Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕು ಆಡಳಿತದ ಭ್ರಷ್ಟಾಚಾರ ಖಂಡಿಸಿ ಬಾರುಕೋಲು ಚಳವಳಿ ನಡೆಸಿದ ರೈತರು

Posted date: 03 Nov, 2021

Powered by:     Yellow and Red

ತಾಲ್ಲೂಕು ಆಡಳಿತದ ಭ್ರಷ್ಟಾಚಾರ ಖಂಡಿಸಿ ಬಾರುಕೋಲು ಚಳವಳಿ ನಡೆಸಿದ ರೈತರು

ಚನ್ನಪಟ್ಟಣ:ನ/02/21. ಪ್ರತಿನಿತ್ಯವೂ, ಪ್ರತಿಯೊಬ್ಬ ರೈತರಿಗೂ ತಾಲೂಕು ಆಡಳಿತಾಧಿಕಾರಿಗಳು ವಿಳಂಬ ನೀತಿ ಅನುಸರಿಸುವುದು ಮತ್ತು ಲಂಚ ಪಡೆದು ಕೆಲಸ ನಿರ್ವಹಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ತಾಲ್ಲೂಕು ಆಡಳಿತ ಭ್ರಷ್ಟಾಚಾರ ಹಾಗೂ ಸಾರ್ವಜನಿಕ ಕೆಲಸಗಳಲ್ಲಿನ ವಿಳಂಬ ನೀತಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತಸಂಘದ ವತಿಯಿಂದ ನಗರದ ತಾಲೂಕು ಕಚೇರಿ ಮುಂಭಾಗ ಬಾರುಗೋಲು ಚಳುವಳಿ ನಡೆಸಲಾಯಿತು.

ನಗರದ ಗಾಂಧಿಭವನದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದ ರೈತಸಂಘದ ಕಾರ್ಯಕರ್ತರು ತಾಲೂಕು ಆಡಳಿತದ ವಿರುದ್ಧ ಘೋಷಣೆ ಮೊಳಗಿಸಿದರು.


ತಾಲೂಕು ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಕೆಲ ಅಧಿಕಾರಿವರ್ಗದ ಹಣದಾಹದಿಂದ ಸಾರ್ವಜನಿಕರು ಪರಿಪಾಟಲು ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.


ರೈತಸಂಘದ ವಿಭಾಗೀಯ ಉಪಾಧ್ಯಕ್ಷ ಕೆ. ಮಲ್ಲಯ್ಯ ಮಾತನಾಡಿ, ತಾಲೂಕು ಆಡಳಿತ ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಕೆಲ ಅಧಿಕಾರಿಗಳು ವ್ಯಾಪಕವಾದ ಭ್ರಷ್ಟಚಾರದಲ್ಲಿ ತೊಡಗಿದ್ದಾರೆ. ಕಂದಾಯ ಅಧಿಕಾರಿಗಳಾದ ಆರ್ ಐ ಮತ್ತು ವಿಎಗಳು ಕೇಂದ್ರಸ್ಥಾನದಲ್ಲಿರದೆ, ಪಟ್ಟಣಗಳಲ್ಲಿ ಕಚೇರಿ ತೆರೆದು ದರ್ಬಾರ್ ನಡೆಸುತ್ತಿದ್ದಾರೆ. ಖಾತೆ ಸೇರಿದಂತೆ ಸರ್ಕಾರಿ ಕೆಲಸಗಳಿಗೆ ಹಣ ವಸೂಲು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.


ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಹಣವಿಲ್ಲದೇ ಮಾತನಾಡಿಸುವುದು ಸಹ ಕಷ್ಟಸಾಧ್ಯವಾಗಿದೆ. ಭೂ ದಾಖಲೆಗಳ ಅಕ್ರಮ ದುರುಪಯೋಗ ನಡೆಯುತ್ತಿದೆ. ಮಾಹಿತಿ ಹಕ್ಕು ನಿಯಮದಡಿಯಲ್ಲಿ ನೀಡುವ ಅರ್ಜಿಗಳಿಗೆ ಮಾಹಿತಿ ನೀಡದೆ ಹಿಂಬರಹ ಕೊಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಸಕಾಲ ಯೋಜನೆಯನ್ನು ಬುಡಮೇಲು ಮಾಡಲಾಗುತ್ತಿದೆ. ಪಹಣಿ ಹಾಗೂ ಇನ್ನಿತ್ತರ ದಾಖಲೆಗಳಲ್ಲಿ

ಕಂಪ್ಯೂಟರ್ ಆಪರೇಟರ್ ಗಳು ತಪ್ಪು ಮಾಹಿತಿಗಳನ್ನು ದಾಖಲಿಸುವ ಕಾರಣ, ರೈತರು ಎಸಿ, ಡಿಸಿ ಕಚೇರಿ ಹಾಗೂ ನ್ಯಾಯಾಲಯಗಳಿಗೆ ಸುಖಾಸುಮ್ಮನೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.


ಸಣ್ಣಪುಟ್ಟ ಕೆಲಸಗಳಿಗೆ ರೈತರು ಹಾಗೂ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವ ಸ್ಥಿತಿ ಕೊನೆಯಾಗಬೇಕು. ಎಲ್ಲಾ ಕಚೇರಿಗಳಲ್ಲಿ ಸಿಸಿಟಿವಿ ಸರಹದ್ದಿನಲ್ಲಿ ಸಿಬ್ಬಂದಿಗಳು ಕಾರ್ಯನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಬೇಕು. ಭ್ರಷ್ಟಾಚಾರ ಕೊನೆಗೊಳ್ಳಬೇಕು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾರದರ್ಶಕ ಹಾಗೂ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು. ತಾಲೂಕಿನಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ರೈತರ ಕುಂದುಕೊರತೆಗಳ ಸಭೆ ಆಯೋಜಿಸಬೇಕು ಎಂದು ಒತ್ತಾಯಿಸಿದರು.


ಸಾಮಾಜಿಕ ಕಾರ್ಯಕರ್ತ ರುದ್ರಪ್ಪ ಮಾತನಾಡಿ, ಬಡತನಕ್ಕಿಂತ ಹೆಚ್ಚಿನ ನೋವನ್ನು ಈ ಭ್ರಷ್ಟಾಚಾರ ಕೊಡುತ್ತದೆ. ಸರ್ಕಾರಿ ಕೆಲಸ ದೇವರ ಕೆಲಸವಿಂದಂತೆ, ಪವಿತ್ರವಾದ ಕೆಲಸಕ್ಕೆ ಚ್ಯುತಿ ಬರಬಾರದು. ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಣ ಹೊಡೆಯುವುದನ್ನು ದೊಡ್ಡ ಸಾಧನೆ ಎಂದುಕೊಂಡಿದ್ದಾರೆ. ಅಧಿಕಾರಸ್ಥ ಜನಪ್ರತಿನಿಧಿಗಳು ಸಹ ಹಣವಿರುವ ಖಾತೆಗಳನ್ನೆ ಬಯಸುವುದು ಸಹ ಭ್ರಷ್ಟಚಾರಕ್ಕಾಗಿಯೆ. ಆದರೆ, ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಬಡವರ ಹೊಟ್ಟೆ ಮೇಲೆ ಹೊಡೆಯುವುದು ಅಕ್ಷಮ್ಯ ಅಪರಾಧ. ಅನ್ನಕೊಡುವ ರೈತನಿಗೆ ನೋವು ಕೊಡುವ ಕೆಲಸ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.


*ತಹಸೀಲ್ದಾರ್ ಆಗಮನಕ್ಕೆ ಪಟ್ಟು;*

ಗಾಂಧಿಭವನದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದ ರೈತಸಂಘದ ಕಾರ್ಯಕರ್ತರು, ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಈ ವೇಳೆ ತಹಸೀಲ್ದಾರ್ ಅನುಪಸ್ಥಿತಿಯಲ್ಲಿ ಮನವಿ ಸ್ವೀಕರಿಸಲು ಗ್ರೇಡ್ 2 ತಹಸೀಲ್ದಾರ್ ಲಕ್ಷ್ಮಿದೇವಮ್ಮ ಆಗಮಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ತಹಸೀಲ್ದಾರ್ ಆಗಮಿಸಿ, ನಮ್ಮ ಮನವಿ ಹಾಗೂ ದೂರುಗಳನ್ನು ಆಲಿಸಬೇಕು. ಇಲ್ಲವಾದರೆ, ಹೆದ್ದಾರಿಗೆ ಹೋಗಿ ಕುಳಿತುಕೊಳ್ಳುವುದಾಗಿ ಪಟ್ಟು ಹಿಡಿದರು. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಭಾಗಿಯಾಗಿದ್ದ ತಹಸೀಲ್ದಾರ್ ಎಲ್. ನಾಗೇಶ್ ಕೂಡಲೇ ಸ್ಥಳಕ್ಕಾಗಮಿಸಿ ರೈತರ ಆಹವಾಲುಗಳನ್ನು ಆಲಿಸಿದರು. ಮನವಿ ಆಲಿಸಿದ ತಹಸೀಲ್ದಾರ್, ನೀಡಿರುವ ಪ್ರತಿ ಮನವಿಯನ್ನು ಪ್ರಾಮಾಣಿಕವಾಗಿ ಬಗೆಹರಿಸುತ್ತೇನೆ. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ರೈತರ ಕುಂದುಕೊರತೆ ಸಭೆ ನಡೆಸಲಾಗುವುದು. ಮೊದಲಿಗೆ ಶೀಘ್ರವಾಗಿ ಕೋಡಂಬಳ್ಳಿ ಗ್ರಾಮದಲ್ಲಿ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.


ಈ ವೇಳೆ ಜಿಲ್ಲಾ ಕಾರ್ಯಾಧ್ಯಕ್ಷ ಎಚ್.ಸಿ.ಕೃಷ್ಣಯ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎನ್.ರಾಜು, ತಾಲೂಕು ಅಧ್ಯಕ್ಷ ರಾಮೇಗೌಡ, ತಾಲೂಕು ಗೌರವಾಧ್ಯಕ್ಷ ತಿಮ್ಮೇಗೌಡ, ಕರವೇ ರೈತ ಘಟಕದ ಜಿಲ್ಲಾಧ್ಯಕ್ಷ ನಾಗವಾರ ಶಂಭೂಗೌಡ, ಪದಾಧಿಕಾರಿಗಳಾದ ಸುಜೀವನ್ ಕುಮಾರ್, ವಿನಯ್, ಗೋಪಾಲ, ನಾಗರಾಜು, ಗುರುಲಿಂಗಯ್ಯ, ಕೆ.ಎಲ್.ನಾಗರಾಜು, ಮೋಹನಗೌಡ ಮತ್ತಿತರರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ. ಡಾ ರವಿಶಂಕರ್
ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ. ಡಾ ರವಿಶಂಕರ್

ಚನ್ನಪಟ್ಟಣ: ಕಾಲು ಬಾಯಿ ಜ್ವರದ ಪ್ರಕರಣಗಳಿಂದ ಸೀಮೆಹಸುಗಳು ಅಕಾಲ ಮರಣಕ್ಕೆ ತುತ್ತಾಗುವುದನ್ನು ತಡೆಯಲು ಕಡ್ಡಾಯವಾಗಿ ಲಸಿಕೆ ಹಾಕಿಸಿ ಎಂದು ಬಿ.ವಿ. ಹಳ್ಳಿ ಪಶು ವೈದ್ಯ ಆಸ್ಪತ್ರೆ ವೈದ್ಯ ಡಾ. ರವಿಶಂಕರ

ಬೆಂಬಲ ಬೆಲೆಯಡಿ ಭತ್ತ ಖರೀದಿ ಕೇಂದ್ರ ಡಿಸೆಂಬರ್ 1 ರಿಂದ ರೈತರಿಂದ ನೋಂದಣಿ ಆರಂಭಿಸಲು ಡಿಸಿ ಸೂಚನೆ
ಬೆಂಬಲ ಬೆಲೆಯಡಿ ಭತ್ತ ಖರೀದಿ ಕೇಂದ್ರ ಡಿಸೆಂಬರ್ 1 ರಿಂದ ರೈತರಿಂದ ನೋಂದಣಿ ಆರಂಭಿಸಲು ಡಿಸಿ ಸೂಚನೆ

ರಾಮನಗರ, ನ.30/21:  ಬೆಂಬಲ ಬೆಲೆ ಯೋಜನೆಯಡಿ ರೈತರು ಬೆಳೆದ ಭತ್ತ ಖರೀದಿಸಲು ರಾಮನಗರ, ಚನ್ನಪಟ್ಟಣ, ಮಾಗಡಿ  ಹಾಗೂ ಕನಕಪುರದಲ್ಲಿ ತಾಲ್ಲೂಕುವಾರು ಒಂದರಂತೆ ಡಿಸೆಂಬರ 1 ರಿಂದ 4 ನೋಂದಣಿ ಕೇ

ಅಕಾಲಿಕ ಮಳೆಗೆ ನಲುಗಿದ ರೈತರು, ಜಿಲ್ಲೆಯಲ್ಲಿ 27 ಕೋಟಿ ರೂ. ಮೌಲ್ಯದ ಬೆಳೆ ನಷ್ಟ
ಅಕಾಲಿಕ ಮಳೆಗೆ ನಲುಗಿದ ರೈತರು, ಜಿಲ್ಲೆಯಲ್ಲಿ 27 ಕೋಟಿ ರೂ. ಮೌಲ್ಯದ ಬೆಳೆ ನಷ್ಟ

ರಾಮನಗರ: ಕೈಗೆ ಬಂದು ತುತ್ತು ಬಾಯಿಗೆ ಇಲ್ಲ ಎಂಬಂತಹ ಸ್ಥಿತಿ ರೇಷ್ಮನಾಡು ರಾಮನಗರ ಜಿಲ್ಲೆಯ ರೈತರದ್ದಾಗಿದೆ. ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಸುರಿದ  ಮಳೆಯಿಂದಾಗಿ ಅನ್ನದಾತ ತತ್ತರಿಸಿದ್

ತಿಮ್ಮಸಂದ್ರ ಕೆರೆಯಲ್ಲಿ ಜಲಕ್ರೀಡೆ ಆಡುತ್ತಿರುವ ಕಾಡಾನೆಗಳು
ತಿಮ್ಮಸಂದ್ರ ಕೆರೆಯಲ್ಲಿ ಜಲಕ್ರೀಡೆ ಆಡುತ್ತಿರುವ ಕಾಡಾನೆಗಳು

ಚನ್ನಪಟ್ಟಣ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಆನೆಗಳ ಹಿಂಡು ಚನ್ನಪಟ್ಟಣ ತಾಲೂಕಿನ ತಿಮ್ಮಸಂದ್ರ ಗ್ರಾಮದ ಕೆರೆಯಲ್ಲಿ ಬೀಡುಬಿಟ್ಟಿವೆ.  ತಿಮ್ಮಸಂದ್ರ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಕೆರೆಯಲ

ಮೀನು ಕೃಷಿ ಮಾಡಿ ಹೆಚ್ಚಿನ ಆದಾಯ ಗಳಿಸಿ :ಇಕ್ರಂ
ಮೀನು ಕೃಷಿ ಮಾಡಿ ಹೆಚ್ಚಿನ ಆದಾಯ ಗಳಿಸಿ :ಇಕ್ರಂ

ನರೇಗಾ ಯೋಜನೆಯಡಿ ಮೀನು ಕೃಷಿಕೊಳ ನಿರ್ಮಿಸಿಕೊಂಡು ಮೀನುಗಾರಿಕೆಯನ್ನು ರೈತರು ತಮ್ಮ ದೈನಂದಿನ ಚಟುವಟಿಕೆಯೊಂದಿಗೆ ಉಪ ಕಸುಬನ್ನಾಗಿ ಮಾಡಿಕೊಂಡರೆ ಹೆಚ್ಚಿನ‌ ಆದಾಯ‌ ಗಳಿಸಬಹುದು ಎಂದು ಜಿಲ್ಲಾ ಪಂಚಾಯತ್ ಮ

ತಾಲ್ಲೂಕು ಆಡಳಿತದ ಭ್ರಷ್ಟಾಚಾರ ಖಂಡಿಸಿ ಬಾರುಕೋಲು ಚಳವಳಿ ನಡೆಸಿದ ರೈತರು
ತಾಲ್ಲೂಕು ಆಡಳಿತದ ಭ್ರಷ್ಟಾಚಾರ ಖಂಡಿಸಿ ಬಾರುಕೋಲು ಚಳವಳಿ ನಡೆಸಿದ ರೈತರು

ಚನ್ನಪಟ್ಟಣ:ನ/02/21. ಪ್ರತಿನಿತ್ಯವೂ, ಪ್ರತಿಯೊಬ್ಬ ರೈತರಿಗೂ ತಾಲೂಕು ಆಡಳಿತಾಧಿಕಾರಿಗಳು ವಿಳಂಬ ನೀತಿ ಅನುಸರಿಸುವುದು ಮತ್ತು ಲಂಚ ಪಡೆದು ಕೆಲಸ

ನವೆಂಬರ್ 2 ನೇ ತಾರೀಖಿನಂದು ರೈತಸಂಘದಿಂದ ನಾಲ್ಕು ತಾಲ್ಲೂಕು ಕಛೇರಿಗಳ ಮುಂದೆ ಏಕಕಾಲದಲ್ಲಿ ಪ್ರತಿಭಟನೆ
ನವೆಂಬರ್ 2 ನೇ ತಾರೀಖಿನಂದು ರೈತಸಂಘದಿಂದ ನಾಲ್ಕು ತಾಲ್ಲೂಕು ಕಛೇರಿಗಳ ಮುಂದೆ ಏಕಕಾಲದಲ್ಲಿ ಪ್ರತಿಭಟನೆ

ಚನ್ನಪಟ್ಟಣ: ಅ:23/21. ಜಿಲ್ಲೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಚಾರ, ಲಂಚಗುಳಿತನ ಮತ್ತು ಭ್ರಷ್ಟಚಾರದಿಂದ ಕೂಡಿರುವ ಆಡಳಿತ ವೈಫಲ್ಯವನ್ನು

ಕೋಳಿಫಾರಂ ಗೆ ಚಿರತೆ ದಾಳಿ ಲಕ್ಷಾಂತರ ರೂ ಲುಕ್ಸಾನು
ಕೋಳಿಫಾರಂ ಗೆ ಚಿರತೆ ದಾಳಿ ಲಕ್ಷಾಂತರ ರೂ ಲುಕ್ಸಾನು

ರಾಮನಗರ.ಅ.25/21: ರಾಮನಗರ ತಾಲೂಕಿನ ಬಿಡದಿ ಹೋಬಳಿ ಶೆಟ್ಟಿಗೌಡನದೊಡ್ಡಿ ಗ್ರಾಮದ ಬಳಿ ಇರುವ ಕೋಳಿ ಫಾರಂ ನಲ್ಲಿ ಚಿರತೆ ಏಕಾಏಕಿ ದಾಳಿ ನಡೆಸಿ ನೂರ

ನೂತನ ಹೆದ್ದಾರಿಯಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣ. ಗದ್ದೆಗೆ ನುಗ್ಗಿದ ನೀರು
ನೂತನ ಹೆದ್ದಾರಿಯಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣ. ಗದ್ದೆಗೆ ನುಗ್ಗಿದ ನೀರು

ಚನ್ನಪಟ್ಟಣ.ಅ.20:21. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗುತ್ತಿದೆ. ಈ ನಿರ್ಮಾಣದ ಕಾಮಗಾರಿ ವೇಳೆ ಅವೈಜ್ಞಾನಿಕ ಚರಂಡಿ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಮಳೆ ನೀರು ಕೃಷಿ ಜಮೀನಿಗೆ ನು

ಗರಕಹಳ್ಳಿ ಡೈರಿ ಸಭೆಯಲ್ಲಿ ಮಾರಾಮಾರಿ. ಸೆಕ್ರೆಟರಿ ವಿರುದ್ದ ಹರಿಹಾಯ್ದ ಸದಸ್ಯರು. ಮೂರು ಮಂದಿಗೆ ಗಾಯ
ಗರಕಹಳ್ಳಿ ಡೈರಿ ಸಭೆಯಲ್ಲಿ ಮಾರಾಮಾರಿ. ಸೆಕ್ರೆಟರಿ ವಿರುದ್ದ ಹರಿಹಾಯ್ದ ಸದಸ್ಯರು. ಮೂರು ಮಂದಿಗೆ ಗಾಯ

ಚನ್ನಪಟ್ಟಣ: ಅ/11/21. ಗರಕಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2020/21 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಶಿವಲಿಂಗಯ್ಯ

Top Stories »  


Top ↑