Tel: 7676775624 | Mail: info@yellowandred.in

Language: EN KAN

    Follow us :


ಕೆರೆಯಲ್ಲಿ ಕುರಿ ಮೈತೊಳೆಯುತ್ತಿದ್ದ ಒಂದೇ ಕುಟುಂಬದ ಮೂರು ಮಂದಿ ಸಾವು

Posted date: 23 Apr, 2023

Powered by:     Yellow and Red

ಕೆರೆಯಲ್ಲಿ ಕುರಿ ಮೈತೊಳೆಯುತ್ತಿದ್ದ ಒಂದೇ ಕುಟುಂಬದ ಮೂರು ಮಂದಿ ಸಾವು

ಮಾಗಡಿ: ತಾಲೂಕಿನ ಮುತ್ತಸಾಗರ ಗೊಲ್ಲರಹಟ್ಟಿ ಗ್ರಾಮದ  ಪೂಜಾರಿ ರಾಜಣ್ಣ ಎಂಬುವರ ಪುತ್ರ ನಾಗರಾಜು [30], ಜ್ಯೋತಿ [35], ಲಕ್ಷ್ಮೀ [22] ಕುರಿ ಮೈತೊಳೆಯುತ್ತಿದ್ದಾಗ ಕೆರೆಯಲ್ಲಿದ್ದ ಆಳವಾದ ಕಮರಿಯಲ್ಲಿ ಮುಳುಗಿ ಸಾವನ್ನಪಿದ ಮೃತ ದುರ್ದೈವಿಗಳಾಗಿದ್ದಾರೆ.


ಜಳಜಳ ಬಿಸಿಲಿನ ತಾಪದ ಹಿನ್ನಲೆಯಲ್ಲಿ ತಾವು ಸಾಕಿರುವ ಕುರಿಗಳನ್ನು  ಗ್ರಾಮದ ಬಳಿಯ ಹೊಸ ಕೆರೆಯಲ್ಲಿ  ಶನಿವಾರ ಮಧ್ಯಾಹ್ನ ಕುರಿ ತೊಳೆಯಲು ಮುಂದಾದ ವೇಳೆ ಕೆರೆಯ ಒಳಗೆ ಪ್ರಥಮವಾಗಿ ನಾಗರಾಜು ಮುಂದಾದ ವೇಳೆ ಕೆರೆಯಲ್ಲಿನ ಗುಂಡಿಗೆ ಬಿದಿದ್ದಾರೆ. ನಾಗರಾಜು ರವರನ್ನು ರಕ್ಷಣೆ ಮಾಡಲು ಮುಂದಾದ ಅಕ್ಕ ಜ್ಯೋತಿಯೂ ಸಹ ಕಮರಿಗೆ ಬಿದ್ದು ಕೂಗಿಕೊಂಡಿದ್ದಾರೆ. ಈ ವೇಳೆ ನಾಗರಾಜು ಮತ್ತು ಜ್ಯೋತಿ ರಕ್ಷಣೆಗೆಗಾಗಿ ಕೂಗಾಡಿದ್ದಾರೆ. ತಕ್ಷಣ ಯಾರು ಬಾರದಿದ್ದರಿಂದ ನಾಗರಾಜು ಮತ್ತು ಜ್ಯೋತಿ ರವರ ಮತ್ತೋರ್ವ ಅಕ್ಕನ ಮಗಳು ಲಕ್ಷ್ಮೀ ಅವರಿಬ್ಬರನ್ನೂ ರಕ್ಷಿಸಲು ಮುಂದಾಗಿದ್ದಾರೆ. ಅವರಿಗೂ ಈಜು ಬಾರದ ಹಿನ್ನಲೆಯಲ್ಲಿ ಮೂರು ಮಂದಿಯೂ ಮೃತಪಟ್ಟಿದ್ದಾರೆ.


 ನಾಗರಾಜು ಅವರ ಅಕ್ಕ ಜ್ಯೋತಿ ಯಾಗಿದ್ದು ಲಕ್ಷ್ಮೀ ನಾಗರಾಜು ಅವರ ಹಿರಿಯ ಅಕ್ಕನ ಮಗಳಾಗಿದ್ದಾರೆ.


 ಜ್ಯೋತಿ ಎಂಬುವರನ್ನು  ಕಾಮಾಕ್ಷಿ ಪಾಳ್ಯದ ನಿವಾಸಿಗೆ ಮದುವೆ ಮಾಡಿಕೊಡಲಾಗಿದ್ದು ಒಂದು ಗಂಡು, ಒಂದು ಹೆಣ್ಣು ಮಕ್ಕಳಿದ್ದಾರೆ. ನಾಗರಾಜು ಎಂಬುವರಿಗೆ ಒಂದು ಗಂಡು, ಒಂದು ಹೆಣ್ಣು ಮಕ್ಕಳಿದ್ದಾರೆ.


ಅಗ್ನಿ ಶಾಮಕ ಸಿಬ್ಬಂದಿಗಳು ಹಾಗೂ ಕುದೂರು ಪೊಲೀಸರು ಆಳದ ಕಮರಿಯಲ್ಲಿ ಬದಿಗೆ ಕಚ್ಚಿಕೊಂಡಿದ್ದ ಮೃತ ದೇಹಗಳನ್ನು ಹೊರತೆಗೆದು ಮಾಗಡಿ ಸಾರ್ವಜನಿಕ ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ಮೃತ ದೇಹಗಳನ್ನು ನೀಡಿದರು.


ಕೆರೆಯ ಬಳಿ ಹಾಗೂ ಆಸ್ಪತ್ರೆಯ ಮುಂದೆ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದ್ದು ತಹಶೀಲ್ದಾರ್ ಜಿ.ಸುರೇಂದ್ರ ಮೂರ್ತಿ ಸರಕಾರಿ ಆಸ್ಪತ್ರೆಯ ಬಳಿ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. 


ತಾಲೂಕಿನಾದ್ಯಂತ ಇಟ್ಟಿಗೆ ಪ್ಯಾಕ್ಟರಿಗಳಿಗೆ ಹಾಗೂ ಬಲಾಢ್ಯರು ವ್ಯವಹಾರ ದೃಷ್ಟಿಯಿಂದ ಕೆರೆಗಳಲ್ಲಿ ಅನಧಿಕೃತವಾಗಿ ಹೂಳು ಎತ್ತುವ ನೆಪದಲ್ಲಿ, ಅವರಿಗೆ ಅನುಕೂಲವಾಗುವ ಕಡೆ ಆಳವಾದ ಗುಂಡಿಗಳನ್ನು ಮಾಡಿ, ಮಣ್ಣು ತೆಗೆದು ಎಲ್ಲೆಂದರಲ್ಲಿ ಗುಂಡಿ ತೆಗೆಯುತ್ತಿರುವುದರಿಂದ ಇಂಥಹ ದುರ್ಘಟನೆಗಳು ನಡೆಯುತ್ತಿವೆ ಇದಕ್ಕೆ ಕಡಿವಾಣ ಹಾಕಬೇಕಾದ ಕಂದಾಯ  ಅಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಸದಸ್ಯರುಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಇದರಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಇವರ ವಿರುದ್ಧ ಸರ್ಕಾರವು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು

ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು  ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್

ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ

ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ

ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ

ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ

ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ

ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.

ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ

ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ

ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ




ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ

ಟಿಎಪಿಸಿಎಂಎಸ್ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮೆಹರೀಶ್
ಟಿಎಪಿಸಿಎಂಎಸ್ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮೆಹರೀಶ್

ಚನ್ನಪಟ್ಟಣ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ ಅಧ್ಯಕ್ಷರಾಗಿ ಮತ್ತೀಕೆರೆ ಗ್ರಾಮದ ಮೆಹರೀಶ್ (ಮನು) ರವರು ಸೋಮವಾರ ಅವಿರೋಧವಾಗಿ ಆಯ್

ಪಂಪ್ ಸೆಟ್ ಬಾವಿ ನೀರಿಗಾಗಿ  ತಾಯಿ, ಪುತ್ರ ಕೊಲೆ
ಪಂಪ್ ಸೆಟ್ ಬಾವಿ ನೀರಿಗಾಗಿ ತಾಯಿ, ಪುತ್ರ ಕೊಲೆ

ಪಾಂಡವಪುರ: ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಹಾಯಿಸಲು ಪಂಪ್ ಸೆಟ್ ಬಾವಿ ನೀರಿನ ವಿಚಾರಕ್ಕೆ ಸಂಬಂಧಪಟ್ಟಂತೆ ತಾಯಿ ಹಾಗೂ ಪುತ್ರನನ್ನು ಸ್ವಂತ ಸಂಬಂಧಿ

ಕೆರೆಯಲ್ಲಿ ಕುರಿ ಮೈತೊಳೆಯುತ್ತಿದ್ದ ಒಂದೇ ಕುಟುಂಬದ ಮೂರು ಮಂದಿ ಸಾವು
ಕೆರೆಯಲ್ಲಿ ಕುರಿ ಮೈತೊಳೆಯುತ್ತಿದ್ದ ಒಂದೇ ಕುಟುಂಬದ ಮೂರು ಮಂದಿ ಸಾವು

ಮಾಗಡಿ: ತಾಲೂಕಿನ ಮುತ್ತಸಾಗರ ಗೊಲ್ಲರಹಟ್ಟಿ ಗ್ರಾಮದ  ಪೂಜಾರಿ ರಾಜಣ್ಣ ಎಂಬುವರ ಪುತ್ರ ನಾಗರಾಜು [30], ಜ್ಯೋತಿ [35], ಲಕ್ಷ್ಮೀ [22] ಕುರಿ ಮೈತೊಳೆಯುತ್ತ

ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರ ಗಂಟುರೋಗ (ಪೆಬ್ರಿನ್) ಸೋಂಕು ತಕ್ಷಣ ನಿಯಂತ್ರಿಸದಿದ್ದರೆ ರೇಷ್ಮೆ ಉದ್ಯಮ ಸರ್ವನಾಶ: ವಿ.ಬಾಲಸುಬ್ರಮಣ್ಯಂ ಆತಂಕ
ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರ ಗಂಟುರೋಗ (ಪೆಬ್ರಿನ್) ಸೋಂಕು ತಕ್ಷಣ ನಿಯಂತ್ರಿಸದಿದ್ದರೆ ರೇಷ್ಮೆ ಉದ್ಯಮ ಸರ್ವನಾಶ: ವಿ.ಬಾಲಸುಬ್ರಮಣ್ಯಂ ಆತಂಕ

ಬೆಂಗಳೂರು: ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರ ತರವಾಗಿ ಹರಡುತ್ತಿರುವ ಗಂಟುರೋಗ (ಪೆಬ್ರಿನ್) ಸೋಂಕನ್ನು ತಕ್ಷಣವೇ ನಿಯಂತ್ರಿಸದಿದ್ದರೆ ಇನ್ನೊಂದು ವರ್ಷದೊಳಗೆ ರೇಷ್ಮೆ ಉದ್ಯಮ ಪೂರ್ತಿ ನಶಿಸಿಹೋಗಲಿ

Top Stories »  


Top ↑