Tel: 7676775624 | Mail: info@yellowandred.in

Language: EN KAN

    Follow us :


ಗರಕಹಳ್ಳಿ ಡೈರಿ ಸಭೆಯಲ್ಲಿ ಮಾರಾಮಾರಿ. ಸೆಕ್ರೆಟರಿ ವಿರುದ್ದ ಹರಿಹಾಯ್ದ ಸದಸ್ಯರು. ಮೂರು ಮಂದಿಗೆ ಗಾಯ

Posted date: 12 Oct, 2021

Powered by:     Yellow and Red

ಗರಕಹಳ್ಳಿ ಡೈರಿ ಸಭೆಯಲ್ಲಿ ಮಾರಾಮಾರಿ. ಸೆಕ್ರೆಟರಿ ವಿರುದ್ದ ಹರಿಹಾಯ್ದ ಸದಸ್ಯರು. ಮೂರು ಮಂದಿಗೆ ಗಾಯ

ಚನ್ನಪಟ್ಟಣ: ಅ/11/21. ಗರಕಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2020/21 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಶಿವಲಿಂಗಯ್ಯ ನವರ ನೇತೃತ್ವದಲ್ಲಿ ಆರಂಭಗೊಂಡಿತ್ತಾದರೂ ತದ ನಂತರ ಎರಡು ಗುಂಪುಗಳ ನಡುವೆ ಮಾರಾಮಾರಿ ಆಗಿ ಮೂರು ಮಂದಿಗೆ ತಲೆ ಮತ್ತು ಹಣೆಯ ಮೇಲೆ ರಕ್ತಗಾಯಗಳಾಗಿ ಆಸ್ಪತ್ರೆ ಮತ್ತು ಪೋಲಿಸ್ ಠಾಣೆಯ ಮೆಟ್ಟಿಲೇರಿದ್ದಾರೆ.


ಹಾಲಿನ ಡೈರಿಯಲ್ಲಿ ಅಕ್ರಮಗಳು ನಡೆದಿವೆ. ನಿವೇಶನ ಖರೀದಿ ಮಾಡಿರುವುದು, ಹೆಚ್ಚಿನ ಬಾಡಿಗೆ ನೀಡುತ್ತಿರುವುದು, ಷೇರುದಾರರಿಗೆ ಮಾಹಿತಿ ನೀಡದಿರುವುದು, ಮುಂಜಾನೆ 08:30 ಕ್ಕೆ ಸಭೆ ನಡೆಸುತ್ತಿರುವುದು, ಷೇರು ಬದಲಾವಣೆಗೆ ಅರ್ಜಿ ಸಲ್ಲಿಸಿದರೂ ಬದಲಾಯಿಸಿ ಕೊಡದೆ ಇರುವುದು. ಸಂಘದ ಸಭೆ ಕರೆಯದೇ, ಸಂಘದ ಲೆಕ್ಕಪರಿಶೋಧನೆ ಮಾಡದಿರುವುದು. ಅವರಿಗಿಷ್ಟ ಬಂದಂತಹ ಅಧ್ಯಕ್ಷ, ಸದಸ್ಯರು ಮತ್ತು ಸಹಾಯಕರನ್ನು ನೇಮಿಸಿಕೊಂಡಿರುವುದು ಸೇರಿದಂತೆ ಅನೇಕ ಅಕ್ರಮಗಳ ಬಗ್ಗೆ ಕೆಲ ಸದಸ್ಯರು ಪಟ್ಟು ಹಿಡಿದು ಕೇಳಿದರು. ಡೈರಿ ಸೆಕ್ರೆಟರಿ ಶಿವಕುಮಾರ್ ಇದ್ಯಾವುದಕ್ಕೂ ಸರಿಯಾದ ಮಾಹಿತಿ ನೀಡದೆ, ದರ್ಪದ ಉತ್ತರ ನೀಡುವುದರ ಜೊತೆಗೆ ಪ್ರತಿಯೊಂದು ಮಾಹಿತಿಗೂ ಅರ್ಜಿ ಹಾಕಿಕೊಳ್ಳುವಂತೆ ತಾಕೀತು ಮಾಡುತ್ತಿದ್ದರಿಂದ ಸದಸ್ಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.


ಆಹ್ವಾನ ಪತ್ರಿಕೆಯಲ್ಲೂ ಅವರಿಗಷ್ಟ ಬಂದವರ ಹೆಸರು ಹಾಕಿಕೊಂಡಿದ್ದಾರೆ. ಸದಸ್ಯರುಗಳಿಗೆ 08:30 ಕ್ಕೆ ಸಭೆ ಇದೆ ಎಂದು ನೋಟೀಸ್ ನೀಡಿದ್ದು, ಅಧಿಕಾರಿಗಳಿಗೆ 09:30 ಕ್ಕೆ ಬರಲು ಹೇಳಿ ದಿಕ್ಕುತಪ್ಪಿಸಿದ್ದಾರೆ. ಎಲ್ಲಾ ಷೇರುದಾರರಿಗೂ ಸಭೆಗೆ ಬರಲು ನೋಟೀಸ್ ನೀಡದೆ, ಅವರಿಗಿಷ್ಟ ಬಂದ ಷೇರುದಾರರಿಗೆ ಮಾತ್ರ ನೋಟೀಸ್ ನೀಡಿದ್ದಾರೆ. ಬಮೂಲ್ ಅಧಿಕಾರಿಗಳು ಹತ್ತು ಗಂಟೆಯ ನಂತರ ಬಂದರಾದರೂ ಸೆಕ್ರೆಟರಿ ಶಿವಕುಮಾರ್ ಸಭೆ ಮುಗಿಯಿತು ಎಂದು ಹೇಳಿ ಡೈರಿಯ ಒಳಗೆ ಹೋಗಿ ಕುಳಿತುಕೊಂಡರು. ಅಧಿಕಾರಿ ಬಮೂಲ್ ಕೃಷಿ ಅಧಿಕಾರಿ ಜಿತೇಂದ್ರಕುಮಾರ್ ರವರು ಸಭೆ ಮುಂದುವರೆಸಲೂ ಹೇಳಿದರೂ ಸಹ ಬಾರದೆ ಇದ್ದಾಗ ಅವರು ಸದಸ್ಯರನ್ನು ಕುರಿತು ಕೆಲ ಮಾಹಿತಿ ನೀಡಿ ಪಲಾಯನಗೈದರು.


ಗ್ರಾಮಸ್ಥರ ಮನವಿಯ ಮೇರೆಗೆ ಖಾಸಗಿಯವರ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಹಾಲಿನ ಡೈರಿಯನ್ನು ಸಮುದಾಯ ಭವನಕ್ಕೆ ವರ್ಗಾಯಿಸಿಕೊಂಡು ಅಲ್ಲಿಯೇ ನಿರ್ವಹಿಸುವಂತೆ ಗ್ರಾಮ ಪಂಚಾಯತಿ ಸದಸ್ಯರು ಸಭೆ ನಡೆಸಿ ಒಮ್ಮತದ ತೀರ್ಮಾನ ತೆಗೆದುಕೊಂಡು ಸೆಕ್ರೆಟರಿಗೆ ತಿಳಿಸಿದ್ದರೂ ಸಹ ಅವರು ದುಬಾರಿ ಬಾಡಿಗೆ ಕಟ್ಟಡದಲ್ಲೇ ಮುಂದುವರಸಿದ್ದು, ಗ್ರಾಮಸ್ಥರು ಹೊಡೆದಾಡಲು ಕಾರಣವಾಗಿದೆ.


ಗ್ರಾಮದಲ್ಲಿನ ಡೈರಿ ವಿಷಯವಾಗಿ ಪರವಿರೋಧ ಬಣಗಳ ನಡುವೆ ಮಾತಿನ ಚಕಮಕಿ ನಡೆದು ಜಗಳಕ್ಕೆ ತಿರುಗಿತು. ತದನಂತರ ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಬಟ್ಟೆಗಳನ್ನು ಹರಿದು, ಕಲ್ಲಿನ ಮೂಲಕ ಹಣೆಯಭಾಗ ಮತ್ತು ತಲೆಗೆ ಮೂರು ಮಂದಿಗಳಾದ ಶಿವಲಿಂಗಯ್ಯ, ಚಂದ್ರು ಮತ್ತು ಕುಮಾರ್ ಎಂಬುವರು ರಕ್ತಗಾಯಗಳನ್ನು ಮಾಡಿಕೊಳ್ಳುವ ಮೂಲಕ ಗ್ರಾಮದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣಕ್ಕೆ ಕಾರಣರಾದರು. ಶಿವಕುಮಾರ್ ಕಡೆಯವರನ್ನು ಅವರ ಕಾರಿನಲ್ಲಿ ಹಾಗೂ ವಿರೋಧ ಬಣಗಳು ಬೈಕ್ ನಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು, ಅಕ್ಕೂರು ಪೋಲಿಸ್ ಠಾಣೆಯಲ್ಲಿ ಎರಡೂ ಕಡೆಯವರು ದೂರು ನೀಡಿರುವುದಾಗಿ ತಿಳಿದುಬಂದಿದೆ.


ಕಳೆದ ವರ್ಷದ ವಾರ್ಷಿಕ ಮಹಾ ಸಭೆಯಲ್ಲೂ ಸಹ ಜಗಳವಾಗಿದ್ದರೂ ಸಹ ಅದು ಪೋಲಿಸ್ ಮೆಟ್ಟಿಲೇರಿರಲಿಲ್ಲ. ಇಂದು ನಡೆಯುವ ಸಭೆಯಲ್ಲಿ ಗಲಾಟೆ ಆಗುವುದು ಎಂಬ ಸುಳಿವಿದ್ದರೂ ಸಹ ಶಿವಕುಮಾರ್ ಪೋಲಿಸ್ ಠಾಣೆಗೆ ಮಾಹಿತಿ ನೀಡಿರಲಿಲ್ಲ. ಮಾಹಿತಿ ನೀಡಿದರೆ ಪೋಲಿಸರು ಬಂದೋಬಸ್ತ್ ಮಾಡುತ್ತಿದ್ದರು. ಆಗ ಯಾವುದೇ ವ್ಯಕ್ತಿಗಳು ಹೊಡೆದಾಡಿಕೊಳ್ಳುವ ಪ್ರಮೇಯ ಸೃಷ್ಟಿ ಆಗುತ್ತಿರಲಿಲ್ಲ ಎಂದು ಗ್ರಾಮಸ್ಥರು ವಿಷಯ ತಿಳಿದ ನಂತರ ಬಂದ ಅಕ್ಕೂರು ಪೋಲಿಸ್ ಠಾಣೆಯ ಉಪನಿರೀಕ್ಷಕಿ ಸರಸ್ವತಿ ಯವರಿಗೆ ಮಾಹಿತಿ ನೀಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ

ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ

ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ

ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ

ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ

ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ

ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್

ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ

ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು

ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು  ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್

ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ

ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ

ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ

ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ

ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ

ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.

ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ

ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ

ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ




ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ

Top Stories »  


Top ↑