ತಿಂಗಳಿಂದ ಖಾಲಿ ಉಳಿದಿರುವ ಜಾನಪದ ಪರಿಷತ್ ಅಧ್ಯಕ್ಷ ಸ್ಥಾನ* ಐಎಎಸ್ ಅಧಿಕಾರಿಗಳು ಬೇಡ ಜನಪದ ಹಿನ್ನೆಲೆಯುಳ್ಳವರ ನೇಮಕಕ್ಕೆ ಪಟ್ಟು

ರಾಮನಗರ: ರಾಜ್ಯ ಮತ್ತು ದೇಶದ ಜಾನಪದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ತನ್ನ ಜೀವನವನ್ನೇ ಮುಡಿಪಾಗಿಟ್ಟು ಕರ್ನಾಟಕ ಜಾನಪದ ಪರಿಷತ್ತು ಮತ್ತು ಜಾನಪದ ಲೋಕವನ್ನು ನಾಡೋಜ ಹೆಚ್ ಎಲ್ ನಾಗೇಗೌಡರು ಕಟ್ಟಿ ಬೆಳೆಸಿದ್ದು, ಆ ಸಂಸ್ಥೆಗೆ ಇಂದು ಸೂಕ್ತ ಸೂತ್ರಧಾರಿ ಇಲ್ಲದಿರುವುದರಿಂದ ಸಮರ್ಥ ಸಾರಥಿಗಾಗಿ ಹುಡುಕಾಟ ನಡೆಯುತ್ತಿದೆ.
ಜನಪದ ಕ್ಷೇತ್ರದ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕರ್ನಾಟಕ ಜಾನಪದ ಪರಿಷತ್ತಿನ ನೂತನ ಅಧ್ಯಕ್ಷರ ಆಯ್ಕೆ ಕಗ್ಗಂಟಾಗಿದೆ. ಸರಿಸುಮಾರು ಮೂರು ದಶಕಗಳ ಇತಿಹಾಸ ಹೊಂದಿರುವ ನಾಡೋಜ ಹೆಚ್. ಎಲ್. ನಾಗೇಗೌಡರ ಕನಸಿನ ಕೂಸು ಕರ್ನಾಟಕ ಜಾನಪದ ಪರಿಷತ್ತು ಹಾಗೂ ರಾಮನಗರ ಬಳಿಯ ಜಾನಪದ ಲೋಕ. ಇದರ ಅಧ್ಯಕ್ಷರಾಗಿದ್ದ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಸಮರ್ಥ ಸಾರಥಿಯ ಹುಡುಕಾಟ ನಡೆದಿದೆ. ಆದರೆ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಗೊಂದಲ ಉಂಟಾಗಿ, ನಿವೃತ್ತ ಐಎಎಸ್ ಅಧಿಕಾರಿ ಅಥವಾ ಜಾನಪದ ಹಿನ್ನೆಲೆಯುಳ್ಳ ತಜ್ಞರು ಬೇಕು ಎಂಬ ಗೊಂದಲದಲ್ಲಿ ಒಂದು ತಿಂಗಳಿಂದ ಅಧ್ಯಕ್ಷ ಸ್ಥಾನ ಖಾಲಿಯೇ ಉಳಿದಿದೆ.
*ಐಎಎಸ್'ಗೆ ವಿರೋಧ*
ಮೊದಲಿಗೆ ಹೆಚ್ ಎಲ್ ನಾಗೇಗೌಡರು ನಂತರ ನಾಡೋಜ ಜಿ ನಾರಾಯಣ ರವರ ನಂತರ ಟಿ ತಿಮ್ಮೇಗೌಡರು ದೀರ್ಘವಾಧಿ ಅಧ್ಯಕ್ಷರಾಗಿದ್ದರು. ಲಭ್ಯ ಮಾಹಿತಿ ಪ್ರಕಾರ ತಿಮ್ಮೇಗೌಡರ ರಾಜೀನಾಮೆ ನಂತರ ಅಧ್ಯಕ್ಷ ಸ್ಥಾನವನ್ನು ಮತ್ತೊಬ್ಬ ಐಎಎಸ್ ಅಧಿಕಾರಿಯೇ ತುಂಬಬೇಕು ಎನ್ನುವ ಇರಾದೆಯಿಂದ ಈ ಸ್ಥಾನಕ್ಕೆ ನಿವೃತ್ತ ಅಧಿಕಾರಿಗಳಾದ ಶಂಕರಲಿಂಗೇಗೌಡ, ವಿಠ್ಠಲಮೂರ್ತಿ ಅವರನ್ನು ತರುವ ನಿಟ್ಟಿನಲ್ಲಿ ಪ್ರಯತ್ನ ನಡೆದು ಯಶಸ್ವಿ ಆಗಲಿಲ್ಲ ಎನ್ನಲಾಗಿದೆ. ಆದರೆ, ಇದಕ್ಕೆ ಜಾನಪದ ಹಿನ್ನೆಲೆ ಹೊಂದಿರುವ ಟ್ರಸ್ಟ್ ನ ಸದಸ್ಯರಿಂದ ವಿರೋಧ ವ್ಯಕ್ತವಾಗಿದ್ದು, ಜಾನಪದ ಹಿನ್ನೆಲೆ ಉಳ್ಳವರನ್ನೇ ಅಧ್ಯಕ್ಷರನ್ನಾಗಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕಾಗಿಯೇ ಟ್ರಸ್ಟ್ ನ ಹಿರಿಯ ಸದಸ್ಯರೂ ಆದ ಪ್ರೊ. ಹಿ.ಶಿ. ರಾಮಚಂದ್ರೇಗೌಡ, ಕರ್ನಾಟಕ ಸಂಘದ ಪ್ರೊ. ಜಯಪ್ರಕಾಶ್ ಗೌಡರು ರಾಜೀನಾಮೆ ನೀಡಿದ್ದಾರೆ. ಮತ್ತೊಂದೆಡೆ ಜಾನಪದ ವಿದ್ವಾಂಸ ಡಾ. ಹಿ.ಚಿ. ಬೋರಲಿಂಗಯ್ಯ ಅವರನ್ನು ಅಧ್ಯಕ್ಷರನ್ನಾಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದೂ ತಿಳಿದುಬಂದಿದೆಯಾದರೂ, ವಿದೇಶದಲ್ಲಿರುವ ಬೋರಲಿಂಗಯ್ಯ ಅವರು ಹುದ್ದೆ ನಿರಾಕರಿಸಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಐಎಎಸ್ ಅಧಿಕಾರಿ ತರಬೇಕು ಎನ್ನುವ ಇರಾದೆ ತಿಮ್ಮೇಗೌಡರದ್ದಾದರೆ, ಜಾನಪದ ವಿದ್ವಾಂಸರೇ ಬೇಕು ಎನ್ನುವುದು ಹಿ ಶಿ ರಾಮಚಂದ್ರೇಗೌಡರದ್ದಾಗಿದೆ.
*ಜಾನಪದ ಬೆಳೆಯಬೇಕಾದರೆ ಜನಪದ ಹಿನ್ನೆಲೆ ಇರಬೇಕು*
ಜಾನಪದ ಕಲೆ ಮತ್ತು ಕಲಾವಿದರು ಉಳಿಯಬೇಕು. ಮುಂದಿನ ತಲೆಮಾರಿಗೆ ಜಾನಪದದ ಸೊಗಡನ್ನು ಕೊಂಡೊಯ್ಯಬೇಕು. ಈ ನಿಟ್ಟಿನಲ್ಲಿ ನೂತನ ಅಧ್ಯಕ್ಷರ ಆಯ್ಕೆ ಹಿಂದೆ ಕಲೆ ಮತ್ತು ಕಲಾವಿದರ ಬಗೆಗಿನ ಕಾಳಜಿಯೇ ಮುಖ್ಯವಾಗಬೇಕಿದೆ. ನೂತನ ಅಧ್ಯಕ್ಷರಿಗೆ ಜಾನಪದದ ಬಗ್ಗೆ ಜ್ಞಾನವಿದ್ದರೆ ಮಾತ್ರ ಇದು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಆಡಳಿತ ಮಂಡಳಿ ನಿರ್ಧಾರ ಮಾಡಬೇಕಿದೆ. ಆದರೆ ಇವರಲ್ಲಿಯೇ ಗೊಂದಲ ಮೂಡಿರುವುದರಿಂದ ಆಯ್ಕೆ ಕಗ್ಗಂಟಾಗಿದೆ.
*ಮೂರು ದಶಕದ ಇತಿಹಾಸ*
ಐಎಎಸ್ ಅಧಿಕಾರಿಯಾಗಿದ್ದ ನಾಡೋಜ ಎಚ್.ಎಲ್.ನಾಗೇಗೌಡರ ಕನಸಿನ ಹಂಬಲದ ಕೂಸಾಗಿ ಹುಟ್ಟಿಕೊಂಡ ಜಾನಪದ ಪರಿಷತ್ತು ಮತ್ತು ಜಾನಪದ ಲೋಕ, ಈಗ ನಾಡಿನ ಜಾನಪದ ಕಾಶಿಯಂತಾಗಿದೆ. ನಾಗೇಗೌಡರು, ಸರ್ಕಾರ ನೀಡಿದ ಕುರುಚಲು ಕಾಡಿನ ಜಾಗದಲ್ಲಿಯೇ ಜಾನಪದ ಎಂಬ ಸಸಿ ನೆಟ್ಟು ನೀರೆರದ ಜಾನಪದ ಎನ್ನುವ ಗಿಡವನ್ನೇ, ಹೆಮ್ಮರವಾಗಿ ಬೆಳೆಸಿ ಬೆಳ್ಳಿ ಹಬ್ಬದ ಸಂಭ್ರಮ ಆಚರಿಸಿಕೊಳ್ಳುವಂತೆ ಮಾಡಿದ ನಾಗೇಗೌಡರದು ಜಾನಪದ ಕ್ರಾಂತಿಯೇ ಹೌದು. ಜಾನಪದ ಎಂದರೆ ಹಳ್ಳಿಗೆ ಸೀಮಿತವಾಗಿದ್ದ ಕಾಲವದು. ಐಎಎಸ್ ಅಧಿಕಾರಿಯಾಗಿ ನಾಡು ಸುತ್ತಿದ್ದ ನಾಗೇಗೌಡರು ಜಾನಪದವನ್ನು ಉಳಿಸಿ, ಬೆಳೆಸಿ ಎಲ್ಲೆಡೆ ಪಸರಿಸುವ ಕನಸು ಕಂಡರು. ನಾಡಿನ ಉದ್ದಗಲಕ್ಕೂ ಸುತ್ತಿ ಸಾವಿರಾರು ಕಲಾವಿದರು, ಕಲೆಯ ಮಾಹಿತಿ ಕಲೆ ಹಾಕಿದರು. ಇದರೊಟ್ಟಿಗೆ ಯಾರಿಗೂ ಬೇಡವಾಗಿ ಮಣ್ಣಾಗುತ್ತಿದ್ದ ಜನಪದರು ದಿನನಿತ್ಯ ಬಳಕೆ ಮಾಡುತ್ತಿದ್ದ ವಸ್ತುಗಳ ಸಂಗ್ರಹಣೆ ಜೊತೆಗೆ ಅಕ್ಷರ ಜ್ಞಾನವಿಲ್ಲದೆ ಬಾಯಲ್ಲೇ ಉಳಿದಿದ್ದ, ಜಾನಪದ ಕಥೆ ಮತ್ತು ಹಾಡುಗಳನ್ನು ಅವರಿದ್ದಲ್ಲಿಯೇ ಹೋಗಿ ಧ್ವನಿಮುದ್ರಣ ಮಾಡಿಕೊಂಡು ಉಳಿಸಿ ಕಲಿಸುವ ಕಾಯಕ ಕೈಗೊಂಡರು.1994ರಲ್ಲಿ ಲೋಕಾರ್ಪಣೆಗೊಂಡ ಜಾನಪದ ಲೋಕ, 15 ಎಕರೆ ವಿಸ್ತಾರವಾದ ಸುಂದರ ಲೋಕವಾಗಿದೆ. ಇಲ್ಲಿ ಬೀದರ್ ನಿಂದ ಚಾಮರಾಜನಗರವರೆಗೆ, ಕಾರವಾರದಿಂದ ರಾಯಚೂರುವರೆಗೆ ರಾಜ್ಯದ ನಾಲ್ಕೂ ದಿಕ್ಕುಗಳಿಂದ, ಮಲೆನಾಡು, ಬಯಲು ಸೀಮೆ, ಬಯಲು ಯಕ್ಷಗಾನ, ಅರೆ ಮಲೆನಾಡುಗಳಿಂದ ಹೆಕ್ಕಿ ತೆಗೆದ ಜನಪದರು ಬಳಕೆ ಮಾಡುತ್ತಿದ್ದ ವಸ್ತುಗಳ ಸಾಲು ಸಾಲು ಜಾನಪದ ಲೋಕದ ಸಿರಿವಂತಿಕೆಯನ್ನು ಹೆಚ್ಚಿಸಿದೆ.
*ರಾಜ್ಯ ರಾಷ್ಟ್ರದ ಗಣ್ಯರ ದಂಡೇ ಭೇಟಿ ನೀಡಿ ಅಭಿನಂದಿಸಿದೆ*
ಜಾನಪದ ಲೋಕದ ಹಿರಿಮೆ ಮತ್ತು ಗರಿಮೆ ವಿಶ್ವ ವ್ಯಾಪಿಯಾಗಿದೆ. ಇಲ್ಲಿಗೆ ಬರುವ ವಿದೇಶಿಗರ ಸಂಖ್ಯೆಗೇನೂ ಕಡಿಮೆ ಇಲ್ಲ. ವೀರೇಂದ್ರ ಪಾಟೀಲರಿಂದ ಬಿ.ಎಸ್.ಯಡಿಯೂರಪ್ಪ ಅವರವರೆಗೂ ಬಹುತೇಕ ಮುಖ್ಯಮಂತ್ರಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ. ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಅವರ ಪತ್ನಿ ಸಲ್ಮಾ ಅನ್ಸಾರಿ, ಕೇಂದ್ರ ಸಚಿವೆಯಾಗಿದ್ದ ಮನೇಕಾ ಗಾಂಧಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಅನೇಕ ಹಿರಿಯ ಸಾಹಿತಿಗಳು ಹೀಗೆ ಹತ್ತು ಹಲವು ಮಹನೀಯರು ಭೇಟಿ ನೀಡಿ ಇಲ್ಲಿನ ಸಂಗ್ರಹ ಮತ್ತು ಸೌಂದರ್ಯವನ್ನು ಕಂಡು ಮನಸೋತಿದ್ದಾರೆ. ಜತೆಗೆ ಪ್ರತಿ ವರ್ಷ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಜಾನಪದ ಲೋಕದ ಪ್ರಸಿದ್ಧಿಗೆ ಸಾಕ್ಷಿಯಾಗಿದೆ. ಸಂಗ್ರಹ ನೋಡಿಯೇ ತಮ್ಮ ಬಾಲ್ಯದ ನೆನಪಿನ ಬುತ್ತಿಗೆ ಜಾರುವ ಮೂಲಕ ನಾಗೇಗೌಡರನ್ನು ಅಭಿನಂದಿಸಿದ್ದಾರೆ.
*ನಾಗೇಗೌಡರ ಕುಟುಂಬದ ಕೊಡುಗೆ*
ಹೆಚ್ ಎಲ್ ನಾಗೇಗೌಡ ರ ಕುಟುಂಬದವರ ಕೊಡುಗೆಯೂ ನಿರಂತರವಾಗಿದೆ. ಅವರ ಕುಟುಂಬದವರೇ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಮುಂದುವರೆದುಕೊಂಡು ಬರುತ್ತಿದ್ದಾರೆ. ಮೊದಲಿಗೆ ನಂಜರಾಜ್ ನಾಗೇಗೌಡ ನಂತರ ಇಂದಿರಾ ಬಾಲಕೃಷ್ಣ, ಹಾಲಿ ಆದಿತ್ಯ ನಂಜರಾಜ್ ರವರು ಮುಂದುವರೆದಿದ್ದು ಅಧ್ಯಕ್ಷರ ಆಯ್ಕೆಯಲ್ಲಿ ಅವರ ಪಾತ್ರವೂ ಬಹಳ ಮುಖ್ಯವಾಗಿದೆ.
ಬೋರ್ಡ್ ಮೀಟಿಂಗ್ ಇದ್ದು, ಶೀಘ್ರವಾಗಿ ಅಧ್ಯಕ್ಷರ ಆಯ್ಕೆಯಾಗಲಿದೆ. ಯಾರಾಗಲಿದ್ದಾರೆ ಎಂದು ಹೇಳಲು ಆಗದು. ಸಭೆಯಲ್ಲಿ ತೀರ್ಮಾನ ಮಾಡಲಾಗುವುದು. ಹಿ ಶಿ ರಾಮಚಂದ್ರೇಗೌಡರು ಮತ್ತು ಜಯಪ್ರಕಾಶ್ ಗೌಡರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ.
*ಆದಿತ್ಯ ನಂಜರಾಜ್, ಮ್ಯಾನೇಜಿಂಗ್ ಟ್ರಸ್ಟಿ, ಜಾನಪದ ಪರಿಷತ್*
ಜಾನಪದ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಐಎಎಸ್ ಅಧಿಕಾರಿಗಳನ್ನು ತರಬಾರದು ಎನ್ನುವುದು ನನ್ನ ನಿಲುವು. ಇದಕ್ಕಾಗಿ ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.
*ಪ್ರೊ. ಹಿ.ಶಿ. ರಾಮಚಂದ್ರೇಗೌಡ, ಜಾನಪದ ವಿದ್ವಾಂಸ*
--ಗೋ ರಾ ಶ್ರೀನಿವಾಸ...
ಮೊ:9845856139.
Recent news in arts »

ವನಂ ಶಿವರಾಂ ರವರಿಗೆ ಒಲಿದ ಜಾನಪದ ತಜ್ಞ ಪ್ರಶಸ್ತಿ
ಕನ್ನಡ ಜಾನಪದದ ಮೊದಲ ಪ್ರಾಧ್ಯಾಪಕ ಜೀಶಂಪ ಅವರ ಶಿಷ್ಯರಾಗಿ, ನಾಡೋಜ ಜಾನಪದ ಪರಿಷತ್ತಿನ ರೂವಾರಿ, ಜಾನಪದ ಕಲಾವಿದರ ಆಪ್ತಬಂಧು ಹೆಚ್ ಎಲ್ ನಾಗೇಗೌಡರ ಗರಡಿ ಜಾನಪದ ಲೋಕದಲ್ಲಿ ದುಡಿದು ದಣಿವರಿಯದೆ ಜಾನಪದ

ಕರ್ನಾಟಕ ಜಾನಪದ ಪರಿಷತ್ತು ಮತ್ತು ಜಾನಪದ ಲೋಕ ದ ನೂತನ ಅಧ್ಯಕ್ಷರಾಗಿ ಡಾ ಹಿ ಶಿ ರಾಮಚಂದ್ರೇಗೌಡ
ರಾಮನಗರ: ಹಲವಾರು ದಿನಗಳಿಂದ ವಿವಾದಕ್ಕೀಡಾಗಿ, ನೆನೆಗುದಿಗೆ ಬಿದ್ದಿದ್ದ ಕರ್ನಾಟಕ ಜಾನಪದ ಪರಿಷತ್ತು ಮತ್ತು ಜಾನಪದ ಲೋಕದ ಅಧ್ಯಕ್ಷ ಸ್ಥಾನಕ್ಕೆ ಬೆಂಗಳೂರಿನ

ತಿಂಗಳಿಂದ ಖಾಲಿ ಉಳಿದಿರುವ ಜಾನಪದ ಪರಿಷತ್ ಅಧ್ಯಕ್ಷ ಸ್ಥಾನ* ಐಎಎಸ್ ಅಧಿಕಾರಿಗಳು ಬೇಡ ಜನಪದ ಹಿನ್ನೆಲೆಯುಳ್ಳವರ ನೇಮಕಕ್ಕೆ ಪಟ್ಟು
ರಾಮನಗರ: ರಾಜ್ಯ ಮತ್ತು ದೇಶದ ಜಾನಪದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ತನ್ನ ಜೀವನವನ್ನೇ ಮುಡಿಪಾಗಿಟ್ಟು ಕರ್ನಾಟಕ ಜಾನಪದ ಪರಿಷತ್ತು ಮತ್ತ

ಕಲೆ ಉಳಿಯಬೇಕಾದರೆ ಕಲೆಗಾರ ಉಳಿಯಬೇಕು ಅಬ್ಬಿಗೆರೆ ರಾಜಣ್ಣ
ಚನ್ನಪಟ್ಟಣ: ಕಣ್ಮರೆಯಾಗುತ್ತಿರುವ ಜನಪದ ಕಲೆ.
ರಂಗಭೂಮಿ ಕಲೆ. ಸಂಸ್ಕೃತಿ ಸೇರಿದಂತೆ ವಿವಿಧ ಜನಪರ ಕಲೆಗಳ ತವರು ಬೊಂಬೆನಾಡ

ಸಂಗೀತ ಸೌರಭ ಟ್ರಸ್ಟ್ ನಿಂದ ಇದೇ ತಿಂಗಳ 17 ರಂದು ರಸಮಂಜರಿ ಕಾರ್ಯಕ್ರಮ
ಚನ್ನಪಟ್ಟಣ: ಸಂಗೀತ ಸೌರಭ ವಾದ್ಯಗೋಷ್ಠಿ ವತಿಯಿಂದ ನಗರದ ಜೆಸಿ ರಸ್ತೆಯಲ್ಲಿರುವ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿನಿಲಯದ ಆವರಣದಲ್ಲಿ ಜು.17 ರ

ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಚಾಲನೆ ನೀಡಿದ ತಹಶಿಲ್ದಾರ್ ನಾಗೇಶ್
ರಾಮನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲ ಗ್ರಾಮ ಟ್ರೈಕ್ವೆಟ್ರಾ ಅಡ್ವೆಂಚರ್ ಕ್ಯಾಂಪ್ ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಗ

20 ಕೆಜಿಯ ಕಾಸ್ಟ್ಯೂಮ್ ಧರಿಸಿ ಲಂಬಾಣಿಯಾಗಿ ಶುಭಾಪುಂಜಾ
ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹುದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ನಟಿ ಶುಭಾಪುಂಜಾ ಇದೀಗ ಲಂಬಾಣಿ ಹುಡುಗಿಯಾಗಿ ಮತ್ತೆ ತೆರೆ ಮೇಲೆ ರಂಜಿಸಲು ಸಿದ್ದರಾಗಿದ್ದಾರೆ.

ಕಲಾವಿದರಿಗೆ ಪ್ಯಾಕೇಜ್: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ
ರಾಮನಗರ, 28ನೇ ಮೇ: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾಗಶಃ ಲಾಕಡೌನ್ ಜಾರಿಯಲ್ಲಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರು/ ಕಲಾತಂಡಗಳಿಗೆ ಪ್ರತಿ ಫಲಾನುಭವಿಗಳಿಗೆ ತಲಾ ರೂ.3,000/- ಗಳಂ

ಸಂಗೀತ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಡಿವೈಎಸ್ಪಿ ರಮೇಶ್
ಸಂಗೀತ ಎನ್ನುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಸಕಲ ಜೀವ ರಾಶಿಗಳಿಗೂ ಸಂಗೀತದ ಇಂಪು ಗೊತ್ತಿದೆ. ಪ್ರಾಣಿ ಪಕ್ಷಿಗಳೂ ಸಹ ಸಂಗೀತಕ್ಕೆ ತಲೆದೂಗುತ್ತವೆ. ಇತ್ತೀಚಿನ ಅಧ್ಯಯನದ ಪ್ರಕಾರ, ಸಾಕು ಪ್

ಐವತ್ತೈದು ವರ್ಷಗಳ ಸಾಧನೆಗೆ ನೂರಕ್ಕೂ ಹೆಚ್ಚು ಶಿಷ್ಯರನ್ನು ತಯಾರಿಗೆ ಸಿಕ್ಕ ಪ್ರಶಸ್ತಿ: ಬ್ರಹ್ಮಣಿಪುರ ತಮಟೆ ತಿಮ್ಮಯ್ಯಗೆ ಒಲಿದ ಪ್ರಶಸ್ತಿ
ಚನ್ನಪಟ್ಟಣ:ಜ/05/21/ಮಂಗಳವಾರ. ಹದಿನೈದು ವರ್ಷದ ಬಾಲಕನಾಗಿದ್ದಾಗಲೇ ತಮಟೆ ವಾದನದಲ್ಲಿ ಸೈ ಎನಿಸಿಕೊಂಡು, ಕಳೆದ ಐವತ್ತೈದು ವರ್ಷಗಳಿಂದ ಮೈಸೂರು ದ
ಪ್ರತಿಕ್ರಿಯೆಗಳು