Tel: 7676775624 | Mail: info@yellowandred.in

Language: EN KAN

    Follow us :

ಇ-ಕೆವೈಸಿ ಮಾಡಿಸದ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಇಲ್ಲ

Posted date: 08 Dec, 2022

Powered by:     Yellow and Red

ಇ-ಕೆವೈಸಿ ಮಾಡಿಸದ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಇಲ್ಲ

ರಾಮನಗರ, ಡಿ. 08: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (ಪಿಎಂಕಿಸಾನ್) ಯೋಜನೆಯನ್ನು 2018ರ ಡಿಸೆಂಬರ್ ನಲ್ಲಿ ಚಾಲನೆ ನೀಡಲಾಗಿದ್ದು ಅರ್ಹ ರೈತರಿಗೆ ಮೂರು ಸಮಾನ ಕಂತುಗಳಲ್ಲಿ ವಾರ್ಷಿಕ 6000 ರೂಪಾಯಿ ನೆರವು ನೀಡಲಾಗುತ್ತಿದ್ದು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000 ರೂಪಾಯಿಗಳನ್ನು ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ. ಅಕ್ಟೋಬರ್, 17 ರಂದು 12ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿತ್ತು.

ರಾಮನಗರ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (ಪಿಎಂ-ಕಿಸಾನ್) ಯೋಜನೆಯ ಅಡಿ ಒಟ್ಟು 109830 ಜನ ಅರ್ಹ ಫಲಾನುಭವಿಗಳಿದ್ದು ಇಲ್ಲಿಯವರೆವಿಗೂ ಕೇವಲ 67721 ಜನ ಅರ್ಹ ಫಲಾನುಭವಿಗಳು ಮಾತ್ರ ಇ-ಕೆವೈಸಿ ಮಾಡಿಸಲಾಗಿದ್ದು ಶೇ. 62 ರಷ್ಟು ಪ್ರಗತಿಯಾಗಿರುತ್ತದೆ. ಉಳಿಕೆ 42109 ಜನ ಅರ್ಹ ಫಲಾನುಭವಿಗಳು ಇ-ಕೆವೈಸಿ ಮಾಡಿಸದ ಕಾರಣ ಕಿಸಾನ್ ಸಮ್ಮಾನ್ ನಿಧಿಯ 12ನೇ ಕಂತಿನ ಹಣ ವರ್ಗಾವಣೆಯಾಗಿರುವುದಿಲ್ಲ. ಪಲಾನುಭವಿಗಳು 11 ನೇ ಕಂತಿನ 2,000 ರೂಪಾಯಿ ಪಡೆದಿದ್ದರು ಸಹ ಪಿಎಂ-ಕಿಸಾನ್ ವೆಬ್ ಸೈಟ್ ನಲ್ಲಿ ಆಧಾರ್ ಲಿಂಕ್ ಮಾಡಿ ಇ-ಕೆವೈಸಿ ಅಪ್ ಡೇಟ್ ಮಾಡದಿರುವುದು ಹಣ ಬಾರದಿರಲು ಕಾರಣವಾಗಿರುತ್ತದೆ.

ಆದುದರಿಂದ ರೈತಭಾಂದವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (ಪಿಎಂ-ಕಿಸಾನ್) ಯೋಜನೆಯ ಸೌಲಭ್ಯವನ್ನು ಪಡೆಯಲು ಕೂಡಲೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ರೈತರು ಎರಡು ವಿಧಾನಗಳಲ್ಲಿ ಇ-ಕೆವೈಸಿ ಮಾಡಿಸಬಹುದಾಗಿದ್ದು, ಮೊದಲನೆಯದಾಗಿ ಕೇಂದ್ರ ಸರ್ಕಾರದ ಪಿಎಂ-ಕಿಸಾನ್ ಜಾಲತಾಣದ ಮೂಲಕ ಆಧಾರ್ ಕಾರ್ಡ್ನಲ್ಲಿ ನಮೂದಿಸಿರುವ ಮೊಬ್ಯೆಲ್ ಸಂಖ್ಯೆಗೆ ಬರುವ ಒಟಿಪಿ ಆಧಾರದ ಮೇಲೆ ಇ-ಕೆವೈಸಿ ಮಾಡಬಹುದಾಗಿರುತ್ತದೆ. ಒಂದು ವೇಳೆ ಜಾಲತಾಣದ ಮೂಲಕ ಇ-ಕೆವೈಸಿ ಮಾಡಲು ಸಾಧ್ಯವಾಗದಿದ್ದಲ್ಲಿ ರೈತರು ಸಮೀಪದ ಗ್ರಾಮ ಒನ್ ಅಥವಾ ನಾಗರಿಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಕೈಬೆರಳಿನ ಗುರುತು ಮತ್ತು ಆಧಾರ್ ಸಂಖ್ಯೆಯನ್ನು ಬಳಸಿ ಇ-ಕೆವೈಸಿ ಮಾಡಬಹುದಾಗಿರುತ್ತದೆ.

ಹೆೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರುಗಳನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ಪ್ರಗತಿಪರ ರೈತರನ್ನು ಸನ್ಮಾನಿಸಿದ ತಾಲ್ಲೂಕು ಆಡಳಿತ
ಪ್ರಗತಿಪರ ರೈತರನ್ನು ಸನ್ಮಾನಿಸಿದ ತಾಲ್ಲೂಕು ಆಡಳಿತ

ಚನ್ನಪಟ್ಟಣ ಜ..೧೬: ತಾಲೂಕು ಕಚೇರಿಯಲ್ಲಿ ಸೋಮವಾರ ವಿಶೇಷವಾಗಿ ತಾಲ್ಲೂಕು ಆಡಳಿತ ಹಾಗೂ ಕಂದಾಯ ಇಲಾಖೆ ನೌಕರರ ಸಂಘವು ಸಂಕ್ರಾಂತಿ ಹಬ್ಬ ಆಚರಣೆ ಮೂ

ಇ-ಕೆವೈಸಿ ಮಾಡಿಸದ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಇಲ್ಲ
ಇ-ಕೆವೈಸಿ ಮಾಡಿಸದ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಇಲ್ಲ

ರಾಮನಗರ, ಡಿ. 08: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (ಪಿಎಂಕಿಸಾನ್) ಯೋಜನೆಯನ್ನು 2018ರ ಡಿಸೆಂಬರ್

ಕಾಡುಹಂದಿ ಕೊಲ್ಲಲು ಅವಕಾಶವಿದ್ದರೂ ಅರಣ್ಯ ಇಲಾಖೆ ಪ್ರಚಾರ ನೀಡಿಲ್ಲ ರೈತರ ಆರೋಪ
ಕಾಡುಹಂದಿ ಕೊಲ್ಲಲು ಅವಕಾಶವಿದ್ದರೂ ಅರಣ್ಯ ಇಲಾಖೆ ಪ್ರಚಾರ ನೀಡಿಲ್ಲ ರೈತರ ಆರೋಪ

ಮದ್ದೂರು: ಮಾನವರ ಪ್ರಾಣಹಾನಿ, ರೈತ ಬೆಳೆದ ಬೆಳೆ ನಾಶಮಾಡುವ ಕಾಡುಹಂದಿಗಳನ್ನು ಕೊಲ್ಲಲು ಸರ್ಕಾರ ಅನುಮತಿ ನೀಡಿದೆ. ಆದರೆ ರೈತರಿಗೆ ಅರಣ್ಯಾಧಿಕಾರ

ಅನ್ನದಾತ ಇಂದು ತಲ್ಲಣಗೊಂಡಿದ್ದಾನೆ. ಎಸ್ಎ ಕಂಪನಿ ಆತನನ್ನು ಉನ್ನತಕ್ಕೇರಿಸಲಿ ವಿಲ್ಟ್ರೆಡ್ ಡಿಸೋಜಾ
ಅನ್ನದಾತ ಇಂದು ತಲ್ಲಣಗೊಂಡಿದ್ದಾನೆ. ಎಸ್ಎ ಕಂಪನಿ ಆತನನ್ನು ಉನ್ನತಕ್ಕೇರಿಸಲಿ ವಿಲ್ಟ್ರೆಡ್ ಡಿಸೋಜಾ

ಮಂಡ್ಯ: ನ: ೧೫/೨೦೨೨. ಅನ್ನದಾತೋ ಸುಖೀನೋಭವ ಎಂಬ ಮಾತನ್ನು ಉಳಿಸಿಕೊಂಡಿರುವ ರೈತ ಇಂದು ತಲ್ಲಣಗೊಂಡಿದ್ದಾನೆ. ರೈತನ ಸೋಗಿನಲ್ಲಿ ಮಾರಾಟ ಮಾಡುತ್ತಿರುವ

ಕಳಂಕಿತ ಕೋಡಿಹಳ್ಳಿ ಇರುವ ಸಭೆಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ: ವಿಧಾನಸೌಧಲ್ಲಿ ನಡೆದ ಸಚಿವರ ನೇತೃತ್ವದ ಸಭೆಯಲ್ಲಿ ರೈತರ ಪಟ್ಟು
ಕಳಂಕಿತ ಕೋಡಿಹಳ್ಳಿ ಇರುವ ಸಭೆಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ: ವಿಧಾನಸೌಧಲ್ಲಿ ನಡೆದ ಸಚಿವರ ನೇತೃತ್ವದ ಸಭೆಯಲ್ಲಿ ರೈತರ ಪಟ್ಟು

 ಬೆಂಗಳೂರು: ಕಬ್ಬು ಬೆಳೆಗಾರರ ಸಮಸ್ಯೆ ಕುರಿತಾಗಿ ಸಕ್ಕರೆ ಸಚಿವ ಶಂಕರ್‌ ಪಾಟೀಲ್‌ ಮುನೇನಕೊಪ್ಪ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಭ

ರಾಮನಗರ ಗಡಿ ಗ್ರಾಮಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡ ರೋಗ, ಕನಕಪುರ, ರಾಮನಗರ ಮತ್ತು ಚನ್ನಪಟ್ಟಣದಲ್ಲಿ ರೋಗ ಪತ್ತೆ
ರಾಮನಗರ ಗಡಿ ಗ್ರಾಮಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡ ರೋಗ, ಕನಕಪುರ, ರಾಮನಗರ ಮತ್ತು ಚನ್ನಪಟ್ಟಣದಲ್ಲಿ ರೋಗ ಪತ್ತೆ

ರಾಮನಗರ: ರಾಮನಗರ ಜಿಲ್ಲೆಯಲ್ಲಿಯೂ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ರೈತರನ್ನು ಆತಂಕಕ್ಕೆ ದೂಡಿದೆ.

ಜಿಲ್ಲೆಯಲ್ಲಿ ಜಾನುವಾರು ಜಾತ್ರೆ ಮತ್ತು ಸಾಗಾಣಿಕೆ ನಿಷೇಧ
ಜಿಲ್ಲೆಯಲ್ಲಿ ಜಾನುವಾರು ಜಾತ್ರೆ ಮತ್ತು ಸಾಗಾಣಿಕೆ ನಿಷೇಧ

ರಾಮನಗರ-ಅ.11: ರಾಜ್ಯದಾದ್ಯಂತ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ರೋಗವು ಹರಡದಂತೆ ಮುನ್ನೆಚರಿಕೆ ಕ್ರಮವಾಗಿ ಅಕ್ಟೋಬರ್ 11 ರಿಂದ ನವೆಂಬರ್ 10 ರವರೆಗೆ ರಾಮನಗರ ಜಿಲ್ಲೆಯಾದ್ಯಂತ ಜಾ

ರೈತರಿಗೆ ಸಕಾಲದಲ್ಲಿ ದೊರೆಯದ ಯೂರಿಯಾ, ಕಾಳಸಂತೆಯಲ್ಲಿ ಮಾರಾಟ
ರೈತರಿಗೆ ಸಕಾಲದಲ್ಲಿ ದೊರೆಯದ ಯೂರಿಯಾ, ಕಾಳಸಂತೆಯಲ್ಲಿ ಮಾರಾಟ

ಚನ್ನಪಟ್ಟಣ: ಈಬಾರಿ ಏಪ್ರಿಲ್ ನಿಂದಲೇ ಮಳೆ ಆರಂಭವಾಗಿದ್ದು ಈಗಲೂ ಮುಂದುವರೆದಿದೆ. ಕೆಲವರು ಮಧ್ಯಮಧ್ಯ ಅಂದರೆ ಮಳೆ ಬಿಡುವು ಕೊಟ್ಟಾಗ ಬಿತ್ತನೆ ಮಾಡಿದ್

ಬೆಳೆ ಸಮೀಕ್ಷೆ ಮತ್ತು ವಿಮೆ ಆಂದೋಲನಕ್ಕೆ ಚಾಲನೆ
ಬೆಳೆ ಸಮೀಕ್ಷೆ ಮತ್ತು ವಿಮೆ ಆಂದೋಲನಕ್ಕೆ ಚಾಲನೆ

ಚನ್ನಪಟ್ಟಣ.ಆ.೧೦: ೨೦೨೨-೨೩ ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಹಾಗೂ ಬೆಳೆವಿಮೆ ಕಾರ್ಯಕ್ರಮಗಳ ಬಗ್ಗೆ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್

ಜಿಲ್ಲೆಯಲ್ಲಿ ಅಬ್ಬರಿಸಿದ ವರುಣ. 447 ಹೆಕ್ಟೇರ್ ಬೆಳೆ ಹಾನಿ190 ಮನೆಗಳು ಜಖಂ
ಜಿಲ್ಲೆಯಲ್ಲಿ ಅಬ್ಬರಿಸಿದ ವರುಣ. 447 ಹೆಕ್ಟೇರ್ ಬೆಳೆ ಹಾನಿ190 ಮನೆಗಳು ಜಖಂ

ಆರಿದ್ರಾ ಮತ್ತು ಆಶ್ಲೇಷ ಮಳೆಯು ಈ ಬಾರಿ ವಾಡಿಕೆಗಿಂತ ಹೆಚ್ಚಾಗಿ ಸುರಿದ ಪರಿಣಾಮ ರೇಷ್ಮೆನಾಡು ರಾಮನಗರ ಜಿಲ್ಲೆ ತಲ್ಲಣಗೊಂಡಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಕಳಲ್ಲಿ ಬೆಳೆದ ಬೆಳೆ ಮತ್ತು ಮನೆಗಳಿಗೆ ಹೆಚ್

Top Stories »  

Top ↑