Tel: 7676775624 | Mail: info@yellowandred.in

Language: EN KAN

    Follow us :


ಕಾಡಾನೆ ದಾಳಿ, ವ್ಯಕ್ತಿ ಸಾವು. ರೊಚ್ಚಿಗೆದ್ದ ಗ್ರಾಮಸ್ಥರು. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು

Posted date: 29 Jul, 2021

Powered by:     Yellow and Red

ಕಾಡಾನೆ ದಾಳಿ, ವ್ಯಕ್ತಿ ಸಾವು. ರೊಚ್ಚಿಗೆದ್ದ ಗ್ರಾಮಸ್ಥರು. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು

ಚನ್ನಪಟ್ಟಣ: ಬೆಳೆಹಾನಿಗಷ್ಟೇ ಸೀಮಿತವಾಗಿದ್ದ ಆನೆಗಳು ಈಗ ಮನುಷ್ಯನ ಪ್ರಾಣ ತೆಗೆಯುವ ಹಂತಕ್ಕೆ ಹೋಗಿದ್ದು,  ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಅನೆಯೊಂದು ದಾಳಿ ನಡೆಸಿ, ಸಾಯಿಸಿರುವ ಘಟನೆ ತಾಲೂಕಿನ ಗಡಿಭಾಗವಾದ ದೊಡ್ಡನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಸತೀಶ್(35) ಮೃತ ದುರ್ಧೈವಿ. ಈತ ಗ್ರಾಮದ ಹೊರವಲಯದಲ್ಲಿರುವ ತನ್ನ ಮಾವಿನತೋಟದಲ್ಲಿ ಬೇಲಿ ಕತ್ತರಿಸುವ ಕೆಲಸದಲ್ಲಿ ಮಗ್ನನಾಗಿದ್ದ ವೇಳೆ ಹಠಾತ್ತನೇ ದಾಳಿ ನಡೆಸಿದ ಆನೆಯೊಂದು ತನ್ನ ಸೊಂಡಿಲಿನಿಂದ ಹೊಡೆದು ಸಾಯಿಸಿದೆ.


ಈ ವೇಳೆ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಇತರೆ ರೈತರು ಚೀರಾಟದ ನಂತರ ಆನೆ ಸ್ಥಳದಿಂದ ಕಾಲ್ಕಿತ್ತಿದೆ. ಒಟ್ಟು ನಾಲ್ಕು ಆನೆಗಳು ಬಂದಿದ್ದು, ಅದರಲ್ಲಿ ಒಂದು ಪುಂಡಾನೆ ದಾಳಿ ನಡೆಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೃತ ಸತೀಶ್ ಕೃಷಿ ಚಟುವಟಿಕೆ ಮಾಡಿಕೊಂಡು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದರು.


*ಅಧಿಕಾರಿಗಳ ದೌಡು:*

ಈ ವೇಳೆ ಆಕ್ರೋಶಗೊಂಡ ಮೃತನ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಮೃತನ ಸಾವಿಗೆ ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆಯೇ ಹೊಣೆ. ಈ ಭಾಗದಲ್ಲಿ ನಿತಂತರವಾಗಿ ಅನೆಗಳು ಉಪಟಳ ನೀಡುತ್ತಿವೆ. ಈ ಬಗ್ಗೆ ಅರಿವಿದ್ದರೂ ಅಗತ್ಯಕ್ರಮ ಕೈಗೊಳ್ಳಲು ವಿಫಲವಾಗಿರುವುದೇ ಈ ಘಟನೆಗೆ ಕಾರಣ. ಮೃತ ರೈತನ ಸಾವಿಗೆ ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆಯೇ ಹೊಣೆ ಹೊರಬೇಕು ಎಂದು ಆಕ್ರೋಶವ್ಯಕ್ತಪಡಿಸಿದರು.


ತಾಲ್ಲೂಕಿನ ರೈತಸಂಘದ ಮುಖಂಡರು ತಮ್ಮ ಆಕ್ರೋಶವನ್ನು ಅಧಿಕಾರಿಗಳ ಮೇಲೆ‌ ತೂರಿದರು. ನೀವು ಕೊಡುವ ಪರಿಹಾರ ನಮಗೆ ಬೇಡ. ಸರ್ಕಾರ ಕೊಡುವ ದುಪ್ಪಟ್ಟು ಪರಿಹಾರ ನಾವುಗಳು ಸೇರಿ ಕೊಡುತ್ತೇವೆ. ಅಧಿಕಾರಿಗಳು ಮತ್ತು ಮಂತ್ರಿಗಳು ಬಂದು ಸಾಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಅವರದೇ ರೀತಿಯಲ್ಲಿ ಎಲ್ಲಾ ಬಂದೋಬಸ್ತ್ ಮಾಡಿಕೊಂಡಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಆದರೂ ಎರಡು ಸಾವಿರಕ್ಕೂ ಹೆಚ್ಚು ಮಂದಿ ಜನರು ಸೇರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.


ತೆಂಗಿನಕಲ್ಲು ಅರಣ್ಯಪ್ರದೇಶದಲ್ಲಿ ಹತ್ತಾರು ಅನೆಗಳು ಬೀಡುಬಿಟ್ಟಿವೆ. ರಾತ್ರಿ ಸಮಯದಲ್ಲಿ ಕಾಡಂಚಿನ ಗ್ರಾಮಗಳಿಗೆ ಲಗ್ಗೆಯಿಟ್ಟು ರೈತರ ಬೆಳೆನಾಶಪಡಿಸುತ್ತಿವೆ. ಅರಣ್ಯ ಇಲಾಖೆಯವರು ಅನೆಗಳನ್ನು ಓಡಿಸುವ ಕಾರ್ಯಾಚರಣೆಯನ್ನು ನೆಪಮಾತ್ರಕ್ಕೆ ನಡೆಸುತ್ತಾರೆ. ಇಂದು ನಡೆದಿರುವ ರ್ದುಘಟನೆಗೆ ಇಲಾಖೆಯೇ ನೇರಹೊಣೆ ಹೊರಬೇಕು. ಸ್ಥಳಕ್ಕೆ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಆಗಮಿಸಬೇಕು. ಮೃತನ ಕುಟುಂಬಕ್ಕೆ ಆರ್ಥಿಕ ನೆರವು ಘೋಷಿಸಬೇಕು ಎಂದು ನೆರೆದಿದ್ದ ಜನರು ಆಗ್ರಹಿಸಿದರು.


ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಲ್ಲೇ ಅರಣ್ಯ ಇಲಾಖೆ ಸೇರಿದಂತೆ ಇತರೆ ಅಧಿಕಾರಿಗಳು ಗ್ರಾಮಕ್ಕೆ ದೌಡಾಯಿಸಿದ್ದರು. ತಹಸೀಲ್ದಾರ್ ಎಲ್.ನಾಗೇಶ್, ಡಿಎಫ್‍ಒ ದೇವರಾಜು, ಆರ್‍ಎಫ್‍ಓ ದಿನೇಶ್, ಗ್ರಾಮಾಂತರ ಪಿಎಸ್‍ಐ ಎಚ್.ಎಂ.ಶಿವಕುಮಾರ್ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಹಾಗೂ ಮೃತನ ಕುಟುಂಬಸ್ಥರು ಮೃತನ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಅಧಿಕಾರಿಗಳನ್ನು ಆಗ್ರಹಿಸಿದರು.


ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳೊಂದಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ದೂರವಾಣಿ ಮೂಲಕ ಮಾತುಕತೆ ನಡೆಸಿ, ಇಲಾಖೆಯಿಂದ ಸಿಗಬಹುದಾದ ಸಂಪೂರ್ಣ ನೆರವು ನೀಡುವಂತೆ ಸೂಚಿಸಿದರು. ಅದರಂತೆ ಮೃತನ ಕುಟುಂಬಕ್ಕೆ 7.5 ಲಕ್ಷ ಪರಿಹಾರಧನ ಹಾಗೂ 5 ವರ್ಷಗಳ ಕಾಲ ಪ್ರತಿತಿಂಗಳು 2 ಸಾವಿರ ಮಾಶಾಸನವನ್ನು ಘೋಷಿಸಲಾಯಿತು. ಶೀಘ್ರವಾಗಿ 2 ಲಕ್ಷ ಬಿಡುಗಡೆಗೊಳಿಸಲು ಸಹ ತೀರ್ಮಾನ ತೆಗೆದುಕೊಂಡ ನಂತರ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು.


*ಪ್ರಾಣಕ್ಕೂ ಕುತ್ತು ತಂದ ಗಜರಾಯ:*

ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಹಲವಾರು ವರ್ಷಗಳಿಂದ ಅನೆದಾಳಿಯ ಸಮಸ್ಯೆ ಪ್ರಮುಖವಾಗಿ ಕಾಡುತ್ತಿದೆ. ಅದರಲ್ಲೂ ತೆಂಗಿನಕಲ್ಲು ಹಾಗೂ ಕಬ್ಬಾಳು ವಲಯದ ಅರಣ್ಯ ಪ್ರದೇಶದಲ್ಲಿ ಅನೆದಾಳಿ ದಿನನಿತ್ಯದ ಸಮಸ್ಯೆಯಾಗಿ ಹೋಗಿದೆ. ಇಷ್ಟು ದಿನ ಬೆಳೆನಾಶಕ್ಕೆ ಸಿಮೀತವಾಗಿದ್ದ ಈ ದಾಳಿ ಮಾನವನ ಪ್ರಾಣಹಾನಿಗೂ ವಿಸ್ತರಿಸಿದೆ. ಕೆಲವರ್ಷಗಳ ಹಿಂದೆ ತಾಲೂಕಿನ ಹನಿಯೂರು-ರಾಮೇಗೌಡನದೊಡ್ಡಿ ಬಳಿ ದಾರಿಹೋಕರೊಬ್ಬರನ್ನು ಅನೆಯೊಂದು ತುಳಿದು ಸಾಯಿಸಿತ್ತು. ಕಳೆದ ವರ್ಷ ಕನ್ನಿದೊಡ್ಡಿ ಗ್ರಾಮದ ಬಳಿ ಮಹಿಳೆಯೊಬ್ಬರ ಮೇಲೆ ಮಾರಣಾಂತಿಕ ದಾಳಿ ನಡೆದಿತ್ತು. ಇದೀಗ ದೊಡ್ಡನಹಳ್ಳಿ ಗ್ರಾಮದಲ್ಲಿ ರೈತನೊಬ್ಬನನ್ನು ಬಲಿಪಡೆದುಕೊಂಡಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ನವೆಂಬರ್ 2 ನೇ ತಾರೀಖಿನಂದು ರೈತಸಂಘದಿಂದ ನಾಲ್ಕು ತಾಲ್ಲೂಕು ಕಛೇರಿಗಳ ಮುಂದೆ ಏಕಕಾಲದಲ್ಲಿ ಪ್ರತಿಭಟನೆ
ನವೆಂಬರ್ 2 ನೇ ತಾರೀಖಿನಂದು ರೈತಸಂಘದಿಂದ ನಾಲ್ಕು ತಾಲ್ಲೂಕು ಕಛೇರಿಗಳ ಮುಂದೆ ಏಕಕಾಲದಲ್ಲಿ ಪ್ರತಿಭಟನೆ

ಚನ್ನಪಟ್ಟಣ: ಅ:23/21. ಜಿಲ್ಲೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಚಾರ, ಲಂಚಗುಳಿತನ ಮತ್ತು ಭ್ರಷ್ಟಚಾರದಿಂದ ಕೂಡಿರುವ ಆಡಳಿತ ವೈಫಲ್ಯವನ್ನು

ಕೋಳಿಫಾರಂ ಗೆ ಚಿರತೆ ದಾಳಿ ಲಕ್ಷಾಂತರ ರೂ ಲುಕ್ಸಾನು
ಕೋಳಿಫಾರಂ ಗೆ ಚಿರತೆ ದಾಳಿ ಲಕ್ಷಾಂತರ ರೂ ಲುಕ್ಸಾನು

ರಾಮನಗರ.ಅ.25/21: ರಾಮನಗರ ತಾಲೂಕಿನ ಬಿಡದಿ ಹೋಬಳಿ ಶೆಟ್ಟಿಗೌಡನದೊಡ್ಡಿ ಗ್ರಾಮದ ಬಳಿ ಇರುವ ಕೋಳಿ ಫಾರಂ ನಲ್ಲಿ ಚಿರತೆ ಏಕಾಏಕಿ ದಾಳಿ ನಡೆಸಿ ನೂರ

ನೂತನ ಹೆದ್ದಾರಿಯಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣ. ಗದ್ದೆಗೆ ನುಗ್ಗಿದ ನೀರು
ನೂತನ ಹೆದ್ದಾರಿಯಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣ. ಗದ್ದೆಗೆ ನುಗ್ಗಿದ ನೀರು

ಚನ್ನಪಟ್ಟಣ.ಅ.20:21. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗುತ್ತಿದೆ. ಈ ನಿರ್ಮಾಣದ ಕಾಮಗಾರಿ ವೇಳೆ ಅವೈಜ್ಞಾನಿಕ ಚರಂಡಿ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಮಳೆ ನೀರು ಕೃಷಿ ಜಮೀನಿಗೆ ನು

ಗರಕಹಳ್ಳಿ ಡೈರಿ ಸಭೆಯಲ್ಲಿ ಮಾರಾಮಾರಿ. ಸೆಕ್ರೆಟರಿ ವಿರುದ್ದ ಹರಿಹಾಯ್ದ ಸದಸ್ಯರು. ಮೂರು ಮಂದಿಗೆ ಗಾಯ
ಗರಕಹಳ್ಳಿ ಡೈರಿ ಸಭೆಯಲ್ಲಿ ಮಾರಾಮಾರಿ. ಸೆಕ್ರೆಟರಿ ವಿರುದ್ದ ಹರಿಹಾಯ್ದ ಸದಸ್ಯರು. ಮೂರು ಮಂದಿಗೆ ಗಾಯ

ಚನ್ನಪಟ್ಟಣ: ಅ/11/21. ಗರಕಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2020/21 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಶಿವಲಿಂಗಯ್ಯ

ಉತ್ತರ ಪ್ರದೇಶದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿಸಿ ಕೊಂದ ಸಚಿವರ ಪುತ್ರ. ತಹಶಿಲ್ದಾರ್ ಗೆ ಮನವಿ ಸಲ್ಲಿಸಿದ ಸಂಘಟನಾಕಾರರು
ಉತ್ತರ ಪ್ರದೇಶದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿಸಿ ಕೊಂದ ಸಚಿವರ ಪುತ್ರ. ತಹಶಿಲ್ದಾರ್ ಗೆ ಮನವಿ ಸಲ್ಲಿಸಿದ ಸಂಘಟನಾಕಾರರು

ಚನ್ನಪಟ್ಟಣ: ಅ/04. ದೇಶಾದ್ಯಂತ ರೈತ ವಿರೋಧಿ ಕಾಯ್ದೆಗಳ ವಿರುದ್ದ ರೈತ ಚಳವಳಿಗಳು ತೀವ್ರತೆ ಪಡೆಯುತ್ತಿರುವುದನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಮುಗ

ಕಾಡು ಪ್ರಾಣಿಗಳಿಂದ ಬೆಳೆ ನಾಶ, ಅಮ್ಮಳ್ಳಿದೊಡ್ಡಿ ಗ್ರಾಮಸ್ಥರಿಂದ ರಸ್ತೆತಡೆ ಅಧಿಕಾರಿಗಳು ದೌಡು
ಕಾಡು ಪ್ರಾಣಿಗಳಿಂದ ಬೆಳೆ ನಾಶ, ಅಮ್ಮಳ್ಳಿದೊಡ್ಡಿ ಗ್ರಾಮಸ್ಥರಿಂದ ರಸ್ತೆತಡೆ ಅಧಿಕಾರಿಗಳು ದೌಡು

ಚನ್ನಪಟ್ಟಣ: ಅ/04. ತಡರಾತ್ರಿ ಒಂಭತ್ತು ಆನೆಗಳು ಅಮ್ಮಳ್ಳಿದೊಡ್ಡಿ ಗ್ರಾಮದ ರೈತರ ಜಮೀನಿಗೆ ನುಗ್ಗಿ ತೆಂಗು, ಬಾಳೆ ಮತ್ತು ಸೋತೆಕಾಯಿ ಫಸಲನ್ನು ಸ

ಚನ್ನಪಟ್ಟಣದಲ್ಲಿ ಭಾರತ್ ಬಂದ್ ಗೆ ನೀರಸ ಪ್ರತಿಕ್ರಿಯೆ
ಚನ್ನಪಟ್ಟಣದಲ್ಲಿ ಭಾರತ್ ಬಂದ್ ಗೆ ನೀರಸ ಪ್ರತಿಕ್ರಿಯೆ

ಚನ್ನಪಟ್ಟಣ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯಿದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಭಾರತ್ ಬಂದ್‌ಗೆ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಮವಾರ ರೈತ ಸಂಘಟ

ನವೀನತೆಯ ಪಶುಕೊಟ್ಟಿಗೆ ಪ್ರಾಜೆಕ್ಟ್. ರಾಷ್ಟ್ರಪ್ರಶಸ್ತಿಗೆ ಭಾಜನರಾದ ವಿದ್ಯಾರ್ಥಿ
ನವೀನತೆಯ ಪಶುಕೊಟ್ಟಿಗೆ ಪ್ರಾಜೆಕ್ಟ್. ರಾಷ್ಟ್ರಪ್ರಶಸ್ತಿಗೆ ಭಾಜನರಾದ ವಿದ್ಯಾರ್ಥಿ

ಮೂಲ ಮತ್ತು ಹೈನೀದ್ಯೋಮವನ್ನೇ ನೆಚ್ಚಿಕೊಂಡಿರುವ ರೈತರಿಗೆ ಉಪಯುಕ್ತವಾಗುವಂತ ಆಧುನಿಕ ದನದ ಕೊಟ್ಟಿಗೆಯನ್ನು ಆವಿಷ್ಕಾರಗೊಳಿಸಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿರುವ ವಿದ್ಯಾರ್ಥಿ ದೇವೇಗೌಡ ಅವರಿಗೆ ಜಿಲ್ಲ

ಅರಣ್ಯ ಇಲಾಖಾ ಕಛೇರಿ ಬಳಿಯ ತೋಟಕ್ಕೆ ನುಗ್ಗಿದ ಕಾಡಾನೆಗಳು
ಅರಣ್ಯ ಇಲಾಖಾ ಕಛೇರಿ ಬಳಿಯ ತೋಟಕ್ಕೆ ನುಗ್ಗಿದ ಕಾಡಾನೆಗಳು

ಚನ್ನಪಟ್ಟಣ.ಸೆ.೧೬: ತಾಲ್ಲೂಕಿನ ಕೆಂಗಲ್ ಆಂಜನೇಯ ದೇವಸ್ಥಾನದ ಮುಂಭಾಗ, ಅರಣ್ಯ ಇಲಾಖೆಯ ಕಛೇರಿ ಪಕ್ಕದಲ್ಲೇ ಇರುವ ತೋಟಕ್ಕೆ ಕಾಡಾನೆಗಳು ದಾಂಗುಡಿ

ವಿದ್ಯುತ್ ಸ್ಪರ್ಶದಿಂದ ಆನೆ ಸಾವು, ನ್ಯಾಯಾಂಗ ಬಂಧನಕ್ಕೆ ರೈತ
ವಿದ್ಯುತ್ ಸ್ಪರ್ಶದಿಂದ ಆನೆ ಸಾವು, ನ್ಯಾಯಾಂಗ ಬಂಧನಕ್ಕೆ ರೈತ

ಚನ್ನಪಟ್ಟಣ.ಸೆ.೧೧: ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಗಿನಕಲ್ಲು ಅರಣ್ಯ ಪ್ರದೇಶದ ಚಿಕ್ಕವಿಠಲೇನಹಳ್ಳಿ ಗ್ರಾಮದ ತೋಟವೊಂದರಲ್ಲಿ ಕಾಡಾನೆಯೊಂದು ನೆನ್ನೆ ಮುಂಜಾನೆ ಸತ್ತು ಬಿದ್ದಿದ್ದ

Top Stories »  


Top ↑