Tel: 7676775624 | Mail: info@yellowandred.in

Language: EN KAN

    Follow us :


ಮಾವು ಬೆಳೆಗಾರರಿಗೆ ಅತ್ತ ಮಳೆ, ಇತ್ತ ಊಜಿ, ಕುಂಠಿತ ಬೆಲೆ, ನಿಷ್ಕ್ರಿಯ ಇಲಾಖೆ.

Posted date: 29 May, 2018

Powered by:     Yellow and Red

ಮಾವು ಬೆಳೆಗಾರರಿಗೆ ಅತ್ತ ಮಳೆ, ಇತ್ತ ಊಜಿ, ಕುಂಠಿತ ಬೆಲೆ, ನಿಷ್ಕ್ರಿಯ ಇಲಾಖೆ.

ಮಳೆಯಿಲ್ಲದೆ ಮಾವಿನ ಬೆಳೆ ಕೈಕೊಡುವ ಹಂತಕ್ಕೆ ಈ ಬಾರಿ ಬಂದಿತ್ತು, ಬಿಸಿಲು ಹೆಚ್ಚಾಗಿ ಬಿಟ್ಟ ಹೂಗಳು, ಈಚು ಕಾಯಿಗಳು ಉದರಲಾರಂಭಿಸಿದವು, ಆವಾಗ ರೈತರು ಔಷಧ ಸಿಂಪಡಿಸುವುದರ ಜೊತೆಗೆ ಮಧ್ಯ ಮಧ್ಯ ವರುಣ ದೇವ ಕೃಪೆ ತೋರಿದ್ದರಿಂದ ಒಂದಷ್ಟು ಮಾವಿನ ಫಸಲು ಉಳಿಯುವಂತಾಯಿತು.

ಒಂದು ತಿಂಗಳಿಂದೀಚೆಗೆ ಒಂದೆರಡು ದಿನ ಹೊರತುಪಡಿಸಿ ಪ್ರತಿ ದಿನವೂ ಮಳೆ ಸುರಿಯುತ್ತಲೇ ಇದೆ, ಕೆಲಸಗಾರರ ಕೊರತೆ ಒಂದು ಕಡೆಯಾದರೆ ಮಳೆ ಯಾವಾಗ ಬಂದುಬಿಡುತ್ತದೋ ಎನ್ನುವ ಭಯ ಮತ್ತೊಂದು ಕಡೆ, ಇವೆರಡರ ನಡುವೆ ಇತ್ತೀಚೆಗೆ "ಊಜಿ ನೊಣ" ದ ಹಾವಳಿ ಹೆಚ್ಚಾಗಿದೆ. ಮಾವಿನ ಕಾಯಿಗಳನ್ನು ಕುಯ್ದು ನೇರ ಮಾರುಕಟ್ಟೆಗೆ ಕಳುಹಿಸುವವರಿಗೆ ಸ್ವಲ್ಪ ಪರವಾಗಿಲ್ಲ ಎನ್ನಬಹುದು, ಆದರೆ ತಾವೇ ಸಂಸ್ಕರಿಸಿ ಹಣ್ಣು ಮಾಡಿ ಪ್ಯಾಕ್ ನಾಡಿ ಕಳುಹಿಸುವ ರೈತರು ಪ್ರತಿದಿನವೂ ಊಜಿ ನೊಣದ ಹಾವಳಿಯಿಂದ ನೂರಾರು ಕಿಲೋ ಹಣ್ಣುಗಳನ್ನು ಹೊರಗೆ ಸುರಿಯುತ್ತಿದ್ದಾರೆ.


ಪತ್ರಿಕೆಯ ಪೋಟೋಗಳಿಗೆ ಅಥವಾ ನಾವು ರೈತರ ಪರ ಇದ್ದೇವೆ ಎಂಬುದಕ್ಕಾಗಿ ಹಲವು ಅಧಿಕಾರಿಗಳು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೇಳಿಕೆ ನೀಡುತ್ತಿದ್ದಾರೆ, ಅದರಿಂದ ರೈತರಿಗೆ ಯಾವ ಪ್ರಯೋಜನವೂ ಸಿಗುತಿಲ್ಲ.


ರೈತರ ಕಷ್ಟ ಗೊತ್ತಾಗಬೇಕಾದರೆ ವಿಜ್ಞಾನಿಗಳ ಸಮೇತ ಅಧಿಕಾರಿಗಳು ರೈತರ ತೋಟಕ್ಕೆ ಭೇಟಿ ನೀಡಿದರೆ ಸತ್ಯಾಸತ್ಯತೆಯನ್ನು ಅರಿತು ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ಹಿರಿಯ ರೈತಮುಖಂಡ ಸಿ ಪುಟ್ಟಸ್ವಾಮಿ ಮತ್ತು ಹೊಸದೊಡ್ಡಿ ಜಯಣ್ಣ ನವರು.


ಊಜಿ ಎಂದರೆ ಅದೊಂದು ನೊಣ, ಆ ನೊಣ ಒಂದು ದಿನಕ್ಕೆ ನೂರಾರು ಹಣ್ಣಿನ ಮೇಲೆ ಕೂರುತ್ತದೆ, ಒಂದು ಹಣ್ಣಿನ ಮೇಲೆ ಒಮ್ಮೆ ಕೂತರೆ ಹತ್ತಾರು ಮೊಟ್ಟೆಗಳನ್ನು ಉರುಚುತ್ತದೆ (ಇಡುತ್ತದೆ) ಇಟ್ಟ ಕ್ಷಣದಿಂದಲೇ ಆ ಹಣ್ಣುಗಳಲ್ಲಿ ಹುಳುಗಳಾಗಲು ಪ್ರಾರಂಭವಾಗುತ್ತದೆ, ತೋಟಗಾರಿಕೆ ಇಲಾಖೆಯು ರೈತರಿಗೆ ಇದರ ಅರಿವು ಮೂಡಿಸಿ ಔಷಧೋಪಚಾರ ಮಾಡುವ ಬಗ್ಗೆ ಮಾಹಿತಿ ನೀಡದಿರುವುದು ರೈತರಿಗೆ ಲುಕ್ಸಾನಾಗಲು ಬಹುತೇಕ ಕಾರವಾಗಿದೆ.


ಈಗಾಗಲೇ ಮಾವಿನ ಫಸಲು ಕೊನೆಯ ಹಂತ ತಲುಪುತ್ತಿದೆ ಊಜಿ ನೊಣ ಹರಡದಂತೆ ತಡೆಯಲು ಸದ್ಯ ಇರುವ ಒಂದು ಮಾದರಿ "ಊಜಿ ಟ್ರ್ಯಾಪ್" ನ್ನು ರೈತರಿಗೆ ಶೀಘ್ರವಾಗಿ ವಿತರಿಸಿದರೆ ಅಳಿದುಳಿದ ಫಸಲು ರೈತನ ಕೈಸೇರಲು ಅನುಕೂಲವಾಗುತ್ತದೆ. ಇದನ್ನು ಪ್ರತಿ ಮರಕ್ಕೆ ಹಾಗೂ ಹಣ್ಣು ಮಾಡಲು ಶೇಖರಿಸುವ ಜಾಗದಲ್ಲಿ ಐವತ್ತು ಮೀಟರ್ ಗೆ ಒಂದರಂತೆ ಇಟ್ಟರೆ ಅದರ ಘಮಲಿನ ಅಮಲಿನ ಆಕರ್ಷಣೆಗೆ ಆ ಎಲ್ಲಾ ಊಜಿ‌ ನೊಣಗಳು ಅಲ್ಲಿ ಶೇಖರಣೆಯಾಗುತ್ತವೆ.

ಇನ್ನೂ ರೈತ ಬೆಳೆದ ಬಹುತೇಕ ಯಾವ ಬೆಳೆಗೂ ವೈಜ್ಞಾನಿಕ ಬೆಲೆಯೂ ಇಲ್ಲಾ, ಬೆಂಬಲ ಬೆಲೆಯೂ ಇಲ್ಲಾ, ಈ ಬಾರಿಯ ಮೊದಲ ಕುಯ್ಲಿಗೆ ಸ್ವಲ್ಪ ಬೆಲೆ ಇತ್ತಾದರೂ ಈಗ ಸಂಪೂರ್ಣ ಕುಸಿದಿದೆ, ಅಧಿಕಾರಿಗಳು ಇತ್ತ ಗಮನಹರಿಸಿದರೆ ಒಳ್ಳೆಯದು.


ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡದೆ ಅಭಿವೃದ್ಧಿ ಪಥದತ್ತ ಕರೆದುಕೊಂಡು ಹೋಗಲು ತೋಟಗಾರಿಕೆಯ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಶೀಘ್ರವೇ ರೈತರ ನೆರವಿಗೆ ಧಾವಿಸಿದರೆ ಇಲಾಖೆಗೂ ಒಳ್ಳೆಯ ಹೆಸರು, ಅಳಿದುಳಿದ ಹಣ್ಣುಗಳು ರೈತರ ಕೈಸೇರಿ ನಿಮ್ಮನ್ನು ಹರಸುವುದಲ್ಲದೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುತ್ತಾನೆ.


"ಭಾರತ ಹಳ್ಳಿಗಳ ದೇಶ

ರೈತ ದೇಶದ ಬೆನ್ನೆಲುಬು

ಜೈ ಜವಾನ್ ಜೈಕಿಸಾನ್

ಇತ್ತೀಚಿನ ವೈಜ್ಞಾನಿಕ ಮತ್ತು

ಬೆಂಬಲ ಬೆಲೆ ಎಲ್ಲವೂ 

ಸ್ವಾತಂತ್ರ್ಯ ಪೂರ್ವದಿಂದ

ಇಲ್ಲಿಯವರೆಗೂ ಕೇವಲ

ಘೋಷಣೆಗಳಾಗಿಯೇ

ಉಳಿದಿರುವುದು ಈ ದೇಶದ

ಅನ್ನದಾತನ ದುರ್ದೈವವೇ ಸರಿ"


ಗೋ ರಾ ಶ್ರೀನಿವಾಸ...

ಮಿ' 9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ

ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ

ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ

ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ

ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ

ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ

ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್

ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ

ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು

ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು  ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್

ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ

ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ

ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ

ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ

ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ

ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.

ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ

ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ

ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ




ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ

Top Stories »  


Top ↑