Tel: 7676775624 | Mail: info@yellowandred.in

Language: EN KAN

    Follow us :


ಸಮಾನ ಮನಸ್ಕರ ವೇದಿಕೆಯ ರೈತ ಸಂಘಟನೆ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಹೊಂಬಾಳೇಗೌಡ

Posted date: 13 Jan, 2022

Powered by:     Yellow and Red

ಸಮಾನ ಮನಸ್ಕರ ವೇದಿಕೆಯ ರೈತ ಸಂಘಟನೆ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಹೊಂಬಾಳೇಗೌಡ

ಚನ್ನಪಟ್ಟಣ:ಜ/13/22.ಗುರುವಾರ. ರೈತ ಸಂಘ ಎಂದರೆ ಮೂಗುಮುರಿಯುವ ಕಾಲ ಮುಗಿದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರೈತರಿಗೆ ಅನ್ಯಾಯವಾಗದಂತೆ ಎಚ್ಚರವಹಿಸುವ ಕಾಲ ಸನ್ನಿಹಿತವಾಗುತ್ತಿದೆ ಎಂದು ಹಿರಿಯ ರೈತ ಮುಖಂಡ ವಿಠಲೇನಹಳ್ಳಿ ಹೊಂಬಾಳೇಗೌಡ ತಿಳಿಸಿದರು.

ಅವರು ಇಂದು ಕನ್ನಮಂಗಲ ಗ್ರಾಮದ ಹೊರವಲಯದಲ್ಲಿರುವ ಕಂತೆಸ್ವಾಮಿ ಮತ್ತು ಮಂಟೇಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ರೈತ ಸಂಘಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


80 ರ ದಶಕದ ರೈತ ಸಂಘಟನೆ ಮತ್ತೆ ಮರುಕಳಿಸುತ್ತಿದೆ. ಚನ್ನಪಟ್ಟಣ ತಾಲ್ಲೂಕು ಒಂದರಲ್ಲೇ ಈಗಾಗಲೇ ಸಮಾನ ಮನಸ್ಕರ ವೇದಿಕೆ ವತಿಯಿಂದ ನಲವತ್ತು ಗ್ರಾಮಗಳಲ್ಲಿ ಸಂಘಟನೆ ಚಿಗುರು ಹೊಡೆದಿದೆ. ಹಳೆಬೇರಿನ ಜೊತೆ ಹೊಸ ಚಿಗುರು ಸೇರಿದ್ದು ಸೊಬಗಿನ ಜೊತೆಗೆ ಬುಡ ಭದ್ರವಾಗುತ್ತಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರೈತರ ಕೆಲಸದ ಬಗ್ಗೆ ಆಸ್ಥೆವಹಿಸಲು ಕಾರಣಕರ್ತರಾಗುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಘಟನೆ ಆಗುವಂತೆ ನೀವುಗಳು ಮುಂದಡಿ ಇಡಬೇಕು ಎಂದು ಕರೆ ನೀಡಿದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ರೈತ ಧುರೀಣ ಸಿ ಪುಟ್ಟಸ್ವಾಮಿಯವರು, ಶಾಲು ಹಾಕಿಕೊಳ್ಳುವುದು ಎಂದರೆ ಅದೊಂದು ಜವಾಬ್ದಾರಿ, ಸಂಘಟನೆಗೆ ಬೇಕಾಗಿರುವುದು ಶಿಸ್ತು ಮತ್ತು ಪ್ರಾಮಾಣಿಕತೆ. ಅದಿಲ್ಲದಿದ್ದರೆ ಯಾವುದೇ ಸಂಘಟನೆ ಶಾಶ್ವತವಾಗಿ ಉಳಿದುಕೊಳ್ಳಲು ಸಾಧ್ಯವಿಲ್ಲ. ನಿಮ್ಮಲ್ಲಿ ವಿಚಾರಗಳು ತುಂಬಿ ತುಳುಕುತ್ತಿವೆ. ಅದನ್ನು ಹೊರಗೆಡಹಲು ತವಕಿಸುತ್ತಿದ್ದೀರಿ. ನಿಮಗಾಗಿರುವ ಅನ್ಯಾಯದ ವಿರುದ್ಧ ಸಿಡಿದೇಳಲು ಇದೊಂದು ಸದಾವಕಾಶ. ಹಾಗಾಗಿ ನೀವು ರೈತ ಸಂಘಟನೆಗೆ ಸೇರುವ ಮೂಲಕ ನಿಮಗೆ ಮತ್ತು ನಿಮ್ಮ ಗ್ರಾಮಕ್ಕೆ

ಆಗುವ ಅನ್ಯಾಯದ ವಿರುದ್ಧ ಹೋರಾಡಲು ಅಸ್ತ್ರ ವಾಗಿದೆ ಎಂದು ತಿಳಿಸಿದರು.


ನಮ್ಮ ಶ್ರಮದ ಬದುಕನ್ನು ಬಂಡವಾಳಶಾಹಿ ಗಳು ಕೊಳ್ಳೆಹೊಡೆಯುತ್ತಿವೆ. ವಿವಿಧ ಸಂಘಟನೆಗಳು, ಪ್ರತಿಹಂತದ ರಾಜಕಾರಣಿಗಳು ಇಂದು ಹಸಿರು ಶಾಲು ಹಾಕ್ಕೊಂಡು ರಾಜಕಾರಣ ಮಾಡುತ್ತಾರೆ. ಹಸಿರು ರೈತ ಕುಲದ ಸಂಕೇತ. ಇದನ್ನು ಧರಿಸಿದ ವ್ಯಕ್ತಿ ನ್ಯಾಯಪರ ಇರಬೇಕು. ಆದರೆ ರಾಜಕಾರಣಿಗಳು ರೈತರ ಹೆಸರೇಳಿ, ಶಾಲು ಹಾಕಿಕೊಂಡು ರೈತರಿಗೆ ಕೊಡಲಿ ಪೆಟ್ಟು ನೀಡುತ್ತಿದ್ದಾನೆ. ನಮಗೆ ಬೇಕಾಗಿರುವುದು ವೈಜ್ಞಾನಿಕ ಬೆಲೆ, ಪ್ರಾಮಾಣಿಕತೆಯ ಅಧಿಕಾರಿಗಳು, ನೀರು, ವಿದ್ಯುತ್, ಇದನ್ನು ಕೊಡುವುದು ಸರ್ಕಾರದ ಕೆಲಸ, ಕೊಡದಿದ್ದರೂ ಪಡೆದುಕೊಳ್ಳುವುದು ನಮ್ಮ ಹಕ್ಕು. ಹಾಗಾಗಿ ಇಂದಿನ ಸಂಘಟನೆ ರೈತರ ಬದುಕಿಗೆ ಆಶಾದಾಯಕವಾಗಲಿದೆ ಎಂದು ತಿಳಿಸಿದರು.


ಮುಂದಿನ ದಿನಗಳಲ್ಲಿ ಮಹಾತ್ಮ ಗಾಂಧಿ ಮತ್ತು ಡಾ ಬಿ ಆರ್ ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಅಳವಡಿಸಿಕೊಂಡು, ಚಳವಳಿಯನ್ನು ಹಮ್ಮಿಕೊಳ್ಳೋಣಾ. ಅಹಿಂಸಾ ಮಾರ್ಗದಲ್ಲಿ ಸಂವಿಧಾನದ ಪ್ರಕಾರವೇ ರೈತ ಚಳವಳಿಯನ್ನು ಮುನ್ನಡೆಸಿ, ರೈತ ಸಂಕಷ್ಟವನ್ನು ದಪ್ಪ ಚರ್ಮದವರಿಗೆ ತಿಳಿಸುವ ಮೂಲಕ ಚಳವಳಿ ಹಮ್ಮಿಕೊಂಡು ಕಾರ್ಯಸಾಧನೆ ಮಾಡಲು ನಾವು ಮುನ್ನುಗ್ಗೋಣಾ ಎಂದು ಯುವಕರಿಗೆ ಕರೆ ನೀಡಿದರು.


ಹಿಂದಿನ ಮತ್ತು ಇಂದಿನ ರೈತ ಸಂಘಟನೆ, ನಡೆದುಬಂದ ದಾರಿ, ಆಗಬೇಕಿರುವ ಕೆಲಸಗಳ ಬಗ್ಗೆ ಹಿರಿಯ ರೈತ ಮುಖಂಡರಾದ ಪ್ರಕಾಶ್, ನಂಜಪ್ಪ, ಪ್ರಗತಿಪರ ರೈತರಾದ ಶಿವಕುಮಾರ್, ಮಹೇಶ್ ನಾಗೇಶ್, ಸಾಮಾಜಿಕ ಹೋರಾಟಗಾರ ಗೋ ರಾ ಶ್ರೀನಿವಾಸ, ರಾಂಪುರ ಧರಣೀಶ್, ರಾಂಪುರ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕನ್ನಮಂಗಲ ಯೋಗಿ, ಚಲುವೇಗೌಡ ರೈತ ಸಂಘಟನೆ ಬಗ್ಗೆ ಮಾತನಾಡಿದರು.

ಕನ್ನಮಂಗಲ ಮತ್ತು ಅಂಗರಹಳ್ಳಿ ಗ್ರಾಮಗಳ ನಲವತ್ತಕ್ಕೂ ಹೆಚ್ಚು ಮಂದಿ ಸಮಾನ ಮನಸ್ಕರ ರೈತ ಸಂಘಟನೆಗೆ ಹಸಿರು ಶಾಲು ಧರಿಸುವ ಮೂಲಕ ಸೇರ್ಪಡೆಗೊಂಡರು. ಸೇರ್ಪಡೆಗೊಂಡವರಿಗೆ ಸಿ ಪುಟ್ಟಸ್ವಾಮಿ ರವರು ಪ್ರಮಾಣವಚನ ಬೋಧಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ

ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ

ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ

ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ

ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ

ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ

ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್

ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ

ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು

ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು  ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್

ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ

ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ

ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ

ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ

ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ

ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.

ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ

ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ

ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ




ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ

Top Stories »  


Top ↑