರ ಹಾಗೂ ಉನ್ನತ ಮಟ್ಟದಲ್ಲಿ  ಪರಿಶೀಲಿಸಿದಾಗ ಅನುದಾನ ವೆಚ್ಚವಾಗದೇ ಇರುವುದು ಕಂಡು ಬಂದರೆ  ಆರ್ಥಿಕ ಇಲಾಖೆ ಹಾಗೂ ಕೇಂದ್ರ ಸರ್ಕಾರದಿಂದ ಮುಂದಿನ ಅನುದಾನ ಬಿಡುಗಡೆಯಾಗುವುದಿಲ್ಲ. ಸದರಿ ಯೋಜನೆಯ ಹಣವನ್ನು ಕೋವಿಡ್ ಕೆಲಸಗಳಿಗೂ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಕಾಮಗಾರಿಗಳನ್ನು ಕೈಗೊಂಡು ಒಂದು ತಿಂಗಳೊಳಗಾಗಿ  ಅನುದಾನ ವೆಚ್ಚ ಮಾಡುವುದು, ಇಲ್ಲಾವಾದಲ್ಲಿ  ಹಿಂಪಡೆಯಲಾಗುವುದು ಎಂದರು.


ಜಿಲ್ಲೆಯಲ್ಲಿ ಕ್ರೀಡಾಂಗಣ ಅಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಸಹ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೈಗೊಳ್ಳಬಹುದಾಗಿದ್ದು, ಕ್ರೀಡಾ ಇಲಾಖೆ ಅಧಿಕಾರಿಗಳು ಈ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಿವಂತೆ ತಿಳಿಸಿದರು.


ಬಯಲು ಸೀಮೆ ಪ್ರದೇಶಾಭಿವೃದ್ಧಿ ಯೋಜನೆಯಡಿ 2019-20 ನೇ ಸಾಲಿನಲ್ಲಿ 100 ಕಾಮಗಾರಿಗಳನ್ನು ಕೈಗೊಂಡಿದ್ದು, 17 ಪೂರ್ಣವಾಗಿರುತ್ತದೆ. 13 ಪ್ರಗತಿಯಲ್ಲಿರುತ್ತದೆ. 70 ಆಡಳಿತಾತ್ಮಕ ಅನುಮೋದನೆ ಹಾಗೂ ಇನ್ನಿತರ ಕಾರಣಗಳಿಂದ ಪ್ರಾರಂಭವಾಗಿರುವುದಿಲ್ಲ.70 ಕಾಮಗಾರಿಗಳು ಪ್ರಾರಂಭವಾಗಿಲ್ಲಿ ಈ ಬಗ್ಗೆ ಸೂಕ್ತ ಕಾರಣ ನೀಡುವಂತೆ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.


*ಬಯಲು ಸೀಮೆ ಪ್ರದೇಶಾಭಿವೃದ್ಧಿ ಯೋಜನೆ* ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ, ವಿಶೇಷ ಅಭಿವೃದ್ಧಿ ಯೋಜನೆ ಸೇರಿದಂತೆ ಇತರೆ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ಕಾಲ ಕಾಲಕ್ಕೆ ನಡೆಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು.


ವಿಶೇಷ ಅಭಿವೃದ್ಧಿ ಯೋಜನೆಯಡಿ 2020-21 ನೇ ಸಾಲಿನಲ್ಲಿ  37.52 ಕೋಟಿ ರೂ ಅನುದಾನ ನಿಗಧಿಯಾಗಿದ್ದು, 28.57 ಕೋಟಿ ರೂ ಬಿಡುಗಡೆಯಾಗಿ 26.20 ಕೋಟಿ ರೂ ವೆಚ್ಚವಾಗಿ ಶೇ 96 ಸಾಧನೆಯಾಗಿರುತ್ತದೆ ಎಂದರು.


ರಾಮನಗರ ಹಾಗೂ ಕನಕಪುರ ತಾಲ್ಲೂಕಿನಲ್ಲಿ ಮಾತ್ರ ಕ್ರೀಡಾಂಗಣವಿದ್ದು, ಚನ್ನಪಟ್ಟಣದಲ್ಲಿ ಸ್ಥಳ ಗುರುತಿಸಲಾಗಿದ್ದು, ಕ್ರೀಡಾಂಗಣ ನಿರ್ಮಾಣವಾಗಬೇಕಿದೆ. ಮಾಗಡಿ ತಾಲ್ಲೂಕಿನಲ್ಲಿ ಸ್ಥಳದ ಸಮಸ್ಯೆ ಇದೆ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಅವರು ಸಭೆಗೆ‌  ಮಾಹಿತಿ ನೀಡಿದರು.


ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ, ಉಪವಿಭಾಗಾಧಿಕಾರಿ ಮಂಜುನಾಥ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.


*ಜಿಲ್ಲಾ ಕ್ರೀಡಾಂಗಣಕ್ಕೆ ಬೇಟಿ ನೀಡಿದ ಕ್ರೀಡಾ ಸಚಿವರು*


ರಾಮನಗರ ಜಿಲ್ಲಾ ಕ್ರೀಡಾಂಗಣಕ್ಕೆ ಇಂದು ಕ್ರೀಡಾ ಸಚಿವರಾದ ಡಾ.ನಾರಾಯಣ ಗೌಡ ಅವರು ಭೇಟಿ ನೀಡಿ ವಿವಿಧ ಮೂಲಭೂತ  ಸೌಕರ್ಯಗಳನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.


ನಂತರ ಅಧಿಕಾರಿಗಳೂಂದಿಗೆ ಮಾತನಾಡಿದ ಅವರು ಕ್ರೀಡಾಂಗಣದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಕ್ರೀಡಾಂಗಣದಲ್ಲಿ ಸೀಟಿಂಗ್ ಗ್ಯಾಲರಿ ನಿರ್ಮಾಣವಾಗಬೇಕು. ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಳುಹಿಸಿಕೊಡುವಂತೆ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಿಗೆ ತಿಳಿಸಿದರು‌‌.


ಕ್ರೀಡಾವಸತಿ ನಿಲಯದ ಬಿರಿಕು ಬಿಟ್ಟಿರುವ ಅಡುಗೆ ಕೂಣೆಯ ಮೇಲೆಚಾವಣಿಯನ್ನು  ಮಳೆಯಂದ ಸಣ್ಣ ಪುಟ್ಟ ದುರಸ್ಥಿಯಾಗುತ್ತದೆ. ಅವುಗಳನ್ನು ಕಾಲ ಕಾಲಕ್ಕೆ ಇಂಜಿನಿಯರ್ ಗಳ ಸಲಹೆ ಪಡೆದುದುರಸ್ತಿ ಮಾಡುವಂತೆ ತಿಳಿಸಿದರು.

ಕ್ರಿಂಡಾಂಗಣದ ಸದುಪಯೋಗ ಅದರ ಕಾರ್ಯನಿರ್ವಹಣೆ ಹಾಗೂ ಇತರೆ ವಿಚಾರಗಳ ಕುರಿತು ಗಮನಹರಿಸಿ  ಉತ್ತಮ  ರೀತಿಯಲ್ಲಿ ನಡೆಸಿಕೂಂಡು ಹೋಗುವಂತೆ ತಿಳಿಹೇಳಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ

ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ

ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ

ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ

ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ

ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ

ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್

ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ

ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು

ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು  ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್

ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ

ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ

ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ

ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ

ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ

ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.

ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ

ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ

ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ




ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ

Top Stories »  


Top ↑