Tel: 7676775624 | Mail: info@yellowandred.in

Language: EN KAN

    Follow us :


ಐವತ್ತೈದು ವರ್ಷಗಳ ಸಾಧನೆಗೆ ನೂರಕ್ಕೂ ಹೆಚ್ಚು ಶಿಷ್ಯರನ್ನು ತಯಾರಿಗೆ ಸಿಕ್ಕ ಪ್ರಶಸ್ತಿ: ಬ್ರಹ್ಮಣಿಪುರ ತಮಟೆ ತಿಮ್ಮಯ್ಯಗೆ ಒಲಿದ ಪ್ರಶಸ್ತಿ

Posted date: 05 Jan, 2021

Powered by:     Yellow and Red

ಐವತ್ತೈದು ವರ್ಷಗಳ ಸಾಧನೆಗೆ ನೂರಕ್ಕೂ ಹೆಚ್ಚು ಶಿಷ್ಯರನ್ನು ತಯಾರಿಗೆ ಸಿಕ್ಕ ಪ್ರಶಸ್ತಿ: ಬ್ರಹ್ಮಣಿಪುರ ತಮಟೆ ತಿಮ್ಮಯ್ಯಗೆ ಒಲಿದ ಪ್ರಶಸ್ತಿ

ಚನ್ನಪಟ್ಟಣ:ಜ/05/21/ಮಂಗಳವಾರ. ಹದಿನೈದು ವರ್ಷದ ಬಾಲಕನಾಗಿದ್ದಾಗಲೇ ತಮಟೆ ವಾದನದಲ್ಲಿ ಸೈ ಎನಿಸಿಕೊಂಡು, ಕಳೆದ ಐವತ್ತೈದು ವರ್ಷಗಳಿಂದ ಮೈಸೂರು ದಸರಾ ಸೇರಿದಂತೆ, ರಾಜ್ಯದಾದ್ಯಂತ ಶುಭ ಅಶುಭ ಕಾರ್ಯಗಳಿಗೆಲ್ಲಾ ತಮಟೆ ನುಡಿಸಿ ಎಲೆ ಮರೆಕಾಯಿಯಂತಿದ್ದ ಬ್ರಹ್ಮಣೀಪುರ ಗ್ರಾಮದ ಹಿರಿಯ ತಮಟೆ ಕಲಾವಿದ ತಿಮ್ಮಯ್ಯ ಅವರಿಗೆ 2020 ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪುರಸ್ಕಾರ ದೊರೆತಿದೆ.

ಕರ್ನಾಟಕ ಜಾನಪದ ಅಕಾಡೆಮಿ ನೀಡುವ ಈ ಪ್ರಶಸ್ತಿಯು ರೂ. 25 ಸಾವಿರ ನಗದು, ಪ್ರಶಸ್ತಿ ಫಲಕ ಹೊಂದಿದೆ. ಸುಮಾರು 55 ವರ್ಷಗಳ ಕಾಲ ತಮಟೆ ಕಲಾವಿದರಾಗಿ ಗುರುತಿಸಿಕೊಂಡಿದ್ದ ತಿಮ್ಮಯ್ಯ ಅವರಿಗೆ ಈ ಪ್ರಶಸ್ತಿ ಸಂದಿದೆ.


ಚನ್ನಪಟ್ಟಣ ತಾಲ್ಲೂಕು ಹೋರಾಟ, ಚಳವಳಿ ಮತ್ತು ಕಲಾವಿದರಿಗೆ ಪೂರ್ವದಿಂದಲೂ ಬಹಳ ಹೆಸರುವಾಸಿ. ರಾಜಮಹರಾಜರು, ಇತಿಹಾಸಕಾರರು, ಸಾಹಿತಿಗಳು, ಜನಪದೀಯರು ಚನ್ನಪಟ್ಟಣದ ಹೆಸರನ್ನು ಅಜರಾಮಗೊಳಿಸಿದ್ದಾರೆ. ಇಂತಹವರ ಸಾಲಿಗೆ ಇಂದು ಸುಮಾರು 70 ವರ್ಷ ವಯಸ್ಸಿನ ತಿಮ್ಮಯ್ಯ ಅವರು ಸೇರಿದ್ದು ತಮ್ಮದೇ ಕಲೆಯ ಮೂಲಕ ಚನ್ನಪಟ್ಟಣದ ಹೆಸರನ್ನು ರಾಜ್ಯದಾದ್ಯಂತ ಪಸರಿಸಿರುವುದು ತಾಲ್ಲೂಕಿನ ಹೆಮ್ಮೆಯ ಸಂಗತಿಯಾಗಿದೆ.


ತಾವು ಹದಿನೈದು ವರ್ಷದ ಬಾಲಕನಾಗಿದ್ದಾಗಿನಿಂದಲೂ ತಮಟೆ ಕಲಾವಿದರಾಗಿದ್ದು, ಸುಮಾರು 55 ವರ್ಷಗಳ ಕಾಲ ಈ ಕಲೆಯಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ ಈ ಕಲೆಯನ್ನು ನೂರಾರು ಮಂದಿಗೆ ಕಲಿಸಿಕೊಟ್ಟಿದ್ದಾರೆ. ರಾಮನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಇವರ ಅಪಾರ ಶಿಷ್ಯರು ಇದ್ದಾರೆ.

ತಂದೆ ಹೊಟ್ಟಯ್ಯ ಅವರು ಶುಭಸಮಾರಂಭಗಳಿಗೆ ನುಡಿಸುವ ನಾದಸ್ವರ ಕಲಾವಿದರಾಗಿದ್ದರು. ಅವರಿಂದ ಸ್ಪೂರ್ತಿ ಪಡೆದ ನಾನು ನಾದಸ್ವರ ನುಡಿಸಲು ಪ್ರಯತ್ನಿಸಿದೆನಾದರೂ ಅದು ಒಲಿಯಲಿಲ್ಲ. ಹಾಗಾಗಿ ಬಾಲ್ಯದಲ್ಲೇ ಇಷ್ಟವಾದ ತಮಟೆ ಕಲಾವಿದನಾದೆ. ಮೈಸೂರು ದಸರಾ ಸೇರಿದಂತೆ ರಾಜ್ಯದ ವಿವಿಧೆಡೆ ತಮಟೆ ವಾದನದಲ್ಲಿ ಭಾಗವಹಿಸಿದ್ದೇನೆ. ನೂರಾರು ಮಂದಿಗೆ ತಮಟೆ ಕಲೆಯನ್ನು ಕಲಿಸಿಕೊಟ್ಟಿದ್ದೇನೆ. ಇಂದು ನನ್ನ ಶಿಷ್ಯರು ಎಲ್ಲೆಡೆ ನನ್ನನ್ನು ಗುರು ಎಂದು ಹೆಸರು ಹೇಳುತ್ತಾರೆ. ಅದೊಂದೆ ನನ್ನ ಆಸ್ತಿ ಎಂದು ತಿಮ್ಮಯ್ಯ ತಿಳಿಸುತ್ತಾರೆ.


 ತಮಟೆ ಹೊಡೆಯುವವರ ಬಗ್ಗೆ ಸಮಾಜ ಗಮನ ನೀಡುವುದಿಲ್ಲ. ಕೇವಲ ಜಾತಿಗಷ್ಟೇ ಈ ಕಲೆಯನ್ನು ಸೀಮಿತಗೊಳಿಸಿರುವುದು ನೋವಿನ ಸಂಗತಿ. ಶುಭ ಅಥವಾ ಅಶುಭ ಸಮಾರಂಭಗಳ ವೇಳೆ ತಮಟೆ ಹೊಡೆದು ಹೋಗುವವರನ್ನು ಆನಂತರ ಸಮಾಜ ಮರೆಯುತ್ತದೆ. ಅಂತಹ ನೂರಾರು ಕಲಾವಿದರು ಸಮಾಜದಲ್ಲಿದ್ದಾರೆ. ಎಲೆಮರೆ ಕಾಯಿಯಂತಿದ್ದ ನನ್ನನ್ನು ಗುರುಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ತಿಮ್ಮಯ್ಯ ತಿಳಿಸುತ್ತಾರೆ.

ಇಂದು ನೈಜ ಕಲಾವಿದರು ಮೂಲೆಗುಂಪಾಗುತ್ತಿದ್ದಾರೆ. ಯಾವುದೇ ಸಮಾರಂಭದಲ್ಲಿ ಭಾಗವಹಿಸದೆ, ಸನ್ಮಾನ ಮಾಡಿಸಿಕೊಳ್ಳದೆ, ತೆರೆಮರೆಯಲ್ಲಿರುವ ನೂರಾರು ಕಲಾವಿದರು ಸಮಾಜದಲ್ಲಿದ್ದಾರೆ. ಅಂತಹ ಕಲಾವಿದರನ್ನು ಗುರ್ತಿಸಿ ಅವರ ಜೀವನೋಪಾಯಕ್ಕೆ ಆಸರೆಯಾಗಲು ಸರ್ಕಾರ ಮುಂದಾಗಬೇಕು ಎನ್ನುವುದು ತಿಮ್ಮಯ್ಯ ಅವರ ಅಭಿಪ್ರಾಯವಾಗಿದೆ.


ರಾಮನಗರ ಜಿಲ್ಲೆಯಲ್ಲಿ ಯಾವುದೇ ಶಿಫಾರಸ್ಸು ಇಲ್ಲದೆ ನೈಜ ಕಲಾವಿದರೊಬ್ಬರನ್ನು ಈ ಬಾರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ತಮಟೆ ಕಲೆಯನ್ನು ಕಲಿತ ಶಿಷ್ಯರು ತಮ್ಮ ಗುರುವಿನ ಬಗ್ಗೆ ಹೇಳಿದ ಮೆಚ್ಚುಗೆಯ ಮಾತುಗಳನ್ನು ಕೇಳಿ, ಅಕಾಡೆಮಿ ವತಿಯಿಂದಲೇ ಅವರನ್ನು ಭೇಟಿ ಮಾಡಿ, ಅವರ ಕಲಾಸೇವೆಯನ್ನು ಗುರ್ತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿದ್ದರಾಜು ತಿಳಿಸುತ್ತಾರೆ.


`ನಾವು ಕಲಿತಿರುವ ಜಾನಪದ ಕಲೆ ನಮ್ಮ ಜೊತೆ ಮಣ್ಣಾಗಲು ಬಿಡಬಾರದು. ಅದನ್ನು ಹತ್ತಾರು ಮಂದಿಗೆ ಕಲಿಸಿಕೊಟ್ಟಾಗ ನಾವು ಕಲಿತ ಕಲೆಗೆ ಬೆಲೆ ಸಿಗುತ್ತದೆ. ಆಗ ನಾವು ಅಳಿದರೂ ನಮ್ಮ ಶಿಷ್ಯರು ನಮ್ಮ ಹೆಸರು ಉಳಿಸುತ್ತಾರೆ' ಇಂತಹ ಶಿಷ್ಯರನ್ನು ಪಡೆದ ನಾನು ಧನ್ಯ.

- ತಿಮ್ಮಯ್ಯ, ತಮಟೆ ಕಲಾವಿದ. ಚನ್ನಪಟ್ಟಣ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in arts »

ಜಾನಪದಕ್ಕೆ ಆದಿ ಅಂತ್ಯವಿಲ್ಲ, ಪದ್ಮಶ್ರೀ ಪುರಸ್ಕೃತ ಸೋಮಣ್ಣ
ಜಾನಪದಕ್ಕೆ ಆದಿ ಅಂತ್ಯವಿಲ್ಲ, ಪದ್ಮಶ್ರೀ ಪುರಸ್ಕೃತ ಸೋಮಣ್ಣ

ರಾಮನಗರ : ಫೆ 10: ಜಾನಪದಕ್ಕೆ ಆದಿ ಅಂತ್ಯವಿಲ್ಲ, ಇಂತಹ ಸಂದರ್ಭದಲ್ಲೇ ಜಾನಪದ ಜನ್ಮತಾಳಿತು. ಮುಂದೆ ಇಂತಹ ಸಮಯದಲ್ಲಿ ಅಂತ್ಯವಾಗುತ್ತದೆ ಎಂದು ಯಾರು ಹೇಳಲು

ಜಾನಪದ ಲೋಕದಲ್ಲಿ ಇಂದಿನಿಂದ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ: ಪ್ರೊ. ಬೋರಲಿಂಗಯ್ಯ
ಜಾನಪದ ಲೋಕದಲ್ಲಿ ಇಂದಿನಿಂದ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ: ಪ್ರೊ. ಬೋರಲಿಂಗಯ್ಯ

ರಾಮನಗರ : ಇಲ್ಲಿನ ಜಾನಪದ ಲೋಕದಲ್ಲಿ ಫೆ. 10 ಮತ್ತು 11 ರಂದು ಪ್ರತಿಷ್ಠಿತ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕರ

ಮಹಾಪೌರ್ಣಿಮೆ ನಾಟಕ ಬಡಜನರ ದನಿಯಾಗಿದೆ, ಪ್ರೊ ಹೊನ್ನು ಸಿದ್ದಾರ್ಥ
ಮಹಾಪೌರ್ಣಿಮೆ ನಾಟಕ ಬಡಜನರ ದನಿಯಾಗಿದೆ, ಪ್ರೊ ಹೊನ್ನು ಸಿದ್ದಾರ್ಥ

ಬೆಂಗಳೂರು: ರಂಗ ನಿರ್ದೇಶಕ ಶಿವಲಿಂಗಯ್ಯ ನವರು ನಿರ್ದೇಶಿಸಿದ ಮಹಾಪೌರ್ಣಿಮೆ ನಾಟಕವು ಬಡಜನರ ದನಿಯಾಗಿದೆ, ಒಂದಲ್ಲಾ ಹತ್ತು ಬಾರಿ ನೋಡಿದರೂ ಮತ್ತೊಮ್ಮೆ ನೋಡಬ

ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಚಾಲನೆ ನೀಡಿದ ತಹಶಿಲ್ದಾರ್ ನಾಗೇಶ್
ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಚಾಲನೆ ನೀಡಿದ ತಹಶಿಲ್ದಾರ್ ನಾಗೇಶ್

ರಾಮನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲ ಗ್ರಾಮ ಟ್ರೈಕ್ವೆಟ್ರಾ ಅಡ್ವೆಂಚರ್ ಕ್ಯಾಂಪ್ ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಗ

20 ಕೆಜಿಯ ಕಾಸ್ಟ್ಯೂಮ್ ಧರಿಸಿ ಲಂಬಾಣಿಯಾಗಿ  ಶುಭಾಪುಂಜಾ
20 ಕೆಜಿಯ ಕಾಸ್ಟ್ಯೂಮ್ ಧರಿಸಿ ಲಂಬಾಣಿಯಾಗಿ ಶುಭಾಪುಂಜಾ

ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹುದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ನಟಿ ಶುಭಾಪುಂಜಾ ಇದೀಗ ಲಂಬಾಣಿ ಹುಡುಗಿಯಾಗಿ ಮತ್ತೆ ತೆರೆ ಮೇಲೆ ರಂಜಿಸಲು ಸಿದ್ದರಾಗಿದ್ದಾರೆ.


ಕಲಾವಿದರಿಗೆ ಪ್ಯಾಕೇಜ್: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ
ಕಲಾವಿದರಿಗೆ ಪ್ಯಾಕೇಜ್: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ

ರಾಮನಗರ, 28ನೇ ಮೇ: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾಗಶಃ ಲಾಕಡೌನ್ ಜಾರಿಯಲ್ಲಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರು/ ಕಲಾತಂಡಗಳಿಗೆ ಪ್ರತಿ ಫಲಾನುಭವಿಗಳಿಗೆ ತಲಾ ರೂ.3,000/- ಗಳಂ

ಸಂಗೀತ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಡಿವೈಎಸ್ಪಿ ರಮೇಶ್
ಸಂಗೀತ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಡಿವೈಎಸ್ಪಿ ರಮೇಶ್

ಸಂಗೀತ ಎನ್ನುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಸಕಲ ಜೀವ ರಾಶಿಗಳಿಗೂ ಸಂಗೀತದ ಇಂಪು ಗೊತ್ತಿದೆ. ಪ್ರಾಣಿ ಪಕ್ಷಿಗಳೂ ಸಹ ಸಂಗೀತಕ್ಕೆ ತಲೆದೂಗುತ್ತವೆ. ಇತ್ತೀಚಿನ ಅಧ್ಯಯನದ ಪ್ರಕಾರ, ಸಾಕು ಪ್

ಐವತ್ತೈದು ವರ್ಷಗಳ ಸಾಧನೆಗೆ ನೂರಕ್ಕೂ ಹೆಚ್ಚು ಶಿಷ್ಯರನ್ನು ತಯಾರಿಗೆ ಸಿಕ್ಕ ಪ್ರಶಸ್ತಿ: ಬ್ರಹ್ಮಣಿಪುರ ತಮಟೆ ತಿಮ್ಮಯ್ಯಗೆ ಒಲಿದ ಪ್ರಶಸ್ತಿ
ಐವತ್ತೈದು ವರ್ಷಗಳ ಸಾಧನೆಗೆ ನೂರಕ್ಕೂ ಹೆಚ್ಚು ಶಿಷ್ಯರನ್ನು ತಯಾರಿಗೆ ಸಿಕ್ಕ ಪ್ರಶಸ್ತಿ: ಬ್ರಹ್ಮಣಿಪುರ ತಮಟೆ ತಿಮ್ಮಯ್ಯಗೆ ಒಲಿದ ಪ್ರಶಸ್ತಿ

ಚನ್ನಪಟ್ಟಣ:ಜ/05/21/ಮಂಗಳವಾರ. ಹದಿನೈದು ವರ್ಷದ ಬಾಲಕನಾಗಿದ್ದಾಗಲೇ ತಮಟೆ ವಾದನದಲ್ಲಿ ಸೈ ಎನಿಸಿಕೊಂಡು, ಕಳೆದ ಐವತ್ತೈದು ವರ್ಷಗಳಿಂದ ಮೈಸೂರು ದ

ಜಿಲ್ಲೆಯ ಕಲಾವಿದರಿಗೆ ಹಣ ನೀಡದೆ ವಾಪಸ್ಸು ಕಳುಹಿಸಿದ ಕಸಂ ಇಲಾಖೆ. ಕಲಾವಿದರ ನೋವಿನ ನುಡಿ
ಜಿಲ್ಲೆಯ ಕಲಾವಿದರಿಗೆ ಹಣ ನೀಡದೆ ವಾಪಸ್ಸು ಕಳುಹಿಸಿದ ಕಸಂ ಇಲಾಖೆ. ಕಲಾವಿದರ ನೋವಿನ ನುಡಿ

ರಾಮನಗರ:ಏ/೨೫/೨೦/ಶನಿವಾರ. ಕೊರೊನಾ (ಕೋವಿಡ್-೧೯) ವೈರಸ್ ದೇಶಕ್ಕೆ ಕಾಲಿಟ್ಟ ನಂತರ ದೇಶ ಮತ್ತು ರಾಜ್ಯದ ಆರ್ಥಿಕತೆಗೆ ಪೆಟ್ಟು ಬಿದ್ದಿರುವಂತೆಯೇ,

ಅಬ್ಬೂರು ರಾಜಶೇಖರ ರವರಿಗೆ ಎಚ್ ಕೆ ವೀರಣ್ಣಗೌಡ ಪ್ರಶಸ್ತಿ*
ಅಬ್ಬೂರು ರಾಜಶೇಖರ ರವರಿಗೆ ಎಚ್ ಕೆ ವೀರಣ್ಣಗೌಡ ಪ್ರಶಸ್ತಿ*

ರಾಮನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ಎಚ್.ಕೆ.ವೀರಣ್ಣಗೌಡ ಪ್ರಶಸ್ತಿಗೆ ಹಿರಿಯ ಪರ್ತಕರ್ತರು ಆರಂಭ ಪತ್ರಿಕೆಯ ಸಂಸ್ಥಾಪಕ ಸಂ

Top Stories »  


Top ↑