ಸಮಸ್ಯೆಗಳ ಆಗರವಾಗಿರುವ ರಾಗಿ ಖರೀದಿ ಕೇಂದ್ರ ಖರೀದಿಯಲ್ಲಿ ವಿಳಂಬ

ಚನ್ನಪಟ್ಟಣ ಮೇ 23 22. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರೈತರಿಂದ ರಾಗಿ ಖರೀದಿ ಮಾಡುವ ಸಲುವಾಗಿ ಕೇಂದ್ರವೊಂದನ್ನು ತೆರೆದಿದ್ದು ಸಂಪೂರ್ಣವಾಗಿ ಅವ್ಯವಸ್ಥೆಯಿಂದ ಕೂಡಿದೆ ಎಂದು ರೈತರು ಆರೋಪಿಸಿದ್ದಾರೆ. ರಾಮನಗರ ಮತ್ತು ಚನ್ನಪಟ್ಟಣ ತಾಲೂಕಿನ ರಾಗಿ ಖರೀದಿ ಕೇಂದ್ರವನ್ನು ಮೂಲಸೌಕರ್ಯವಿಲ್ಲದ, ಸರಿಯಾದ ರಸ್ತೆಯು ಇರದ ಸ್ಥಳದಲ್ಲಿ ಸ್ಥಾಪನೆ ಮಾಡಿರುವ ಪರಿಣಾಮ ರಾಗಿ ಮಾರಾಟಕ್ಕೆ ಬರುವ ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಕಂದಾಯ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುವ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ವತಿಯಿಂದ ರೈತರಿಂದ ಬೆಂಬಲ ಬೆಲೆಯಡಿಯಲ್ಲಿ ರಾಗಿಯನ್ನು ಖರೀದಿ ಮಾಡಲಾಗುತ್ತಿದೆ. ನಗರದ ಹೊರಭಾಗದಲ್ಲಿರುವ ಪಿಟಿಎಸ್ ಸಮೀಪ ಇರುವ ಖಾಸಗಿ ಗೋಡನ್ ಒಂದನ್ನು ಇಲಾಖೆಯು ಬಾಡಿಗೆಗೆ ಪಡೆದು ರಾಗಿ ಖರೀದಿ ಮಾಡಿ ದಾಸ್ತಾನುಮಾಡಲಾಗುತ್ತಿದೆ. ಆದರೆ ಈ ರಾಗಿ ಕೇಂದ್ರ ಸಾಕಷ್ಟು ಸಮಸ್ಯೆಗೆ ಕಾರಣವಾಗಿದ್ದು, ಇಲ್ಲಿಗೆ ರಾಗಿ ತರುವ ರೈತರು ಪರದಾಡುವಂತಾಗಿದೆ.
*ಪೂರ್ಣ ದಿನ ಕಾಯಬೇಕು:*
ರಾಗಿ ಖರೀದಿ ಕೇಂದ್ರ ಸ್ಥಾಪನೆ ಮಾಡಿರುವಲ್ಲಿ ತ್ವರಿತವಾಗಿ ಖರೀದಿ ಕಾರ್ಯ ನಡೆಯುತ್ತಿಲ್ಲ. ಪ್ರತಿದಿನ 20 ರಿಂದ 30 ವಾಹನಗಳಲ್ಲಿ ರೈತರು ರಾಗಿ ಮಾರಾಟಕ್ಕೆ ಆಗಮಿಸುತ್ತಿದ್ದು, ಖರೀದಿ ಪ್ರಕ್ರಿಯೆ ಸಾಕಷ್ಟು ವಿಳಂಬವಾಗುತ್ತಿರುವುದರಿಂದ ದಿನಪೂರಾ ರೈತರು ವಾಹನದಲ್ಲೇ ಕುಳಿತು ತಮ್ಮ ಸರದಿಗಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೆಲವೊಮ್ಮೆ ಬೆಳಿಗ್ಗೆಯಿಂದ ಸಂಜೆಯವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.ದಿನಪೂರ್ತಿ ಕಾಯುವ ರೈತರಿಗೆ ಅಂದಿನ ಕೂಲಿಯನ್ನು ಕಳೆದುಕೊಂಡು ರಸ್ತೆಯ ಪಕ್ಕದಲ್ಲಿ ದಿನದೂಡಬೇಕಾಗಿದೆ.
ರಾಗಿ ಖರೀದಿ ಕೇಂದ್ರದಲ್ಲಿ ಸಣ್ಣ ರೈತರು ಮಾತ್ರ ರಾಗಿ ಮಾರಾಟ ಮಾಡಲು ಅವಕಾಶವಿದ್ದು, ಬಹುತೇಕ ಸಣ್ಣ ಸ್ವಂತ ವಾಹನ ಹೊಂದಿಲ್ಲದಿರುವುದರಿಂದ, ರೈತರು ಬಾಡಿಗೆ ವಾಹನದಲ್ಲಿ ತಾವು ಬೆಳೆದ ರಾಗಿಯನ್ನು ಮಾರಾಟ ಕೇಂದ್ರಕ್ಕೆ ತರುತ್ತಾರೆ. ರಾಗಿ ಖರೀದಿಗಾಗಿ ದಿನಪೂರಾ ಕಾಯಬೇಕಾಗಿರುವ ಕಾರಣ ರೈತರು ಒಂದು ದಿನದ ಬಾಡಿಗೆಯನ್ನು ವಾಹನಗಳಿಗೆ ನೀಡಬೇಕಿದ್ದು, ರೈತರ ಜೇಬಿಗೆ ಇದು ಹೊರೆಯಾಗುತ್ತಿದೆ. ತ್ವರಿತವಾಗಿ ರಾಗಿ ಖರೀದಿ ಪ್ರಕ್ರಿಯೆ ಮಾಡಿದ್ದೇ ಆದಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ ಬಾಡಿಗೆಯು ಕಡಿಮೆಯಾಗಿ ಮುಂದಿನ ಕೆಲಸ ಮಾಡಲು ಸಹಕಾರಿಯಾಗುತ್ತದೆ ಎಂಬುದು ರೈತರ ಅಭಿಪ್ರಾಯವಾಗಿದೆ.
*ಕೇಂದ್ರ ಇರುವ ರಸ್ತೆ ಅವ್ಯವಸ್ಥೆ:*
ರಾಗಿ ಖರೀದಿ ಕೇಂದ್ರ ತೆರೆದಿರುವ ಸ್ಥಳಕ್ಕೆ ಹೋಗುವ ರಸ್ತೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಮಣ್ಣಿನ ರಸ್ತೆಯಾಗಿರುವ ಈ ರಸ್ತೆ ಮಳೆಯಿಂದಾಗಿ ಕೆಸರು ಗುಂಡಿಯಾಗಿದೆ. ಒಂದೇ ವಾಹನ ಹೋಗಲು ಸಾಧ್ಯವಿರುವ ರಸ್ತೆಯಲ್ಲಿ ಎದುರು ವಾಹನ ಬರಲು ಜಾಗವಿಲ್ಲಾ. ಇನ್ನು ವಾಹನಗಳು ಹೆಚ್ಚಾಗಿ ಸಂಚರಿಸುವ ಪರಿಣಾಮ ರಸ್ತೆಯಲ್ಲಿ ಆಳವಾದ ಗುಂಡಿಗಳು ನಿರ್ಮಾಣಗೊಂಡು ಸಣ್ಣಪುಟ್ಟ ವಾಹನಗಳಿರಲಿ ಜನರು ನಡೆದುಕೊಂಡು ಹೋಗಲು ಸಾಧ್ಯವಿಲ್ಲದಂತಾಗಿದೆ.
ಖರೀದಿ ಕೇಂದ್ರಕ್ಕೆ ಹೋಗುವ ರಸ್ತೆಯಲ್ಲಿ ರೈಲ್ವೆ ಗೇಟ್ ಇದ್ದು, ಬೆಂಗಳೂರು-ಮೈಸೂರು ಮಾರ್ಗದಲ್ಲಿ ಹೆಚ್ಚು ರೈಲುಗಾಡಿಗಳು ಸಂಚರಿಸುವ ಕಾರಣ ಆಗಾಗ್ಗೆ ರೈಲ್ವೆಗೇಟ್ ಮುಚ್ಚಲಾಗುತ್ತದೆ. ಒಮ್ಮೆ ಗೇಟ್ ಹಾಕಿದರೆ ಕನಿಷ್ಟ 30 ನಿಮಿಷಗಳ ವರೆಗೆ ಕಾಯ್ದು ನಿಲ್ಲಬೇಕಾಗಿದ್ದು, ಇದು ರೈತರಿಗೆ ಸಮಸ್ಯೆಯಾಗುತ್ತಿದೆ. ಅಧಿಕಾರಿಗಳು ಮೂಲಸೌಕರ್ಯ ಇರುವ ಜಾಗದಲ್ಲಿ ಖರೀದಿಕೇಂದ್ರ ಆರಂಭಿಸಿದ್ದರೆ ರೈತರಿಗೆ ಅನುಕೂಲವಾಗುತಿತ್ತು. ಅದು ಬಿಟ್ಟು ಅವರಿಗೆ ಅನುಕೂಲ ಆಗುವ ರೀತಿಯಲ್ಲಿ, ರೈತರಿಗೆ ಅನಾನುಕೂಲವಾಗುವ ಜಾಗದಲ್ಲಿ ತೆರೆದಿರುವುದು ಇಲಾಖೆಗೆ ರೈತರಮೇಲೆ ಕಾಳಜಿ ಇಲ್ಲ ಎನ್ನುವುದು ವೇದ್ಯವಾಗುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
*ಯಾವುದೇ ಸೌಲಭ್ಯವಿಲ್ಲ:*
ಕೇಂದ್ರವೂ ನಗರದ ಹೊರಭಾಗದಲ್ಲಿರುವುದರಿಂದ ಸಾಕಷ್ಟು ದೂರದಲ್ಲಿರುವ ಈ ಖರೀದಿ ಕೇಂದ್ರ ನಿರ್ಜನ ಪ್ರದೇಶದಲ್ಲಿದೆ. ಊಟ, ತಿಂಡಿ ಇರಲಿ ಕುಡಿಯುವ ನೀರಿಗೂ ಬರವಿದ್ದು, ರೈತರು ಬೆಳಿಗ್ಗಿನಿಂದ ಸಂಜೆಯವರೆಗೆ ಖಾಲಿಹೊಟ್ಟೆಯಲ್ಲಿ ಕಾಯ್ದು ನಿಲ್ಲಬೇಕಿದೆ. ಇನ್ನು ಸರಕು ಸಾಗಾಣಿಕಾ ಆಟೋ ಸೇರಿದಂತೆ ಸಣ್ಣ ವಾಹನಗಳಲ್ಲಿ ರಾಗಿ ತರುವ ರೈತರು ಹಳ್ಳಗುಂಡಿಯಿಂದ ಕೂಡಿರುವ ರಸ್ತೆಯಲ್ಲಿ ಖರೀದಿಕೇಂದ್ರ ತಲುಪುವುದೇ ದುಸ್ಥರವಾಗಿದೆ.
*ರಾಮನಗರದ ರೈತರೇ ಹೆಚ್ಚು:*
ಚನ್ನಪಟ್ಟಣ ಖರೀದಿ ಕೇಂದ್ರದಲ್ಲಿ ರಾಮನಗರ ಮತ್ತು ಚನ್ನಪಟ್ಟಣ ತಾಲೂಕಿನ ರೈತರ ರಾಗಿ ಖರೀದಿ ಮಾಡಲಾಗುತ್ತಿದೆ. ಚನ್ನಪಟ್ಟಣ ತಾಲೂಕಿನ ರೈತರಿಗಿಂತ ಹೆಚ್ಚು ರಾಮನಗರ ರೈತರು ಆಗಮಿಸುತ್ತಿದ್ದು, ರಾಮನಗರ ರೈತರು ಹೆಚ್ಚುಕಾಲ ಕಾಯ್ದು ನಿಲ್ಲುವಂತಾಗಿದೆ. ಚನ್ನಪಟ್ಟಣದಲ್ಲಿ ಬಹುತೇಕ ರೈತರ ಜಮೀನಿಗೆ ಕೊಳವೆಬಾವಿ ನೀರಾವರಿ ಸೌಲಭ್ಯವಿರುವ ಕಾರಣ ರಾಗಿ ಬೆಳೆಯುವರ ಪ್ರಮಾಣ ಕಡಿಮೆಯಾಗಿದೆ. ಆದರೆ, ರಾಮನಗರ ತಾಲೂಕಿನಲ್ಲಿ ಮಳೆಯಾಶ್ರಿತ ಕೃಷಿ ಹೆಚ್ಚಾಗಿ ನಡೆಯುತ್ತಿರುವ ಕಾರಣ ರಾಗಿಬೆಳೆಗಾರರ ಸಂಖ್ಯೆ ಹೆಚ್ಚಿದೆ.
*ಚನ್ನಪಟ್ಟಣದಲ್ಲಿ ರಾಗಿ ಖರೀದಿ ಕೇಂದ್ರವನ್ನು ತೆರೆದಿರುವ ಸ್ಥಳ ಅವೈಜ್ಞಾನಿಕವಾಗಿದೆ. ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಖರೀದಿಕೇಂದ್ರ ಆರಂಭಿಸಬೇಕಿತ್ತು. ಆದರೆ ಅವರಿಗೆ ಬೇಕಾದಂತೆ ಯಾವುದೋ ಮೂಲೆಯಲ್ಲಿ ಆರಂಭಿಸಿರುವುದರಿಂದ ಇಷ್ಟೆಲ್ಲಾ ಅವಾಂತರಗಳಾಗುತ್ತಿವೆ. ಕೂಡಲೇ ಸೂಕ್ತ ಸ್ಥಳಕ್ಕೆ ಖರೀದಿಕೇಂದ್ರ ಸ್ಥಳಾಂತರಿಸಬೇಕು.
ಸಿ.ಪುಟ್ಟಸ್ವಾಮಿ, ಹಿರಿಯ ರೈತಹೋರಾಟಗಾರ*
ಖರೀದಿ ಕೇಂದ್ರದ ಸಮಸ್ಯೆಯ ಬಗ್ಗೆ ನಮ್ಮ ಇಲಾಖೆಯ ಜಿಲ್ಲಾ ನಿರ್ದೇಶಕರಿಗೆ ವರದಿ ನೀಡಲಾಗಿದೆ. ಅವರಿಂದ ಸೂಚನೆ ಬಂದ ಬಳಿಕ ಕ್ರಮಕೈಗೊಳ್ಳಲಾಗುವುದು. ಚನ್ನಪಟ್ಟಣ
ತಾಲೂಕಿನ ಖರೀದಿ ಕೇಂದ್ರದಲ್ಲಿ ತ್ವರಿತವಾಗಿ ಖರೀದಿ ಮಾಡಲಾಗುತ್ತಿದೆ. ಆದರೆ ರಾಮನಗರ ತಾಲ್ಲೂಕಿನಿಂದ ಕೇಂದ್ರಕ್ಕೆ ಹೆಚ್ಚು ರೈತರು ಬರುತ್ತಿರುವುದರಿಂದ ಸಮಸ್ಯೆಯಾಗುತ್ತಿದ್ದು ಬೆಳಿಗ್ಗೆ 7 ಗಂಟೆಯಿಂದಲೇ ನೋಂದಣಿ ಆರಂಭಿಸಲಾಗುತ್ತಿದೆ. ಆಹಾರ ಮತ್ತು ನಾಗರೀಕ ಸರಬರಾಜು ಜಿಲ್ಲಾ ಉಪನಿರ್ದೇಶಕರಿಗೆ ಜಾಗದ ಸಮಸ್ಯೆ ಬಗ್ಗೆ ವರದಿ ನೀಡಲಾಗಿದೆ. ಅವರ ಸೂಚನೆಯ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಶಾಂತಕುಮಾರಿ, ಶಿರಸ್ತೇದಾರ್, ಆಹಾರ ಇಲಾಖೆ ಚನ್ನಪಟ್ಟಣ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in agriculture »

ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್

ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ

ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ

ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.

ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ
ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ
ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ

ಟಿಎಪಿಸಿಎಂಎಸ್ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮೆಹರೀಶ್
ಚನ್ನಪಟ್ಟಣ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ ಅಧ್ಯಕ್ಷರಾಗಿ ಮತ್ತೀಕೆರೆ ಗ್ರಾಮದ ಮೆಹರೀಶ್ (ಮನು) ರವರು ಸೋಮವಾರ ಅವಿರೋಧವಾಗಿ ಆಯ್

ಪಂಪ್ ಸೆಟ್ ಬಾವಿ ನೀರಿಗಾಗಿ ತಾಯಿ, ಪುತ್ರ ಕೊಲೆ
ಪಾಂಡವಪುರ: ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಹಾಯಿಸಲು ಪಂಪ್ ಸೆಟ್ ಬಾವಿ ನೀರಿನ ವಿಚಾರಕ್ಕೆ ಸಂಬಂಧಪಟ್ಟಂತೆ ತಾಯಿ ಹಾಗೂ ಪುತ್ರನನ್ನು ಸ್ವಂತ ಸಂಬಂಧಿ

ಕೆರೆಯಲ್ಲಿ ಕುರಿ ಮೈತೊಳೆಯುತ್ತಿದ್ದ ಒಂದೇ ಕುಟುಂಬದ ಮೂರು ಮಂದಿ ಸಾವು
ಮಾಗಡಿ: ತಾಲೂಕಿನ ಮುತ್ತಸಾಗರ ಗೊಲ್ಲರಹಟ್ಟಿ ಗ್ರಾಮದ ಪೂಜಾರಿ ರಾಜಣ್ಣ ಎಂಬುವರ ಪುತ್ರ ನಾಗರಾಜು [30], ಜ್ಯೋತಿ [35], ಲಕ್ಷ್ಮೀ [22] ಕುರಿ ಮೈತೊಳೆಯುತ್ತ

ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರ ಗಂಟುರೋಗ (ಪೆಬ್ರಿನ್) ಸೋಂಕು ತಕ್ಷಣ ನಿಯಂತ್ರಿಸದಿದ್ದರೆ ರೇಷ್ಮೆ ಉದ್ಯಮ ಸರ್ವನಾಶ: ವಿ.ಬಾಲಸುಬ್ರಮಣ್ಯಂ ಆತಂಕ
ಬೆಂಗಳೂರು: ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರ ತರವಾಗಿ ಹರಡುತ್ತಿರುವ ಗಂಟುರೋಗ (ಪೆಬ್ರಿನ್) ಸೋಂಕನ್ನು ತಕ್ಷಣವೇ ನಿಯಂತ್ರಿಸದಿದ್ದರೆ ಇನ್ನೊಂದು ವರ್ಷದೊಳಗೆ ರೇಷ್ಮೆ ಉದ್ಯಮ ಪೂರ್ತಿ ನಶಿಸಿಹೋಗಲಿ
ಪ್ರತಿಕ್ರಿಯೆಗಳು