ಮಹಾಪೌರ್ಣಿಮೆ ನಾಟಕ ಬಡಜನರ ದನಿಯಾಗಿದೆ, ಪ್ರೊ ಹೊನ್ನು ಸಿದ್ದಾರ್ಥ

ಬೆಂಗಳೂರು: ರಂಗ ನಿರ್ದೇಶಕ ಶಿವಲಿಂಗಯ್ಯ ನವರು ನಿರ್ದೇಶಿಸಿದ ಮಹಾಪೌರ್ಣಿಮೆ ನಾಟಕವು ಬಡಜನರ ದನಿಯಾಗಿದೆ, ಒಂದಲ್ಲಾ ಹತ್ತು ಬಾರಿ ನೋಡಿದರೂ ಮತ್ತೊಮ್ಮೆ ನೋಡಬೇಕಿನಿಸುತ್ತದೆ. ಅವರ ಮತ್ತೊಂದು ಅತ್ಯುತ್ತಮ ನಾಟಕವೆಂದರೆ ದೇವನಾಂಪ್ರಿಯ ಅಶೋಕ, ಆ ನಾಟಕವನ್ನು ನೋಡುವಾಗ ನಾವು ಗತಕಾಲದಲ್ಲಿದ್ದೇವೆ ಎಂಬ ಭಾಸವಾಗುತ್ತದೆ. ಇಂದಿನ ಮತ್ತು ಮುಂದಿನ ಪೀಳಿಗೆಗೆ ಇಂತಹ ಸಂದೇಶವಿರುವ ನಾಟಕಗಳ ಅವಶ್ಯಕತೆ ತುಂಬಾ ಇದ್ದು, ಅದನ್ನು ರಂಗಕರ್ಮಿ ಶಿವಲಿಂಗಯ್ಯ ನವರು ನೀಗಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಪ್ರಶಂಸಿದರು.
ಅವರು ಗೋತಮಿ ಫೌಂಡೇಶನ್ ಮಂಡ್ಯ ಆಯೋಜಿಸಿದ್ದ "ಮಹಾಪೌರ್ಣಿಮೆ" ನಾಟಕ ಪ್ರದರ್ಶನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅನೈತಿಕ ಸಂಬಂಧಿಂದ ಹುಟ್ಟಿದ ಅತಿ ಸುಂದರ ಹೆಣ್ಣು ನವಜಾತ ಶಿಶುವನ್ನು ಆಕೆಯ ಹೆತ್ತವ್ವ ಮಾವಿನ ಮರದ ಕೆಳಗೆ ಮಲಗಿಸಿ ಹೋಗಿದ್ದು, ಆಚಾರ್ಯ ದಂಪತಿಗಳು ಮಗುವಿನ ಆರೈಕೆ ಮಾಡಿ, ಸಂಗೀತ ನೃತ್ಯ ಕಲಿಸಿ, ಆಕೆಯನ್ನು ಸುಸಂಸ್ಕೃತ ಹೆಣ್ಣು ಮಗಳಾಗಿ ಬೆಳೆಸಿದರು. ಆಕೆಯ ವಿದ್ಯೆ ಮತ್ತು ಸೌಂದರ್ಯ ವರವಾಗುವ ಬದಲು ಶಾಪವಾಗಿ ಪರಿಣಮಿಸಿ, ಪ್ರೀತಿಸಿದವನ ಕೊಲೆಮಾಡಿದ ರಾಜಭಟರು, ನಾಲ್ಕು ಮಂದಿ ಶ್ರೀಮಂತರಿಂದ ಅತ್ಯಾಚಾರ, ಬಿಂದುಸಾರ ದೊರೆಯ ಜೊತೆಗೆ ಮದುವೆ, ಆಕೆಗೊಂದು ಮಗು, ನನ್ನ ತಂದೆ ವೇಶ್ಯೆಯನ್ನು ಮದುವೆಯಾಗಿ ನನ್ನನ್ನು ಹಡೆದಳೆಂಬ ಕಾರಣಕ್ಕೆ ತಂದೆಯನ್ನೇ ಕೊಂದು, ತಾಯಿಯನ್ನು ಪೀಡಿಸಿದ ಮಗನಿಂದ ನೊಂದ ಆಕೆ ಬುದ್ಧನ ಬಳಿ ಬಂದು ಶಿಷ್ಯೆಯಾಗಿ ಮುಕ್ತಿ ಹೊಂದಿದ ಆಮ್ರಪಾಲಿ ಎಂಬ ಮಹಿಳೆಯ ಕಥೆಯನ್ನು ಅಚ್ಚುಕಟ್ಟಾಗಿ ಬರೆದು ನಿರ್ದೇಶಿಸಿದ ಶಿವಲಿಂಗಯ್ಯ ನವರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದು, ಅವರ ಎಲ್ಲಾ ನಾಟಕಗಳನ್ನು ವೀಕ್ಷಿಸುವ ಮೂಲಕ ಅವರಿಗೆ ಮತ್ತಷ್ಟು ಬಲ ನೀಡಬೇಕು ಎಂದು ಜಿಂದಾಲ್ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಫ್ರೊ ವೀಣಾ ಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾಲಯ ದ ಬಾಬಾ ಸಾಹೇಬ್ ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ದ ಸಹಯೋಗದಲ್ಲಿ, ಹೆಚ್ ಎನ್ ಸಭಾಂಗಣ ಬೆಂಗಳೂರು ವಿಶ್ವವಿದ್ಯಾಲಯ ದಲ್ಲಿ ಯಶಸ್ವಿಯಾಗಿ ಜರುಗಿತು, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಫ್ರೊ ಮಮತ, ಹೆಚ್ ಕೆ ಬುದ್ಧ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು, ಜಿಂದಾಲ್ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಮಹಾಪೌರ್ಣಿಮೆ ನಾಟಕವನ್ನು ಯಶಸ್ವಿಗೊಳಿಸಿದರು. ಈ ನಾಟಕವನ್ನು ಗೋತಮಿ ಫೌಂಡೇಶನ್ ಮಂಡ್ಯ ದ ಸಾರಥಿ, ರಂಗಕರ್ಮಿ ಶಿವಲಿಂಗಯ್ಯ ಎನ್ ರವರು ನಿರ್ದೇಶನ ಮಾಡಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in arts »

ಮಹಾಪೌರ್ಣಿಮೆ ನಾಟಕ ಬಡಜನರ ದನಿಯಾಗಿದೆ, ಪ್ರೊ ಹೊನ್ನು ಸಿದ್ದಾರ್ಥ
ಬೆಂಗಳೂರು: ರಂಗ ನಿರ್ದೇಶಕ ಶಿವಲಿಂಗಯ್ಯ ನವರು ನಿರ್ದೇಶಿಸಿದ ಮಹಾಪೌರ್ಣಿಮೆ ನಾಟಕವು ಬಡಜನರ ದನಿಯಾಗಿದೆ, ಒಂದಲ್ಲಾ ಹತ್ತು ಬಾರಿ ನೋಡಿದರೂ ಮತ್ತೊಮ್ಮೆ ನೋಡಬ

ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಚಾಲನೆ ನೀಡಿದ ತಹಶಿಲ್ದಾರ್ ನಾಗೇಶ್
ರಾಮನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲ ಗ್ರಾಮ ಟ್ರೈಕ್ವೆಟ್ರಾ ಅಡ್ವೆಂಚರ್ ಕ್ಯಾಂಪ್ ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಗ

20 ಕೆಜಿಯ ಕಾಸ್ಟ್ಯೂಮ್ ಧರಿಸಿ ಲಂಬಾಣಿಯಾಗಿ ಶುಭಾಪುಂಜಾ
ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹುದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ನಟಿ ಶುಭಾಪುಂಜಾ ಇದೀಗ ಲಂಬಾಣಿ ಹುಡುಗಿಯಾಗಿ ಮತ್ತೆ ತೆರೆ ಮೇಲೆ ರಂಜಿಸಲು ಸಿದ್ದರಾಗಿದ್ದಾರೆ.

ಕಲಾವಿದರಿಗೆ ಪ್ಯಾಕೇಜ್: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ
ರಾಮನಗರ, 28ನೇ ಮೇ: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾಗಶಃ ಲಾಕಡೌನ್ ಜಾರಿಯಲ್ಲಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರು/ ಕಲಾತಂಡಗಳಿಗೆ ಪ್ರತಿ ಫಲಾನುಭವಿಗಳಿಗೆ ತಲಾ ರೂ.3,000/- ಗಳಂ

ಸಂಗೀತ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಡಿವೈಎಸ್ಪಿ ರಮೇಶ್
ಸಂಗೀತ ಎನ್ನುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಸಕಲ ಜೀವ ರಾಶಿಗಳಿಗೂ ಸಂಗೀತದ ಇಂಪು ಗೊತ್ತಿದೆ. ಪ್ರಾಣಿ ಪಕ್ಷಿಗಳೂ ಸಹ ಸಂಗೀತಕ್ಕೆ ತಲೆದೂಗುತ್ತವೆ. ಇತ್ತೀಚಿನ ಅಧ್ಯಯನದ ಪ್ರಕಾರ, ಸಾಕು ಪ್

ಐವತ್ತೈದು ವರ್ಷಗಳ ಸಾಧನೆಗೆ ನೂರಕ್ಕೂ ಹೆಚ್ಚು ಶಿಷ್ಯರನ್ನು ತಯಾರಿಗೆ ಸಿಕ್ಕ ಪ್ರಶಸ್ತಿ: ಬ್ರಹ್ಮಣಿಪುರ ತಮಟೆ ತಿಮ್ಮಯ್ಯಗೆ ಒಲಿದ ಪ್ರಶಸ್ತಿ
ಚನ್ನಪಟ್ಟಣ:ಜ/05/21/ಮಂಗಳವಾರ. ಹದಿನೈದು ವರ್ಷದ ಬಾಲಕನಾಗಿದ್ದಾಗಲೇ ತಮಟೆ ವಾದನದಲ್ಲಿ ಸೈ ಎನಿಸಿಕೊಂಡು, ಕಳೆದ ಐವತ್ತೈದು ವರ್ಷಗಳಿಂದ ಮೈಸೂರು ದ

ಜಿಲ್ಲೆಯ ಕಲಾವಿದರಿಗೆ ಹಣ ನೀಡದೆ ವಾಪಸ್ಸು ಕಳುಹಿಸಿದ ಕಸಂ ಇಲಾಖೆ. ಕಲಾವಿದರ ನೋವಿನ ನುಡಿ
ರಾಮನಗರ:ಏ/೨೫/೨೦/ಶನಿವಾರ. ಕೊರೊನಾ (ಕೋವಿಡ್-೧೯) ವೈರಸ್ ದೇಶಕ್ಕೆ ಕಾಲಿಟ್ಟ ನಂತರ ದೇಶ ಮತ್ತು ರಾಜ್ಯದ ಆರ್ಥಿಕತೆಗೆ ಪೆಟ್ಟು ಬಿದ್ದಿರುವಂತೆಯೇ,

ಅಬ್ಬೂರು ರಾಜಶೇಖರ ರವರಿಗೆ ಎಚ್ ಕೆ ವೀರಣ್ಣಗೌಡ ಪ್ರಶಸ್ತಿ*
ರಾಮನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ಎಚ್.ಕೆ.ವೀರಣ್ಣಗೌಡ ಪ್ರಶಸ್ತಿಗೆ ಹಿರಿಯ ಪರ್ತಕರ್ತರು ಆರಂಭ ಪತ್ರಿಕೆಯ ಸಂಸ್ಥಾಪಕ ಸಂ

ಬೊಂಬೆನಾಡಿನ ಡಾ.ಚಕ್ಕೆರೆ ಶಿವಶಂಕರ್ ರವರಿಗೆ ಒಲಿದು ಬಂದ ಜೀಶಂಪ ರಾಜ್ಯ ಪ್ರಶಸ್ತಿ
ಚನ್ನಪಟ್ಟಣ: ಸಂಗ್ರಹ, ಸಂಪಾದನೆ, ವಿಚಾರ, ವಿಮರ್ಶೆ ಮತ್ತು
ಸಂಶೋಧನೆ ಹೀಗೆ ಜಾನಪದ ಸಾಹಿತ್ಯದ ಎಲ್ಲಾ
ಪ್ರಕಾ

ದೇವಾನಾಂಪ್ರಿಯ ಶಿವಲಿಂಗಯ್ಯನವರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ
ಚನ್ನಪಟ್ಟಣ: ತಾಲ್ಲೂಕಿನ ನೀಲಕಂಠನಹಳ್ಳಿ ಗ್ರಾಮದ ತಿರುಮಲಮ್ಮ, ಎನ್ ಟಿ ಕುನ್ನಯ್ಯ ರವರ ಸುಪುತ್ರ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನ ನಿವೃತ್ತ ಉದ್
ಪ್ರತಿಕ್ರಿಯೆಗಳು