Tel: 7676775624 | Mail: info@yellowandred.in

Language: EN KAN

    Follow us :


ದೇವಾನಾಂಪ್ರಿಯ ಶಿವಲಿಂಗಯ್ಯನವರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

Posted date: 30 Oct, 2019

Powered by:     Yellow and Red

ದೇವಾನಾಂಪ್ರಿಯ ಶಿವಲಿಂಗಯ್ಯನವರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

ಚನ್ನಪಟ್ಟಣ: ತಾಲ್ಲೂಕಿನ ನೀಲಕಂಠನಹಳ್ಳಿ ಗ್ರಾಮದ ತಿರುಮಲಮ್ಮ, ಎನ್ ಟಿ ಕುನ್ನಯ್ಯ ರವರ ಸುಪುತ್ರ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನ ನಿವೃತ್ತ ಉದ್ಯೋಗಿ ಹಾಗೂ ಸಮಾಜದ ಅಂಕುಡೊಂಕು ಗಳನ್ನು ತಿದ್ದುವಂತಹ ನಾಟಕಗಳನ್ನು ನಿರ್ದೇಶಿಸಿ ನಟಿಸುವ ಮೂಲಕ ೪೬ ವರ್ಷಗಳ ಸುಧೀರ್ಘ ಕಾಲ ಸತತವಾಗಿ ಕಲೆಯನ್ನು ಇಂದಿಗೂ ಆರಾಧಿಸಿಕೊಂಡು ಬರುತ್ತಿರುವ ಶಿವಲಿಂಗಯ್ಯ ನವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.


*ಶ್ರೀಯುತರ ಬಗ್ಗೆ ಒಂದಿಷ್ಟು;*


ಒಂದು ಮತ್ತು ಎರಡನೇ ತರಗತಿಯನ್ನು ಹುಟ್ಟೂರು ನೀಲಕಂಠನಹಳ್ಳಿಯ ಸರ್ಕಾರಿ ಶಾಲೆಯಲ್ಲೇ ಓದಿದ ಅವರು ಅವರ ತಂದೆ ವರ್ಗಾವಣೆಗೊಂಡಂತೆ ಹಲವಾರು ಊರುಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿಎಸ್ಸಿ ಪದವಿ ನಂತರ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿ ಉದ್ಯೋಗ ಮಾಡುತ್ತಾ ತನ್ನ ಸಹವರ್ತಿಗಳು ಹಾಗೂ ಹಿರಿಯ ಅಧಿಕಾರಿಗಳ ಒಡಗೂಡಿ ಐಓಬಿ ಕನ್ನಡ ಬಳಗ ಎಂಬ ಸಂಘಟನೆಯನ್ನು ಕಟ್ಟಿ ಸತತ ೧೮ ವರ್ಷಗಳ ಕಾಲ ಕಾರ್ಯದರ್ಶಿ ಯಾಗಿ ಸಹವರ್ತಿಗಳ ಜೊತೆಗೆ ಕನ್ನಡೇತರ ಉದ್ಯೋಗಿಗಳಿಗೂ ಕನ್ನಡ ಕಲಿಸಿ ಕಲೆಯ ಗೀಳನ್ನು ಹತ್ತಿಸಿ ೩೦ ಜನರ ತಂಡವನ್ನು ಕಟ್ಟಿ ಇಂದಿಗೂ ಕಲಾರಾಧಾನೆಯಲ್ಲಿ ತೊಡಗಿರುವ ಚಿರ ರಂಗಕರ್ಮಿ ಎನ್ ಶಿವಲಿಂಗಯ್ಯನವರು.


*ಐಓಬಿ ಕನ್ನಡ ಬಳಗದಿಂದ ಅಂತರರಾಷ್ಟ್ರೀಯ ಮಟ್ಟಕ್ಕೆ*


ಐಓಬಿ ಕನ್ನಡ ಬಳಗದ ವತಿಯಿಂದ ಕನ್ನಡದ ಕಂಪನ್ನು ಪಸರಿಸುವ ಕಾರ್ಯಕ್ರಮಗಳು, ಖ್ಯಾತ ನಾಮರ ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶನ ನೀಡುವ ಮೂಲಕ ಅಂತರರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿ ರಾಷ್ಟ್ರ ಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.


*ದೇವಾನಾಂಪ್ರಿಯ ಅಶೋಕ ಅಚ್ಚು ಮೆಚ್ಚು*


ಬುದ್ದನ ವಿಚಾರದಿಂದ ಪ್ರಭಾವಿತನಾಗಿ ಯುದ್ಧ ಮತ್ತು ಸಾಮ್ರಾಜ್ಯ ಶಾಹಿ ಧೋರಣೆಯಿಂದ ಹೊರಬಂದು ಬುದ್ಧನ ಕರುಣೆ ಮತ್ತು ಶಾಂತಿಯ ಜೊತೆಗೆ ಸಾಲು ಮರಗಳನ್ನು ನೆಟ್ಟು ಪೋಸಿಸುವ ಮೂಲಕ ದೇಶದ ಇತಿಹಾಸದಲ್ಲಿ ಅಜರಾಮರವಾಗಿ ಉಳಿದ ಸಾಮ್ರಾಟ ಅಶೋಕ ಚಕ್ರವರ್ತಿಯ ಕಥೆಯನ್ನಾಧರಿಸಿದ ದೇವಾನಾಂಪ್ರಿಯ ಅಶೋಕ ಎಂಬ ನಾಟಕ ಶಿವಲಿಂಗಯ್ಯನವರಿಗೆ ಹೆಚ್ಚು ಪ್ರಿಯವಂತೆ.

ಮಾನವೀಯ ಮೌಲ್ಯಗಳು, ಪ್ರೀತಿ ಕರುಣೆ, ಮೈತ್ರಿ ಪಾಲನೆ, ಜಾತಿ ಮತ, ಮೇಲು ಕೀಳು, ಬಡವ ಬಲ್ಲಿದ, ಎಂಬ ತಾರತಮ್ಯವನ್ನು ಹೋಗಲಾಡಿಸಲು ಪ್ರಯತ್ನಿಸಿದ್ದು ಇದೇ ಸಾಮ್ರಾಟರು. ಮನುಕುಲದ ಒಳಿತಿಗಾಗಿ ಇವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬುದು ಅವರ ವಾದ.


*ಅಶೋಕ, ಅಂಗೂಲಿ, ಅಮರಪಾಲಿ, ಅಂಬೇಡ್ಕರ್*


ದೇವಾನಾಂಪ್ರಿಯ ಅಶೋಕ ನಾಟಕವು ಈಗಾಗಲೇ ೬೦ ಪ್ರದರ್ಶನಗಳನ್ನು ಕಂಡರೆ ಅದೇ ಬುದ್ದನಿಂದ ಪ್ರೇರಣೆಗೊಂಡ ಅಂಗೂಲಿಮಾಲ ೩೦, ಮಹಾಪೂರ್ಣಿಮಾ (ಅಮರಪಾಲಿ ಇತಿಹಾಸ) ೩೦ ಕಿಸಾಗೋತಮಿ ಮತ್ತು ಪುನಾಲಾ ತಲಾ ೧೦ ಪ್ರದರ್ಶನಗಳನ್ನು ಕಂಡಿದೆ. ಇವುಗಳಲ್ಲದೆ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ ಜೀವನ ಚರಿತ್ರೆ, ಬೆಳ್ಳಕ್ಕಿ ಹಿಂಡು ಬೆದರಾವೋ, ಬೆಳೆದವರು, ಲಂಕೇಶ್ ರವರ ಈಡಿಪಸ್, ಸ್ವರಚಿತ ತಾಯಿ ಯಶೋಧರಾ, ಬಸವಣ್ಣನವರ ಕೂಡಲ ಸಂಗಮ ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶನ ನೀಡಿದ್ದಾರೆ.


*ಸಾಕ್ಷ್ಯಚಿತ್ರ, ಧಾರಾವಾಹಿ ಮತ್ತು ದಲಿತ ಚಳುವಳಿ*


ಡಾ ಅಂಬೇಡ್ಕರ್ ಮತ್ತು ಶ್ರೀ ಕೃಷ್ಣ ದೇವಾರಾಯ ರವರ ಹಳೆಯ ಚಿತ್ರಗಳನ್ನು ಸಂಗ್ರಹಿಸಿ ಪ್ರದರ್ಶನ,  ಮಕ್ಕಳ ಹಕ್ಕುಗಳ ಆಯೋಗ, ನ್ಯಾಯಾಂಗ, ಅರಣ್ಯ ಸೇರಿದಂತೆ ಅನೇಕ ಇಲಾಖೆಗಳಿಗೆ ಸಾಕ್ಷ್ಯಚಿತ್ರ ನಿರ್ಮಾಣ ಮತ್ತು ನಿರ್ದೇಶನ, ನೂರಾರು  ಧಾರಾವಾಹಿಗಳ ನಿರ್ದೇಶನ ಮತ್ತು ನಟನೆ, ಬೀದಿ ನಾಟಕಗಳನ್ನು ಪ್ರದರ್ಶನ ನೀಡಿ ಅನೇಕ ದಲಿತ ಪರ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.


*ನನ್ನಲ್ಲಿರುವ ಕಲಾವಿದನನ್ನು ಗುರುತಿಸಿ ಪ್ರಶಸ್ತಿ ಗೆ ಆಯ್ಕೆ ಮಾಡಿದ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಸರ್ಕಾರಕ್ಕೆ ನಾನು ಅಭಾರಿಯಾಗಿದ್ದೇನೆ, ಈ ಪ್ರಶಸ್ತಿಯನ್ನು ನನ್ನ ಮೊದಲ ಗುರು ರಾಜಾರಾಮ್ ಗಿರಿಯನ್ ಮತ್ತು ನನ್ನ ತಂಡದ ಸಮಸ್ತರಿಗೆ ಅರ್ಪಿಸುತ್ತೇನೆ.*

*ಸರ್ಕಾರ ಮತ್ತು ಸಮಾನ ಮನಸ್ಕರು ಕೈಜೋಡಿಸಿದರೆ ನನ್ನ ಜೀವನಾಡಿ ಚನ್ನಪಟ್ಟಣದಲ್ಲಿ ಒಂದು ರಂಗಮಂದಿರ ನಿರ್ಮಿಸುವಾಸೆ ಇದೆ.*

*ಎನ್ ಶಿವಲಿಂಗಯ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.*


*೯೩/೯೪ ರಲ್ಲಿ ನನ್ನೂರು ನೀಲಕಂಠನಹಳ್ಳಿ ಗ್ರಾಮದಲ್ಲಿ ಕೇವಲ ಬಿಳಿ ಪರದೆಯನ್ನು ಮಾತ್ರ ಬಳಸಿ (ಸೀನರಿ ಇಲ್ಲದೆ) ಕುರುಕ್ಷೇತ್ರ ನಾಟಕವನ್ನು ಪ್ರದರ್ಶನ ಮಾಡಿದ್ದರು, ಈ ನಾಟಕವನ್ನು ಗರಿಷ್ಠ ೫,೦೦೦ ಮಂದಿ ವೀಕ್ಷಿಸಿದ್ದರು.*

*ಗುರುಮೂರ್ತಿ, ಹಿರಿಯ ಪತ್ರಕರ್ತರು.*


* ಸಾಹಿತಿ ನೀ ತಾ ಶಿವಾನಂದ, ಚಲನಚಿತ್ರ ನಿರ್ದೇಶಕ ಶಿವರುದ್ರಯ್ಯ ಮತ್ತು ಶಿವಲಿಂಗಯ್ಯ ನವರು ನಮ್ಮ ಗ್ರಾಮವಲ್ಲದೆ ಇಡೀ ಜಿಲ್ಲೆಯ ರತ್ನ ಮುಕುಟಗಳು, ಶಿವಲಿಂಗಯ್ಯ ನವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ನಮ್ಮೆಲ್ಲರ ಹೆಮ್ಮೆ.*

*ಡಾ ಲೋಕಾನಂದ*


*ಪ್ರಶಸ್ತಿ ಯಾರಿಗೆ ಸಲ್ಲಬೇಕೋ ಅವರಿಗೆ ಸಂದಿದೆ, ಸರಳಸಜ್ಜನ, ಮೆದುಭಾಷಿ ಶಿವಲಿಂಗಯ್ಯ ನವರಿಗೆ  ಪ್ರಶಸ್ತಿಯೇ ಹುಡುಕಿಕೊಂಡು ಬಂದಿರುವುದು ಸಂತಸದ ವಿಷಯ. ಸಾಮಾಜಿಕ ಪರಿವರ್ತನೆಯ ಇನ್ನಷ್ಟು ನಾಟಕಗಳು ಅವರಿಂದ ಹೊರಹೊಮ್ಮಲಿ*

*ಡಾ ಮಹೇಂದ್ರ*


*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in arts »

ಜಾನಪದಕ್ಕೆ ಆದಿ ಅಂತ್ಯವಿಲ್ಲ, ಪದ್ಮಶ್ರೀ ಪುರಸ್ಕೃತ ಸೋಮಣ್ಣ
ಜಾನಪದಕ್ಕೆ ಆದಿ ಅಂತ್ಯವಿಲ್ಲ, ಪದ್ಮಶ್ರೀ ಪುರಸ್ಕೃತ ಸೋಮಣ್ಣ

ರಾಮನಗರ : ಫೆ 10: ಜಾನಪದಕ್ಕೆ ಆದಿ ಅಂತ್ಯವಿಲ್ಲ, ಇಂತಹ ಸಂದರ್ಭದಲ್ಲೇ ಜಾನಪದ ಜನ್ಮತಾಳಿತು. ಮುಂದೆ ಇಂತಹ ಸಮಯದಲ್ಲಿ ಅಂತ್ಯವಾಗುತ್ತದೆ ಎಂದು ಯಾರು ಹೇಳಲು

ಜಾನಪದ ಲೋಕದಲ್ಲಿ ಇಂದಿನಿಂದ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ: ಪ್ರೊ. ಬೋರಲಿಂಗಯ್ಯ
ಜಾನಪದ ಲೋಕದಲ್ಲಿ ಇಂದಿನಿಂದ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ: ಪ್ರೊ. ಬೋರಲಿಂಗಯ್ಯ

ರಾಮನಗರ : ಇಲ್ಲಿನ ಜಾನಪದ ಲೋಕದಲ್ಲಿ ಫೆ. 10 ಮತ್ತು 11 ರಂದು ಪ್ರತಿಷ್ಠಿತ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕರ

ಮಹಾಪೌರ್ಣಿಮೆ ನಾಟಕ ಬಡಜನರ ದನಿಯಾಗಿದೆ, ಪ್ರೊ ಹೊನ್ನು ಸಿದ್ದಾರ್ಥ
ಮಹಾಪೌರ್ಣಿಮೆ ನಾಟಕ ಬಡಜನರ ದನಿಯಾಗಿದೆ, ಪ್ರೊ ಹೊನ್ನು ಸಿದ್ದಾರ್ಥ

ಬೆಂಗಳೂರು: ರಂಗ ನಿರ್ದೇಶಕ ಶಿವಲಿಂಗಯ್ಯ ನವರು ನಿರ್ದೇಶಿಸಿದ ಮಹಾಪೌರ್ಣಿಮೆ ನಾಟಕವು ಬಡಜನರ ದನಿಯಾಗಿದೆ, ಒಂದಲ್ಲಾ ಹತ್ತು ಬಾರಿ ನೋಡಿದರೂ ಮತ್ತೊಮ್ಮೆ ನೋಡಬ

ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಚಾಲನೆ ನೀಡಿದ ತಹಶಿಲ್ದಾರ್ ನಾಗೇಶ್
ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಚಾಲನೆ ನೀಡಿದ ತಹಶಿಲ್ದಾರ್ ನಾಗೇಶ್

ರಾಮನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲ ಗ್ರಾಮ ಟ್ರೈಕ್ವೆಟ್ರಾ ಅಡ್ವೆಂಚರ್ ಕ್ಯಾಂಪ್ ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಗ

20 ಕೆಜಿಯ ಕಾಸ್ಟ್ಯೂಮ್ ಧರಿಸಿ ಲಂಬಾಣಿಯಾಗಿ  ಶುಭಾಪುಂಜಾ
20 ಕೆಜಿಯ ಕಾಸ್ಟ್ಯೂಮ್ ಧರಿಸಿ ಲಂಬಾಣಿಯಾಗಿ ಶುಭಾಪುಂಜಾ

ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹುದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ನಟಿ ಶುಭಾಪುಂಜಾ ಇದೀಗ ಲಂಬಾಣಿ ಹುಡುಗಿಯಾಗಿ ಮತ್ತೆ ತೆರೆ ಮೇಲೆ ರಂಜಿಸಲು ಸಿದ್ದರಾಗಿದ್ದಾರೆ.


ಕಲಾವಿದರಿಗೆ ಪ್ಯಾಕೇಜ್: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ
ಕಲಾವಿದರಿಗೆ ಪ್ಯಾಕೇಜ್: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ

ರಾಮನಗರ, 28ನೇ ಮೇ: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾಗಶಃ ಲಾಕಡೌನ್ ಜಾರಿಯಲ್ಲಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರು/ ಕಲಾತಂಡಗಳಿಗೆ ಪ್ರತಿ ಫಲಾನುಭವಿಗಳಿಗೆ ತಲಾ ರೂ.3,000/- ಗಳಂ

ಸಂಗೀತ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಡಿವೈಎಸ್ಪಿ ರಮೇಶ್
ಸಂಗೀತ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಡಿವೈಎಸ್ಪಿ ರಮೇಶ್

ಸಂಗೀತ ಎನ್ನುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಸಕಲ ಜೀವ ರಾಶಿಗಳಿಗೂ ಸಂಗೀತದ ಇಂಪು ಗೊತ್ತಿದೆ. ಪ್ರಾಣಿ ಪಕ್ಷಿಗಳೂ ಸಹ ಸಂಗೀತಕ್ಕೆ ತಲೆದೂಗುತ್ತವೆ. ಇತ್ತೀಚಿನ ಅಧ್ಯಯನದ ಪ್ರಕಾರ, ಸಾಕು ಪ್

ಐವತ್ತೈದು ವರ್ಷಗಳ ಸಾಧನೆಗೆ ನೂರಕ್ಕೂ ಹೆಚ್ಚು ಶಿಷ್ಯರನ್ನು ತಯಾರಿಗೆ ಸಿಕ್ಕ ಪ್ರಶಸ್ತಿ: ಬ್ರಹ್ಮಣಿಪುರ ತಮಟೆ ತಿಮ್ಮಯ್ಯಗೆ ಒಲಿದ ಪ್ರಶಸ್ತಿ
ಐವತ್ತೈದು ವರ್ಷಗಳ ಸಾಧನೆಗೆ ನೂರಕ್ಕೂ ಹೆಚ್ಚು ಶಿಷ್ಯರನ್ನು ತಯಾರಿಗೆ ಸಿಕ್ಕ ಪ್ರಶಸ್ತಿ: ಬ್ರಹ್ಮಣಿಪುರ ತಮಟೆ ತಿಮ್ಮಯ್ಯಗೆ ಒಲಿದ ಪ್ರಶಸ್ತಿ

ಚನ್ನಪಟ್ಟಣ:ಜ/05/21/ಮಂಗಳವಾರ. ಹದಿನೈದು ವರ್ಷದ ಬಾಲಕನಾಗಿದ್ದಾಗಲೇ ತಮಟೆ ವಾದನದಲ್ಲಿ ಸೈ ಎನಿಸಿಕೊಂಡು, ಕಳೆದ ಐವತ್ತೈದು ವರ್ಷಗಳಿಂದ ಮೈಸೂರು ದ

ಜಿಲ್ಲೆಯ ಕಲಾವಿದರಿಗೆ ಹಣ ನೀಡದೆ ವಾಪಸ್ಸು ಕಳುಹಿಸಿದ ಕಸಂ ಇಲಾಖೆ. ಕಲಾವಿದರ ನೋವಿನ ನುಡಿ
ಜಿಲ್ಲೆಯ ಕಲಾವಿದರಿಗೆ ಹಣ ನೀಡದೆ ವಾಪಸ್ಸು ಕಳುಹಿಸಿದ ಕಸಂ ಇಲಾಖೆ. ಕಲಾವಿದರ ನೋವಿನ ನುಡಿ

ರಾಮನಗರ:ಏ/೨೫/೨೦/ಶನಿವಾರ. ಕೊರೊನಾ (ಕೋವಿಡ್-೧೯) ವೈರಸ್ ದೇಶಕ್ಕೆ ಕಾಲಿಟ್ಟ ನಂತರ ದೇಶ ಮತ್ತು ರಾಜ್ಯದ ಆರ್ಥಿಕತೆಗೆ ಪೆಟ್ಟು ಬಿದ್ದಿರುವಂತೆಯೇ,

ಅಬ್ಬೂರು ರಾಜಶೇಖರ ರವರಿಗೆ ಎಚ್ ಕೆ ವೀರಣ್ಣಗೌಡ ಪ್ರಶಸ್ತಿ*
ಅಬ್ಬೂರು ರಾಜಶೇಖರ ರವರಿಗೆ ಎಚ್ ಕೆ ವೀರಣ್ಣಗೌಡ ಪ್ರಶಸ್ತಿ*

ರಾಮನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ಎಚ್.ಕೆ.ವೀರಣ್ಣಗೌಡ ಪ್ರಶಸ್ತಿಗೆ ಹಿರಿಯ ಪರ್ತಕರ್ತರು ಆರಂಭ ಪತ್ರಿಕೆಯ ಸಂಸ್ಥಾಪಕ ಸಂ

Top Stories »  


Top ↑