Tel: 7676775624 | Mail: info@yellowandred.in

Language: EN KAN

    Follow us :


ರೈತಸಂಘದಲ್ಲಿ ಯುವಕರು ಹೆಚ್ಚು ತೊಡಗಿಸಿಗೊಳ್ಳಬೇಕು ರೈತ ಹುತಾತ್ಮರ ದಿನಾಚರಣೆಯಲ್ಲಿ ಬಡಗಲಪುರ ನಾಗೇಂದ್ರ

Posted date: 23 Jul, 2022

Powered by:     Yellow and Red

ರೈತಸಂಘದಲ್ಲಿ ಯುವಕರು ಹೆಚ್ಚು ತೊಡಗಿಸಿಗೊಳ್ಳಬೇಕು ರೈತ ಹುತಾತ್ಮರ ದಿನಾಚರಣೆಯಲ್ಲಿ ಬಡಗಲಪುರ ನಾಗೇಂದ್ರ

ಚನ್ನಪಟ್ಟಣ:ಜು.೨೩:  ಇಂದು ತಾಲ್ಲೂಕಿನ ರೈತ ಹೋರಾಟಗಾರ ರಾಜ್ಯ ರೈತ ಸಂಘದ ಕಾರ್ಯಾದ್ಯಕ್ಷರಾಗಿದ್ದ ಎಂ.ರಾಮು ಹಾಗೂ ರಾಜ್ಯ ರೈತ ಸಂಘದ ಉಪಾಧ್ಯಕ್ಷರಾಗಿದ್ದ ಕನಕಪುರ ತಾಲ್ಲೂಕಿನ ಜಿಟಿ ರಾಮಸ್ವಾಮಿ ಅವರ ನೆನಪು ಮತ್ತು ಪ್ರಥಮ ವರ್ಷದ ಶ್ರದ್ಧಾಂಜಲಿ ಸಭೆಯನ್ನು ಇಲ್ಲಿನ ಬಾಲಕರ ಸರ್ಕಾರಿ ಕಿರಿಯ ಕಾಲೇಜು ಆವರಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಬೆಂಗಳೂರು ವಿಭಾಗೀಯ ಸಮಿತಿ ವತಿಯಿಂದ ಏರ್ಪಡಿಸಲಾಗಿತ್ತು.


ಶ್ರದ್ಧಾಂಜಲಿ ಸಭೆಯ ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರು ಮಾತನಾಡಿ, ಆರಂಭಕ್ಕೆ ರಾಜ್ಯ ರೈತ ಸಂಘಟನೆಯಲ್ಲಿ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇತ್ತು. ಆದರೆ, ಈಗ ಅವರ ಸಂಖ್ಯೆ ಸಂಘಟನೆಯಲ್ಲಿ ಕಡಿಮೆಯಾ ಗುತ್ತಾ ಬರುತ್ತಿದೆ. ಈ ಸಂಘಟನೆಯ ಮೂಲಕ ಯುವಕರು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು, ಆ ಮೂಲಕ ರೈತ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಕೆಲಸ ಆಗಬೇಕು ಎಂದು ಹೇಳಿದರು.


ನಮ್ಮ ರಾಜ್ಯ ಸಮಿತಿ ಸಭೆಯಲ್ಲಿ ಪ್ರತಿ ತಾಲ್ಲೂಕಿನಿಂದ ರೈತಪರವಾಗಿ ಆಲೋಚನೆ ಮಾಡುವ ಇಬ್ಬಿಬ್ಬರು ಯುವಕರನ್ನು ಗುರುತಿಸಿ ಕೊಡಲು ನಮ್ಮ ಜಿಲ್ಲಾ ಸಮಿತಿಗೆ ಹೇಳಿದ್ದೇವೆ. ಇದು ಕೇವಲ ಕೆಲವು ಜಿಲ್ಲೆಗಳಲ್ಲಿ ಮಾತ್ರ ಸಾಧಿತವಾಗಿದೆ. ಉಳಿದ ಜಿಲ್ಲೆಗಳಲ್ಲಿ ಆದಷ್ಟು ಬೇಗ ಅಂತಹ ತಂಡವನ್ನು ರಚಿಸುವ ಕೆಲಸ ಆದರೆ, ರೈತ ಸಂಘದ ಹೆಸರಿನಲ್ಲಿ, ರೈತರ ಹೆಸರಿನಲ್ಲಿ ವಂಚಿಸುತ್ತಿರುವ ಕೆಲವು ಶಕ್ತಿಗಳಿಗೆ ಕಡಿವಾಣ ಹಾಕಿದಂತೆ ಆಗುತ್ತದೆ, ಅದು ಬೇಗ ಆಗಬೇಕಾಗಿದೆ ಎಂದರು.

ರೈತ ಸಂಘದಲ್ಲಿ ಕಾರ್ಯಾಧ್ಯಕ್ಷರಾಗಿದ್ದ ಎಂ.ರಾಮು ಹಾಗೂ ಉಪಾಧ್ಯಕ್ಷರಾಗಿದ್ದ ಜಿ.ಟಿ ರಾಮಸ್ವಾಮಿಯವರು ನಿರಂತರವಾಗಿ ಸಂಘದ ಜೊತೆಯಲ್ಲಿ ತೊಡಗಿಸಿ ಕೊಂಡವರು. ಕಳೆದ ವರ್ಷ ನರಗುಂದದಲ್ಲಿ ನಡೆದ ರೈತ ಹುತಾತ್ಮರ ದಿನಾಚರಣೆಯಲ್ಲಿ ಪಾಲ್ಗೊಂಡು, ಹಿಂದಿರುಗುವಾಗ ಅಪಘಾತಕ್ಕೆ ಒಳಗಾಗಿದ್ದರು. ಅವರು ಹೋರಾಟಕ್ಕೆ ತೊಡಗಿಸಿಕೊಂಡಾಗಲೇ ಸಾವನ್ನಪ್ಪಿರುವುದರಿಂದ ಅವರೂ ಸಹ ಹುತಾತ್ಮರಾಗಿದ್ದಾರೆ ಎಂದು ಭಾವಿಸಬಹುದಾಗಿದೆ ಎಂದರು.


ಇವರಿಬ್ಬರ ಚಟುವಟಿಕೆಗಳನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ಅವರು ರೈತ ಸಂಘವನ್ನು ರೈತರನ್ನು ನಿರಂತರವಾಗಿ ಹಚ್ಚಿಕೊಂಡಿದ್ದರು. ಇವರನ್ನು ಹುತಾತ್ಮರು ಎಂದು ಕರೆಯುವುದು ನಮಗೆ ಹೆಮ್ಮೆಯ ವಿಷಯ ಎಂದು ಹೇಳಿದರು.

ಅವರು ಮುಂದುವರಿದು, ಇಂದು ರೈತ ಸಂಘದಲ್ಲಿಯೂ ಸಹ ಕೆಲವು ದುಷ್ಟಶಕ್ತಿಗಳು ಸೇರಿಕೊಂಡಿವೆ. ಹಸಿರು ವಸ್ತ್ರದ ಹಿನ್ನೆಲೆಯಲ್ಲಿ ಮಾಡಬಾರದ್ದು ಮಾಡುತ್ತಿದ್ದಾರೆ. ಇಂತಹವರನ್ನು ಕಂಡಾಗ ಅವರನ್ನು ಹೊರಗೆ ಹಾಕುವ ಪ್ರಯತ್ನ ಮಾಡಬೇಕು. ಹಾಗೆ ಮಾಡುವ ಮೂಲಕ ನಿಜವಾದ ರೈತ ಸಂಘಟನೆಯನ್ನು ಕಟ್ಟಿ, ನಮ್ಮ ರೈತರಿಗೆ ಆಗುತ್ತಿರುವ ವಂಚನೆಯನ್ನು ತಪ್ಪಿಸಬೇಕಾಗಿದೆ ಎಂದು ಹೇಳಿದರು.

ಇಂದು ರೈತರ ಬದುಕು ತೀರಾ ದುಸ್ಥರವಾಗಿದೆ. ಅವನ ಬದುಕನ್ನು ಕಸಿಯಲು ಬೇರೆ ಬೇರೆ ಶಕ್ತಿಗಳು ವಕ್ಕರಿಸುತ್ತಿವೆ. ಅವೆಲ್ಲವುಗಳಿಗೆ ಇತಿಶ್ರೀ ಹಾಡ ಬೇಕಾಗಿದೆ. ಹಾಗೆ ಇತಿಶ್ರೀ ಹಾಡಿದರೆ ಮಾತ್ರ ಹೋರಾಟಗಾರರ ಆತ್ಮಕ್ಕೆ ಶಾಂತಿ ದೊರಕಿಸಿಕೊಟ್ಟಂತೆ ಆಗುತ್ತದೆ. ಈವರೆಗೆ ಹೋರಾಟದ ಸಂದರ್ಭದಲ್ಲಿ ೧೬೦ಕ್ಕೂ ಹೆಚ್ಚು ಜನ ರೈತ ಹೋರಾಟಗಾರರು ಹುತಾತ್ಮರಾಗಿದ್ದಾರೆ. ಅವರ ಸ್ಮರಣೆ ನಮ್ಮೆಲ್ಲರ ಕರ್ತವ್ಯ ಎಂದರು.

ಈ ಮೂಲಕ ನಾವು ರೈತ ಕುಲದಲ್ಲಿ ಹೊಸ ಜಾಗೃತಿಯನ್ನು ಮೂಡಿಸು ವುದು ಅತ್ಯವಶ್ಯಕ ಎಂದು ಅವರು ಪ್ರತಿಪಾದಿಸಿದರು.


ಸಂದರ್ಭದಲ್ಲಿ ರಾಜ್ಯ ರೈತ ಮುಖಂಡರಾದ ನುಲೇನೂರು ಎಂ.ಶಂಕರಪ್ಪ, ಜೆ. ಎಂ. ವೀರಸಂಗಯ್ಯ, ಗೋವಿಂದರಾಜು ಎ. ಗುರು ಶಾಂತಪ್ಪ, ಟಯೋಟ ಕಾರ್ಮಿಕ ಸಂಘದ ಪ್ರಸನ್ನ ಎನ್.ಗೌಡ ಪೂರ್ಣಶ್ರೀನಂದಕುಮಾರ್ ಮುಂತಾದವರು ಮಾತನಾಡಿ, ರೈತರ ಸಮಸ್ಯೆಗಳನ್ನು, ರಾಜ್ಯ ಸರ್ಕಾರದ ಜೋಭದ್ರಗೇಡಿತನವನ್ನು ಅಲ್ಲದೆ ರೈತರನ್ನು ಒಕ್ಕಲೆಬ್ಬಿಸಲು ಯಾವ ಯಾವ ರೀತಿಯಲ್ಲಿ ಭೂಮಿಯನ್ನು ಕಸಿಯಲು ಯತ್ನಿಸುತ್ತಿದ್ದಾರೆ ಎಂಬುದನ್ನು ಬಯಲು ಮಾಡಿದರು.

ಮುಂದೆ ಸಂಘಟನೆ ಶಸಕ್ತವಾಗದಿದ್ದರೆ ರೈತರನ್ನು ಸಂಪೂರ್ಣ ಹಾಳುವ ಮಾಡುವ ಒಂದು ವಾತಾವರಣ ಕಂಡು ಬರುತ್ತಿದೆ, ಅದಕ್ಕೆ ಅವಕಾಶವಿಲ್ಲದ ರೀತಿಯಲ್ಲಿ ಗಮನಿಸಬೇಕು ಎಂದು ಆಗ್ರಹ ಪಡಿಸಿ, ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.


*ಗೌರವ ಸಮರ್ಪಣೆ*

ಸಂದರ್ಭದಲ್ಲಿ ತಾಲ್ಲೂಕಿನ ಹಿರಿಯ ರೈತ ಮುಖಂಡ ಕುಮಾರಸ್ವಾಮಿ ತೊರೆಹೊಸೂರು, ಜಿಟಿ ರಾಮ ಸ್ವಾಮಿಯವರ ಪತ್ನಿ ಶ್ರೀಮತಿ ಮುತ್ತು, ಎಂ. ರಾಮು ಅವರ ಧರ್ಮಪತ್ನಿ ಶ್ರೀಮತಿ ನಾಗಮ್ಮ ಅವರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ ಮಾತನಾಡಿ, ಈ ಇಬ್ಬರು ನಾಯಕರು ಈ ಜಿಲ್ಲೆಯಲ್ಲಿ ಹಾಗೂ ಅಕ್ಕ ಪಕ್ಕ ಜಿಲ್ಲೆಯಲ್ಲಿ ರೈತ ಸಂಘ ಟನೆಯನ್ನು ಸಶಕ್ತ ಗೊಳಿಸಲು ಸಾಕಷ್ಟು ಶ್ರಮಿಸಿದ್ದರು. ಇವರ ಸಾವಿನಿಂದ ಸಂಘಟನೆಗೆ ದೊಡ್ಡ ಪೆಟ್ಟಾಗಿದೆ ಎಂದು ಹೇಳಿ, ಅವರ ನೆನಪು ನಮ್ಮಲ್ಲಿ ಸದಾಕಾಲ ಹಸಿರಾಗಿರುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಸಮಾಜ ಸೇವಕ ರುದ್ರಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ ನಾಗೇಶ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಸಿಂ.ಲಿಂ ನಾಗರಾಜ್, ಒಕ್ಕಲಿಗರ ಸಂಘದ ನಿರ್ದೇಶಕ ಶಂಭುಗೌಡ, ರಾಜ್ಯ ರೈತ ಸಂಘದ ಬೇರೆ ಬೇರೆ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಹಾಗು ತಾಲ್ಲೂಕು ರೈತ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಆರಂಭಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಎಸ್.ಬಿ ಚೌಕಿಮಠ ಅವರು, ಸ್ವಾಗತಿಸಿದರು. ಪತ್ರಕರ್ತ ಸು.ತ ರಾಮೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಎಂ.ರಾಮು ಮತ್ತು ಜಿ.ಟಿ ರಾಮಸ್ವಾಮಿ ಯವರು, ರೈತ ಸಂಘಟನೆಗೆ, ರೈತ ಕಾರ್ಯಕರ್ತರ ಕಷ್ಟಗಳಿಗೆ ಚೈತನ್ಯ ಪ್ರಾಯರಾಗಿದ್ದರು. ಈ ಕಾರ್ಯಕ್ರಮ ಸಹ ಐತಿಹಾಸಿಕವಾದ ಕಾರ್ಯಕ್ರಮವಾಗಿದೆ ಎಂದರು.

ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ರಾಮನಗರ ಜಿಲ್ಲಾಧ್ಯಕ್ಷರಾದ ಮುನಿರಾಜು ಅವರು ನಿರೂಪಣೆ ಮಾಡಿದರು.


*ಭಾವಚಿತ್ರಗಳ ಮೆರವಣಿಗೆ*

ಆರಂಭಕ್ಕೆ ಹುತಾತ್ಮರಾದ ರಾಮು ಹಾಗು ರಾಮಸ್ವಾಮಿ ಯವರ ಭಾವಚಿತ್ರಗಳನ್ನು ಜಾನಪದ ಕಲಾತಂಡಗ ಳೊಂದಿಗೆ ಇಲ್ಲಿನ ನ್ಯಾಯಾಲಯದ ಮುಂಭಾಗದಿಂದ ಎತ್ತಿನ ಗಾಡಿಯಲ್ಲಿ  ಸಭಾಂಗಣದವರೆಗೆ ಮೆರವಣಿಗೆ ಮಾಡಲಾಯಿತು.

ರೈತ ಕಾರ್ಯಕರ್ತರು ಹುತಾತ್ಮರಾದವರ ಹೆಸರನ್ನು ಹಾಗೂ ರೈತ ಸಂಘಕ್ಕೆ ಜೈಕಾರ ಹಾಕುವುದರ ಮೂಲಕ ಸಭಾಂಗಣಕ್ಕೆ ಕರೆತಂದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ಬೆಳೆ ಸಮೀಕ್ಷೆ ಮತ್ತು ವಿಮೆ ಆಂದೋಲನಕ್ಕೆ ಚಾಲನೆ
ಬೆಳೆ ಸಮೀಕ್ಷೆ ಮತ್ತು ವಿಮೆ ಆಂದೋಲನಕ್ಕೆ ಚಾಲನೆ

ಚನ್ನಪಟ್ಟಣ.ಆ.೧೦: ೨೦೨೨-೨೩ ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಹಾಗೂ ಬೆಳೆವಿಮೆ ಕಾರ್ಯಕ್ರಮಗಳ ಬಗ್ಗೆ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್

ಜಿಲ್ಲೆಯಲ್ಲಿ ಅಬ್ಬರಿಸಿದ ವರುಣ. 447 ಹೆಕ್ಟೇರ್ ಬೆಳೆ ಹಾನಿ190 ಮನೆಗಳು ಜಖಂ
ಜಿಲ್ಲೆಯಲ್ಲಿ ಅಬ್ಬರಿಸಿದ ವರುಣ. 447 ಹೆಕ್ಟೇರ್ ಬೆಳೆ ಹಾನಿ190 ಮನೆಗಳು ಜಖಂ

ಆರಿದ್ರಾ ಮತ್ತು ಆಶ್ಲೇಷ ಮಳೆಯು ಈ ಬಾರಿ ವಾಡಿಕೆಗಿಂತ ಹೆಚ್ಚಾಗಿ ಸುರಿದ ಪರಿಣಾಮ ರೇಷ್ಮೆನಾಡು ರಾಮನಗರ ಜಿಲ್ಲೆ ತಲ್ಲಣಗೊಂಡಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಕಳಲ್ಲಿ ಬೆಳೆದ ಬೆಳೆ ಮತ್ತು ಮನೆಗಳಿಗೆ ಹೆಚ್

ಮಾವು ಅಭಿವೃದ್ಧಿ ಮಂಡಳಿಯಿಂದ ರಾಮನಗರದಲ್ಲಿ ರೈತ ಬಜಾರ್:
ಮಾವು ಅಭಿವೃದ್ಧಿ ಮಂಡಳಿಯಿಂದ ರಾಮನಗರದಲ್ಲಿ ರೈತ ಬಜಾರ್:

 August 7, 2022: ರಾಮನಗರ ಕೋಲಾರ ಮಾವು ಅಭಿವೃದ್ಧಿ ಮಂಡಳಿಯಿಂದ ರಾಮನಗರದಲ್ಲಿ ರೈ

ರೈತಸಂಘದಲ್ಲಿ ಯುವಕರು ಹೆಚ್ಚು ತೊಡಗಿಸಿಗೊಳ್ಳಬೇಕು ರೈತ ಹುತಾತ್ಮರ ದಿನಾಚರಣೆಯಲ್ಲಿ ಬಡಗಲಪುರ ನಾಗೇಂದ್ರ
ರೈತಸಂಘದಲ್ಲಿ ಯುವಕರು ಹೆಚ್ಚು ತೊಡಗಿಸಿಗೊಳ್ಳಬೇಕು ರೈತ ಹುತಾತ್ಮರ ದಿನಾಚರಣೆಯಲ್ಲಿ ಬಡಗಲಪುರ ನಾಗೇಂದ್ರ

ಚನ್ನಪಟ್ಟಣ:ಜು.೨೩:  ಇಂದು ತಾಲ್ಲೂಕಿನ ರೈತ ಹೋರಾಟಗಾರ ರಾಜ್ಯ ರೈತ ಸಂಘದ ಕಾರ್ಯಾದ್ಯಕ್ಷರಾಗಿದ್ದ ಎಂ.ರಾಮು ಹಾಗೂ ರಾಜ್ಯ ರೈತ ಸಂಘದ ಉಪಾಧ್

ಹಿರಿಯ ಮುತ್ಸದ್ದಿ ರೈತಮುಖಂಡನ ಬಗ್ಗೆ ತಪ್ಪು ಮಾಹಿತಿ ಹೇಳಿ ಪೇಚಿಗೆ ಸಿಲುಕಿದ ಅಧಿಕಾರಿಗಳು
ಹಿರಿಯ ಮುತ್ಸದ್ದಿ ರೈತಮುಖಂಡನ ಬಗ್ಗೆ ತಪ್ಪು ಮಾಹಿತಿ ಹೇಳಿ ಪೇಚಿಗೆ ಸಿಲುಕಿದ ಅಧಿಕಾರಿಗಳು

ಚನ್ನಪಟ್ಟಣ: ತಾಲ್ಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ಅಂಗಾಂಶ ಬಾಳೆ ನಾಟಿಯಲ್ಲಿ ಕೋಟ್ಯಾಂತರ ರೂ ಹಗರಣ ನಡೆದಿದೆ ಎಂಬ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕ

ಎಕರೆಗೆ ಐವತ್ತು ಸಾವಿರ ರೂ ಪರಿಹಾರ ನೀಡಿ, ಆನೆಗಳನ್ನು ನಮ್ಮ ಜಮೀನಿಗೆ ಬಿಡಿ. ಅಧಿಕಾರಿಗಳಿಗೆ ರೈತರ ಸಲಹೆ
ಎಕರೆಗೆ ಐವತ್ತು ಸಾವಿರ ರೂ ಪರಿಹಾರ ನೀಡಿ, ಆನೆಗಳನ್ನು ನಮ್ಮ ಜಮೀನಿಗೆ ಬಿಡಿ. ಅಧಿಕಾರಿಗಳಿಗೆ ರೈತರ ಸಲಹೆ

ಚನ್ನಪಟ್ಟಣ: ನಮ್ಮ ಜಮೀನುಗಳಿಗೆ ಎಕರೆಗೆ ಐವತ್ತು ಸಾವಿರದಂತೆ ವರ್ಷಕ್ಕೆ ಪರಿಹಾರಕೊಟ್ಟುಬಿಡಿ, ನೀವು ನಮ್ಮ ಜಮೀನಿನಲ್ಲಿ ಆನೆಯಾದರೂ ಮೇಯಿಸಿಕೊಳ್ಳಿ ಅಥವಾ ಕಾಡುಹಂದಿಯಾದರೂ ಸಾಕಿಕೊಳ್ಳಿ. ನಾವ್ಯಾರು ಪ್ರ

ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರ ಗಂಟುರೋಗ (ಪೆಬ್ರಿನ್) ಸೋಂಕು ತಕ್ಷಣ ನಿಯಂತ್ರಿಸದಿದ್ದರೆ ರೇಷ್ಮೆ ಉದ್ಯಮ ಸರ್ವನಾಶ: ವಿ.ಬಾಲಸುಬ್ರಮಣ್ಯಂ ಆತಂಕ
ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರ ಗಂಟುರೋಗ (ಪೆಬ್ರಿನ್) ಸೋಂಕು ತಕ್ಷಣ ನಿಯಂತ್ರಿಸದಿದ್ದರೆ ರೇಷ್ಮೆ ಉದ್ಯಮ ಸರ್ವನಾಶ: ವಿ.ಬಾಲಸುಬ್ರಮಣ್ಯಂ ಆತಂಕ

ಬೆಂಗಳೂರು: ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರ ತರವಾಗಿ ಹರಡುತ್ತಿರುವ ಗಂಟುರೋಗ (ಪೆಬ್ರಿನ್) ಸೋಂಕನ್ನು ತಕ್ಷಣವೇ ನಿಯಂತ್ರಿಸದಿದ್ದರೆ ಇನ್ನೊಂದು ವರ್ಷದೊಳಗೆ ರೇಷ್ಮೆ ಉದ್ಯಮ ಪೂರ್ತಿ ನಶಿಸಿಹೋಗಲಿ

ಸಮಸ್ಯೆಗಳ ಆಗರವಾಗಿರುವ ರಾಗಿ ಖರೀದಿ ಕೇಂದ್ರ ಖರೀದಿಯಲ್ಲಿ ವಿಳಂಬ
ಸಮಸ್ಯೆಗಳ ಆಗರವಾಗಿರುವ ರಾಗಿ ಖರೀದಿ ಕೇಂದ್ರ ಖರೀದಿಯಲ್ಲಿ ವಿಳಂಬ

ಚನ್ನಪಟ್ಟಣ ಮೇ 23 22. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರೈತರಿಂದ ರಾಗಿ ಖರೀದಿ ಮಾಡುವ ಸಲುವಾಗಿ ಕೇಂದ್ರವೊಂದನ್ನು ತೆರೆದಿದ್ದು ಸಂಪೂರ್

ಏಪ್ರಿಲ್ 25ರಿಂದ ರೈತರೇ ಸ್ವಯಂ ನಕ್ಷೆ ತಯಾರಿಸುವ ವ್ಯವಸ್ಥೆ ಜಾರಿ: ಆರ್ ಅಶೋಕ್
ಏಪ್ರಿಲ್ 25ರಿಂದ ರೈತರೇ ಸ್ವಯಂ ನಕ್ಷೆ ತಯಾರಿಸುವ ವ್ಯವಸ್ಥೆ ಜಾರಿ: ಆರ್ ಅಶೋಕ್

April 22, 2022: ಬೆಂಗಳೂರು: ಭೂ ಒಡೆತನ ಹೊಂದಿರುವವ ರೈತರು ತಮ್ಮ ಸ್ವಂತ ಜಮೀನಿನ 11 ಇ ಸ್ಕೆಚ್‌, ಪೋಡಿ, ಭೂಪರಿವರ್ತನಾ ಪೂರ್ವ ಸ್ಕೆಚ್‌ಗಳನ್ನ

ಮಾವು ಮತ್ತು ಇತರೆ ತೋಟಗಾರಿಕೆ ಬೆಳೆಗಾರರ ಸಮಸ್ಯೆಗಳ ನಿವಾರಣೆಗೆ ಒತ್ತಾಯಿಸಿ ಮಾ.23 ರಿಂದ ಅನಿರ್ಧಿಷ್ಠಾವಧಿ ಧರಣಿ : ಸಿ. ಪುಟ್ಟಸ್ವಾಮಿ
ಮಾವು ಮತ್ತು ಇತರೆ ತೋಟಗಾರಿಕೆ ಬೆಳೆಗಾರರ ಸಮಸ್ಯೆಗಳ ನಿವಾರಣೆಗೆ ಒತ್ತಾಯಿಸಿ ಮಾ.23 ರಿಂದ ಅನಿರ್ಧಿಷ್ಠಾವಧಿ ಧರಣಿ : ಸಿ. ಪುಟ್ಟಸ್ವಾಮಿ

ರಾಮನಗರ: ಜಿಲ್ಲೆಯಲ್ಲಿ ಎಲ್ಲಾ ರೈತರು ಬೆಳೆಗಳ ವಿಷಯದಲ್ಲಿ ಸಂಕಷ್ಟಕ್ಕೀಡಾಗಿದ್ದಾರೆ. ಅದರಲ್ಲೂ ಮಾವು, ತೆಂಗು, ಬಾಳೆ ಸೇರಿದಂತೆ ಇತರೆ ತೋಟಗಾರಿಕ

Top Stories »  


Top ↑