Tel: 7676775624 | Mail: info@yellowandred.in

Language: EN KAN

    Follow us :

ಮೀನು ಕೃಷಿ ಸಹಾಯವಾಣಿಗೆ ಸಚಿವ ಎಸ್ ಅಂಗಾರವರಿಂದ ಚಾಲನೆ

Posted date: 10 Jul, 2021

Powered by:     Yellow and Red

ಮೀನು ಕೃಷಿ ಸಹಾಯವಾಣಿಗೆ ಸಚಿವ ಎಸ್ ಅಂಗಾರವರಿಂದ ಚಾಲನೆ

ಮೀನು ಕೃಷಿಕರ  ದಿನಾಚರಣೆಯ ಅಂಗವಾಗಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ  ಸಚಿವರಾದ ಎಸ್.ಮೀನುಗಾರಿಕೆ ಸಚಿವರಾದ ಅಂಗಾರ ಅವರು ಮೀನುಗಾರಿಕೆಯ ಮಾಹಿತಿ ನೀಡುವ ಸಹಾಯವಾಣಿಗೆ ಚಾಲನೆ ನೀಡಿದರು. ಸಹಾಯವಾಣಿ ಸಂಖ್ಯೆ 8277200300 ಆಗಿದ್ದು, ಸಚಿವರು ಸಹಾಯವಾಣಿಗೆ ಕರೆ ಮಾಡಿ ಮೀನುಗಾರಿಕೆ ದಿನಾಚರಣೆಗೆ ಶುಭಾಶಯ ಕೋರಿ, ಸಹಾಯವಾಣಿಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

ಅವರು ಇಂದು ಬಿಡದಿಯ ನಲ್ಲಿಗುಡ್ಡೆಯಲ್ಲಿ ನಡೆದ ಮೀನು ಕೃಷಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಸರ್ಕಾರವು ಸಾಧನೆ ಮಾಡಿದ ಮಹಾನ್ ವ್ಯಕ್ತಿಗಳನ್ನು ನೆನಪಿಸಿಕೊಳ್ಳಲು ಹಾಗೂ ಅವರು ಮಾಡಿದ ಶ್ರಮಗಳನ್ನು ತಿಳಿಸಲು ದಿನಾಚರಣೆ ಆಚರಿಸುತ್ತದೆ‌.   ಹೀರಾಲಾಲ್ ಚೌಧರಿ ಅವರ ಸಾಧನೆ ಅಂಗವಾಗಿ ಜುಲೈ 10 ರಂದು ಮೀನುಗಾರಿಕೆ ದಿನಾಚರಣೆ ಆಚರಿಸಲಾಗುತ್ತಿದೆ. ಮೀನು ಕೃಷಿಗೆ ಪ್ರೋತ್ಸಾಹ ನೀಡಲು ಪ್ರಧಾನಮಂತ್ರಿ ಮತ್ಸ ಸಂಪದ ಹಾಗೂ ಇನ್ನಿತರ ಯೋಜನೆಯಡಿ ಸಹಾಯ ನೀಡಲಾಗುತ್ತಿದೆ ಎಂದರು.

ಇಂದಿನ ದಿನದಲ್ಲಿ ಜನರ ಯೋಚನೆ ಹಾಗೂ ಜೀವನಶೈಲಿಗೆ ತಕ್ಕಂತೆ ಕೃಷಿ, ಕೈಗಾರಿಕೆ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ನೀತಿ ರೂಪಿಸಿ ಅಭಿವೃದ್ಧಿ ಮಾಡಬೇಕಿದೆ ಎಂದರು.

ಮೀನು ಉತ್ಪಾದನೆಯ ಜೊತೆ ಮಾರಾಟಕ್ಕೆ ಪೂರಕ ವ್ಯವಸ್ಥೆಗಳನ್ನು ಮಾಡಿಕೊಂಡಾಗ ಹೆಚ್ಚು ಲಾಭಗಳಿಸಬಹುದು. ಕರಾವಳಿ ಹಾಗೂ ಒಳನಾಡಿನಲ್ಲಿ ಬೇರೆ ಬೇರೆ ರೀತಿ ಮೀನು ಕೃಷಿ ಇದೆ. ಇವುಗಳ ಬಗ್ಗೆ ಅಧ್ಯಯನ ಮಾಡಬೇಕು ಎಂದರು. 

ಕಾರ್ಯಕ್ರಮದಲ್ಲಿ ಮೀನು ಕೃಷಿಗೆ ಸಂಬಂಧಿಸಿದಂತೆ ಜನರಿಗೆ ಇರುವ ತೊಂದರೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ಈ ಕುರಿತಂತೆ ಅಧಿಕಾರಿಗಳ ಸಭೆ ಕರೆದು ಮೀನು ಕೃಷಿ ತೊಂದರೆಯ ಬಗ್ಗೆ ಚರ್ಚಿಸಲಾಗುವುದು ಎಂದರು.

ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಅವರು ಮಾತನಾಡಿ ರೈತ ಸಮಗ್ರ ಕೃಷಿಯ ಬಗ್ಗೆ ಮಾಹಿತಿ ಪಡೆಯಬೇಕಾದರೆ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ವಿವಿಧ ಇಲಾಖೆ ಸುತ್ತಬೇಕು. ಇದು ರೈತನಿಗೆ ಕಷ್ಟಕರ ಇದರ ಬದಲಿಗೆ ಎಲ್ಲಾ ಮಾಹಿತಿ ಒಂದೆಡೆ ಸಿಗುವಂತಾಗಬೇಕು‌. ಮೀನುಗಾರಿಕೆಗೆ ಪ್ರೋತ್ಸಾಹ ನೀಡಲು ಪ್ರಧಾನ ಮಂತ್ರಿ ಮತ್ಸ ಯೋಜನೆ ರೂಪಿಸಿ ವಿವಿಧ ರೀತಿಯಲ್ಲಿ ಸಹಾಯಧನ ನೀಡಲಾಗುತ್ತಿದೆ ಎಂದರು.

ಯುವಕರು ಸ್ವಾವಲಂಬಿಯಾಗಲು ಕೃಷಿಯೇ ದಾರಿ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೃಷಿ ಅಥವಾ ಯಾವುದೇ ಉದ್ದಿಮೆ ರೂಡಿಸಿಕೊಂಡರು ಎಚ್ಚರಿಕೆ ಹಾಗೂ ಜ್ಞಾನ ಇರಬೇಕು. ಆರೋಗ್ಯದ ಹಿನ್ನಲೆಯಲ್ಲಿ ಇಂದು ಆಹಾರದಲ್ಲಿ ಜನರು ಮೀನಿಗೆ ಹೆಚ್ಚು ಆದ್ಯತೆ ನೀಡುತ್ತಾರೆ‌. ಮೀನು ಕೃಷಿ ಕೂಡ ಲಾಭದಾಯಕ ಉದ್ದಿಮೆಯಾಗಿರುತ್ತದೆ. ಉದ್ದಿಮೆಯಲ್ಲಿ ತೊಡಗಿಸಿಕೊಳ್ಳುವವರು ಆಸಕ್ತಿ ಹಾಗೂ ಜವಾಬ್ದಾರಿಯನ್ನು ರೂಡಿಸಿಕೊಳ್ಳಬೇಕು. ಕೃಷಿ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರ  ಮುಂದಿನ ದಿನದಲ್ಲಿ ಇಡೀ ಭಾರತದ ಚಿತ್ರಣವನ್ನೇ ಬದಲಾಯಿಸಲಿದೆ‌ ಎಂದರು.

ಕಾರ್ಯಕ್ರಮದಲ್ಲಿ ಮಾಗಡಿ ಶಾಸಕ ಎ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಸಿ‌.ಎಂ.ಲಿಂಗಪ್ಪ, ಮೀನುಗಾರಿಕೆ ಇಲಾಖೆ ಜಂಟಿ ನಿದೇಶಕ ದಿನೇಶ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ಆನೆ ದಾಳಿಗೆ ನೀಡುವ ಬೆಳೆ ಪರಿಹಾರ ಪರಿಷ್ಕರಣೆಯಾಗಬೇಕು: ಹೆಚ್.ಡಿ.ಕುಮಾರಸ್ವಾಮಿ
ಆನೆ ದಾಳಿಗೆ ನೀಡುವ ಬೆಳೆ ಪರಿಹಾರ ಪರಿಷ್ಕರಣೆಯಾಗಬೇಕು: ಹೆಚ್.ಡಿ.ಕುಮಾರಸ್ವಾಮಿ

ರಾಮನಗರ ಜಿಲ್ಲಾ ಪ್ರದಾನ ಬೆಳೆಗಳಾದ ತೆಂಗು, ರಾಗಿ, ಭತ್ತ ಬೆಳೆಗಳು ಆನೆ ದಾಳಿಯಿಂದ ನಾಶವಾದಾಗ, ರಾಗಿ-1,200 ರೂ, ಭತ್ತ-1,320 ರೂ, ತೆಂಗು(10 ವರ್ಷ ಮೇಲ್ಪಟ್ಟ ಮರಗಳಿಗೆ) 2,000 ರೂ, 5  ವರ್ಷದ

ಕಾಡಾನೆ ದಾಳಿ, ವ್ಯಕ್ತಿ ಸಾವು. ರೊಚ್ಚಿಗೆದ್ದ ಗ್ರಾಮಸ್ಥರು. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು
ಕಾಡಾನೆ ದಾಳಿ, ವ್ಯಕ್ತಿ ಸಾವು. ರೊಚ್ಚಿಗೆದ್ದ ಗ್ರಾಮಸ್ಥರು. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು

ಚನ್ನಪಟ್ಟಣ: ಬೆಳೆಹಾನಿಗಷ್ಟೇ ಸೀಮಿತವಾಗಿದ್ದ ಆನೆಗಳು ಈಗ ಮನುಷ್ಯನ ಪ್ರಾಣ ತೆಗೆಯುವ ಹಂತಕ್ಕೆ ಹೋಗಿದ್ದು,  ತೋಟದಲ್ಲಿ ಕೆಲಸ ಮಾಡುತ್ತಿದ್ದ

ಟಿಎಪಿಸಿಎಂಎಸ್ ಗೆ ಭೇಟಿ ನೀಡಿದ ಉನ್ನತಾಧಿಕಾರಿಗಳು, ಹಳೆಯ ಗೋದಾಮಿನಲ್ಲೇ ಬಾಳೆಕಾಯಿ ಮಂಡಿ ಸ್ಥಾಪನೆ
ಟಿಎಪಿಸಿಎಂಎಸ್ ಗೆ ಭೇಟಿ ನೀಡಿದ ಉನ್ನತಾಧಿಕಾರಿಗಳು, ಹಳೆಯ ಗೋದಾಮಿನಲ್ಲೇ ಬಾಳೆಕಾಯಿ ಮಂಡಿ ಸ್ಥಾಪನೆ

ಚನ್ನಪಟ್ಟಣ: ನಗರದಲ್ಲಿನ ಟಿಎಪಿಸಿಎಂಸ್ ಗೆ ರಾಜ್ಯ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಕಾರ್ಯಪಾಲಕ ಇಂಜಿನಿಯರ್ ಹಾಗೂ ಸ್ಥಳೀಯ ಹಾಪ್ ಕ

ರಾಮನಗರ ಮಾವು ಸಂಸ್ಕರಣಾ ಘಟಕ, ಹೈಟೆಕ್ ರೇಷ್ಮೆ ‌ಮಾರುಕಟ್ಟೆ ಯೋಜನೆಗೆ ಡಿಸೆಂಬರ್‌ನಲ್ಲಿ ಕಾರ್ಯಾದೇಶ  ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ
ರಾಮನಗರ ಮಾವು ಸಂಸ್ಕರಣಾ ಘಟಕ, ಹೈಟೆಕ್ ರೇಷ್ಮೆ ‌ಮಾರುಕಟ್ಟೆ ಯೋಜನೆಗೆ ಡಿಸೆಂಬರ್‌ನಲ್ಲಿ ಕಾರ್ಯಾದೇಶ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ

ಬೆಂಗಳೂರು: ರಾಮನಗರ ಜಿಲ್ಲೆಯಲ್ಲಿ ಜಾಗತಿಕ ಮಟ್ಟದ ಮಾವು ಸಂಸ್ಕರಣಾ ಘಟಕ ಹಾಗೂ ಹೈಟೆಕ್ ರೇಷ್ಮೆ ‌ಮಾರುಕಟ್ಟೆ ನಿರ್ಮಾಣ ಯೋಜನೆಗಳಿಗೆ ಅಕ್ಟೋಬರ್‌ನಲ್ಲಿ ಸಮಗ್ರ ಯೋಜನಾ ವರದಿ (DPR)‌ ಅಂತಿಮಗೊಳಿಸಿ ಡಿಸೆ

ಮೇಕೆದಾಟು ಯೋಜನೆ; ಸರ್ಕಾರದ ಗಮನ ಸೆಳೆಯಲು ಪಾದಯಾತ್ರೆ
ಮೇಕೆದಾಟು ಯೋಜನೆ; ಸರ್ಕಾರದ ಗಮನ ಸೆಳೆಯಲು ಪಾದಯಾತ್ರೆ

ರಾಮನಗರ: ಮೇಕೆದಾಟು ಯೋಜನೆ ಹಲವಾರು ಬಾರಿ ನಿಂತ ನೀರಾದಂತೆ, ನಿಂತಲ್ಲಿಯೇ ನಿಂತಿದೆ. ಈ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಲು ಕರ್ನಾಟಕ ರಾಜ್ಯ ಮೇಕೆದಾಟು ಹ

ಮೀನು ಕೃಷಿ ಸಹಾಯವಾಣಿಗೆ ಸಚಿವ ಎಸ್ ಅಂಗಾರವರಿಂದ ಚಾಲನೆ
ಮೀನು ಕೃಷಿ ಸಹಾಯವಾಣಿಗೆ ಸಚಿವ ಎಸ್ ಅಂಗಾರವರಿಂದ ಚಾಲನೆ

ಮೀನು ಕೃಷಿಕರ  ದಿನಾಚರಣೆಯ ಅಂಗವಾಗಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ  ಸಚಿವರಾದ ಎಸ್.ಮೀನುಗಾರಿಕೆ ಸಚಿವರಾದ ಅಂಗಾರ ಅವರು ಮೀನುಗಾರಿಕೆಯ ಮಾಹಿತಿ ನೀಡುವ ಸಹಾಯವಾಣಿಗೆ ಚಾಲನ

ಬೆಳೆ ವಿಮೆಯ ನೋಂದಣಿ ಹೆಚ್ಚಾಗಬೇಕು: ಡಾ ನಾರಾಯಣ ಗೌಡ
ಬೆಳೆ ವಿಮೆಯ ನೋಂದಣಿ ಹೆಚ್ಚಾಗಬೇಕು: ಡಾ ನಾರಾಯಣ ಗೌಡ

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ನೊಂದಣಿ ಪ್ರಾರಂಭವಾಗಿದ್ದು, ಈ ಬಗ್ಗೆ ರೈತರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ ಹೆಚ್ಚಿನ ರೈತರನ್ನು ನೋಂದಣಿ ಮಾಡಿ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ

ಕೋಡಂಬಳ್ಳಿ ಗ್ರಾಮದ ಬಡರೈತನ ಆರು ಕುರಿಗಳನ್ನು ಬಲಿಪಡೆದ ಬೀದಿನಾಯಿಗಳು
ಕೋಡಂಬಳ್ಳಿ ಗ್ರಾಮದ ಬಡರೈತನ ಆರು ಕುರಿಗಳನ್ನು ಬಲಿಪಡೆದ ಬೀದಿನಾಯಿಗಳು

ಚನ್ನಪಟ್ಟಣ: ಕೋಡಂಬಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಿನೆದಿನೇ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇತ್ತೀಚಿಗೆ ಹತ್ತು ಕುರಿಗಳನ್ನು ಬಲಿ ಪಡೆದ ಗಾಯ ಮಾಸುವ ಮುನ್ನವೇ ಮೂರು ಫಲ ದ (ಗರ್ಭಿಣಿ)

ಕೋಡಂಬಳ್ಳಿ ಗ್ರಾಮದಲ್ಲಿ ನಾಯಿಗಳಿಗೆ ಬಲಿಯಾದ ಕುರಿಗಳ ಹಿಂಡು. ಕುರಿಗಾಯಿಯ ಅಳಲು, ಗ್ರಾಮ ಪಂಚಾಯತಿ ಅಧಿಕಾರಗಳ ಮೇಲೆ ಗ್ರಾಮಸ್ಥರು ಗರಂ
ಕೋಡಂಬಳ್ಳಿ ಗ್ರಾಮದಲ್ಲಿ ನಾಯಿಗಳಿಗೆ ಬಲಿಯಾದ ಕುರಿಗಳ ಹಿಂಡು. ಕುರಿಗಾಯಿಯ ಅಳಲು, ಗ್ರಾಮ ಪಂಚಾಯತಿ ಅಧಿಕಾರಗಳ ಮೇಲೆ ಗ್ರಾಮಸ್ಥರು ಗರಂ

ತಾಲ್ಲೂಕಿನ ಕೋಡಂಬಳ್ಳಿ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಬಸವರಾಜು ಎಂಬುವವರು, ತೋಟದಲ್ಲಿ ಮೇಯಲು ಬಿಟ್ಟಿದ್ದ ಕುರಿಗಳ ಮೇಲೆ, ಏಕಾಏಕಿ ಹದಿನೆಂಟು ನಾಯಿಗಳ ಹಿಂಡು ಎರಗಿ ದಾಳಿ ನಡೆಸಿವೆ. ಹತ್ತು ಕುರಿಗಳ

ಅರಣ್ಯ ಇಲಾಖೆಯ ಪಕ್ಕದ ಜಮೀನಿಗೆ ನುಗ್ಗಿದ ಒಂಟಿ ಸಲಗ. ಲಕ್ಷಾಂತರ ರೂ ಬೆಳೆ ನಾಶ. ಪ್ರಾಣಕ್ಕೆ ಎರವಾದರೆ ಇಲಾಖೆಯೇ ಹೊಣೆ ರುದ್ರಪ್ಪ
ಅರಣ್ಯ ಇಲಾಖೆಯ ಪಕ್ಕದ ಜಮೀನಿಗೆ ನುಗ್ಗಿದ ಒಂಟಿ ಸಲಗ. ಲಕ್ಷಾಂತರ ರೂ ಬೆಳೆ ನಾಶ. ಪ್ರಾಣಕ್ಕೆ ಎರವಾದರೆ ಇಲಾಖೆಯೇ ಹೊಣೆ ರುದ್ರಪ್ಪ

ತಾಲ್ಲೂಕಿನಾದ್ಯಂತ ಆನೆಗಳ ಉಪಟಳ ಹೆಚ್ಚಾಗುತ್ತಲೆ ಇದೆ. ಶಾಶ್ವತವಾಗಿ ಆನೆಗಳನ್ನು ಅಟ್ಟದ ಕಾರಣ ಹಾಗೂ ಅರಣ್ಯದಂಚಿನಲ್ಲಿ ಸೂಕ್ತ ಭದ್ರತೆ ಇಲ್ಲದ ಕಾರಣ ಹೋದ ಪುಟ್ಟಾ, ಬಂದಾ ಪುಟ್ಟ ಎಂಬಂತಾಗಿದೆ. ಭಾನುವಾರ

Top Stories »  

Top ↑