ಸಂಗೀತ ಸೌರಭ ಟ್ರಸ್ಟ್ ನಿಂದ ಇದೇ ತಿಂಗಳ 17 ರಂದು ರಸಮಂಜರಿ ಕಾರ್ಯಕ್ರಮ

ಚನ್ನಪಟ್ಟಣ: ಸಂಗೀತ ಸೌರಭ ವಾದ್ಯಗೋಷ್ಠಿ ವತಿಯಿಂದ ನಗರದ ಜೆಸಿ ರಸ್ತೆಯಲ್ಲಿರುವ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿನಿಲಯದ ಆವರಣದಲ್ಲಿ ಜು.17 ರ ಭಾನುವಾರ ಮಧ್ಯಾಹ್ನ 4 ಗಂಟೆಗೆ ಎಂದೂ ಮರೆಯದ ಕನ್ನಡ ಚಲನಚಿತ್ರಗಳ ಸಂಗೀತ ರಸಸಂಜೆ ಹಾಗೂ ಕಲಾ ಪ್ರೋತ್ಸಾಹಕರಿಗೆ ಗೌರವಾರ್ಪಣೆ ಆಯೋಜಿಸಲಾಗಿದೆ ಎಂದು ಗಾಯಕ ಹಾಗೂ ಸಂಘಟಕರಾದ ಡಾ ರಾ.ಬಿ.ನಾಗರಾಜ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ಮೂರು ದಶಕಗಳಿಂದ ವಾದ್ಯಗೋಷ್ಠಿ ರಂಗದಲ್ಲಿ ಗಾಯಕರಾಗಿ ತಂಡ ಕಟ್ಟಿಕೊಂಡು ರಾಜ್ಯಾದ್ಯಂತ ಸುಮಾರು ಐದು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಲಾಗಿದೆ. ವಾದ್ಯಗೋಷ್ಠಿ ರಂಗದಲ್ಲಿನ ತಮ್ಮ ಮೂರು ದಶಕಗಳ ಸಾರ್ಥಕ ಕಲಾ ಸೇವೆಯ ಸವಿ ನೆನಪಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಗೀತ ಸೌರಭ ವಾದ್ಯಗೋಷ್ಠಿಗೆ ವೇದಿಕೆಗಳನ್ನು ಕೊಟ್ಟಂತಹ ಕಲಾ ಪೋಷಕರಿಗೆ ಗೌರವಾರ್ಪಣೆ ಹಾಗೂ ಎಂದೂ ಮರೆಯದ ಚಲನಚಿತ್ರ ಗೀತೆಗಳ ಸಂಗೀತ ಸಂಜೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷರಾದ ಸಿ.ಕೆ ರಾಮೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ಎಲ್. ರಮೇಶ್ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಂಸ್ಕೃತಿಕ ಚಿಂತಕ ಹಾಗೂ ಕನ್ನಡಪರ ಹೋರಾಟಗಾರರಾದ ಗೋವಿಂದಹಳ್ಳಿ ಕೃಷ್ಣೇಗೌಡರವರು ಕಲಾ ಪೋಷಕರನ್ನು ಸನ್ಮಾನಿಸಲಿದ್ದಾರೆ. ಸಮಾಜ ಸೇವಕರು, ಜೆ.ಡಿ.ಎಸ್. ಮುಖಂಡರಾದ ಗೋವಿಂದಹಳ್ಳಿ ನಾಗರಾಜು, ಐ.ಟಿ.ಐ ಕಾಲೇಜುಗಳ ಸಂಘದ ರಾಜ್ಯಾಧ್ಯಕ್ಷರಾದ ಮಂಜುನಾಥ್, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂ ರಂಗಭೂಮಿ ಕಲಾವಿದರಾದ ಕೂಡ್ಲೂರು ವೆಂಕಟೇಶ್, ಪದ್ಮಭೂಷಣ ಡಾ.ರಾಜ್ ಕಲಾಬಳಗದ ಪ್ರಧಾನ ಕಾರ್ಯದರ್ಶಿ, ರಂಗಭೂಮಿ ಕಲಾವಿದರಾದ ತಿಮ್ಮರಾಜು, ಚಲನಚಿತ್ರ ಹಾಗೂ ಕಿರುತೆರೆ ಕಲಾವಿದರಾದ ಮಂಡ್ಯ ಸತ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ತಮಗೆ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ ಕೇಬಲ್ ನಾಗರಾಜು, ನೀಲಕಂಠನಳ್ಳಿ ಜಿ.ಗುರುಮೂರ್ತಿ, ಮಂಗಳವಾರ ಪೇಟೆಯ ದಿನೇಶ್, ಎಂ.ಕೆ.ಬಾಬು, ಚೇತನ್ ಕೀಕರ್, ಪಿ.ನಾಗೇಂದ್ರ, ಬೇವೂರು ಯೋಗೇಶ್ ಗೌಡ, ತಿಟ್ಟಮಾರನಹಹಳ್ಳಿ ಅಭಿಲಾಷ್, ಹೊಂಗನೂರು ರಾಧಾಕೃಷ್ಣ ರಾಜೇಅರಸು, ಮಾಳಗಾಳು ಅಂಕಯ್ಯ, ರವರುಗಳನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಗುತ್ತಿದೆ. ಖ್ಯಾತ ಗಾಯಕ ಹಾಗೂ ಗಾಯಕಿಯರು ಕನ್ನಡದ ಎಂದೂ ಮರೆಯದ ಚಲನಚಿತ್ರ ಗೀತೆಗಳನ್ನು ಹಾಡಿ ರಂಜಿಸಲಿದ್ದಾರೆ. ಈ ಸಂಗೀತ ಸುಧೆಯನ್ನು ತಾಲೂಕಿನ ಜನತೆ ಆಸ್ವಾದಿಸಬೇಕು ಎಂದು ರಾ.ಬಿ.ನಾಗರಾಜು ಮನವಿ ಮಾಡಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:984585619.
Recent news in arts »

ತಿಂಗಳಿಂದ ಖಾಲಿ ಉಳಿದಿರುವ ಜಾನಪದ ಪರಿಷತ್ ಅಧ್ಯಕ್ಷ ಸ್ಥಾನ* ಐಎಎಸ್ ಅಧಿಕಾರಿಗಳು ಬೇಡ ಜನಪದ ಹಿನ್ನೆಲೆಯುಳ್ಳವರ ನೇಮಕಕ್ಕೆ ಪಟ್ಟು
ರಾಮನಗರ: ರಾಜ್ಯ ಮತ್ತು ದೇಶದ ಜಾನಪದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ತನ್ನ ಜೀವನವನ್ನೇ ಮುಡಿಪಾಗಿಟ್ಟು ಕರ್ನಾಟಕ ಜಾನಪದ ಪರಿಷತ್ತು ಮತ್ತ

ಕಲೆ ಉಳಿಯಬೇಕಾದರೆ ಕಲೆಗಾರ ಉಳಿಯಬೇಕು ಅಬ್ಬಿಗೆರೆ ರಾಜಣ್ಣ
ಚನ್ನಪಟ್ಟಣ: ಕಣ್ಮರೆಯಾಗುತ್ತಿರುವ ಜನಪದ ಕಲೆ.
ರಂಗಭೂಮಿ ಕಲೆ. ಸಂಸ್ಕೃತಿ ಸೇರಿದಂತೆ ವಿವಿಧ ಜನಪರ ಕಲೆಗಳ ತವರು ಬೊಂಬೆನಾಡ

ಸಂಗೀತ ಸೌರಭ ಟ್ರಸ್ಟ್ ನಿಂದ ಇದೇ ತಿಂಗಳ 17 ರಂದು ರಸಮಂಜರಿ ಕಾರ್ಯಕ್ರಮ
ಚನ್ನಪಟ್ಟಣ: ಸಂಗೀತ ಸೌರಭ ವಾದ್ಯಗೋಷ್ಠಿ ವತಿಯಿಂದ ನಗರದ ಜೆಸಿ ರಸ್ತೆಯಲ್ಲಿರುವ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿನಿಲಯದ ಆವರಣದಲ್ಲಿ ಜು.17 ರ

ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಚಾಲನೆ ನೀಡಿದ ತಹಶಿಲ್ದಾರ್ ನಾಗೇಶ್
ರಾಮನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲ ಗ್ರಾಮ ಟ್ರೈಕ್ವೆಟ್ರಾ ಅಡ್ವೆಂಚರ್ ಕ್ಯಾಂಪ್ ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಗ

20 ಕೆಜಿಯ ಕಾಸ್ಟ್ಯೂಮ್ ಧರಿಸಿ ಲಂಬಾಣಿಯಾಗಿ ಶುಭಾಪುಂಜಾ
ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹುದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ನಟಿ ಶುಭಾಪುಂಜಾ ಇದೀಗ ಲಂಬಾಣಿ ಹುಡುಗಿಯಾಗಿ ಮತ್ತೆ ತೆರೆ ಮೇಲೆ ರಂಜಿಸಲು ಸಿದ್ದರಾಗಿದ್ದಾರೆ.

ಕಲಾವಿದರಿಗೆ ಪ್ಯಾಕೇಜ್: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ
ರಾಮನಗರ, 28ನೇ ಮೇ: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾಗಶಃ ಲಾಕಡೌನ್ ಜಾರಿಯಲ್ಲಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರು/ ಕಲಾತಂಡಗಳಿಗೆ ಪ್ರತಿ ಫಲಾನುಭವಿಗಳಿಗೆ ತಲಾ ರೂ.3,000/- ಗಳಂ

ಸಂಗೀತ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಡಿವೈಎಸ್ಪಿ ರಮೇಶ್
ಸಂಗೀತ ಎನ್ನುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಸಕಲ ಜೀವ ರಾಶಿಗಳಿಗೂ ಸಂಗೀತದ ಇಂಪು ಗೊತ್ತಿದೆ. ಪ್ರಾಣಿ ಪಕ್ಷಿಗಳೂ ಸಹ ಸಂಗೀತಕ್ಕೆ ತಲೆದೂಗುತ್ತವೆ. ಇತ್ತೀಚಿನ ಅಧ್ಯಯನದ ಪ್ರಕಾರ, ಸಾಕು ಪ್

ಐವತ್ತೈದು ವರ್ಷಗಳ ಸಾಧನೆಗೆ ನೂರಕ್ಕೂ ಹೆಚ್ಚು ಶಿಷ್ಯರನ್ನು ತಯಾರಿಗೆ ಸಿಕ್ಕ ಪ್ರಶಸ್ತಿ: ಬ್ರಹ್ಮಣಿಪುರ ತಮಟೆ ತಿಮ್ಮಯ್ಯಗೆ ಒಲಿದ ಪ್ರಶಸ್ತಿ
ಚನ್ನಪಟ್ಟಣ:ಜ/05/21/ಮಂಗಳವಾರ. ಹದಿನೈದು ವರ್ಷದ ಬಾಲಕನಾಗಿದ್ದಾಗಲೇ ತಮಟೆ ವಾದನದಲ್ಲಿ ಸೈ ಎನಿಸಿಕೊಂಡು, ಕಳೆದ ಐವತ್ತೈದು ವರ್ಷಗಳಿಂದ ಮೈಸೂರು ದ

ಜಿಲ್ಲೆಯ ಕಲಾವಿದರಿಗೆ ಹಣ ನೀಡದೆ ವಾಪಸ್ಸು ಕಳುಹಿಸಿದ ಕಸಂ ಇಲಾಖೆ. ಕಲಾವಿದರ ನೋವಿನ ನುಡಿ
ರಾಮನಗರ:ಏ/೨೫/೨೦/ಶನಿವಾರ. ಕೊರೊನಾ (ಕೋವಿಡ್-೧೯) ವೈರಸ್ ದೇಶಕ್ಕೆ ಕಾಲಿಟ್ಟ ನಂತರ ದೇಶ ಮತ್ತು ರಾಜ್ಯದ ಆರ್ಥಿಕತೆಗೆ ಪೆಟ್ಟು ಬಿದ್ದಿರುವಂತೆಯೇ,

ಅಬ್ಬೂರು ರಾಜಶೇಖರ ರವರಿಗೆ ಎಚ್ ಕೆ ವೀರಣ್ಣಗೌಡ ಪ್ರಶಸ್ತಿ*
ರಾಮನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ಎಚ್.ಕೆ.ವೀರಣ್ಣಗೌಡ ಪ್ರಶಸ್ತಿಗೆ ಹಿರಿಯ ಪರ್ತಕರ್ತರು ಆರಂಭ ಪತ್ರಿಕೆಯ ಸಂಸ್ಥಾಪಕ ಸಂ
ಪ್ರತಿಕ್ರಿಯೆಗಳು