Tel: 7676775624 | Mail: info@yellowandred.in

Language: EN KAN

    Follow us :


ಬಿಳಿ ರಾಗಿ ಬೆಳೆದು ಆದಾಯ ದ್ವಿಗುಣಗೊಳಿಸಿಕೊಂಡ ಮಂಡ್ಯದ ಮಾಯಣ್ಣನಕೊಪ್ಪಲಿನ ರೈತ ಆನಂದ್

Posted date: 13 Aug, 2021

Powered by:     Yellow and Red

ಬಿಳಿ ರಾಗಿ ಬೆಳೆದು ಆದಾಯ ದ್ವಿಗುಣಗೊಳಿಸಿಕೊಂಡ ಮಂಡ್ಯದ ಮಾಯಣ್ಣನಕೊಪ್ಪಲಿನ ರೈತ ಆನಂದ್

ರಾಗಿ ಎಲ್ಲರಿಗೂ ಗೊತ್ತು. ಕನಕದಾಸರು ಹಾಡಿಹೊಗಳಿದ, ಮಾಜಿ ಪ್ರಧಾನಿ ದೇವೇಗೌಡರು ವಿಶ್ವಕ್ಕೆ ಪರಿಚಯಿಸಿದ ರಾಗಿ ಯಾರಿಗೆ ಗೊತ್ತಿಲ್ಲ. ರಾಗಿ ಉಂಡು ರೋಗದಿಂದ ಪಾರಾದವರೇನಕರಿದ್ದಾರೆ. ಹಳ್ಳಿಹೈದರೆಲ್ಲರಿಗೂ ಅಚ್ಚುಮೆಚ್ಚಿನ ಗುಂಡು ಈ ರಾಗಿಮುದ್ದೆ. ರಾಗಿಯಲ್ಲಿ ಕಪ್ಪು ಮತ್ತು ಕೆಂಪು ಬಣ್ಣದ ರಾಗಿಯ ಬಗ್ಗೆ ಮಾತ್ರ ಗೊತ್ತಿದ್ದ ಜನರಿಗೆ ಕೃಷಿ ತಜ್ಞರಾದ ಡ ರವಿಶಂಕರ್ ರವರು ಶೋಧಿಸಿದ ಬಿಳಿರಾಗಿಯನ್ನು ಕೃಷಿ ಇಲಾಖೆಯವರು ಪರಿಚಯಿಸಿದರು. ಬೇಕರಿಗಳಲ್ಲಿ ಹೆಚ್ಚು ಉಪಯೋಗಿಸುವ ಈ ರಾಗಿಯನ್ನು ಬೆಳೆದವರು ಮಾತ್ರ ಕಡಿಮೆ ರೈತರು. ಮಂಡ್ಯ ಜಿಲ್ಲೆ ಮತ್ತು ತಾಲ್ಲೂಕಿನ ಮಾಯಣ್ಣನಕೊಪ್ಪಲು ಗ್ರಾಮದ ರೈತ ಆನಂದ್ ರವರು ತಮ್ಮ ಜಮೀನಿನಲ್ಲಿ ಬಿಳಿರಾಗಿಯನ್ನು ಬೆಳೆದು ಸೈ ಎನಿಸಿಕೊಂಡಿದ್ದಲ್ಲದೆ, ಆದಾಯವನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ.


ಮೊದಲ ಬಾರಿಗೆ ಆನಂದ್ ರವರು ತಮ್ಮ ಜಮೀನಿನಲ್ಲಿ ಬಿಳಿರಾಗಿ ಬೆಳೆದು ಒಳ್ಳೆಯ ಇಳುವರಿ ಪಡೆದಿದ್ದಾರೆ. ಕ್ವಿಂಟಾಲ್‌ಗೆ ಐದು ಸಾವಿರ ಬೆಲೆ ಸಿಗುತ್ತಿರುವುದರಿಂದ ಸಂತಸಗೊಂಡಿರುವ ಅವರು "ಬಿಳಿರಾಗಿಯ ಬೇಸಾಯ-ಆದಾಯ ಎರಡೂ ಚೆನ್ನಾಗಿದೆ. ಇನ್ನೂ ಆರೈಕೆ ಮಾಡಿದರೆ ಇನ್ನೂ ಹೆಚ್ಚಿನ ಲಾಭ ಸಿಗುತ್ತದೆ" ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ.


ಕೆಎಂಆರ್-340 ತಳಿಯ ಬಿಳಿರಾಗಿಯ ಮಹತ್ವದ ಕುರಿತು ಅವರು ಹೇಳಿದ ಮೇಲಿನ ಹೊಗಳಿಕೆಯ ಮಾತು ಮೂರು ವರ್ಷಗಳ ಹಿಂದೆ ದೇಶದ ರೈತರಿಗಾಗಿ ಬಿಳಿರಾಗಿ ಸಂಶೋಧಿಸಿ ಕೊಟ್ಟ ನಮ್ಮ ಹೆಮ್ಮೆಯ ಕನ್ನಡಿಗರಾದ ಕೃಷಿ ವಿಜ್ಞಾನಿ ಡಾ. ಸಿ ಆರ್ ರವಿಶಂಕರ್ ಅವರಿಗೆ ಸಲ್ಲುವ ಬಹುದೊಡ್ಡ ಗೌರವ. ಅವರಿಂದ ರೈತರಿಗೆ ಇನ್ನೂ ಅನೇಕ ಸಂಶೋಧನೆಗಳು ನಡೆಯಲೆಂದು ಅವರು ಆಶಿಸಿದ್ದಾರೆ.


ಮನುಷ್ಯನ ಆರೋಗ್ಯಕ್ಕೆ ಮಾರಕವಾದ ಮೈದಾ ಹಿಟ್ಟಿಗೆ ಪರ್ಯಾಯವಾದ ಬಿಳಿರಾಗಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿದೆ. ತನ್ನ ರೋಗನಿರೋಧಕ ಶಕ್ತಿ ಮತ್ತು ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಕಾರಣಕ್ಕಾಗಿ ಗ್ರಾಹಕರನ್ನು ಸೆಳೆಯುತ್ತಿದೆ. ಬುದ್ಧಿವಂತ ರೈತರು ಬಿಳಿರಾಗಿಯ ಕಡೆ ಗಮನಹರಿಸಿ. ಬಿಳಿರಾಗಿ ಬೇಸಾಯದಿಂದ ಆದಾಯ ಖಂಡಿತ ಹೆಚ್ಚಾಗುತ್ತದೆ ಎಂದು ಅವರು ಉಳಿದ ರೈತರಿಗೆ ಕಿವಿಮಾತು ಹೇಳಿದ್ದಾರೆ.


ಒಬ್ಬ ಮುಂದಾಲೋಚನೆಯ ಮಾದರಿ ಕೃಷಿಕರಾದ ಆನಂದ್ ರವರು ಹತ್ತಿರದಲ್ಲಿರುವ ವಿಸಿ ಫಾರ್ಮ್ ಕೃಷಿ ಸಂಶೋಧನಾ ಕೇಂದ್ರದ ಜತೆಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಹಲವು ವರ್ಷಗಳಿಂದ ತಮ್ಮ ಜಮೀನಿನಲ್ಲಿ ಹತ್ತಾರು ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಕಬ್ಬು, ಬಿಳಿರಾಗಿಯ ಜತೆಗೆ ಐತಿಹಾಸಿಕ ರಾಜಮುಡಿ ಭತ್ತವನ್ನು ಈ ಭಾಗದಲ್ಲಿ ಅತ್ಯಧಿಕ ಇಳುವರಿಯೊಂದಿಗೆ ಬೆಳೆದು ಅಕ್ಕಪಕ್ಕದ ರೈತರಿಗೂ ಬಿತ್ತನೆ ಬೀಜಗಳನ್ನು ನೀಡುತ್ತಾ ಕೃಷಿ ಸಂಸ್ಕೃತಿಯ ಸಂರಕ್ಷಣೆ ಮಾಡುತ್ತಿದ್ದಾರೆ.


ಐಟಿಐ ಓದಿಕೊಂಡ ಮಗನನ್ನು ಬೆಂಗಳೂರಿಗೆ ಕೆಲಸಕ್ಕೆ ಕಳಿಸದೆ ವ್ಯವಸಾಯದಲ್ಲಿ ತೊಡಗುವಂತೆ ಅವರು ಅಂದು ಪ್ರೇರಿಪಿಸಿದುದರ ಪರಿಣಾಮ ಇಂದು ಈ ಭಾಗದಲ್ಲಿ ಕೃಷಿ ವಿಜ್ಞಾನಿಗಳೊಂದಿಗೆ, ಪ್ರಗತಿಪರ ಕೃಷಿಕರೊಂದಿಗೆ ಒಡನಾಟ ಇಟ್ಟುಕೊಂಡು ಅವರ ಜ್ಞಾನ, ಸಂಶೋಧನೆಗಳನ್ನು ತಮ್ಮ ಹೊಲಗದ್ದೆಗಳಲ್ಲಿ ಸಾಕಾರಗೊಳಿಸುವ ವಿದ್ಯಾವಂತ ಯುವ ರೈತರ ಸಂಖ್ಯೆ ಹೆಚ್ಚಾಗುತ್ತಿರುವುದು ದೇಶದ ಆಹಾರ ಭದ್ರತೆಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎಂಬುದು 

AgriStartUp ಕಟ್ಟುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಭು ರವರ ಮಾತಾಗಿದೆ.


-ಗೋ ರಾ ಶ್ರೀನಿವಾಸ...

ಮೊ:984585613

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ನವೆಂಬರ್ 2 ನೇ ತಾರೀಖಿನಂದು ರೈತಸಂಘದಿಂದ ನಾಲ್ಕು ತಾಲ್ಲೂಕು ಕಛೇರಿಗಳ ಮುಂದೆ ಏಕಕಾಲದಲ್ಲಿ ಪ್ರತಿಭಟನೆ
ನವೆಂಬರ್ 2 ನೇ ತಾರೀಖಿನಂದು ರೈತಸಂಘದಿಂದ ನಾಲ್ಕು ತಾಲ್ಲೂಕು ಕಛೇರಿಗಳ ಮುಂದೆ ಏಕಕಾಲದಲ್ಲಿ ಪ್ರತಿಭಟನೆ

ಚನ್ನಪಟ್ಟಣ: ಅ:23/21. ಜಿಲ್ಲೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಚಾರ, ಲಂಚಗುಳಿತನ ಮತ್ತು ಭ್ರಷ್ಟಚಾರದಿಂದ ಕೂಡಿರುವ ಆಡಳಿತ ವೈಫಲ್ಯವನ್ನು

ಕೋಳಿಫಾರಂ ಗೆ ಚಿರತೆ ದಾಳಿ ಲಕ್ಷಾಂತರ ರೂ ಲುಕ್ಸಾನು
ಕೋಳಿಫಾರಂ ಗೆ ಚಿರತೆ ದಾಳಿ ಲಕ್ಷಾಂತರ ರೂ ಲುಕ್ಸಾನು

ರಾಮನಗರ.ಅ.25/21: ರಾಮನಗರ ತಾಲೂಕಿನ ಬಿಡದಿ ಹೋಬಳಿ ಶೆಟ್ಟಿಗೌಡನದೊಡ್ಡಿ ಗ್ರಾಮದ ಬಳಿ ಇರುವ ಕೋಳಿ ಫಾರಂ ನಲ್ಲಿ ಚಿರತೆ ಏಕಾಏಕಿ ದಾಳಿ ನಡೆಸಿ ನೂರ

ನೂತನ ಹೆದ್ದಾರಿಯಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣ. ಗದ್ದೆಗೆ ನುಗ್ಗಿದ ನೀರು
ನೂತನ ಹೆದ್ದಾರಿಯಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣ. ಗದ್ದೆಗೆ ನುಗ್ಗಿದ ನೀರು

ಚನ್ನಪಟ್ಟಣ.ಅ.20:21. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗುತ್ತಿದೆ. ಈ ನಿರ್ಮಾಣದ ಕಾಮಗಾರಿ ವೇಳೆ ಅವೈಜ್ಞಾನಿಕ ಚರಂಡಿ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಮಳೆ ನೀರು ಕೃಷಿ ಜಮೀನಿಗೆ ನು

ಗರಕಹಳ್ಳಿ ಡೈರಿ ಸಭೆಯಲ್ಲಿ ಮಾರಾಮಾರಿ. ಸೆಕ್ರೆಟರಿ ವಿರುದ್ದ ಹರಿಹಾಯ್ದ ಸದಸ್ಯರು. ಮೂರು ಮಂದಿಗೆ ಗಾಯ
ಗರಕಹಳ್ಳಿ ಡೈರಿ ಸಭೆಯಲ್ಲಿ ಮಾರಾಮಾರಿ. ಸೆಕ್ರೆಟರಿ ವಿರುದ್ದ ಹರಿಹಾಯ್ದ ಸದಸ್ಯರು. ಮೂರು ಮಂದಿಗೆ ಗಾಯ

ಚನ್ನಪಟ್ಟಣ: ಅ/11/21. ಗರಕಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2020/21 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಶಿವಲಿಂಗಯ್ಯ

ಉತ್ತರ ಪ್ರದೇಶದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿಸಿ ಕೊಂದ ಸಚಿವರ ಪುತ್ರ. ತಹಶಿಲ್ದಾರ್ ಗೆ ಮನವಿ ಸಲ್ಲಿಸಿದ ಸಂಘಟನಾಕಾರರು
ಉತ್ತರ ಪ್ರದೇಶದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿಸಿ ಕೊಂದ ಸಚಿವರ ಪುತ್ರ. ತಹಶಿಲ್ದಾರ್ ಗೆ ಮನವಿ ಸಲ್ಲಿಸಿದ ಸಂಘಟನಾಕಾರರು

ಚನ್ನಪಟ್ಟಣ: ಅ/04. ದೇಶಾದ್ಯಂತ ರೈತ ವಿರೋಧಿ ಕಾಯ್ದೆಗಳ ವಿರುದ್ದ ರೈತ ಚಳವಳಿಗಳು ತೀವ್ರತೆ ಪಡೆಯುತ್ತಿರುವುದನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಮುಗ

ಕಾಡು ಪ್ರಾಣಿಗಳಿಂದ ಬೆಳೆ ನಾಶ, ಅಮ್ಮಳ್ಳಿದೊಡ್ಡಿ ಗ್ರಾಮಸ್ಥರಿಂದ ರಸ್ತೆತಡೆ ಅಧಿಕಾರಿಗಳು ದೌಡು
ಕಾಡು ಪ್ರಾಣಿಗಳಿಂದ ಬೆಳೆ ನಾಶ, ಅಮ್ಮಳ್ಳಿದೊಡ್ಡಿ ಗ್ರಾಮಸ್ಥರಿಂದ ರಸ್ತೆತಡೆ ಅಧಿಕಾರಿಗಳು ದೌಡು

ಚನ್ನಪಟ್ಟಣ: ಅ/04. ತಡರಾತ್ರಿ ಒಂಭತ್ತು ಆನೆಗಳು ಅಮ್ಮಳ್ಳಿದೊಡ್ಡಿ ಗ್ರಾಮದ ರೈತರ ಜಮೀನಿಗೆ ನುಗ್ಗಿ ತೆಂಗು, ಬಾಳೆ ಮತ್ತು ಸೋತೆಕಾಯಿ ಫಸಲನ್ನು ಸ

ಚನ್ನಪಟ್ಟಣದಲ್ಲಿ ಭಾರತ್ ಬಂದ್ ಗೆ ನೀರಸ ಪ್ರತಿಕ್ರಿಯೆ
ಚನ್ನಪಟ್ಟಣದಲ್ಲಿ ಭಾರತ್ ಬಂದ್ ಗೆ ನೀರಸ ಪ್ರತಿಕ್ರಿಯೆ

ಚನ್ನಪಟ್ಟಣ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯಿದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಭಾರತ್ ಬಂದ್‌ಗೆ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಮವಾರ ರೈತ ಸಂಘಟ

ನವೀನತೆಯ ಪಶುಕೊಟ್ಟಿಗೆ ಪ್ರಾಜೆಕ್ಟ್. ರಾಷ್ಟ್ರಪ್ರಶಸ್ತಿಗೆ ಭಾಜನರಾದ ವಿದ್ಯಾರ್ಥಿ
ನವೀನತೆಯ ಪಶುಕೊಟ್ಟಿಗೆ ಪ್ರಾಜೆಕ್ಟ್. ರಾಷ್ಟ್ರಪ್ರಶಸ್ತಿಗೆ ಭಾಜನರಾದ ವಿದ್ಯಾರ್ಥಿ

ಮೂಲ ಮತ್ತು ಹೈನೀದ್ಯೋಮವನ್ನೇ ನೆಚ್ಚಿಕೊಂಡಿರುವ ರೈತರಿಗೆ ಉಪಯುಕ್ತವಾಗುವಂತ ಆಧುನಿಕ ದನದ ಕೊಟ್ಟಿಗೆಯನ್ನು ಆವಿಷ್ಕಾರಗೊಳಿಸಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿರುವ ವಿದ್ಯಾರ್ಥಿ ದೇವೇಗೌಡ ಅವರಿಗೆ ಜಿಲ್ಲ

ಅರಣ್ಯ ಇಲಾಖಾ ಕಛೇರಿ ಬಳಿಯ ತೋಟಕ್ಕೆ ನುಗ್ಗಿದ ಕಾಡಾನೆಗಳು
ಅರಣ್ಯ ಇಲಾಖಾ ಕಛೇರಿ ಬಳಿಯ ತೋಟಕ್ಕೆ ನುಗ್ಗಿದ ಕಾಡಾನೆಗಳು

ಚನ್ನಪಟ್ಟಣ.ಸೆ.೧೬: ತಾಲ್ಲೂಕಿನ ಕೆಂಗಲ್ ಆಂಜನೇಯ ದೇವಸ್ಥಾನದ ಮುಂಭಾಗ, ಅರಣ್ಯ ಇಲಾಖೆಯ ಕಛೇರಿ ಪಕ್ಕದಲ್ಲೇ ಇರುವ ತೋಟಕ್ಕೆ ಕಾಡಾನೆಗಳು ದಾಂಗುಡಿ

ವಿದ್ಯುತ್ ಸ್ಪರ್ಶದಿಂದ ಆನೆ ಸಾವು, ನ್ಯಾಯಾಂಗ ಬಂಧನಕ್ಕೆ ರೈತ
ವಿದ್ಯುತ್ ಸ್ಪರ್ಶದಿಂದ ಆನೆ ಸಾವು, ನ್ಯಾಯಾಂಗ ಬಂಧನಕ್ಕೆ ರೈತ

ಚನ್ನಪಟ್ಟಣ.ಸೆ.೧೧: ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಗಿನಕಲ್ಲು ಅರಣ್ಯ ಪ್ರದೇಶದ ಚಿಕ್ಕವಿಠಲೇನಹಳ್ಳಿ ಗ್ರಾಮದ ತೋಟವೊಂದರಲ್ಲಿ ಕಾಡಾನೆಯೊಂದು ನೆನ್ನೆ ಮುಂಜಾನೆ ಸತ್ತು ಬಿದ್ದಿದ್ದ

Top Stories »  


Top ↑