Tel: 7676775624 | Mail: info@yellowandred.in

Language: EN KAN

    Follow us :


ಅನ್ನದಾತ ಇಂದು ತಲ್ಲಣಗೊಂಡಿದ್ದಾನೆ. ಎಸ್ಎ ಕಂಪನಿ ಆತನನ್ನು ಉನ್ನತಕ್ಕೇರಿಸಲಿ ವಿಲ್ಟ್ರೆಡ್ ಡಿಸೋಜಾ

Posted date: 15 Nov, 2022

Powered by:     Yellow and Red

ಅನ್ನದಾತ ಇಂದು ತಲ್ಲಣಗೊಂಡಿದ್ದಾನೆ. ಎಸ್ಎ ಕಂಪನಿ ಆತನನ್ನು ಉನ್ನತಕ್ಕೇರಿಸಲಿ ವಿಲ್ಟ್ರೆಡ್ ಡಿಸೋಜಾ

ಮಂಡ್ಯ: ನ: ೧೫/೨೦೨೨. ಅನ್ನದಾತೋ ಸುಖೀನೋಭವ ಎಂಬ ಮಾತನ್ನು ಉಳಿಸಿಕೊಂಡಿರುವ ರೈತ ಇಂದು ತಲ್ಲಣಗೊಂಡಿದ್ದಾನೆ. ರೈತನ ಸೋಗಿನಲ್ಲಿ ಮಾರಾಟ ಮಾಡುತ್ತಿರುವ ಕಾರ್ಪೋರೆಟ್ ಕಂಪನಿಗಳು ಇಂತಹ ರೈತ ಮತ್ತು ಗ್ರಾಹಕರ ಆರೋಗ್ಯ ಮತ್ತು ಆಯಸ್ಸನ್ನು ಕಸಿದುಕೊಳ್ಳುತ್ತಿವೆ ಎಂದು ಸಾವಯವ ಕೃಷಿಕ, ಕಂಪನಿಯ ನಿರ್ದೇಶಕ ವಿಲ್ಟ್ರೆಡ್ ಡಿಸೋಜಾ ತಿಳಿಸಿದರು. ಅವರು ಮಂಗಳವಾರ ನಗರದ ಕರ್ನಾಟಕ ಸಂಘ ದ ಕೆ ವಿ ಶಂಕರೇಗೌಡ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 'ಎಸ್ಎ ಫಾಮ್ಕೋ ಲಿ' ಕಂಪನಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.


ರೈತರಲ್ಲಿ ಪೂರಕವಾಗಿ ನಿಲ್ಲುವ ಸಹಕಾರಿ ಮನೋಭಾವ ಇರಬೇಕು. ನಾನು ಕೇವಲ ಮೂರೂವರೆ ಎಕರೆಗಳಲ್ಲಿ ಒಂದು ಎಕರೆ ಕಾಡು ಬೆಳೆಸಿದ್ದೇನೆ. ಮನೆ ಮತ್ತು ಹಸುಗಳ ಕೊಟ್ಟಿಗೆ ಹೊರತುಪಡಿಸಿ ಎರಡು ಎಕರೆ ಜಮೀನಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ರೀತಿಯ ಬೆಳೆ ಬೆಳೆಯುತ್ತಿದ್ದೇನೆ. ರೈತರು ಬೆಳೆಯ ಜೊತೆಗೆ ಗುಡಿ ಕೈಗಾರಿಕೆ, ಹಾಗೂ ಸಂಬಂಧಿಸಿದ ಬೆಳೆಯಲ್ಲಿ ಉಪ ಉತ್ಪನ್ನ ಮಾಡುವುದರಿಂದಲೂ ರೈತ ಲಾಭಗೊಳಿಸಲು ಸಾಧ್ಯ. ಸ್ವತಃ ಪ್ರತಿ ವ್ಯಕ್ತಿಯೂ ವ್ಯವಸಾಯ ಮಾಡುವ ಮೂಲಕ ಆದಾಯದ ಜೊತೆಗೆ ಆಯಸ್ಸು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸ್ಥಾಪಿತವಾಗಿರುವ ಎಸ್ಎ ಕಂಪನಿಗೆ ಉತ್ತಮ ಭವಿಷ್ಯವಿದೆ ಎಂದರು.


ಕಂಪನಿಯೊಂದರಲ್ಲಿ ಒಂದೂವರೆ ಲಕ್ಷ ಸಂಬಳ ತೆಗೆದುಕೊಳ್ಳುತ್ತಿದ್ದ ನಾನು, ಅದನ್ನು ಬಿಟ್ಟು ಸಾವಯವ ಕೃಷಿಯಲ್ಲಿ ಬದುಕು ಕಟ್ಟಿಕೊಂಡಿದ್ದೇನೆ ಎಂದು ಮೈಸೂರಿನ ಆನಂದ್ ತಿಳಿಸಿದರು. ಪ್ರಪಂಚದಲ್ಲಿ ಪ್ರತಿಕ್ಷಣವೂ ಬೇಡಿಕೆಯಲ್ಲಿರುವ ಏಕೈಕ ಉತ್ಪನ್ನ ಆಹಾರ. ಯಾವ ಉದ್ದಿಮೆ ಯಾವಾಗ ಆರಂಭವಾಗುತ್ತದೆ, ಅದ್ಯಾವಗಲೋ ಮುಚ್ಚಿಹೋಗುತ್ತವೆ. ಎಷ್ಟೋ ಉತ್ಪನ್ನಗಳು ತಾತ್ಕಾಲಿಕವಾಗಿರುತ್ತವೆ. ಪ್ರಕೃತಿಯ ಜೊತೆಗೆ ರೈತ ಬೆಳೆಯುವ ಬೆಳೆಯಿಂದ ಮಾತ್ರ, ಮನುಷ್ಯರು ಸೇರಿದಂತೆ ಜೀವವಿರುವ ಎಲ್ಲಾ ಪ್ರಾಣಿ ಪಕ್ಷಿಗಳು ಬದುಕಲು ಸಾಧ್ಯ. ನಾವು ಪ್ರತಿನಿತ್ಯ ಸೇವಿಸುವ ರಾಗಿಗೂ ಇಂದು ರೆಡ್ ಆಕ್ಸೈಡ್ ಬೆರೆಸುತ್ತಾರೆ. ಫಾರಂ ಕೋಳಿಗಳು ಮತ್ತು ಅವುಗಳ ಮೊಟ್ಟೆಯೂ ಕೆಮಿಕಲ್ ನಿಂದ ಕೂಡಿರುತ್ತದೆ. ತಾಟಿ ಬೆಲ್ಲ ಸೇರಿದಂತೆ ಬೆಲ್ಲ, ಸಕ್ಕರೆ, ಅಡುಗೆ ಎಣ್ಣೆ, ಉಪ್ಪು, ಜೇನುತುಪ್ಪ ಸೇರಿದಂತೆ ಎಲ್ಲವೂ ಕಲಬೆರಕೆಯಾಗಿದೆ.


ಕಾರ್ಪೋರೆಟ್ ಕಂಪನಿಗಳು ಲೇಬಲ್ ಅಂಟಿಸಿಕೊಡುವ ಬಹುತೇಕ ಎಲ್ಲಾ ಆಹಾರೋತ್ಪನ್ನಗಳು ಕಲಬೆರಕೆಯಾಗಿವೆ. ಕಚ್ಚಾ ಪದಾರ್ಥಗಳ ಬೆಲೆಗಿಂತ ಉತ್ಪನ್ನಗಳ ಬೆಲೆ ಕಡಿಮೆಗೆ ಕೊಡುತ್ತಾರೆ ಎಂದಾಗಲೇ ಗ್ರಾಹಕರು ಎಚ್ಚೆತ್ತುಕೊಳ್ಳಬೇಕು. ಕೇವಲ ಮಾಲ್ ಗಳು ಮತ್ತು ಆಕರ್ಷಕ ಬಣ್ಣ ಗ್ರಾಹಕರನ್ನು ಮರಳು ಮಾಡುತ್ತಿವೆ. ರೀಪೈನ್ಡ್ ಎಣ್ಣೆ ಎನ್ನುವುದೇ ದೊಡ್ಡ ಮೋಸವಾಗಿದೆ. ಇವುಗಳ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಯಾರೂ ಕೊಡದ ನಿಟ್ಟಿನಲ್ಲಿ ಗ್ರಾಹಕರು ಮೋಸ ಹೋಗುವುದರ ಜೊತೆಗೆ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಎಸ್ಎ ಫಾಮ್ಕೋ ಲಿ ಕಂಪನಿ ಇಟ್ಟಿರುವ ಹೆಜ್ಜೆ ಉತ್ತಮವಾಗಿದ್ದು ಎಲ್ಲರ ಸಹಕಾರ ಇದ್ದರೆ ಶೀಘ್ರವಾಗಿ ದೇಶದ ಜನರಿಗೆ ಉತ್ತಮ ಆಹಾರ ನೀಡುವಲ್ಲಿ ಸಫಲವಾಗುತ್ತದೆ ಎಂದರು.


ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಟಿ ಎಂ ದೇವೇಗೌಡ ಮಾತನಾಡಿ ಕಂಪನಿ ನಿಮ್ಮ ಜೊತೆ ಕೈಜೋಡಿಸುತ್ತದೆ. ನಿಮ್ಮ ಬೆಳವಣಿಗೆಗೆ ನಾವು ಬದ್ದ, ರೈತರಿಂದ ಗ್ರಾಹಕರಿಗೆ ನೇರವಾಗಿ, ಸಾಂಪ್ರದಾಯಿಕ, ಸಾವಯವ ಕೃಷಿ ಪದಾರ್ಥಗಳನ್ನು ನೀಡುವುದಕ್ಕಾಗಿಯೇ ಕಂಪನಿಯನ್ನು ಸ್ಥಾಪಿಸಿದ್ದೇವೆಯೇ ವಿನಹ ಲಾಭಕ್ಕಾಗಿ ಅಲ್ಲಾ. ಇಡೀ ರಾಜ್ಯದಲ್ಲಿ, ಯಾವ್ಯಾವ ಭಾಗದಲ್ಲಿ ರೈತರು ಬೆಳೆಯುವ ಪದಾರ್ಥಗಳನ್ನು ಮಾತ್ರ ಸಗಟಾಗಿ ಖರೀದಿಸಿ ಪ್ರತಿ ಪಂಚಾಯತಿಯಲ್ಲಿ ಅಂಗಡಿಗಳನ್ನು ತೆರೆದು ನೇರವಾಗಿ ಮಾರಾಟ ಮಾಡುವ ಉದ್ದೇಶದಿಂದ ಈ ಕಂಪನಿಯನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.


ಷೇರುಗಳನ್ನು ಎಲ್ಲರಿಗೂ ನೀಡುವುದಿಲ್ಲ. ಪ್ರತಿ ಷೇರುದಾರರು ಕೊಡುವ ಕೊಳ್ಳುವ ವ್ಯಕ್ತಿಯಾಗಿರಬೇಕು. ಓರ್ವ ರೈತನಿಂದ ಇಂತಹ ಬೆಳೆಯನ್ನು, ಇದೇ ಗುಣಮಟ್ಟದಲ್ಲಿ, ಇಷ್ಟೇ ಉತ್ಪಾದನೆ ಅಗಬೇಕು. ಅದಕ್ಕೆ ಬೇಕಾದ ಗಿಡಗಳನ್ನು ನಾವೇ ನೀಡುತ್ತೇವೆ. ಆ ರೈತ ಮಾಡಬೇಕಾದ ಕೆಲಸವೆಂದರೆ ಆತ ಸ್ವತಃ ಬೆಳೆಯಬೇಕು. ಯಾವುದೇ ಕಾರಣಕ್ಕೂ ಆತ ರಾಸಾಯನಿಕ ಬಳಸಬಾರದು ಎಂಬ ನಿಯಮವನ್ನು ಕಡ್ಡಾಯವಾಗಿ ಬಳಸಬೇಕು. ಪ್ರತಿಯೊಬ್ಬ ರೈತ ಮತ್ತು ಗ್ರಾಹಕರಿಗೂ ಲಾಭ ಮಾಡಿಕೊಡುವ ಉದ್ದೇಶವನ್ನು ಕಂಪನಿ ಹೊಂದಿದೆ ಎಂದರು.


ಸಭೆಯಲ್ಲಿ ನಿರ್ದೇಶಕ ನ ಲಿ ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಿತಿನ್ ರವರು ಇಲಾಖೆಯ ಸಹಕಾರದ ಬಗ್ಗೆ ತಿಳಿಸಿದರು. ಚನ್ನಪಟ್ಟಣ ತಾಲ್ಲೂಕಿನ ಪತ್ರಕರ್ತ ಗೋ ರಾ ಶ್ರೀನಿವಾಸ ಸೇರಿದಂತೆ ಹಲವರು ಮಾತನಾಡಿದರು.

ವೇದಿಕೆಯಲ್ಲಿ ರೈತ ಮುಖಂಡ ರಾಮಚಂದ್ರ, ನಿರ್ದೇಶಕರಾದ ಬೊಮ್ಮೇಗೌಡ ಬೇಲೂರು, ಅರ್ಜುನ್, ಬೋರೇಗೌಡ ಮಾಡರಹಳ್ಳಿ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ಕಾಡುಹಂದಿ ಕೊಲ್ಲಲು ಅವಕಾಶವಿದ್ದರೂ ಅರಣ್ಯ ಇಲಾಖೆ ಪ್ರಚಾರ ನೀಡಿಲ್ಲ ರೈತರ ಆರೋಪ
ಕಾಡುಹಂದಿ ಕೊಲ್ಲಲು ಅವಕಾಶವಿದ್ದರೂ ಅರಣ್ಯ ಇಲಾಖೆ ಪ್ರಚಾರ ನೀಡಿಲ್ಲ ರೈತರ ಆರೋಪ

ಮದ್ದೂರು: ಮಾನವರ ಪ್ರಾಣಹಾನಿ, ರೈತ ಬೆಳೆದ ಬೆಳೆ ನಾಶಮಾಡುವ ಕಾಡುಹಂದಿಗಳನ್ನು ಕೊಲ್ಲಲು ಸರ್ಕಾರ ಅನುಮತಿ ನೀಡಿದೆ. ಆದರೆ ರೈತರಿಗೆ ಅರಣ್ಯಾಧಿಕಾರ

ಅನ್ನದಾತ ಇಂದು ತಲ್ಲಣಗೊಂಡಿದ್ದಾನೆ. ಎಸ್ಎ ಕಂಪನಿ ಆತನನ್ನು ಉನ್ನತಕ್ಕೇರಿಸಲಿ ವಿಲ್ಟ್ರೆಡ್ ಡಿಸೋಜಾ
ಅನ್ನದಾತ ಇಂದು ತಲ್ಲಣಗೊಂಡಿದ್ದಾನೆ. ಎಸ್ಎ ಕಂಪನಿ ಆತನನ್ನು ಉನ್ನತಕ್ಕೇರಿಸಲಿ ವಿಲ್ಟ್ರೆಡ್ ಡಿಸೋಜಾ

ಮಂಡ್ಯ: ನ: ೧೫/೨೦೨೨. ಅನ್ನದಾತೋ ಸುಖೀನೋಭವ ಎಂಬ ಮಾತನ್ನು ಉಳಿಸಿಕೊಂಡಿರುವ ರೈತ ಇಂದು ತಲ್ಲಣಗೊಂಡಿದ್ದಾನೆ. ರೈತನ ಸೋಗಿನಲ್ಲಿ ಮಾರಾಟ ಮಾಡುತ್ತಿರುವ

ಕಳಂಕಿತ ಕೋಡಿಹಳ್ಳಿ ಇರುವ ಸಭೆಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ: ವಿಧಾನಸೌಧಲ್ಲಿ ನಡೆದ ಸಚಿವರ ನೇತೃತ್ವದ ಸಭೆಯಲ್ಲಿ ರೈತರ ಪಟ್ಟು
ಕಳಂಕಿತ ಕೋಡಿಹಳ್ಳಿ ಇರುವ ಸಭೆಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ: ವಿಧಾನಸೌಧಲ್ಲಿ ನಡೆದ ಸಚಿವರ ನೇತೃತ್ವದ ಸಭೆಯಲ್ಲಿ ರೈತರ ಪಟ್ಟು

 ಬೆಂಗಳೂರು: ಕಬ್ಬು ಬೆಳೆಗಾರರ ಸಮಸ್ಯೆ ಕುರಿತಾಗಿ ಸಕ್ಕರೆ ಸಚಿವ ಶಂಕರ್‌ ಪಾಟೀಲ್‌ ಮುನೇನಕೊಪ್ಪ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಭ

ರಾಮನಗರ ಗಡಿ ಗ್ರಾಮಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡ ರೋಗ, ಕನಕಪುರ, ರಾಮನಗರ ಮತ್ತು ಚನ್ನಪಟ್ಟಣದಲ್ಲಿ ರೋಗ ಪತ್ತೆ
ರಾಮನಗರ ಗಡಿ ಗ್ರಾಮಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡ ರೋಗ, ಕನಕಪುರ, ರಾಮನಗರ ಮತ್ತು ಚನ್ನಪಟ್ಟಣದಲ್ಲಿ ರೋಗ ಪತ್ತೆ

ರಾಮನಗರ: ರಾಮನಗರ ಜಿಲ್ಲೆಯಲ್ಲಿಯೂ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ರೈತರನ್ನು ಆತಂಕಕ್ಕೆ ದೂಡಿದೆ.


ಜಿಲ್ಲೆಯಲ್ಲಿ ಜಾನುವಾರು ಜಾತ್ರೆ ಮತ್ತು ಸಾಗಾಣಿಕೆ ನಿಷೇಧ
ಜಿಲ್ಲೆಯಲ್ಲಿ ಜಾನುವಾರು ಜಾತ್ರೆ ಮತ್ತು ಸಾಗಾಣಿಕೆ ನಿಷೇಧ

ರಾಮನಗರ-ಅ.11: ರಾಜ್ಯದಾದ್ಯಂತ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ರೋಗವು ಹರಡದಂತೆ ಮುನ್ನೆಚರಿಕೆ ಕ್ರಮವಾಗಿ ಅಕ್ಟೋಬರ್ 11 ರಿಂದ ನವೆಂಬರ್ 10 ರವರೆಗೆ ರಾಮನಗರ ಜಿಲ್ಲೆಯಾದ್ಯಂತ ಜಾ

ರೈತರಿಗೆ ಸಕಾಲದಲ್ಲಿ ದೊರೆಯದ ಯೂರಿಯಾ, ಕಾಳಸಂತೆಯಲ್ಲಿ ಮಾರಾಟ
ರೈತರಿಗೆ ಸಕಾಲದಲ್ಲಿ ದೊರೆಯದ ಯೂರಿಯಾ, ಕಾಳಸಂತೆಯಲ್ಲಿ ಮಾರಾಟ

ಚನ್ನಪಟ್ಟಣ: ಈಬಾರಿ ಏಪ್ರಿಲ್ ನಿಂದಲೇ ಮಳೆ ಆರಂಭವಾಗಿದ್ದು ಈಗಲೂ ಮುಂದುವರೆದಿದೆ. ಕೆಲವರು ಮಧ್ಯಮಧ್ಯ ಅಂದರೆ ಮಳೆ ಬಿಡುವು ಕೊಟ್ಟಾಗ ಬಿತ್ತನೆ ಮಾಡಿದ್

ಬೆಳೆ ಸಮೀಕ್ಷೆ ಮತ್ತು ವಿಮೆ ಆಂದೋಲನಕ್ಕೆ ಚಾಲನೆ
ಬೆಳೆ ಸಮೀಕ್ಷೆ ಮತ್ತು ವಿಮೆ ಆಂದೋಲನಕ್ಕೆ ಚಾಲನೆ

ಚನ್ನಪಟ್ಟಣ.ಆ.೧೦: ೨೦೨೨-೨೩ ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಹಾಗೂ ಬೆಳೆವಿಮೆ ಕಾರ್ಯಕ್ರಮಗಳ ಬಗ್ಗೆ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್

ಜಿಲ್ಲೆಯಲ್ಲಿ ಅಬ್ಬರಿಸಿದ ವರುಣ. 447 ಹೆಕ್ಟೇರ್ ಬೆಳೆ ಹಾನಿ190 ಮನೆಗಳು ಜಖಂ
ಜಿಲ್ಲೆಯಲ್ಲಿ ಅಬ್ಬರಿಸಿದ ವರುಣ. 447 ಹೆಕ್ಟೇರ್ ಬೆಳೆ ಹಾನಿ190 ಮನೆಗಳು ಜಖಂ

ಆರಿದ್ರಾ ಮತ್ತು ಆಶ್ಲೇಷ ಮಳೆಯು ಈ ಬಾರಿ ವಾಡಿಕೆಗಿಂತ ಹೆಚ್ಚಾಗಿ ಸುರಿದ ಪರಿಣಾಮ ರೇಷ್ಮೆನಾಡು ರಾಮನಗರ ಜಿಲ್ಲೆ ತಲ್ಲಣಗೊಂಡಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಕಳಲ್ಲಿ ಬೆಳೆದ ಬೆಳೆ ಮತ್ತು ಮನೆಗಳಿಗೆ ಹೆಚ್

ಮಾವು ಅಭಿವೃದ್ಧಿ ಮಂಡಳಿಯಿಂದ ರಾಮನಗರದಲ್ಲಿ ರೈತ ಬಜಾರ್:
ಮಾವು ಅಭಿವೃದ್ಧಿ ಮಂಡಳಿಯಿಂದ ರಾಮನಗರದಲ್ಲಿ ರೈತ ಬಜಾರ್:

 August 7, 2022: ರಾಮನಗರ ಕೋಲಾರ ಮಾವು ಅಭಿವೃದ್ಧಿ ಮಂಡಳಿಯಿಂದ ರಾಮನಗರದಲ್ಲಿ ರೈ

ರೈತಸಂಘದಲ್ಲಿ ಯುವಕರು ಹೆಚ್ಚು ತೊಡಗಿಸಿಗೊಳ್ಳಬೇಕು ರೈತ ಹುತಾತ್ಮರ ದಿನಾಚರಣೆಯಲ್ಲಿ ಬಡಗಲಪುರ ನಾಗೇಂದ್ರ
ರೈತಸಂಘದಲ್ಲಿ ಯುವಕರು ಹೆಚ್ಚು ತೊಡಗಿಸಿಗೊಳ್ಳಬೇಕು ರೈತ ಹುತಾತ್ಮರ ದಿನಾಚರಣೆಯಲ್ಲಿ ಬಡಗಲಪುರ ನಾಗೇಂದ್ರ

ಚನ್ನಪಟ್ಟಣ:ಜು.೨೩:  ಇಂದು ತಾಲ್ಲೂಕಿನ ರೈತ ಹೋರಾಟಗಾರ ರಾಜ್ಯ ರೈತ ಸಂಘದ ಕಾರ್ಯಾದ್ಯಕ್ಷರಾಗಿದ್ದ ಎಂ.ರಾಮು ಹಾಗೂ ರಾಜ್ಯ ರೈತ ಸಂಘದ ಉಪಾಧ್

Top Stories »  


Top ↑