Tel: 7676775624 | Mail: info@yellowandred.in

Language: EN KAN

    Follow us :

20 ಕೆಜಿಯ ಕಾಸ್ಟ್ಯೂಮ್ ಧರಿಸಿ ಲಂಬಾಣಿಯಾಗಿ ಶುಭಾಪುಂಜಾ

Posted date: 13 Sep, 2021

Powered by:     Yellow and Red

20 ಕೆಜಿಯ ಕಾಸ್ಟ್ಯೂಮ್ ಧರಿಸಿ ಲಂಬಾಣಿಯಾಗಿ  ಶುಭಾಪುಂಜಾ

ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹುದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ನಟಿ ಶುಭಾಪುಂಜಾ ಇದೀಗ ಲಂಬಾಣಿ ಹುಡುಗಿಯಾಗಿ ಮತ್ತೆ ತೆರೆ ಮೇಲೆ ರಂಜಿಸಲು ಸಿದ್ದರಾಗಿದ್ದಾರೆ.

2018 ರಲ್ಲಿ ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹು ನಿರೀಕ್ಷೆಯನ್ನು ಹುಟ್ಟಿಸಿ ಪ್ರೇಕ್ಷಕರನ್ನು ಗಮನಸೆಳೆದ ಕೆಲವು ದಿನಗಳ ನಂತರ ಎನ್ನುವ ಸಿನಿಮಾದ ನಿರ್ದೇಶಕ ಶ್ರೀನಿ ಇದೀಗ ಹೊಸತೊಂದು ಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಶ್ರೀನಿ ಭರವಸೆಯ ಯುವ ನಿರ್ದೇಶಕ ಎನ್ನುವುದನ್ನು ಕೆಲವು ದಿನಗಳ ನಂತರ ಸಿನಿಮಾದಲ್ಲಿ ಸಾಬೀತು ಮಾಡಿದ್ದಾರೆ, ಕಣ್ಣಿಗೆ ಕಟ್ಟುವ ಕಥೆಯನ್ನು ಸೃಷ್ಟಿ ಮಾಡುವುದರಲ್ಲಿ ಶ್ರೀನಿ ಎತ್ತಿದ ಕೈ ಹೊಸ ಆಲೋಚನೆಯ ಜೊತೆಗೆ ಭಿನ್ನತೆಯನ್ನು ಪ್ರೇಕ್ಷಕರಿಗೆ ನೀಡಬೇಕು ಎನ್ನುವ ಹಂಬಲ ಹೊತ್ತ ಭರವಸೆಯ ನಿರ್ದೇಶಕನ ಹೊಸ ಸಿನಿಮಾ ಅಂಬುಜದ  ಪಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ.

ಶುಭಾಪುಂಜಾ ಅಂಬುಜಾ ಚಿತ್ರದಲ್ಲಿ ಒಂದು ವಿಶೇಷ ಗೆಟಪ್ ನಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಲ್ಕಿದ್ದಾರೆ ಹಾಗೂ ಇವರ ಜೊತೆಗೆ ಪದ್ಮಜಾರಾವ್, ಕಾಮಿಡಿಕಿಲಾಡಿ ಗೋವಿಂದೇಗೌಡ, ಕಾಮಿಡಿಕಿಲಾಡಿ ನಿರ್ದೇಶಕ ಶರಣಯ್ಯ, ಸಂದೇಶ್ ಶೆಟ್ಟಿ ಅಜ್ರಿ, ಮಜಾಭಾರತದ ಪ್ರಿಯಾಂಕ ಕಾಮತ್, ಬೇಬಿ ಆಕಾಂಕ್ಷ ಹಾಗೂ ಇನ್ನಿತರರು ಅಭಿನಯಿಸಿ ಚಿತ್ರದ ಮೇರಗು ಇನಷ್ಟು ಹೆಚ್ಚಿಸುತ್ತಿದ್ದಾರೆ.

*ಅಂಬುಜ ಸಿನಿಮಾದ ಕಥೆ ಏನು ಹೇಳುತ್ತಾದೆ !?*

ಸಮಾಜದಲ್ಲಿ ಆಗುವ ಒಂದಷ್ಟು ಅವಘಡಗಳು ಹೇಗೆ ಸಾಮಾನ್ಯ ಜನರ ಬದುಕನ್ನು ಹಾಳು ಮಾಡುತ್ತದೆ. ಹಾಗೂ ಅವರು ಅನುಭವಿಸುವ ತೊಂದರೆಗಳೇನು...? ಅವರ ಅಸಹಾಯಕತೆಯನ್ನ  ಸಮಾಜ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತದೆ. ಜ್ಞಾನ-ವಿಜ್ಞಾನ-ಅಜ್ಙಾನಗಳ ಒಟ್ಟು ಚಿತ್ರಣವೇ *ಅಂಬುಜಾ* ಸಿನಿಮಾದ ಹೈಲೆಟ್ಸ್ ಆಗಿದೆ ಹಾಗೂ *ಅಂಬುಜಾ* ಒಂದು ಮಹಿಳಾ ಪ್ರಧಾನ ಹಾಗೂ ನೈಜ ಘಟನೆಯಾಧಾರಿತ  ಚಿತ್ರವಾಗಿದೆ ಮತ್ತು ಈ ಚಿತ್ರದಲ್ಲಿ ಬರುವ ಲಂಬಾಣಿ ಪಾತ್ರದ ವಸ್ತ್ರ ಹಾಗೂ ಆಭರಣಗಳನ್ನು ರೆಡಿಮಾಡಲು ಚಿತ್ರತಂಡ ನಾಲ್ಕು ತಿಂಗಳುಗಳು ತೆಗೆದುಕೊಂಡಿದೆ ಹಾಗೂ ಗದಗ ಜಿಲ್ಲೆಯ ಒಂದು ಲಂಬಾಣಿ ತಾಂಡಾದಲ್ಲಿ ಸುಮಾರು 4 ತಿಂಗಳು ಇದನ್ನು ತಯಾರು ಮಾಡಲು ಸಮಯ ನೀಡಿದ್ದೇವೆ  ಎಂದು ನಿರ್ದೇಶಕ ಶ್ರೀನಿ  ಮತ್ತು ನಿರ್ಮಾಪಕ ಕಾಶೀನಾಥ್ ಮಡಿವಾಳರ್ ಹೇಳಿದರು.

ಲಂಬಾಣಿ ವಸ್ತ್ರಾಲಂಕಾರದ  ತೂಕ ಬರೋಬ್ಬರಿ - 20 ಕಿಲೋಯಿದೆ. ಇದನ್ನು ಇಡೀ ಸಿನಿಮಾದಲ್ಲಿ ಶುಭಾಪುಂಜಾ ಹಾಕಿಕೊಂಡು ಚಿತ್ರೀಕರಣ ಮಾಡುವುದೇ ದೊಡ್ಡ ಸಾಹಸ ಎಂದು ಚಿತ್ರತಂಡ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದೀಗ ಚಿತ್ರದ ಫ್ರೀ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು ಅಕ್ಟೋಬರ್ ತಿಂಗಳಲ್ಲಿ ಒಂದೇ ಶೆಡ್ಯೂಲ್ ನಲ್ಲಿ ಚಿತ್ರೀಕರಣ ಶುರು ಮಾಡಲಿದೆ. ಚಿತ್ರತಂಡ ಹಾಗೂ ಚಿತ್ರದ ಚಿತ್ರೀಕರಣ ಬೆಂಗಳೂರು, ಗದಗ, ಹಾಗೂ ಚಿಕ್ಕಮಗಳೂರು ಉಡುಪಿ ,ಕುಂದಾಪುರ ಭಾಗಗಳಲ್ಲಿ  ನಡೆಯಲಿದೆಯಂತೆ. ಈ ಚಿತ್ರಕ್ಕೆ ಕಾಶೀನಾಥ್ ಮಡಿವಾಳರ್ ರವರು ಕಥೆಯನ್ನು ಬರೆದು, ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ ಹಾಗೂ

ಸಾಮಾಜಿಕ ಕಳ-ಕಳಿಯ ಚಿತ್ರ ನಿರ್ದೇಶಿಸಿದ್ದ ಶ್ರೀನಿ ಹನುಮಂತರಾಜು  ಚಿತ್ರಕಥೆ-ನಿರ್ದೇಶನ ಮಾಡಲಿದ್ದು ಹೊಸ ಭರವಸೆ ಸೃಷ್ಟಿಸಲು ಹೋರಟಿದ್ದಾರೆ.

ಮುರಳೀಧರ್ ಕ್ಯಾಮೆರಾ ವರ್ಕ್ ಹಾಗೂ ಸಂಗೀತವನ್ನು *ಪ್ರಸನ್ನ ಕುಮಾರ್*  ಹಾಗೂ  ಹಿನ್ನೆಲೆ ಸಂಗೀತವನ್ನು *ಎಂ.ಎಸ್ ತ್ಯಾಗರಾಜರ* ವರು ಮಾಡಲಿದ್ದು ಚಿತ್ರ ಮುಂದಿನ ತಿಂಗಳು ಚಿತ್ರೀಕರಣಕ್ಕೆ ಹೋಗಲು ಸಕಲ ಸಿದ್ಧತೆ ಮಾಡಿಕೊಂಡಿದೆ.

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in arts »

ಜಾನಪದಕ್ಕೆ ಆದಿ ಅಂತ್ಯವಿಲ್ಲ, ಪದ್ಮಶ್ರೀ ಪುರಸ್ಕೃತ ಸೋಮಣ್ಣ
ಜಾನಪದಕ್ಕೆ ಆದಿ ಅಂತ್ಯವಿಲ್ಲ, ಪದ್ಮಶ್ರೀ ಪುರಸ್ಕೃತ ಸೋಮಣ್ಣ

ರಾಮನಗರ : ಫೆ 10: ಜಾನಪದಕ್ಕೆ ಆದಿ ಅಂತ್ಯವಿಲ್ಲ, ಇಂತಹ ಸಂದರ್ಭದಲ್ಲೇ ಜಾನಪದ ಜನ್ಮತಾಳಿತು. ಮುಂದೆ ಇಂತಹ ಸಮಯದಲ್ಲಿ ಅಂತ್ಯವಾಗುತ್ತದೆ ಎಂದು ಯಾರು ಹೇಳಲು

ಜಾನಪದ ಲೋಕದಲ್ಲಿ ಇಂದಿನಿಂದ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ: ಪ್ರೊ. ಬೋರಲಿಂಗಯ್ಯ
ಜಾನಪದ ಲೋಕದಲ್ಲಿ ಇಂದಿನಿಂದ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ: ಪ್ರೊ. ಬೋರಲಿಂಗಯ್ಯ

ರಾಮನಗರ : ಇಲ್ಲಿನ ಜಾನಪದ ಲೋಕದಲ್ಲಿ ಫೆ. 10 ಮತ್ತು 11 ರಂದು ಪ್ರತಿಷ್ಠಿತ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕರ

ಮಹಾಪೌರ್ಣಿಮೆ ನಾಟಕ ಬಡಜನರ ದನಿಯಾಗಿದೆ, ಪ್ರೊ ಹೊನ್ನು ಸಿದ್ದಾರ್ಥ
ಮಹಾಪೌರ್ಣಿಮೆ ನಾಟಕ ಬಡಜನರ ದನಿಯಾಗಿದೆ, ಪ್ರೊ ಹೊನ್ನು ಸಿದ್ದಾರ್ಥ

ಬೆಂಗಳೂರು: ರಂಗ ನಿರ್ದೇಶಕ ಶಿವಲಿಂಗಯ್ಯ ನವರು ನಿರ್ದೇಶಿಸಿದ ಮಹಾಪೌರ್ಣಿಮೆ ನಾಟಕವು ಬಡಜನರ ದನಿಯಾಗಿದೆ, ಒಂದಲ್ಲಾ ಹತ್ತು ಬಾರಿ ನೋಡಿದರೂ ಮತ್ತೊಮ್ಮೆ ನೋಡಬ

ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಚಾಲನೆ ನೀಡಿದ ತಹಶಿಲ್ದಾರ್ ನಾಗೇಶ್
ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಚಾಲನೆ ನೀಡಿದ ತಹಶಿಲ್ದಾರ್ ನಾಗೇಶ್

ರಾಮನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲ ಗ್ರಾಮ ಟ್ರೈಕ್ವೆಟ್ರಾ ಅಡ್ವೆಂಚರ್ ಕ್ಯಾಂಪ್ ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಗ

20 ಕೆಜಿಯ ಕಾಸ್ಟ್ಯೂಮ್ ಧರಿಸಿ ಲಂಬಾಣಿಯಾಗಿ  ಶುಭಾಪುಂಜಾ
20 ಕೆಜಿಯ ಕಾಸ್ಟ್ಯೂಮ್ ಧರಿಸಿ ಲಂಬಾಣಿಯಾಗಿ ಶುಭಾಪುಂಜಾ

ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹುದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ನಟಿ ಶುಭಾಪುಂಜಾ ಇದೀಗ ಲಂಬಾಣಿ ಹುಡುಗಿಯಾಗಿ ಮತ್ತೆ ತೆರೆ ಮೇಲೆ ರಂಜಿಸಲು ಸಿದ್ದರಾಗಿದ್ದಾರೆ.

ಕಲಾವಿದರಿಗೆ ಪ್ಯಾಕೇಜ್: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ
ಕಲಾವಿದರಿಗೆ ಪ್ಯಾಕೇಜ್: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ

ರಾಮನಗರ, 28ನೇ ಮೇ: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾಗಶಃ ಲಾಕಡೌನ್ ಜಾರಿಯಲ್ಲಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರು/ ಕಲಾತಂಡಗಳಿಗೆ ಪ್ರತಿ ಫಲಾನುಭವಿಗಳಿಗೆ ತಲಾ ರೂ.3,000/- ಗಳಂ

ಸಂಗೀತ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಡಿವೈಎಸ್ಪಿ ರಮೇಶ್
ಸಂಗೀತ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಡಿವೈಎಸ್ಪಿ ರಮೇಶ್

ಸಂಗೀತ ಎನ್ನುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಸಕಲ ಜೀವ ರಾಶಿಗಳಿಗೂ ಸಂಗೀತದ ಇಂಪು ಗೊತ್ತಿದೆ. ಪ್ರಾಣಿ ಪಕ್ಷಿಗಳೂ ಸಹ ಸಂಗೀತಕ್ಕೆ ತಲೆದೂಗುತ್ತವೆ. ಇತ್ತೀಚಿನ ಅಧ್ಯಯನದ ಪ್ರಕಾರ, ಸಾಕು ಪ್

ಐವತ್ತೈದು ವರ್ಷಗಳ ಸಾಧನೆಗೆ ನೂರಕ್ಕೂ ಹೆಚ್ಚು ಶಿಷ್ಯರನ್ನು ತಯಾರಿಗೆ ಸಿಕ್ಕ ಪ್ರಶಸ್ತಿ: ಬ್ರಹ್ಮಣಿಪುರ ತಮಟೆ ತಿಮ್ಮಯ್ಯಗೆ ಒಲಿದ ಪ್ರಶಸ್ತಿ
ಐವತ್ತೈದು ವರ್ಷಗಳ ಸಾಧನೆಗೆ ನೂರಕ್ಕೂ ಹೆಚ್ಚು ಶಿಷ್ಯರನ್ನು ತಯಾರಿಗೆ ಸಿಕ್ಕ ಪ್ರಶಸ್ತಿ: ಬ್ರಹ್ಮಣಿಪುರ ತಮಟೆ ತಿಮ್ಮಯ್ಯಗೆ ಒಲಿದ ಪ್ರಶಸ್ತಿ

ಚನ್ನಪಟ್ಟಣ:ಜ/05/21/ಮಂಗಳವಾರ. ಹದಿನೈದು ವರ್ಷದ ಬಾಲಕನಾಗಿದ್ದಾಗಲೇ ತಮಟೆ ವಾದನದಲ್ಲಿ ಸೈ ಎನಿಸಿಕೊಂಡು, ಕಳೆದ ಐವತ್ತೈದು ವರ್ಷಗಳಿಂದ ಮೈಸೂರು ದ

ಜಿಲ್ಲೆಯ ಕಲಾವಿದರಿಗೆ ಹಣ ನೀಡದೆ ವಾಪಸ್ಸು ಕಳುಹಿಸಿದ ಕಸಂ ಇಲಾಖೆ. ಕಲಾವಿದರ ನೋವಿನ ನುಡಿ
ಜಿಲ್ಲೆಯ ಕಲಾವಿದರಿಗೆ ಹಣ ನೀಡದೆ ವಾಪಸ್ಸು ಕಳುಹಿಸಿದ ಕಸಂ ಇಲಾಖೆ. ಕಲಾವಿದರ ನೋವಿನ ನುಡಿ

ರಾಮನಗರ:ಏ/೨೫/೨೦/ಶನಿವಾರ. ಕೊರೊನಾ (ಕೋವಿಡ್-೧೯) ವೈರಸ್ ದೇಶಕ್ಕೆ ಕಾಲಿಟ್ಟ ನಂತರ ದೇಶ ಮತ್ತು ರಾಜ್ಯದ ಆರ್ಥಿಕತೆಗೆ ಪೆಟ್ಟು ಬಿದ್ದಿರುವಂತೆಯೇ,

ಅಬ್ಬೂರು ರಾಜಶೇಖರ ರವರಿಗೆ ಎಚ್ ಕೆ ವೀರಣ್ಣಗೌಡ ಪ್ರಶಸ್ತಿ*
ಅಬ್ಬೂರು ರಾಜಶೇಖರ ರವರಿಗೆ ಎಚ್ ಕೆ ವೀರಣ್ಣಗೌಡ ಪ್ರಶಸ್ತಿ*

ರಾಮನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ಎಚ್.ಕೆ.ವೀರಣ್ಣಗೌಡ ಪ್ರಶಸ್ತಿಗೆ ಹಿರಿಯ ಪರ್ತಕರ್ತರು ಆರಂಭ ಪತ್ರಿಕೆಯ ಸಂಸ್ಥಾಪಕ ಸಂ

Top Stories »  

Top ↑