Tel: 7676775624 | Mail: info@yellowandred.in

Language: EN KAN

    Follow us :

ರೈತರಿಗೆ ಸಕಾಲದಲ್ಲಿ ದೊರೆಯದ ಯೂರಿಯಾ, ಕಾಳಸಂತೆಯಲ್ಲಿ ಮಾರಾಟ

Posted date: 10 Sep, 2022

Powered by:     Yellow and Red

ರೈತರಿಗೆ ಸಕಾಲದಲ್ಲಿ ದೊರೆಯದ ಯೂರಿಯಾ, ಕಾಳಸಂತೆಯಲ್ಲಿ ಮಾರಾಟ

ಚನ್ನಪಟ್ಟಣ: ಈಬಾರಿ ಏಪ್ರಿಲ್ ನಿಂದಲೇ ಮಳೆ ಆರಂಭವಾಗಿದ್ದು ಈಗಲೂ ಮುಂದುವರೆದಿದೆ. ಕೆಲವರು ಮಧ್ಯಮಧ್ಯ ಅಂದರೆ ಮಳೆ ಬಿಡುವು ಕೊಟ್ಟಾಗ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿದ ನಂತರ ಬಂದ ಪೈರುಗಳು ಮಳೆ ಹೆಚ್ಚಾಗಿರುವುದರಿಂದ ಸಂಪೂರ್ಣವಾಗಿ ಬಿಳಿಚಿಕೊಂಡಿವೆ. ಈಗ ಯೂರಿಯಾ ರಸಗೊಬ್ಬರ ಹಾಕಲಿಲ್ಲ ಎಂದರೆ ಅಲ್ಪಸ್ವಲ್ಪ ಉಳಿದಿರುವ ಬೆಳೆಯೂ ಕೈಸೇರುವುದಿಲ್ಲಾ ಎಂಬುದು ರೈತರ ಅಳಲಾಗಿದೆ. ಬಹುತೇಕ ಸೊಸೈಟಿ ಸೇರಿದಂತೆ ಖಾಸಗಿ ಅಂಗಡಿಗಳಲ್ಲಿ ರಸಗೊಬ್ಬರ ಸಿಗುತ್ತಿಲ್ಲಾ. ಇರುವ ಅಂಗಡಿಗಳಲ್ಲಿ ದುಬಾರಿ ಬೆಲೆಗೆ ಕೊಳ್ಳಬೇಕಾದ ಪರಿಸ್ಥಿತಿ ಇದೆ.

ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಈಗಲೂ ಯೂರಿಯಾ ದೊರೆಯುತ್ತದೆ. ದರ ಮಾತ್ರ ಅವರು ಹೇಳುವಷ್ಟು ಕೊಟ್ಟು ಕೊಂಡುಕೊಳ್ಳಬೇಕು. 249₹ ರೂಪಾಯಿ ಬೆಲೆಯ ಯೂರಿಯಾ ಗೆ 300₹ 350₹ 400₹ ಗೂ ಮೀರಿ ಬೆಲೆ ತೆರಬೇಕಾಗಿದೆ. ದಬಾಯಿಸಿದರೆ, ನಾವೂ ಹೆಚ್ಚು ದುಡ್ಡು ನೀಡಿಯೇ ಕೊಂಡಿದ್ದೇವೆ. ಇಷ್ಟವಿದ್ದರೆ ಕೊಳ್ಳಿ ಇಲ್ಲವಾದರೆ ಬಿಡಿ ಎಂದು ನಿಷ್ಠುರವಾಗಿ ಹೇಳುವ ವ್ಯಾಪಾರಿಗಳೇ ಹೆಚ್ಚಿದ್ದಾರೆ. ಫೆರಿಕಿನ್ ಬೂಸ್ಟರ್ ಎಂಬ ರಸಗೊಬ್ಬರ ಕೊಳ್ಳಲು ಡಿಮ್ಯಾಂಡ್ ಮಾಡುತ್ತಾರೆ. ನಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ತರಹೇವಾರಿ ದರ ಹೇಳುತ್ತಾರೆ. ಹಳದಿ ಬಣ್ಣದ ಒಂದು ಕಿಲೋ ರಸಗೊಬ್ಬರ ನೀಡುತ್ತಾರೆ. ನೂರು ರೂಪಾಯಿ ಕೇಳುತ್ತಾರೆ ಅಂದರೆ ಚೀಲವೊಂದಕ್ಕೆ ಐದು ಸಾವಿರ ರೂಪಾಯಿ ಯೇ ಎಂಬುದು ರೈತರ ಯಕ್ಷಪ್ರಶ್ನೆಯಾಗಿದೆ.

ಒಂದು ಅಥವಾ ಎರಡು ಚೀಲ ಯೂರಿಯಾ ಬೇಕು ಎಂದರೆ 1,500₹ ಬೆಲೆಯ ಕಾಂಪ್ಲೆಕ್ಸ್ ಖರೀದಿಸಲೇಬೇಕು ಎಂದು ಕಂಡೀಷನ್ ಹಾಕುತ್ತಾರೆ. ರಾಕ್ಷಸನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಎರಡು ಸಾವಿರಕ್ಕೂ ಮಿಗಿಲ ಹಣಕ್ಕೆ ಐವತ್ತು ಕಿಲೋ ಯೂರಿಯಾ ಕೊಂಡಂತಾಗುತ್ತಿದೆ ಎಂಬುದು ರೈತರ ಅಳಲಾಗಿದೆ. ಚನ್ನಪಟ್ಟಣ ತಾಲ್ಲೂಕು ಮಳೆಗಾಲದಲ್ಲಷ್ಟೇ ಅಲ್ಲದೆ ವರ್ಷಪೂರ್ತಿ ನೀರಾವರಿಯಿರುವುದರಿಂದ, ಹೈನುಗಾರಿಕೆಯನ್ನೇ ಹಲವಾರು ಕುಟುಂಬಗಳು ನಂಬಿಕೊಂಡಿರುವುದರಿಂದ ಮೇವು, ರೇಷ್ಮೆ, ಬಾಳೆ, ಭತ್ತ, ರಾಗಿ ಸೇರಿದಂತೆ ವಿವಿಧ ಬೆಳೆಗಳಿಗೆ ಹಂತಹಂತವಾಗಿ 365 ದಿನಗಳೂ ಸಹ ಯೂರಿಯಾ ಬಳಕೆ ಮಾಡುತ್ತಾರೆ. ಈಗಲಾದರೂ ಸರಿಯಾದ ಸಮಯಕ್ಕೆ ರಸಗೊಬ್ಬರ ನೀಡಲಿ ಎಂದು ರೈತರು ಆಗ್ರಹಿಸಿದ್ದಾರೆ.

ಪ್ರತಿವಾರವೂ ನಾವೂ ಇಂಡೆಂಟ್ ಹಾಕುತ್ತಲೇ ಇದ್ದೇವೆ. ದಾಸ್ತಾನು ಮಾಡುವಷ್ಟು ಗೊಬ್ಬರ ಬರುತ್ತಿಲ್ಲ. ಬಂದದ್ದು ಖಾಲಿಯಾಗುತ್ತಿದೆ. ಯೂರಿಯಾ ಜೊತೆಗೆ ಕಾಂಪ್ಲೆಕ್ಸ್ ಹಾಕಿದಾಗ ಮಾತ್ರ ಉತ್ತಮ ಬೆಳೆ ಬರುತ್ತದೆ. ಒಂದು ಚೀಲ ಯೂರಿಯಾ ಕೊಳ್ಳುವವರಿಗೆ ಹತ್ತು ಕಿಲೋ ಕಾಂಪ್ಲೆಕ್ಸ್ ಕೊಳ್ಳಲು ಹೇಳಲಾಗುತ್ತದೆ. ನಾವು ಮಂಡ್ಯ ಮತ್ತು ಬೆಂಗಳೂರಿನ ಮೇಲೆ ಅವಲಂಬಿತರಾಗಿದ್ದೇವೆ. ರಾಮನಗರ ಜಿಲ್ಲೆಯಲ್ಲೇ ವ್ಯವಸ್ಥೆ ಮಾಡಲು ಶಾಸಕರಿಗೆ ಮನವಿ ಮಾಡಲಾಗಿದೆ.

*ರವಿ ಎಸ್ ಕೆ. ಪ್ರಭಾರ ಕೃಷಿ ಅಧಿಕಾರಿ ಚನ್ನಪಟ್ಟಣ.*

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೈತರಿಗೆ ಸಕಾಲದಲ್ಲಿ ದೊರೆಯದ ಯೂರಿಯಾ, ಕಾಳಸಂತೆಯಲ್ಲಿ ಮಾರಾಟ
ರೈತರಿಗೆ ಸಕಾಲದಲ್ಲಿ ದೊರೆಯದ ಯೂರಿಯಾ, ಕಾಳಸಂತೆಯಲ್ಲಿ ಮಾರಾಟ

ಚನ್ನಪಟ್ಟಣ: ಈಬಾರಿ ಏಪ್ರಿಲ್ ನಿಂದಲೇ ಮಳೆ ಆರಂಭವಾಗಿದ್ದು ಈಗಲೂ ಮುಂದುವರೆದಿದೆ. ಕೆಲವರು ಮಧ್ಯಮಧ್ಯ ಅಂದರೆ ಮಳೆ ಬಿಡುವು ಕೊಟ್ಟಾಗ ಬಿತ್ತನೆ ಮಾಡಿದ್

ಬೆಳೆ ಸಮೀಕ್ಷೆ ಮತ್ತು ವಿಮೆ ಆಂದೋಲನಕ್ಕೆ ಚಾಲನೆ
ಬೆಳೆ ಸಮೀಕ್ಷೆ ಮತ್ತು ವಿಮೆ ಆಂದೋಲನಕ್ಕೆ ಚಾಲನೆ

ಚನ್ನಪಟ್ಟಣ.ಆ.೧೦: ೨೦೨೨-೨೩ ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಹಾಗೂ ಬೆಳೆವಿಮೆ ಕಾರ್ಯಕ್ರಮಗಳ ಬಗ್ಗೆ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್

ಜಿಲ್ಲೆಯಲ್ಲಿ ಅಬ್ಬರಿಸಿದ ವರುಣ. 447 ಹೆಕ್ಟೇರ್ ಬೆಳೆ ಹಾನಿ190 ಮನೆಗಳು ಜಖಂ
ಜಿಲ್ಲೆಯಲ್ಲಿ ಅಬ್ಬರಿಸಿದ ವರುಣ. 447 ಹೆಕ್ಟೇರ್ ಬೆಳೆ ಹಾನಿ190 ಮನೆಗಳು ಜಖಂ

ಆರಿದ್ರಾ ಮತ್ತು ಆಶ್ಲೇಷ ಮಳೆಯು ಈ ಬಾರಿ ವಾಡಿಕೆಗಿಂತ ಹೆಚ್ಚಾಗಿ ಸುರಿದ ಪರಿಣಾಮ ರೇಷ್ಮೆನಾಡು ರಾಮನಗರ ಜಿಲ್ಲೆ ತಲ್ಲಣಗೊಂಡಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಕಳಲ್ಲಿ ಬೆಳೆದ ಬೆಳೆ ಮತ್ತು ಮನೆಗಳಿಗೆ ಹೆಚ್

ಮಾವು ಅಭಿವೃದ್ಧಿ ಮಂಡಳಿಯಿಂದ ರಾಮನಗರದಲ್ಲಿ ರೈತ ಬಜಾರ್:
ಮಾವು ಅಭಿವೃದ್ಧಿ ಮಂಡಳಿಯಿಂದ ರಾಮನಗರದಲ್ಲಿ ರೈತ ಬಜಾರ್:

 August 7, 2022: ರಾಮನಗರ ಕೋಲಾರ ಮಾವು ಅಭಿವೃದ್ಧಿ ಮಂಡಳಿಯಿಂದ ರಾಮನಗರದಲ್ಲಿ ರೈ

ರೈತಸಂಘದಲ್ಲಿ ಯುವಕರು ಹೆಚ್ಚು ತೊಡಗಿಸಿಗೊಳ್ಳಬೇಕು ರೈತ ಹುತಾತ್ಮರ ದಿನಾಚರಣೆಯಲ್ಲಿ ಬಡಗಲಪುರ ನಾಗೇಂದ್ರ
ರೈತಸಂಘದಲ್ಲಿ ಯುವಕರು ಹೆಚ್ಚು ತೊಡಗಿಸಿಗೊಳ್ಳಬೇಕು ರೈತ ಹುತಾತ್ಮರ ದಿನಾಚರಣೆಯಲ್ಲಿ ಬಡಗಲಪುರ ನಾಗೇಂದ್ರ

ಚನ್ನಪಟ್ಟಣ:ಜು.೨೩:  ಇಂದು ತಾಲ್ಲೂಕಿನ ರೈತ ಹೋರಾಟಗಾರ ರಾಜ್ಯ ರೈತ ಸಂಘದ ಕಾರ್ಯಾದ್ಯಕ್ಷರಾಗಿದ್ದ ಎಂ.ರಾಮು ಹಾಗೂ ರಾಜ್ಯ ರೈತ ಸಂಘದ ಉಪಾಧ್

ಹಿರಿಯ ಮುತ್ಸದ್ದಿ ರೈತಮುಖಂಡನ ಬಗ್ಗೆ ತಪ್ಪು ಮಾಹಿತಿ ಹೇಳಿ ಪೇಚಿಗೆ ಸಿಲುಕಿದ ಅಧಿಕಾರಿಗಳು
ಹಿರಿಯ ಮುತ್ಸದ್ದಿ ರೈತಮುಖಂಡನ ಬಗ್ಗೆ ತಪ್ಪು ಮಾಹಿತಿ ಹೇಳಿ ಪೇಚಿಗೆ ಸಿಲುಕಿದ ಅಧಿಕಾರಿಗಳು

ಚನ್ನಪಟ್ಟಣ: ತಾಲ್ಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ಅಂಗಾಂಶ ಬಾಳೆ ನಾಟಿಯಲ್ಲಿ ಕೋಟ್ಯಾಂತರ ರೂ ಹಗರಣ ನಡೆದಿದೆ ಎಂಬ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕ

ಎಕರೆಗೆ ಐವತ್ತು ಸಾವಿರ ರೂ ಪರಿಹಾರ ನೀಡಿ, ಆನೆಗಳನ್ನು ನಮ್ಮ ಜಮೀನಿಗೆ ಬಿಡಿ. ಅಧಿಕಾರಿಗಳಿಗೆ ರೈತರ ಸಲಹೆ
ಎಕರೆಗೆ ಐವತ್ತು ಸಾವಿರ ರೂ ಪರಿಹಾರ ನೀಡಿ, ಆನೆಗಳನ್ನು ನಮ್ಮ ಜಮೀನಿಗೆ ಬಿಡಿ. ಅಧಿಕಾರಿಗಳಿಗೆ ರೈತರ ಸಲಹೆ

ಚನ್ನಪಟ್ಟಣ: ನಮ್ಮ ಜಮೀನುಗಳಿಗೆ ಎಕರೆಗೆ ಐವತ್ತು ಸಾವಿರದಂತೆ ವರ್ಷಕ್ಕೆ ಪರಿಹಾರಕೊಟ್ಟುಬಿಡಿ, ನೀವು ನಮ್ಮ ಜಮೀನಿನಲ್ಲಿ ಆನೆಯಾದರೂ ಮೇಯಿಸಿಕೊಳ್ಳಿ ಅಥವಾ ಕಾಡುಹಂದಿಯಾದರೂ ಸಾಕಿಕೊಳ್ಳಿ. ನಾವ್ಯಾರು ಪ್ರ

ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರ ಗಂಟುರೋಗ (ಪೆಬ್ರಿನ್) ಸೋಂಕು ತಕ್ಷಣ ನಿಯಂತ್ರಿಸದಿದ್ದರೆ ರೇಷ್ಮೆ ಉದ್ಯಮ ಸರ್ವನಾಶ: ವಿ.ಬಾಲಸುಬ್ರಮಣ್ಯಂ ಆತಂಕ
ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರ ಗಂಟುರೋಗ (ಪೆಬ್ರಿನ್) ಸೋಂಕು ತಕ್ಷಣ ನಿಯಂತ್ರಿಸದಿದ್ದರೆ ರೇಷ್ಮೆ ಉದ್ಯಮ ಸರ್ವನಾಶ: ವಿ.ಬಾಲಸುಬ್ರಮಣ್ಯಂ ಆತಂಕ

ಬೆಂಗಳೂರು: ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರ ತರವಾಗಿ ಹರಡುತ್ತಿರುವ ಗಂಟುರೋಗ (ಪೆಬ್ರಿನ್) ಸೋಂಕನ್ನು ತಕ್ಷಣವೇ ನಿಯಂತ್ರಿಸದಿದ್ದರೆ ಇನ್ನೊಂದು ವರ್ಷದೊಳಗೆ ರೇಷ್ಮೆ ಉದ್ಯಮ ಪೂರ್ತಿ ನಶಿಸಿಹೋಗಲಿ

ಸಮಸ್ಯೆಗಳ ಆಗರವಾಗಿರುವ ರಾಗಿ ಖರೀದಿ ಕೇಂದ್ರ ಖರೀದಿಯಲ್ಲಿ ವಿಳಂಬ
ಸಮಸ್ಯೆಗಳ ಆಗರವಾಗಿರುವ ರಾಗಿ ಖರೀದಿ ಕೇಂದ್ರ ಖರೀದಿಯಲ್ಲಿ ವಿಳಂಬ

ಚನ್ನಪಟ್ಟಣ ಮೇ 23 22. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರೈತರಿಂದ ರಾಗಿ ಖರೀದಿ ಮಾಡುವ ಸಲುವಾಗಿ ಕೇಂದ್ರವೊಂದನ್ನು ತೆರೆದಿದ್ದು ಸಂಪೂರ್

ಏಪ್ರಿಲ್ 25ರಿಂದ ರೈತರೇ ಸ್ವಯಂ ನಕ್ಷೆ ತಯಾರಿಸುವ ವ್ಯವಸ್ಥೆ ಜಾರಿ: ಆರ್ ಅಶೋಕ್
ಏಪ್ರಿಲ್ 25ರಿಂದ ರೈತರೇ ಸ್ವಯಂ ನಕ್ಷೆ ತಯಾರಿಸುವ ವ್ಯವಸ್ಥೆ ಜಾರಿ: ಆರ್ ಅಶೋಕ್

April 22, 2022: ಬೆಂಗಳೂರು: ಭೂ ಒಡೆತನ ಹೊಂದಿರುವವ ರೈತರು ತಮ್ಮ ಸ್ವಂತ ಜಮೀನಿನ 11 ಇ ಸ್ಕೆಚ್‌, ಪೋಡಿ, ಭೂಪರಿವರ್ತನಾ ಪೂರ್ವ ಸ್ಕೆಚ್‌ಗಳನ್ನ

Top Stories »  

Top ↑