ಕಲೆ ಉಳಿಯಬೇಕಾದರೆ ಕಲೆಗಾರ ಉಳಿಯಬೇಕು ಅಬ್ಬಿಗೆರೆ ರಾಜಣ್ಣ

ಚನ್ನಪಟ್ಟಣ: ಕಣ್ಮರೆಯಾಗುತ್ತಿರುವ ಜನಪದ ಕಲೆ.
ರಂಗಭೂಮಿ ಕಲೆ. ಸಂಸ್ಕೃತಿ ಸೇರಿದಂತೆ ವಿವಿಧ ಜನಪರ ಕಲೆಗಳ ತವರು ಬೊಂಬೆನಾಡು. ಜಾನಪದ ಕಲೆಗಳು ಅಳಿಯದೆ ಉಳಿಯಬೇಕಾದರೆ ಕಲಾವಿದ ಮೊದಲು ಉಳಿಯಬೇಕು. ಅವುಗಳನ್ನು ಪೋಷಿಸಲು ಸಂಘ ಸಂಸ್ಥೆಗಳು ನಿರಂತರ ಶ್ರಮಿಸುತ್ತಿದ್ದು. ಇಂತಹ ಕಾರ್ಯಕ್ರಮಗಳು ಮತ್ತಷ್ಟು ಅಯೋಜಿಸಲು ತಾಲ್ಲೂಕಿನ ಕಲಾವಿದರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಸಾರ್ವಜನಿಕರು ಪ್ರೋತ್ಸಾಹಿಸಲು ಪಣತೊಡಬೇಕೆಂದು ಸಮಾಜ ಸೇವಕ ಅಬ್ಬಿಗೆರೆ ರಾಜಣ್ಣ ಅಭಿಪ್ರಾಯಪಟ್ಟರು.
ತಾಲೂಕಿನ ನೀಲಕಂಠನಹಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಪ್ರಜ್ಞಾ ಸಾಮಾಜಿಕ. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಏರ್ಪಡಿಸಿದ್ದ “ರಾಜ್ಯ ಮಟ್ಟದ ಜನಪದ ಕಲಾ
ಮೇಳ 2022” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವಕರು ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಠಿಯಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ
ಜೀವನದ ಬದುಕಿಗೆ ಕಲಿಯಬೇಕಾದ ಪಾಠಗಳನ್ನು. ಜನಪದ ಸಂಸ್ಕೃತಿಯ ಮೂಲಕ ಅರಿವು ಮೂಡಿಸಲು ಮುಂದಾಗಬೇಕಾಗಿದೆ
ಎಂದರು. ಹಿಂದಿನ ಸಮಾಜದಲ್ಲಿ ಧರ್ಮ. ಧರ್ಮಗಳು. ಸೋದರತ್ವ, ಹಾಗೂ ಸಂಬಂದಗಳ ಹೊಂದಾಣಿಕೆ ಹಾಗೂ ಯಾವ ಅಹಂ ಇಲ್ಲದೆ
ಬೆಸೆಯುತ್ತಿದ್ದ ಸಂಭಂದಗಳು ಎಂದರೆ ಅದು ನಮ್ಮಲ್ಲಿನ ಸಂಸ್ಕೃತಿ. ಪದ ಪದಗಳ ಮೂಲಕ ನುಡಿಯುತ್ತಿದ್ದ ನುಡಿಗಳು ಎಂದರೆ
ತಪ್ಪಾಗಲಾರದು. ಆದರೆ ಇತ್ತೀಚಿನ ವರ್ಷಗಳಿಂದ ಬೆಸೆಯುತ್ತಿದ್ದ ಸಂಭಂದಗಳು ಭಿನ್ನಾಭಿಪ್ರಾಯಗಳಿಂದ ದೂರವಾಗುತ್ತಿರುವ
ಜತೆಯಲ್ಲಿ ಧರ್ಮ ಧರ್ಮಗಳ ನಡುವೆಯು ಸಹ ವೈರುದ್ಯ ಕಾಣುಸುತ್ತಿವೆ ಹಾಗಾಗಿ ಸಂಭಂದಗಳ ಉಳಿವಿಗಾಗಿ ಇಂತಹ ಕಾರ್ಯಕ್ರಮಗಳ ಮೂಲಕ ನೈಜ ಕಲಾವಿದರನ್ನು ಸರ್ವ ಧರ್ಮದಲ್ಲು ಗುರುತಿಸಿ ಸಹಕಾರ ನೀಡಬೇಕೆಂದು ತಿಳಿಸಿದರು.
ಕಲಾ ಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ
ರಂಗಭೂಮಿ ಕಲಾವಿದ ಕುಂತೂರುದೊಡ್ಡಿ ಪುಟ್ಟರಾಜು ಮಾತನಾಡಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ನೈಜ
ಕಲಾವಿದರನ್ನು ಗುರುತಿಸಿ ಅನುದಾನ ಬಿಡುಗಡೆ ಮಾಡದೆ ಸಂಘ-ಸಂಸ್ಥೆಗಳ ಹೆಸರೇಳಿಕೊಂಡು ಮನೆಯಲ್ಲಿ ಸೇರಿರುವವರಿಗೆ
ವರ್ಷಕ್ಕೋಮ್ಮೆ 3ರಿಂದ 4ಲಕ್ಷ ರೂ ಅನುಧಾನವನ್ನು ಬಿಡುಗಡೆ ಮಾಡಿ ಪ್ರತಿ ನಿತ್ಯ ತಮ್ಮಲ್ಲಿರುವ ಕಲೆಗಳನ್ನು ಜನತೆಗೆ ಮುಂದೆ
ಪ್ರದರ್ಶನ ಮಾಡಿ ತಮ್ಮ ಜೀವನಕ್ಕಾಗಿ ಇಲಾಖೆಯ ಮೂಲಕ ಸಿಗುವ ಅನುದಾನಕ್ಕಾಗಿ ಅರ್ಜಿ ಸಲ್ಲಿಸಿದರೆ ಅಂತಹ ಕಲಾವಿದರಿಗೆ ಕೇವಲ 20
ಸಾವಿರದಿಂದ 10ಸಾವಿರ ರೂ ಹಣವನ್ನು ಬಿಡುಗಡೆ ಮಾಡುತ್ತಾರೆ. ಅದರಲ್ಲೂ 3 ಇಲ್ಲವೇ 4 ವರ್ಷವಾದ ನಂತರ ಜತೆಯಲ್ಲಿ ಸಾವನ್ನಪ್ಪಿರುವ
ಟ್ರಸ್ಟ್ನ ಅಧ್ಯಕ್ಷರು. ಕಾರ್ಯದರ್ಶಿಗಳ ಹೆಸರಿನಲ್ಲಿ ಹಾಕುವ ಅರ್ಜಿಗಳನ್ನು ಸ್ವೀಕರಿಸಿ ಅನುದಾನ ಬಿಡುಗಡೆ ಮಾಡುತ್ತಾರೆ ಎಂದು
ವ್ಯಂಗ್ಯವಾಗಿ ನುಡಿಯುವ ಜೊತೆಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಪತ್ರಕರ್ತರಲ್ಲಿ ಮನವಿ ಮಾತನಾಡಿದ ಅವರು ಕಾರ್ಮಿಕರ ಇಲಾಖೆಯಲ್ಲಿ ಕಲಾವಿದರ ಪಟ್ಟಿಯನ್ನು ಕಾರ್ಮಿಕರ
ಜತೆಯಲ್ಲಿ ಸೇರಿಸಲಿ ಕಾರ್ಮಿಕರಿಗೆ ದಿನ ನಿತ್ಯ ದಿನಗೂಲಿಯ ಕೆಲಸವಿದೆ. ಆದರೆ ನೈಜ ಕಲಾವಿದರು ಪ್ರತಿ ವರ್ಷವು ಒಂದಲ್ಲಾ ಒಂದು ಕಲೆಯನ್ನು ಪ್ರದರ್ಶನ ಮಾಡಿದರೂ ಸಹ ಜೀವನದ ಹಣವನ್ನು
ಪಡೆಯಲು ಆಗುತ್ತಿಲ್ಲ. ಅದರಲ್ಲು ನಾನು ತಮಟೆ, ಪೂಜಾ.ಕುಣಿತ. ಗಾರುಡಿ ಗೊಂಬೆ ಸೇರಿದಂತೆ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರೂ ಸಹ ಇಲ್ಲಿಯವರೆಗೂ ಸೂಕ್ತವಾದ
ಅನುದಾನವನ್ನು ಪಡೆಯಲಿಲ್ಲ. ಹಾಗಾಗಿ ಪತ್ರಕರ್ತರು ನೈಜ ಕಲಾವಿದರನ್ನು ಗುರುತಿಸಿ ಇಲಾಖೆಯ ಕಣ್ಣು ತೆರೆಸಿ ಅನುದಾನವನ್ನು
ಬಿಡುಗಡೆ ಮಾಡಿಸಲು ಸಹಕರಿಸಬೇಕೆಂದು ನೋವಿನ ನುಡಿಗಳನ್ನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾವಿದರ ಕುಟುಂಬದ ನೆರವಿಗಾಗಿ 5ಲಕ್ಷ ರೂ ಹಣವನ್ನು ಮೀಸಲಿಟ್ಟು ಕುಂದು-ಕೊರತೆ ಕಷ್ಠಗಳಿಗೆ ಒಳಗಾಗುತ್ತಿರುವ ಕಲಾವಿದರ ಕುಟುಂಬಕ್ಕೆ ಜೀವನ
ನಿರ್ವಹಣೆಗಾಗಿ ನೀಡುವಲ್ಲಿ ಮುಂದಾಗಬೇಕೆಂದು ಮನವಿ ಮಾಡಿದ ಅವರು ಅರ್ಜಿ ಸಲ್ಲಿಸುವವರನ್ನು ಗುರುತಿಸಿ ಅವರಿಗೆ ಕಲ್ಪಿಸಬೇಕಾದ
ಅನುದಾನವನ್ನು, ತೊಡಕುಗಳು ಬಿಟ್ಟು ಅವರಿಗೆ ಕಿವಿ ಮಾತು ಹೇಳುವ ಮೂಲಕ ಬಿಡುಗಡೆ ಮಾಡಿ ಸಹಕರಿಸಬೇಕೆಂದು ತಿಳಿಸಿದರು.
ರೇಷ್ಮೆ ನಾಡಿನ ಮಿಮಿಕ್ರಿ. ಧ್ವನಿ ಅನುಕರುಣೆ. ಹಾಗೂ ಚಿತ್ರ ಗೀತೆಗಳ ಮೂಲಕ ಮನರಂಜಿಸಿದ ಜಗದೀಶ್, ವಿಜಯಶಂಕರ್, ಚಂದ್ರಶೇಖರ್, ಶ್ರೀನಿವಾಸ್, ಹಾಗೂ ಜಾನಪದ ಹಾಡುಗಾರ
ಕುಂತೂರುದೊಡ್ಡಿ ಆನಂದ್ ಕಲಾವಿದರು. ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರ ಒತ್ತಾಯದ ಮೇರೆಗೆ 5-6 ಬಾರಿ ಕಲಾ
ಪ್ರದರ್ಶನ ಮಾಡಿದರು. ಟ್ರಸ್ಟ್ ಕಾರ್ಯದರ್ಶಿ ನೀಲಸಂದ್ರ ಸಿದ್ದರಾಮು ಪ್ರಾಸ್ತಾವಿಕವಾಗಿ ಮಾತನಾಡಿದರು. ತಾ.ಪಂ.ಮಾಜಿ ಸದಸ್ಯ ಮತ್ತೀಕೆರೆ ಹನುಮಂತಯ್ಯ, ಶಿಕ್ಷಕ ಪಿ.ವಿಷಕಂಠಯ್ಯ, ಗ್ರಾಪಂ.ಸದಸ್ಯ ಅಣ್ಣಯ್ಯ, ಅಬ್ಬೂರು ಅಂದಾನಯ್ಯ, ರಾಂಪುರ ಪ್ರದೀಪ್, ಅಪ್ಪಗೆರೆ
ಶ್ರೀನಿವಾಸ್, ಅರುಣ್, ಅಪ್ಪಗೆರೆ ಮಂಜುನಾಥ್, ಚಿಕ್ಕೆನಹಳ್ಳಿ ಶಿವರಾಮು ಸೇರಿದಂತೆ ಹಲವಾರು ಮಂದಿ ಗಣ್ಯರು ವೇದಿಕೆಯಲ್ಲಿ
ಉಪಸ್ಥಿತರಿದ್ದರು.
ಡಾ.ರವಿಕುಮಾರ್ ಪ್ರಾರ್ಥಿಸಿದರು. ಹೆಚ್.ಎಸ್. ಸವೋತ್ತಮ್, ಸ್ವಾಗತಿಸಿದರೆ ಡಾ|| ಜಯಸಿಂಹ, ನಿರೂಪಿಸಿದರು. ಶಿವಕುಮಾರ್, ಹರೀಶ್ಬಾಬು,
ಪ್ರಕಾಶ್ ಬಾಣಂತಹಳ್ಳಿ, ಸಿದ್ದರಾಮು ಕೂಡ್ಲೂರು, ಮುಂತಾದವರು ಗಾಯನ ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಹತ್ತಾರು ಸೋಬಾನೆ ಪದಗಳು, ಜನಪದ, ರಂಗಗೀತೆ ಗಾಯನವನ್ನು ನಡೆಸಿಕೊಟ್ಟರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in arts »

ವನಂ ಶಿವರಾಂ ರವರಿಗೆ ಒಲಿದ ಜಾನಪದ ತಜ್ಞ ಪ್ರಶಸ್ತಿ
ಕನ್ನಡ ಜಾನಪದದ ಮೊದಲ ಪ್ರಾಧ್ಯಾಪಕ ಜೀಶಂಪ ಅವರ ಶಿಷ್ಯರಾಗಿ, ನಾಡೋಜ ಜಾನಪದ ಪರಿಷತ್ತಿನ ರೂವಾರಿ, ಜಾನಪದ ಕಲಾವಿದರ ಆಪ್ತಬಂಧು ಹೆಚ್ ಎಲ್ ನಾಗೇಗೌಡರ ಗರಡಿ ಜಾನಪದ ಲೋಕದಲ್ಲಿ ದುಡಿದು ದಣಿವರಿಯದೆ ಜಾನಪದ

ಕರ್ನಾಟಕ ಜಾನಪದ ಪರಿಷತ್ತು ಮತ್ತು ಜಾನಪದ ಲೋಕ ದ ನೂತನ ಅಧ್ಯಕ್ಷರಾಗಿ ಡಾ ಹಿ ಶಿ ರಾಮಚಂದ್ರೇಗೌಡ
ರಾಮನಗರ: ಹಲವಾರು ದಿನಗಳಿಂದ ವಿವಾದಕ್ಕೀಡಾಗಿ, ನೆನೆಗುದಿಗೆ ಬಿದ್ದಿದ್ದ ಕರ್ನಾಟಕ ಜಾನಪದ ಪರಿಷತ್ತು ಮತ್ತು ಜಾನಪದ ಲೋಕದ ಅಧ್ಯಕ್ಷ ಸ್ಥಾನಕ್ಕೆ ಬೆಂಗಳೂರಿನ

ತಿಂಗಳಿಂದ ಖಾಲಿ ಉಳಿದಿರುವ ಜಾನಪದ ಪರಿಷತ್ ಅಧ್ಯಕ್ಷ ಸ್ಥಾನ* ಐಎಎಸ್ ಅಧಿಕಾರಿಗಳು ಬೇಡ ಜನಪದ ಹಿನ್ನೆಲೆಯುಳ್ಳವರ ನೇಮಕಕ್ಕೆ ಪಟ್ಟು
ರಾಮನಗರ: ರಾಜ್ಯ ಮತ್ತು ದೇಶದ ಜಾನಪದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ತನ್ನ ಜೀವನವನ್ನೇ ಮುಡಿಪಾಗಿಟ್ಟು ಕರ್ನಾಟಕ ಜಾನಪದ ಪರಿಷತ್ತು ಮತ್ತ

ಕಲೆ ಉಳಿಯಬೇಕಾದರೆ ಕಲೆಗಾರ ಉಳಿಯಬೇಕು ಅಬ್ಬಿಗೆರೆ ರಾಜಣ್ಣ
ಚನ್ನಪಟ್ಟಣ: ಕಣ್ಮರೆಯಾಗುತ್ತಿರುವ ಜನಪದ ಕಲೆ.
ರಂಗಭೂಮಿ ಕಲೆ. ಸಂಸ್ಕೃತಿ ಸೇರಿದಂತೆ ವಿವಿಧ ಜನಪರ ಕಲೆಗಳ ತವರು ಬೊಂಬೆನಾಡ

ಸಂಗೀತ ಸೌರಭ ಟ್ರಸ್ಟ್ ನಿಂದ ಇದೇ ತಿಂಗಳ 17 ರಂದು ರಸಮಂಜರಿ ಕಾರ್ಯಕ್ರಮ
ಚನ್ನಪಟ್ಟಣ: ಸಂಗೀತ ಸೌರಭ ವಾದ್ಯಗೋಷ್ಠಿ ವತಿಯಿಂದ ನಗರದ ಜೆಸಿ ರಸ್ತೆಯಲ್ಲಿರುವ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿನಿಲಯದ ಆವರಣದಲ್ಲಿ ಜು.17 ರ

ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಚಾಲನೆ ನೀಡಿದ ತಹಶಿಲ್ದಾರ್ ನಾಗೇಶ್
ರಾಮನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲ ಗ್ರಾಮ ಟ್ರೈಕ್ವೆಟ್ರಾ ಅಡ್ವೆಂಚರ್ ಕ್ಯಾಂಪ್ ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಗ

20 ಕೆಜಿಯ ಕಾಸ್ಟ್ಯೂಮ್ ಧರಿಸಿ ಲಂಬಾಣಿಯಾಗಿ ಶುಭಾಪುಂಜಾ
ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹುದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ನಟಿ ಶುಭಾಪುಂಜಾ ಇದೀಗ ಲಂಬಾಣಿ ಹುಡುಗಿಯಾಗಿ ಮತ್ತೆ ತೆರೆ ಮೇಲೆ ರಂಜಿಸಲು ಸಿದ್ದರಾಗಿದ್ದಾರೆ.

ಕಲಾವಿದರಿಗೆ ಪ್ಯಾಕೇಜ್: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ
ರಾಮನಗರ, 28ನೇ ಮೇ: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾಗಶಃ ಲಾಕಡೌನ್ ಜಾರಿಯಲ್ಲಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರು/ ಕಲಾತಂಡಗಳಿಗೆ ಪ್ರತಿ ಫಲಾನುಭವಿಗಳಿಗೆ ತಲಾ ರೂ.3,000/- ಗಳಂ

ಸಂಗೀತ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಡಿವೈಎಸ್ಪಿ ರಮೇಶ್
ಸಂಗೀತ ಎನ್ನುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಸಕಲ ಜೀವ ರಾಶಿಗಳಿಗೂ ಸಂಗೀತದ ಇಂಪು ಗೊತ್ತಿದೆ. ಪ್ರಾಣಿ ಪಕ್ಷಿಗಳೂ ಸಹ ಸಂಗೀತಕ್ಕೆ ತಲೆದೂಗುತ್ತವೆ. ಇತ್ತೀಚಿನ ಅಧ್ಯಯನದ ಪ್ರಕಾರ, ಸಾಕು ಪ್

ಐವತ್ತೈದು ವರ್ಷಗಳ ಸಾಧನೆಗೆ ನೂರಕ್ಕೂ ಹೆಚ್ಚು ಶಿಷ್ಯರನ್ನು ತಯಾರಿಗೆ ಸಿಕ್ಕ ಪ್ರಶಸ್ತಿ: ಬ್ರಹ್ಮಣಿಪುರ ತಮಟೆ ತಿಮ್ಮಯ್ಯಗೆ ಒಲಿದ ಪ್ರಶಸ್ತಿ
ಚನ್ನಪಟ್ಟಣ:ಜ/05/21/ಮಂಗಳವಾರ. ಹದಿನೈದು ವರ್ಷದ ಬಾಲಕನಾಗಿದ್ದಾಗಲೇ ತಮಟೆ ವಾದನದಲ್ಲಿ ಸೈ ಎನಿಸಿಕೊಂಡು, ಕಳೆದ ಐವತ್ತೈದು ವರ್ಷಗಳಿಂದ ಮೈಸೂರು ದ
ಪ್ರತಿಕ್ರಿಯೆಗಳು