Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನಾಂದ್ಯಂತ ವಿಶೇಷ ರೋಜ್ ಗಾರ್ ದಿವಸ್ ಆಚರಣೆ.

Posted date: 18 May, 2023

Powered by:     Yellow and Red

ತಾಲ್ಲೂಕಿನಾಂದ್ಯಂತ ವಿಶೇಷ ರೋಜ್ ಗಾರ್ ದಿವಸ್ ಆಚರಣೆ.

ಚನ್ನಪಟ್ಟಣ (ಮೇ 17): ಮಹಾತ್ಮಾಗಾಂಧಿ ರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ )ಯಡಿ ಗ್ರಾಮೀಣ ಪ್ರದೇಶದ ಜನರು ಕೂಲಿ ಕೆಲಸದ ಜೊತೆಗೆ  ವೈಯಕ್ತಿಕ ಕಾಮಗಾರಿಗಳ ಬೇಡಿಕೆ ಕೊಟ್ಟು ಯೋಜನೆಯ ಸದುಪಯೋಗ ಪಡೆಸಿಕೊಳ್ಳುವಂತೆ ಮಾಹಿತಿ ರವಾನಿಸುವ ಉದ್ದೇಶದಿಂದ ವಿಶೇಷ ರೋಜ್ ಗಾರ್ ದಿವಸ್ ಆಚರಿಸುವಂತೆ ಚನ್ನಪಟ್ಟಣ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಯವರು ತಿಳಿಸಿದ್ದರಿಂದ ತಾಲ್ಲೂಕಿನ 32 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮೇ 16-17    ರಂದು ಪ್ರತಿಯೊಂದು ಗ್ರಾಮದಲ್ಲಿ ರೋಜ್ಗಾರ್ ದಿವಸ್ ಆಚರಿಸಿ ನರೇಗಾ ಯೋಜನೆಯಡಿ ಸಿಗುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕರು ಮತ್ತು ಉದ್ಯೋಗ ಚೀಟಿ ದಾರರಿಗೆ ಮಾಹಿತಿ ನೀಡಿ ಕೆಲಸದ ಬೇಡಿಕೆಯ ಪಟ್ಟಿ ಪಡೆಯುವಂತೆ ಅಧಿಕೃತ ಜ್ಙಾಪನ ಪತ್ರದ ಮೂಲಕ ವಿಷಯವನ್ನು ತಿಳಿಸಿದರು ಹಾಗೂ  ಕೆಲವು ಪಂಚಾಯಿತಿಗಳ ರೋಜ್ಗಾರ್ ದಿವಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸ್ವತಃ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ್ ರವರೆ ನರೇಗಾ ಯೋಜನೆಯಡಿ ಕುರಿತು ಮಾಹಿತಿ ನೀಡಿದರು.


ನರೇಗಾ ಯೋಜನೆಯಡಿ ಪ್ರತಿ ತಿಂಗಳ ಎರಡನೇ ಗುರುವಾರದಂದು ತಪ್ಪದೆ ಗ್ರಾಮ ಪಂಚಾಯಿತಿವಾರು ರೋಜ್ಗಾರ್ ದಿವಸ್ ಆಚರಿಸಿ ಬೇಡಿಕೆ ಪಟ್ಟಿ ಪಡೆಯುವಂತೆ ರಾಜ್ಯ ಮಟ್ಟದಿಂದ ಆದೇಶವಿದ್ದು ಇದಕ್ಕೆ ಪೂರಕವಾಗಿ ಇಓ ರವರು ಮೇ 16-17 ರಂದು ವಿಶೇಷ ರೋಜ್ಗಾರ್ ದಿವಸ್ ಆಚರಿಸಿ ಹೆಚ್ಚು ಬೇಡಿಕೆ ಪಟ್ಟಿ ತರುವಂತೆ ಪಂಚಾಯಿತಿ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.


೧.)ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೊಜನೆಯ ಸಂದೇಶಗಳು

1.18 ವರ್ಷ ಮೇಲ್ಪಟ್ಟ ಕುಶಲ ಕಾರ್ಮಿಕರು ಉದ್ಯೋಗಕ್ಕಾಗಿ ಉದ್ಯೋಗ ಚೀಟಿ ಹೊಂದಿ, ಬೇಡಿಕೆ ಸಲ್ಲಿಸುವ ಪ್ರತಿ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 100 ದಿನಗಳ ಉದ್ಯೋಗ ನೀಡಲಾಗುವುದು.

 

೨.)ಉದ್ಯೋಗ ಚೀಟಿಗೆ ಅರ್ಜಿಸಲ್ಲಿಸಿದ ಕೂಡಲೇ, ಗ್ರಾಮ ಪಂಚಾಯತಿಯಿಂದ ಉಚಿತವಾಗಿ ಜಾಬ್ ಕಾರ್ಡ್ ನೀಡಲಾಗುವುದು.


೩.)ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ 

೪.)ಒಂದು ದಿನಕ್ಕೆ 316 ರೂ. ಕೂಲಿ ಪಾವತಿ 

೫.) ವಾರದ ಕೂಲಿಯನ್ನು ೧೫ ದಿನಗಳ ಒಳಗಾಗಿ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು.

 

೬.) 60 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ವಿಕಲಚೇತನರಿಗೆ ಕೆಲಸದಲ್ಲಿ 50 ರಷ್ಟು ರಿಯಾಯಿತಿ.

೭.) ಸಾಧ್ಯವಾದಷ್ಟು ಮಟ್ಟಿಗೆ ಆ ಕೆಲಸವನ್ನು ಆ ಗ್ರಾಮದ ವ್ಯಾಪ್ತಿಯಲ್ಲಿ ಒದಗಿಸಬೇಕು. ಅವರು ವಾಸವಿರುವ ಗ್ರಾಮದಿಂದ 5 ಕೀ.ಮಿ ಗಿಂತ ಹೆಚ್ಚಿನ ದೂರದಲ್ಲಿ ಕೆಲಸವನ್ನು ಒದಗಿಸಿದ್ದೇ ಆದರೆ, ಅವರಿಗೆ ಕೂಲಿಯ ಶೇ 10 ರಷ್ಟನ್ನು ಹೆಚ್ಚುವರಿಯಾಗಿ ಸಾರಿಗೆ ಮತ್ತು ಜೀವನ ವೆಚ್ಚಕ್ಕಾಗಿ ಪಡೆಯಬಹುದು.

೮.)ಕೂಲಿ ಕಾರ್ಮಿಕರನ್ನು ಪ್ರೇರೆಪಿಸಿ ಕೆಲಸಕ್ಕೆ ಹಾಜರುಪಡಿಸಿದಲ್ಲಿ ಒಂದು ಮಾನವ ದಿನಕ್ಕೆ ಹೆಚ್ಚುವರಿಯಾಗಿ ಪುರುಷ ಕಾಯಕ ಬಂಧುವಿಗೆ 4 ರೂ. ಹಾಗೂ ಮಹಿಳಾ ಕಾಯಕ ಬಂಧುವಿಗೆ 5 ರೂ. ಗಳನ್ನು ನೀಡಲಾಗುವುದು. 

೯.) ನಿಮ್ಮ ಗ್ರಾಮದಲ್ಲಿ ಕೆಲಸ ಬೇಕೆಂದು ಗ್ರಾಮ ಪಂಚಾಯತಿಗೆ ಅರ್ಜಿ ನೀಡಿ ಕೆಲಸ ಪಡೆಯಬಹುದು. ಒಂದು ವೇಳೆ 15 ದಿನಗಳಲ್ಲಿ ಕೆಲಸ ಕೊಡದಿದ್ದಲ್ಲಿ ನಿರುದ್ಯೋಗ ಭತ್ಯೆ ನೀಡಲಾಗುವುದು. 

೧೦.) ಕಾಮಗಾರಿ ಸ್ಥಳದ ಸಮೀಪದಲ್ಲಿ ಸ್ವಚ್ಛವಾದ ಕುಡಿಯುವ ನೀರಿನ ವ್ಯವಸ್ಥೆ.

೧೧.) ಕೆಲಸದ ಅವಧಿಯಲ್ಲಿ ಉಂಟಾಗಬಹುದಾದ ಸಣ್ಣಪುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲು ಸಾಕಷ್ಟು ಸಾಮಾಗ್ರಿಗಳಿರುವ ಪ್ರಥಮ ಚಿಕಿತ್ಸೆ ಪೆಟ್ಟಿಗೆಯ ವ್ಯವಸ್ಥೆ.

೧೨.) ಕಾಮಗಾರಿ ಸ್ಥಳದಲ್ಲಿ ಆರು ವರ್ಷಕ್ಕೂ ಕಡಿಮೆ ವಯಸ್ಸಿನ, ಐದಕ್ಕಿಂತ ಹೆಚ್ಚಿನ ಮಕ್ಕಳು ಕಾರ್ಮಿಕರೊಂದಿಗೆ ಬಂದಲ್ಲಿ, ಅವರನ್ನು ನೋಡಿಕೊಳ್ಳಲು ಕಾರ್ಮಿಕರ ಪೈಕಿ ಒಬ್ಬ ಮಹಿಳೆಯನ್ನು ನೇಮಿಸಬೇಕು ಮತ್ತು ದಿನದ ಕೂಲಿಯನ್ನು ಆ ಮಹಿಳೆಗೆ ನೀಡಬೇಕು.


೧೩.) ಕಾಮಗಾರಿಯ ಸಂಬಂಧ ಯಾವುದೇ ಕಾರ್ಮಿಕರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಬೇಕಾದ ಅಗತ್ಯ ಬಂದಲ್ಲಿ ಅವರ ಔಷಧಿಯ ವೈದ್ಯಕೀಯ ಚಿಕಿತ್ಸೆ, ವಸತಿ, ಇತ್ಯಾದಿ ಉಚಿತ ವೈದ್ಯಕೀಯ ಸೌಲಭ್ಯ ಪಡೆಯಬಹುದು.

೧೪.)  ವೈದ್ಯಕೀಯ ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಪತ್ರಿದಿನಕ್ಕೆ ಕೂಲಿಯನ್ನು ದಿನ ಭತ್ಯೆ ಪಡೆಯಬಹುದು.

೧೫.)ಕಾಮಗಾರಿಯ ಕಾರಣದಿಂದಾಗಿ ಕಾರ್ಮಿಕರು ಶಾಶ್ವತವಾಗಿ ವಿಕಲಚೇತನರಾದರೆ ಅಥವಾ ಮೃತ ಪಟ್ಟರೆ ಅವರ ವಾರಸುದಾರರು ಹಣ ಪಡೆಯಬಹುದು.

ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಹಾಗೂ ಸಮುದಾಯ ಕಾಮಗಾರಿ ಕೈಗೊಳಬಹುದು.


ವೈಯಕ್ತಿಕ ಕಾಮಗಾರಿಗಳ ಅಂದಾಜು ಮೊತ್ತ ಹಾಗೂ ವಿಸ್ತರಣೆ ವಿವರ 

ದನದ ಕೊಟ್ಟಿಗೆ-57,000/-  (ಉದ್ದ) 20×12(ಅಗಲ) ವಿಸ್ತರಣೆಯಲ್ಲಿ ನಿರ್ಮಾಣ 

ಮೇಕೆಶೆಡ್ಡು-70,000/-15×12, ಬದು ಒಂದು ಎಕ್ಕರೆ 13,000/-

ಸೋಕ್ ಪಿಟ್ =11,000/- ಕೈ ತೋಟ-4500/-14 ಗಿಡಗಳು,

ಕೋಳಿಶೆಡ್ಡು=60000/- 15×10, ಎರೆಹುಳು ತೊಟ್ಟಿ=20,000 /-16×5, ಕುರಿಶೆಡ್ಡು=35,000/- 15×10

ಹಿಪ್ಪು ನೇರಳೆ ನರ್ಸರಿ, ಹಿಪ್ಪು, ನೇರಳೆ ನಾಟಿ-ಜೋಡಿ ಸಾಲು, ತೆಂಗು ಪುನಶ್ಚೇತನ, ಮಾವು ಪುನಶ್ಚೇತನ, ನುಗ್ಗೆ, ಬಾಳೆ ಇತ್ಯಾದಿ. 


ಸಮುದಾಯ ಕಾಮಗಾರಿಗಳ ವಿವರ;

ಆಟದ ಮೈದಾನ ಅಭಿವೃದ್ಧಿ, ಶಾಲಾ ಕಾಂಪೌಂಡ್ ನಿರ್ಮಾಣ, ಶಾಲಾ ಕೈ ತೋಟ ನಿರ್ಮಾಣ, ಶಾಲೆಗೆ ಶೌಚಾಲಯ ನಿರ್ಮಾಣ, ಸ್ಮಶಾನ ಅಭಿವೃದ್ಧಿ, ಕೆರೆ/ ಗೋಕಟ್ಟೆ ಹೂಳೆತ್ತುವುದು, ಅಂಗನವಾಡಿ ಕೇಂದ್ರಗಳು, ಗ್ರಾಮೀಣ ಉದ್ಯಾನವನ ನಿರ್ಮಾಣ, ನಾಲಾ ಅಭಿವೃದ್ಧಿ , ಜಾನುವಾರು ಕುಡಿಯುವ ನೀರಿನ ತೊಟ್ಟಿ ನಿರ್ಮಾಣ, ಮಳೆ ನೀರು ಕೊಯ್ಲು, ಗ್ರಾಮೀಣ ಸಂಪರ್ಕ ರಸ್ತೆ, ಸ್ವಸಹಾಯ ಸಂಘಗಳಿಗೆ ಸಂಜೀವಿನಿ ಶೆಡ್ಡು ನಿರ್ಮಾಣ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಇಓ ರವರು ಮಾಹಿತಿ ನೀಡಿದರು.


ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಅಭಿಯಂತರರು, ಗ್ರಾಮ ಕಾಯಕ ಮಿತ್ರರು, ಬಿ ಎಫ್ ಟಿ ಗಳು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ

ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ

ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ

ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ

ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ

ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ

ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್

ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ

ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು

ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು  ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್

ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ

ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ

ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ

ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ

ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ

ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.

ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ

ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ

ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ




ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ

Top Stories »  


Top ↑