ಹಿರಿಯ ಮುತ್ಸದ್ದಿ ರೈತಮುಖಂಡನ ಬಗ್ಗೆ ತಪ್ಪು ಮಾಹಿತಿ ಹೇಳಿ ಪೇಚಿಗೆ ಸಿಲುಕಿದ ಅಧಿಕಾರಿಗಳು

ಚನ್ನಪಟ್ಟಣ: ತಾಲ್ಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ಅಂಗಾಂಶ ಬಾಳೆ ನಾಟಿಯಲ್ಲಿ ಕೋಟ್ಯಾಂತರ ರೂ ಹಗರಣ ನಡೆದಿದೆ ಎಂಬ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರೈತ ಸಂಘದ ಕಾರ್ಯಕರ್ತರ ನಡೆವೆಯೇ ಗೊಂದಲ ಮೂಡಿಸಿದ್ದ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ರೈತಸಂಘದ ಮುಖಂಡರು ಮತ್ತು ಕಾರ್ಯಕರ್ತರು ಬೆವರಿಳಿಸಿದ ಘಟನೆ ಮಂಗಳವಾರ ಇಲ್ಲಿನ ತೋಟಗಾರಿಕಾ ಇಲಾಖೆಯ ಕಚೇರಿಯಲ್ಲಿ ನಡೆಯಿತು.
ತಾಲೂಕಿನಾದ್ಯಂತ ನರೇಗಾ ಯೋಜನೆಯಡಿ ಮಂಜೂರಾಗಿರುವ ಅಂಗಾಂಶ ಬಾಳೆ ಬೆಳೆಯ ಅನುದಾನದ ವಿವರವನ್ನು ಕೇಳಿ ವಿವಿಧ ಗ್ರಾಮದ ಒಂಭತ್ತು ಮಂದಿ ರೈತಸಂಘದ ಕಾರ್ಯಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರು ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ತೋಟಗಾರಿಕಾ ಇಲಾಖೆಗೆ ಅರ್ಜಿಸಲ್ಲಿಸಿದ್ದರು. ಈ ಅರ್ಜಿಗೆ ಮಾಹಿತಿ ನೀಡದೆ ರಾಜಿಸಂಧಾನಕ್ಕೆ ಮುಂದಾಗಿದ್ದ ಅಧಿಕಾರಿಗಳು ರೈತಸಂಘದ ಮುಖಂಡರ ಬಗ್ಗೆ ಲಘುವಾಗಿ ಮಾತನಾಡಿದ್ದು ವಿವಾದಕ್ಕೆ ಕಾರಣವಾಗಿತ್ತು.
ಮಾಹಿತಿ ಹಕ್ಕುಕಾಯಿದೆಯಡಿಯಲ್ಲಿ ಅರ್ಜಿಹಾಕಿದ ಕೆಲ ಮಂದಿಗೆ ಮಾತನಾಡಿದ ಮುಖಂಡರೊಬ್ಬರ ಹೆಸರು ಹೇಳಿ ಅವರೊಂದಿಗೆ ಮಾತನಾಡಿದ್ದೇವೆ ನೀವು ಅರ್ಜಿ ಹಿಂದಕ್ಕೆ ಪಡೆಯಿರಿ ಎಂದು ಪುಸಲಾಯಿಸಲು ಆರಂಭಿಸಿದ ಅಧಿಕಾರಿಗಳು, ಅವರಿಗೆ ಸಾಕಷ್ಟು ಸೌಲಭ್ಯವನ್ನು ಇಲಾಖೆಯಿಂದ ನೀಡಿದ್ದೇವೆ. ಲೋಡ್ಗಟ್ಟಲೆ ಗೊಬ್ಬರ ನೀಡಿದ್ದೇವೆ ಎಂದು ಹೇಳಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತು.
*ಸತ್ಯಾಸತ್ಯತೆ ಬಯಲಿಗೆ ಪಟ್ಟು:*
ರೈತಮುಖಂಡರೊಬ್ಬರ ಹೆಸರಿನಲ್ಲಿ ಈ ರೀತಿ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸುಳ್ಳು ಸುಳ್ಳು ಮಾಹಿತಿ ಹರಿಯ ಬಿಟ್ಟು ರೈತಸಂಘದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಮುಖಂಡರು ಮತ್ತು ಸಾನಾಜಿಕ ಕಾರ್ಯಕರ್ತರು, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಪಟ್ಟು ಹಿಡಿದು ಕುಳಿತರು.
ರೈತರ ಪಟ್ಟಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಮುನೇಗೌಡ ಖುದ್ದು ಭೇಟಿ ನೀಡಿ ರೈತರ ಮುಖಂಡರ ಜೊತೆ ಚರ್ಚಿಸಿದರು. ಅಧಿಕಾರಿಗಳು ಸಾಕಷ್ಟು ಅನುದಾನ ನೀಡಿದ್ದೇವೆ ಎಂದು ಹೇಳಿದ್ದ ಮುಖಂಡರು ನಮಗೆ ಇಲಾಖೆಯಿಂದ ನೀಡಿರುವ ವಿಶೇಷ ಸೌಲಭ್ಯ ಏನು ಎಂದು ಪ್ರಶ್ನಿಸಿದಾಗ ಅಧಿಕಾರಿಗಳು ನಿರುತ್ತರರಾದರು.
ಬಳಿಕ ಇಲಾಖಾ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಡಿಡಿ ಮುನೇಗೌಡ, ಇಲಾಖೆಯಿಂದ ನೀಡುವ ಸವಲತ್ತುಗಳನ್ನು ರೈತರಿಗೆ ತಲುಪಿಸುವುದು ನಮ್ಮ ಜವಾಬ್ದಾರಿ. ಅಧಿಕಾರಿಗಳು ಇದಕ್ಕೆ ಯಾವುದೇ ಭ್ರಮೆಗೆ ಒಳಗಾಗುವುದು ಬೇಕಿಲ್ಲ. ನಿಮ್ಮ ಕರ್ತವ್ಯವನ್ನು ವಿಶೇಷಾಧಿಕಾರ ಎಂದು ಕೊಳ್ಳಬೇಡಿ. ರೈತಪರ ಹೋರಾಟಗಾರರ ಬಗ್ಗೆ ಈರೀತಿ ಮಾತನಾಡುವುದು ಸರಿಯಲ್ಲ ಎಂದು ತಿಳಿಹೇಳಿದರು. ಇನ್ನು ಮಾಹಿತಿ ಹಕ್ಕನ್ನು ತ್ವರಿತವಾಗಿ ನೀಡುವಂತೆ ಸೂಚಿಸಿದ ಅವರು, ಇಲಾಖೆಯಲ್ಲಿ ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಿ, ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು.
ಗೋ ರಾ ಶ್ರೀನಿವಾಸ...
ಮೊ:9845856139..
Recent news in agriculture »

ಬೆಳೆ ಸಮೀಕ್ಷೆ ಮತ್ತು ವಿಮೆ ಆಂದೋಲನಕ್ಕೆ ಚಾಲನೆ
ಚನ್ನಪಟ್ಟಣ.ಆ.೧೦: ೨೦೨೨-೨೩ ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಹಾಗೂ ಬೆಳೆವಿಮೆ ಕಾರ್ಯಕ್ರಮಗಳ ಬಗ್ಗೆ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್

ಜಿಲ್ಲೆಯಲ್ಲಿ ಅಬ್ಬರಿಸಿದ ವರುಣ. 447 ಹೆಕ್ಟೇರ್ ಬೆಳೆ ಹಾನಿ190 ಮನೆಗಳು ಜಖಂ
ಆರಿದ್ರಾ ಮತ್ತು ಆಶ್ಲೇಷ ಮಳೆಯು ಈ ಬಾರಿ ವಾಡಿಕೆಗಿಂತ ಹೆಚ್ಚಾಗಿ ಸುರಿದ ಪರಿಣಾಮ ರೇಷ್ಮೆನಾಡು ರಾಮನಗರ ಜಿಲ್ಲೆ ತಲ್ಲಣಗೊಂಡಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಕಳಲ್ಲಿ ಬೆಳೆದ ಬೆಳೆ ಮತ್ತು ಮನೆಗಳಿಗೆ ಹೆಚ್

ಮಾವು ಅಭಿವೃದ್ಧಿ ಮಂಡಳಿಯಿಂದ ರಾಮನಗರದಲ್ಲಿ ರೈತ ಬಜಾರ್:
August 7, 2022: ರಾಮನಗರ ಕೋಲಾರ ಮಾವು ಅಭಿವೃದ್ಧಿ ಮಂಡಳಿಯಿಂದ ರಾಮನಗರದಲ್ಲಿ ರೈ

ರೈತಸಂಘದಲ್ಲಿ ಯುವಕರು ಹೆಚ್ಚು ತೊಡಗಿಸಿಗೊಳ್ಳಬೇಕು ರೈತ ಹುತಾತ್ಮರ ದಿನಾಚರಣೆಯಲ್ಲಿ ಬಡಗಲಪುರ ನಾಗೇಂದ್ರ
ಚನ್ನಪಟ್ಟಣ:ಜು.೨೩: ಇಂದು ತಾಲ್ಲೂಕಿನ ರೈತ ಹೋರಾಟಗಾರ ರಾಜ್ಯ ರೈತ ಸಂಘದ ಕಾರ್ಯಾದ್ಯಕ್ಷರಾಗಿದ್ದ ಎಂ.ರಾಮು ಹಾಗೂ ರಾಜ್ಯ ರೈತ ಸಂಘದ ಉಪಾಧ್

ಹಿರಿಯ ಮುತ್ಸದ್ದಿ ರೈತಮುಖಂಡನ ಬಗ್ಗೆ ತಪ್ಪು ಮಾಹಿತಿ ಹೇಳಿ ಪೇಚಿಗೆ ಸಿಲುಕಿದ ಅಧಿಕಾರಿಗಳು
ಚನ್ನಪಟ್ಟಣ: ತಾಲ್ಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ಅಂಗಾಂಶ ಬಾಳೆ ನಾಟಿಯಲ್ಲಿ ಕೋಟ್ಯಾಂತರ ರೂ ಹಗರಣ ನಡೆದಿದೆ ಎಂಬ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕ

ಎಕರೆಗೆ ಐವತ್ತು ಸಾವಿರ ರೂ ಪರಿಹಾರ ನೀಡಿ, ಆನೆಗಳನ್ನು ನಮ್ಮ ಜಮೀನಿಗೆ ಬಿಡಿ. ಅಧಿಕಾರಿಗಳಿಗೆ ರೈತರ ಸಲಹೆ
ಚನ್ನಪಟ್ಟಣ: ನಮ್ಮ ಜಮೀನುಗಳಿಗೆ ಎಕರೆಗೆ ಐವತ್ತು ಸಾವಿರದಂತೆ ವರ್ಷಕ್ಕೆ ಪರಿಹಾರಕೊಟ್ಟುಬಿಡಿ, ನೀವು ನಮ್ಮ ಜಮೀನಿನಲ್ಲಿ ಆನೆಯಾದರೂ ಮೇಯಿಸಿಕೊಳ್ಳಿ ಅಥವಾ ಕಾಡುಹಂದಿಯಾದರೂ ಸಾಕಿಕೊಳ್ಳಿ. ನಾವ್ಯಾರು ಪ್ರ

ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರ ಗಂಟುರೋಗ (ಪೆಬ್ರಿನ್) ಸೋಂಕು ತಕ್ಷಣ ನಿಯಂತ್ರಿಸದಿದ್ದರೆ ರೇಷ್ಮೆ ಉದ್ಯಮ ಸರ್ವನಾಶ: ವಿ.ಬಾಲಸುಬ್ರಮಣ್ಯಂ ಆತಂಕ
ಬೆಂಗಳೂರು: ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರ ತರವಾಗಿ ಹರಡುತ್ತಿರುವ ಗಂಟುರೋಗ (ಪೆಬ್ರಿನ್) ಸೋಂಕನ್ನು ತಕ್ಷಣವೇ ನಿಯಂತ್ರಿಸದಿದ್ದರೆ ಇನ್ನೊಂದು ವರ್ಷದೊಳಗೆ ರೇಷ್ಮೆ ಉದ್ಯಮ ಪೂರ್ತಿ ನಶಿಸಿಹೋಗಲಿ

ಸಮಸ್ಯೆಗಳ ಆಗರವಾಗಿರುವ ರಾಗಿ ಖರೀದಿ ಕೇಂದ್ರ ಖರೀದಿಯಲ್ಲಿ ವಿಳಂಬ
ಚನ್ನಪಟ್ಟಣ ಮೇ 23 22. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರೈತರಿಂದ ರಾಗಿ ಖರೀದಿ ಮಾಡುವ ಸಲುವಾಗಿ ಕೇಂದ್ರವೊಂದನ್ನು ತೆರೆದಿದ್ದು ಸಂಪೂರ್

ಏಪ್ರಿಲ್ 25ರಿಂದ ರೈತರೇ ಸ್ವಯಂ ನಕ್ಷೆ ತಯಾರಿಸುವ ವ್ಯವಸ್ಥೆ ಜಾರಿ: ಆರ್ ಅಶೋಕ್
April 22, 2022: ಬೆಂಗಳೂರು: ಭೂ ಒಡೆತನ ಹೊಂದಿರುವವ ರೈತರು ತಮ್ಮ ಸ್ವಂತ ಜಮೀನಿನ 11 ಇ ಸ್ಕೆಚ್, ಪೋಡಿ, ಭೂಪರಿವರ್ತನಾ ಪೂರ್ವ ಸ್ಕೆಚ್ಗಳನ್ನ

ಮಾವು ಮತ್ತು ಇತರೆ ತೋಟಗಾರಿಕೆ ಬೆಳೆಗಾರರ ಸಮಸ್ಯೆಗಳ ನಿವಾರಣೆಗೆ ಒತ್ತಾಯಿಸಿ ಮಾ.23 ರಿಂದ ಅನಿರ್ಧಿಷ್ಠಾವಧಿ ಧರಣಿ : ಸಿ. ಪುಟ್ಟಸ್ವಾಮಿ
ರಾಮನಗರ: ಜಿಲ್ಲೆಯಲ್ಲಿ ಎಲ್ಲಾ ರೈತರು ಬೆಳೆಗಳ ವಿಷಯದಲ್ಲಿ ಸಂಕಷ್ಟಕ್ಕೀಡಾಗಿದ್ದಾರೆ. ಅದರಲ್ಲೂ ಮಾವು, ತೆಂಗು, ಬಾಳೆ ಸೇರಿದಂತೆ ಇತರೆ ತೋಟಗಾರಿಕ
ಪ್ರತಿಕ್ರಿಯೆಗಳು