Tel: 7676775624 | Mail: info@yellowandred.in

Language: EN KAN

    Follow us :


ಎಕರೆಗೆ ಐವತ್ತು ಸಾವಿರ ರೂ ಪರಿಹಾರ ನೀಡಿ, ಆನೆಗಳನ್ನು ನಮ್ಮ ಜಮೀನಿಗೆ ಬಿಡಿ. ಅಧಿಕಾರಿಗಳಿಗೆ ರೈತರ ಸಲಹೆ

Posted date: 16 Jul, 2022

Powered by:     Yellow and Red

ಎಕರೆಗೆ ಐವತ್ತು ಸಾವಿರ ರೂ ಪರಿಹಾರ ನೀಡಿ, ಆನೆಗಳನ್ನು ನಮ್ಮ ಜಮೀನಿಗೆ ಬಿಡಿ. ಅಧಿಕಾರಿಗಳಿಗೆ ರೈತರ ಸಲಹೆ

Give us ₹50000 per as compensation for Elephants mishap

ಚನ್ನಪಟ್ಟಣ: ನಮ್ಮ ಜಮೀನುಗಳಿಗೆ ಎಕರೆಗೆ ಐವತ್ತು ಸಾವಿರದಂತೆ ವರ್ಷಕ್ಕೆ ಪರಿಹಾರಕೊಟ್ಟುಬಿಡಿ, ನೀವು ನಮ್ಮ ಜಮೀನಿನಲ್ಲಿ ಆನೆಯಾದರೂ ಮೇಯಿಸಿಕೊಳ್ಳಿ ಅಥವಾ ಕಾಡುಹಂದಿಯಾದರೂ ಸಾಕಿಕೊಳ್ಳಿ. ನಾವ್ಯಾರು ಪ್ರಶ್ನಿಸುವುದಿಲ್ಲ ಕಾಡುಪ್ರಾಣಿಗಳ ದಾಳಿಯಿಂದಾಗಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಪ್ರಾಣ ಉಳಿಸಿಕೊಳ್ಳಲು ಹೆಣಗಬೇಕಾಗಿದೆ. ಈ ಕಾರಣದಿಂದ ನಮ್ಮ ಕುಟುಂಬವನ್ನು ಸಾಕಲು ಈ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ಕಳುಹಿಸಿ.

ಇದು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಆನೆದಾಳಿ ಸಂಬಂಧ ತಹಸೀಲ್ದಾರ್ ಬಿ.ಕೆ.ಸುದರ್ಶನ್ ನೇತೃತ್ವದಲ್ಲಿ ನಡೆದ ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ರೈತ ಮುಖಂಡರ ಸಭೆಯಲ್ಲಿ ಕೇಳಿಬಂದ ಆಗ್ರಹ.


ಸಭೆಯಲ್ಲಿ ಆನೆ ಸೇರಿದಂತೆ ಕಾಡುಪ್ರಾಣಿಗಳ ಉಪಟಳದಿಂದ ಅನುಭವಿಸುತ್ತಿರುವ ಯಾತನೆಯ ಬಗ್ಗೆ ಕೆಲ ರೈತ ಮುಖಂಡರು ಸ್ವವಿವರವಾಗಿ ಅಧಿಕಾರಿಗಳ ಗಮನಸೆಳೆದರು. ಹಲವು ವರ್ಷಗಳಿಂದ ಈ ಪ್ರಮುಖ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ವಿಫಲವಾಗಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ನಿರಂತರ ಕಾಡಾನೆಗಳ ದಾಳಿಯಿಂದ ಕೆಲ ವರ್ಷಗಳಿಂದ ಕಾಡಂಚಿನಲ್ಲಿರುವ ಹಲವು ರೈತರು ನಮ್ಮ ಜಮೀನುಗಳಲ್ಲಿ ಬೇಸಾಯ ಮಾಡಲು ಬಿಟ್ಟಿದ್ದೇವೆ. ನಾವು ಬೆಳೆ ಬೆಳೆಯಲು ಬಂಡವಾಳವನ್ನು ಸಹ ಹಾಕಬೇಕು. ಅತ್ತ ಶ್ರಮವೂ ಬೇಕು. ಆದರೆ, ಅಧಿಕಾರಿಗಳಾದ ನಿಮಗೆ ಯಾವುದೇ ಬಂಡವಾಳ ಬೇಕಿಲ್ಲ. ತಿಂಗಳಾದ ಮೇಲೆ ನೆಮ್ಮದಿಯಾಗಿ ಸಂಬಳ ಎಣಿಸಿಕೊಳ್ಳುತ್ತೀರಿ.


 ಕಾಡಾನೆಗಳು ನಿರಂತರವಾಗಿ ದಾಳಿ ಮಾಡುವ ನಮ್ಮಜಮೀನಿನಲ್ಲಿ ಬಂಡವಾಳ ಹಾಗೂ ಶ್ರಮ ಹಾಕುವುದು ವ್ಯರ್ಥ ಎನ್ನಿಸಿದೆ. ನಮ್ಮ ಬೆಳೆಗಳಿಗೆ ಸಣ್ಣ ಕೀಟಗಳು ಆವರಿಸಿಕೊಂಡರೆ ಔಷಧಿ ಹೊಡೆದು ಓಡಿಸಬಹುದು. ಆದರೆ, ಈ ಆನೆಯನ್ನು ಮುಟ್ಟಲು ನಮಗೆ ಶಕ್ತಿ ಇಲ್ಲ. ಇದನ್ನು ತಡೆಗಟ್ಟಲು ನಿಮ್ಮ ಕೈಯಲ್ಲೂ ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಾಗಿ ನಮ್ಮ ಜಮೀನಿಗೆ ಎಕರೆಗೆ ಐವತ್ತು ಸಾವಿರ ರೂ ಪರಿಹಾರಕೊಟ್ಟು, ನಮ್ಮ ಜಮೀನುಗಳಲ್ಲಿ ಕಾಡಾನೆಗಳನ್ನು ಸಾಕಿಕೊಳ್ಳಿ ಎಂದು ಅಕ್ರೋಶವ್ಯಕ್ತಪಡಿಸಿದರು.


*ಮೊಕದಮ್ಮೆ ದಾಖಲಿಸಬೇಕು.*

ತಾಲೂಕಿನಲ್ಲಿ ಆನೆ ಸೇರಿದಂತೆ ಕಾಡುಪ್ರಾಣಿಗಳ ಹಾವಳಿ ನಿರಂತರವಾಗಿದೆ. ಇದನ್ನು ತಡೆಗಟ್ಟುವಲ್ಲಿಅರಣ್ಯ ಇಲಾಖೆ ವಿಫಲಗೊಂಡಿದೆ. ರೈತರು ಆಕಸ್ಮಿಕವಾಗಿ ಅರಣ್ಯ ಪ್ರದೇಶವನ್ನು ದುರುಪಯೋಗಪಡಿಸಿಕೊಂಡರೆ ಮೊಕದಮ್ಮೆ ದಾಖಲಿಸುತ್ತಾರೆ. ಕಾಡುಪ್ರಾಣಿಗಳು ನಮ್ಮ ನಾಡಿಗೆ ಬಂದು ನಮ್ಮ ಬದುಕನ್ನು ಹಾಳು ಮಾಡುತ್ತಿವೆ. ಹೀಗಾಗಿ ತಹಸೀಲ್ದಾರ್ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.


ಒಂದು ತೆಂಗು ಅಥವಾ ಮಾವಿನ ಮರ ಬೆಳೆಯಲು ರೈತರಿಗೆ ವರ್ಷಗಟ್ಟಲೆ ಸಮಯ ಬೇಕಾಗುತ್ತದೆ. ಆದರೆ ಆನೆಗಳು ಬಂದು ಒಂದು ನಿಮಿಷದಲ್ಲಿ ಬೆಳೆಯುತ್ತಿರುವ ಮರಗಳನ್ನು ನಾಶಪಡಿಸುತ್ತವೆ. ನೀವು ನೀಡುತ್ತಿರುವ 2ಸಾವಿರ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ.


ಕಾಡುಪ್ರಾಣಿಗಳ ಹಾವಳಿ ಏಕೆ ಮಿತಿ ಮೀರಿದೆ ಎಂಬುದರ ಕುರಿತು ವರದಿ ತಯಾರಿಸಿ. ಕಾಡು ಪ್ರಾಣಿಗಳು ನಾಡಿನತ್ತ ಬಾರದಂತೆ ತಡೆಯುವ ನಿಟ್ಟಿನಲ್ಲಿ ಕಾಡಿನಲ್ಲೇ ಅವುಗಳಿಗೆ ಆಹಾರ, ಮೇವು ಸಿಗುವಂತ ವ್ಯವಸ್ಥೆ ಕಲ್ಪಿಸಿ. ನಿಮ್ಮ ಕಾರ್ಯತಂತ್ರಗಳನ್ನು ಬದಲಿಸಿ, ವೈಜ್ಞಾನಿಕ ಯೋಜನೆಗಳನ್ನು ರೂಪಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ ಎಂದು ಸಲಹೆ ನೀಡಿದರು.


*ಕಪ್ಪು ಬಾಚ್ಚರಿಕೆ:*

ಕಾಡಪ್ರಾಣಿಗಳ ಹಾವಳಿ ಸಂಬಂಧ ರೈತರೊಂದಿಗೆ ಸಭೆ ನಡೆಸಲಾಗುತ್ತದೆಯಾದರೂ ಇದುವರೆಗೆ ಯಾವುದೇ ಪರಿಹಾರ ಕಂಡು ಕೊಂಡಿಲ್ಲ. ಆನೆಗಳ ಹಾವಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕನಕಪುರ ಮತ್ತುಚನ್ನಪಟ್ಟಣದ ಅರಣ್ಯಾಧಿಕಾರಿಗಳು ಜಂಟಿಕಾರ್ಯಾಚರಣೆ ನಡೆಸಿ, ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಶಾಶ್ವತ ಪರಿಹಾರ ಕಲ್ಪಿಸಿ. ಇಲ್ಲದಿದ್ದಲ್ಲಿ ಆ.15ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸದ ಕಾರ್ಯಕ್ರಮದಂದು ಕಪ್ಪು ಭಾವುಟ ಪ್ರದರ್ಶಿಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದರೊಂದಿಗೆ ಕಾಡುಹಂದಿಗಳ ಹಾವಳಿಯಿಂದ ರೈತರು ತತ್ತರಿಸಿದ್ದಾರೆ. ಕಾಡುಹಂದಿಗಳನ್ನು ಸಾಯಿಸಲು ನಮಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.


*ಶೀಘ್ರದಲ್ಲೇ ಪರಿಹಾರ:*

ಸಭೆಯಲ್ಲಿ ಮಾತನಾಡಿದ ಕಾವೇರಿ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ನಾಗೇಂದ್ರ ಪ್ರಸಾದ್, ಈಗಾಗಲೇ ಆನೆದಾಳಿ ತಡೆಗಟ್ಟುಲು ಬೇಕಾದ ಎಲ್ಲಾ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಶಾಶ್ವತ ಪರಿಹಾರದ ಕ್ರಮಗಳನ್ನು ಕೈಗೊಂಡಿದ್ದೇವೆ. ಆನೆಗಳು ಗ್ರಾಮಗಳತ್ತ ಬಾರದಂತೆ ತಡೆಯುವ ನಿಟ್ಟಿನಲ್ಲಿ ಬ್ಯಾರಿಕೇಡ್‍ಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಸಾತನೂರು ಮಾರ್ಗದಲ್ಲಿ ಒಂದೆರಡು ಕೀಮಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು ಭೂ ವ್ಯಾಜ್ಯ ಎದುರಾಗಿದೆ. ಇಲ್ಲಿ ಬ್ಯಾರಿಕೇಡ್ ಆದನಂತರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಇನ್ನು ಚಿರತೆಗಳ ಹಾವಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಸೆರೆಸಿಕ್ಕ ಚಿರತೆಗಳನ್ನು ಜಿಲ್ಲೆ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲೇ ಬಿಡುತ್ತಿದ್ದದ್ದರಿಂದ ತೊಂದರೆಯಾಗುತ್ತಿತ್ತು. ಇದೀಗ ಜಿಲ್ಲೆ ವ್ಯಾಪ್ತಿಯಲ್ಲಿ ಸೆರೆ ಸಿಕ್ಕ ಚಿರತೆಗಳನ್ನು ಬೇರೆ ಕಡೆಯ ಅರಣ್ಯಕ್ಕೆ ಬಿಟ್ಟು ಬರಲುಯೋಜನೆ ರೂಪಿಸಿದ್ದು, ಇದರಿಂದ ಚಿರತೆ ಸಮಸ್ಯೆಗೆ ಪರಿಹಾರ ಸಿಗುವ ವಿಶ್ವಾಸವಿದೆ ಎಂದರು.


ತಹಸೀಲ್ದಾರ್ ಸುದರ್ಶನ್ ಮಾತನಾಡಿ, ತಾಲೂಕಿನ ಗಡಿಭಾಗದಲ್ಲಿ ಆನೆ ದಾಳಿಯಿಂದ ಆಗುತ್ತಿರುವ ಹಾನಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕಾಡು ಪ್ರಾಣಿಗಳ ದಾಳಿಯಿಂದ ಆಗುತ್ತಿರುವ ಬೆಳೆ ಹಾನಿ ಕುರಿತು ಜಿಲ್ಲಾಧಿಕಾರಿಗಳಿಗೆ ಒಂದು ವಾರದೊಳಗೆ ವರದಿ ಸಲ್ಲಿಸಲಾಗುವುದು. ಅರಣ್ಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.


ಸಭೆಯಲ್ಲಿ ವಲಯ ಅರಣ್ಯಾಧಿಕಾರಿಗಳಾದ ದಿನೇಶ್, ದೇವರಾಜು, ಶಿರಸ್ತೆದಾರ್ ಸೋಮೇಶ್, ಕಂದಾಯ ನಿರೀಕ್ಷಕ ಯುವರಾಜ್, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ರೈತ ಮುಖಂಡರಾದ ಸುಜೀವನ್‍ಕುಮಾರ್, ಮಹಮದ್ ವಕೀಲ್, ಬಿ.ವಿ. ರಾಜಣ್ಣ, ಜಯಕಾಂತ್‍ಚಾಲುಕ್ಯ, ಪ್ರಕಾಶ್, ತಿಮ್ಮಯ್ಯ, ಕುಳ್ಳೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ಬೆಳೆ ಸಮೀಕ್ಷೆ ಮತ್ತು ವಿಮೆ ಆಂದೋಲನಕ್ಕೆ ಚಾಲನೆ
ಬೆಳೆ ಸಮೀಕ್ಷೆ ಮತ್ತು ವಿಮೆ ಆಂದೋಲನಕ್ಕೆ ಚಾಲನೆ

ಚನ್ನಪಟ್ಟಣ.ಆ.೧೦: ೨೦೨೨-೨೩ ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಹಾಗೂ ಬೆಳೆವಿಮೆ ಕಾರ್ಯಕ್ರಮಗಳ ಬಗ್ಗೆ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್

ಜಿಲ್ಲೆಯಲ್ಲಿ ಅಬ್ಬರಿಸಿದ ವರುಣ. 447 ಹೆಕ್ಟೇರ್ ಬೆಳೆ ಹಾನಿ190 ಮನೆಗಳು ಜಖಂ
ಜಿಲ್ಲೆಯಲ್ಲಿ ಅಬ್ಬರಿಸಿದ ವರುಣ. 447 ಹೆಕ್ಟೇರ್ ಬೆಳೆ ಹಾನಿ190 ಮನೆಗಳು ಜಖಂ

ಆರಿದ್ರಾ ಮತ್ತು ಆಶ್ಲೇಷ ಮಳೆಯು ಈ ಬಾರಿ ವಾಡಿಕೆಗಿಂತ ಹೆಚ್ಚಾಗಿ ಸುರಿದ ಪರಿಣಾಮ ರೇಷ್ಮೆನಾಡು ರಾಮನಗರ ಜಿಲ್ಲೆ ತಲ್ಲಣಗೊಂಡಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಕಳಲ್ಲಿ ಬೆಳೆದ ಬೆಳೆ ಮತ್ತು ಮನೆಗಳಿಗೆ ಹೆಚ್

ಮಾವು ಅಭಿವೃದ್ಧಿ ಮಂಡಳಿಯಿಂದ ರಾಮನಗರದಲ್ಲಿ ರೈತ ಬಜಾರ್:
ಮಾವು ಅಭಿವೃದ್ಧಿ ಮಂಡಳಿಯಿಂದ ರಾಮನಗರದಲ್ಲಿ ರೈತ ಬಜಾರ್:

 August 7, 2022: ರಾಮನಗರ ಕೋಲಾರ ಮಾವು ಅಭಿವೃದ್ಧಿ ಮಂಡಳಿಯಿಂದ ರಾಮನಗರದಲ್ಲಿ ರೈ

ರೈತಸಂಘದಲ್ಲಿ ಯುವಕರು ಹೆಚ್ಚು ತೊಡಗಿಸಿಗೊಳ್ಳಬೇಕು ರೈತ ಹುತಾತ್ಮರ ದಿನಾಚರಣೆಯಲ್ಲಿ ಬಡಗಲಪುರ ನಾಗೇಂದ್ರ
ರೈತಸಂಘದಲ್ಲಿ ಯುವಕರು ಹೆಚ್ಚು ತೊಡಗಿಸಿಗೊಳ್ಳಬೇಕು ರೈತ ಹುತಾತ್ಮರ ದಿನಾಚರಣೆಯಲ್ಲಿ ಬಡಗಲಪುರ ನಾಗೇಂದ್ರ

ಚನ್ನಪಟ್ಟಣ:ಜು.೨೩:  ಇಂದು ತಾಲ್ಲೂಕಿನ ರೈತ ಹೋರಾಟಗಾರ ರಾಜ್ಯ ರೈತ ಸಂಘದ ಕಾರ್ಯಾದ್ಯಕ್ಷರಾಗಿದ್ದ ಎಂ.ರಾಮು ಹಾಗೂ ರಾಜ್ಯ ರೈತ ಸಂಘದ ಉಪಾಧ್

ಹಿರಿಯ ಮುತ್ಸದ್ದಿ ರೈತಮುಖಂಡನ ಬಗ್ಗೆ ತಪ್ಪು ಮಾಹಿತಿ ಹೇಳಿ ಪೇಚಿಗೆ ಸಿಲುಕಿದ ಅಧಿಕಾರಿಗಳು
ಹಿರಿಯ ಮುತ್ಸದ್ದಿ ರೈತಮುಖಂಡನ ಬಗ್ಗೆ ತಪ್ಪು ಮಾಹಿತಿ ಹೇಳಿ ಪೇಚಿಗೆ ಸಿಲುಕಿದ ಅಧಿಕಾರಿಗಳು

ಚನ್ನಪಟ್ಟಣ: ತಾಲ್ಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ಅಂಗಾಂಶ ಬಾಳೆ ನಾಟಿಯಲ್ಲಿ ಕೋಟ್ಯಾಂತರ ರೂ ಹಗರಣ ನಡೆದಿದೆ ಎಂಬ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕ

ಎಕರೆಗೆ ಐವತ್ತು ಸಾವಿರ ರೂ ಪರಿಹಾರ ನೀಡಿ, ಆನೆಗಳನ್ನು ನಮ್ಮ ಜಮೀನಿಗೆ ಬಿಡಿ. ಅಧಿಕಾರಿಗಳಿಗೆ ರೈತರ ಸಲಹೆ
ಎಕರೆಗೆ ಐವತ್ತು ಸಾವಿರ ರೂ ಪರಿಹಾರ ನೀಡಿ, ಆನೆಗಳನ್ನು ನಮ್ಮ ಜಮೀನಿಗೆ ಬಿಡಿ. ಅಧಿಕಾರಿಗಳಿಗೆ ರೈತರ ಸಲಹೆ

ಚನ್ನಪಟ್ಟಣ: ನಮ್ಮ ಜಮೀನುಗಳಿಗೆ ಎಕರೆಗೆ ಐವತ್ತು ಸಾವಿರದಂತೆ ವರ್ಷಕ್ಕೆ ಪರಿಹಾರಕೊಟ್ಟುಬಿಡಿ, ನೀವು ನಮ್ಮ ಜಮೀನಿನಲ್ಲಿ ಆನೆಯಾದರೂ ಮೇಯಿಸಿಕೊಳ್ಳಿ ಅಥವಾ ಕಾಡುಹಂದಿಯಾದರೂ ಸಾಕಿಕೊಳ್ಳಿ. ನಾವ್ಯಾರು ಪ್ರ

ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರ ಗಂಟುರೋಗ (ಪೆಬ್ರಿನ್) ಸೋಂಕು ತಕ್ಷಣ ನಿಯಂತ್ರಿಸದಿದ್ದರೆ ರೇಷ್ಮೆ ಉದ್ಯಮ ಸರ್ವನಾಶ: ವಿ.ಬಾಲಸುಬ್ರಮಣ್ಯಂ ಆತಂಕ
ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರ ಗಂಟುರೋಗ (ಪೆಬ್ರಿನ್) ಸೋಂಕು ತಕ್ಷಣ ನಿಯಂತ್ರಿಸದಿದ್ದರೆ ರೇಷ್ಮೆ ಉದ್ಯಮ ಸರ್ವನಾಶ: ವಿ.ಬಾಲಸುಬ್ರಮಣ್ಯಂ ಆತಂಕ

ಬೆಂಗಳೂರು: ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರ ತರವಾಗಿ ಹರಡುತ್ತಿರುವ ಗಂಟುರೋಗ (ಪೆಬ್ರಿನ್) ಸೋಂಕನ್ನು ತಕ್ಷಣವೇ ನಿಯಂತ್ರಿಸದಿದ್ದರೆ ಇನ್ನೊಂದು ವರ್ಷದೊಳಗೆ ರೇಷ್ಮೆ ಉದ್ಯಮ ಪೂರ್ತಿ ನಶಿಸಿಹೋಗಲಿ

ಸಮಸ್ಯೆಗಳ ಆಗರವಾಗಿರುವ ರಾಗಿ ಖರೀದಿ ಕೇಂದ್ರ ಖರೀದಿಯಲ್ಲಿ ವಿಳಂಬ
ಸಮಸ್ಯೆಗಳ ಆಗರವಾಗಿರುವ ರಾಗಿ ಖರೀದಿ ಕೇಂದ್ರ ಖರೀದಿಯಲ್ಲಿ ವಿಳಂಬ

ಚನ್ನಪಟ್ಟಣ ಮೇ 23 22. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರೈತರಿಂದ ರಾಗಿ ಖರೀದಿ ಮಾಡುವ ಸಲುವಾಗಿ ಕೇಂದ್ರವೊಂದನ್ನು ತೆರೆದಿದ್ದು ಸಂಪೂರ್

ಏಪ್ರಿಲ್ 25ರಿಂದ ರೈತರೇ ಸ್ವಯಂ ನಕ್ಷೆ ತಯಾರಿಸುವ ವ್ಯವಸ್ಥೆ ಜಾರಿ: ಆರ್ ಅಶೋಕ್
ಏಪ್ರಿಲ್ 25ರಿಂದ ರೈತರೇ ಸ್ವಯಂ ನಕ್ಷೆ ತಯಾರಿಸುವ ವ್ಯವಸ್ಥೆ ಜಾರಿ: ಆರ್ ಅಶೋಕ್

April 22, 2022: ಬೆಂಗಳೂರು: ಭೂ ಒಡೆತನ ಹೊಂದಿರುವವ ರೈತರು ತಮ್ಮ ಸ್ವಂತ ಜಮೀನಿನ 11 ಇ ಸ್ಕೆಚ್‌, ಪೋಡಿ, ಭೂಪರಿವರ್ತನಾ ಪೂರ್ವ ಸ್ಕೆಚ್‌ಗಳನ್ನ

ಮಾವು ಮತ್ತು ಇತರೆ ತೋಟಗಾರಿಕೆ ಬೆಳೆಗಾರರ ಸಮಸ್ಯೆಗಳ ನಿವಾರಣೆಗೆ ಒತ್ತಾಯಿಸಿ ಮಾ.23 ರಿಂದ ಅನಿರ್ಧಿಷ್ಠಾವಧಿ ಧರಣಿ : ಸಿ. ಪುಟ್ಟಸ್ವಾಮಿ
ಮಾವು ಮತ್ತು ಇತರೆ ತೋಟಗಾರಿಕೆ ಬೆಳೆಗಾರರ ಸಮಸ್ಯೆಗಳ ನಿವಾರಣೆಗೆ ಒತ್ತಾಯಿಸಿ ಮಾ.23 ರಿಂದ ಅನಿರ್ಧಿಷ್ಠಾವಧಿ ಧರಣಿ : ಸಿ. ಪುಟ್ಟಸ್ವಾಮಿ

ರಾಮನಗರ: ಜಿಲ್ಲೆಯಲ್ಲಿ ಎಲ್ಲಾ ರೈತರು ಬೆಳೆಗಳ ವಿಷಯದಲ್ಲಿ ಸಂಕಷ್ಟಕ್ಕೀಡಾಗಿದ್ದಾರೆ. ಅದರಲ್ಲೂ ಮಾವು, ತೆಂಗು, ಬಾಳೆ ಸೇರಿದಂತೆ ಇತರೆ ತೋಟಗಾರಿಕ

Top Stories »  


Top ↑